Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಮಾರ್ಚ್ 26ರ ಬುಧವಾರದಂದು ನಿಮ್ಮ ರಾಶಿಫಲದಲ್ಲಿ ಏನಿದೆ?
ವೈದಿಕ ಜ್ಯೋತಿಷ್ಯದ ಪ್ರಕಾರ ಈ ದಿನದಂದು ನಿಮ್ಮ ರಾಶಿಯಲ್ಲಿ ಏನಿದೆ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ವ್ಯವಹಾರದಲ್ಲಿ ಉತ್ತಮ ಬೆಳವಣಿಗೆ ಕಂಡುಬರಲಿದೆ. ನಿಮ್ಮ ವೈಯಕ್ತಿಕ ಜೀವನದಲ್ಲಿ ಮತ್ತು ಕೆಲಸದಲ್ಲಿ ಸಂತೋಷದ ವಾತಾವರಣವಿರುತ್ತದೆ. ನಿಮ್ಮ ಕೌಟುಂಬಿಕ ಸಮಸ್ಯೆಗಳು ನಿವಾರಣೆಯಾಗಲಿದೆ, ನೀವಿಂದು ಪ್ರಶಾಂತವಾಗಿರುತ್ತೀರಿ, ವ್ಯಾಪಾರದಲ್ಲಿ ಲಾಭ ನೋಡುತ್ತೀರಿ. ದೂರದ ಸ್ನೇಹಿತರನ್ನು ಭೇಟಿಯಾಗಬಹುದು. ಬಾಕಿ ಉಳಿದ ಹಣ ಒಂದು ಸಂದಾಯವಾಗಬಹುದು. ಕೆಲಸದ ಸ್ಥಳದಲ್ಲಿ ಒತ್ತಡ ಇರಲಿದೆ. ಹೊಸದಾಗಿ ಉದ್ಯೋಗ ಹುಡುಕುತ್ತಿರುವವರಿಗೆ ಸ್ನೇಹಿತರಿಂದ ನೆರವಾಗಲಿದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಇಂದು ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತದೆ. ವಾಹನ ಚಾಲಕರು ಅಥವಾ ಮಾಲಿಕರು ಎಚ್ಚರಿಕೆಯಿಂದ ಇರುವುದು ಒಳಿತು. ದಾಂಪತ್ಯ ಜೀವನದಲ್ಲಿ ಹೊಸದೊಂದು ವಿಚಾರವಾಗಿ ಚರ್ಚೆ, ಮನಸ್ಥಾಪ ಮೂಡಬಹುದು. ಹಾಗೆ ಕುಟುಂಬದಲ್ಲಿ ದೊಡ್ಡ ವಿಚಾರವೊಂದರ ಕುರಿತು ಚರ್ಚೆ ನಡೆಯಲಿದೆ. ಅದರಿಂದ ಭಿನ್ನಾಭಿಪ್ರಾಯಗಳು ಕೂಡ ಇರಬಹುದು. ಇಂದು ನಿಮ್ಮಿಂದ ಹಣ ಖರ್ಚು ಹೆಚ್ಚಾಗಬಹುದು. ಕೆಲವು ಅನಗತ್ಯ ವಸ್ತುಗಳಿಗಾಗಿಯೂ ವೆಚ್ಚ ಮಾಡಬಹುದು.

ಮಿಥುನ ರಾಶಿ
ಮಿಥುನ ರಾಶಿಯವರು ಬಹಳ ಸಮಯದಿಂದ ಬಾಕಿ ಉಳಿಸಿಕೊಂಡಿದ್ದ ಕೆಲಸವನ್ನು ಪೂರ್ಣ ಮಾಡುವಿರಿ. ನೀವು ಹೊಸ ಮನೆ ಕಟ್ಟಲು ಯೋಜಿಸಬಹುದು. ನೀವು ಹೊಸದಾಗಿ ಜಂಟಿ ವ್ಯವಹಾರ ಆರಂಭಿಸಲು ಇಂದು ನಿರ್ಧರಿಸಿದರೆ ಕೆಲವೊಂದು ಅಡೆತಡೆ ಎದುರಾಗಬಹುದು. ಹಣಕಾಸು ವಿಚಾರವಾಗಿ ನೀವು ಕುಟುಂಬಸ್ಥರಿಂದ ಕಠಿಣ ಸಮಯ ಎದುರಿಸಬೇಕಾಗಬಹುದು. ಅವಿವಾಹಿತರಲ್ಲಿ ವಿವಾಹ ಸಂಬಂಧ ಹೊಸ ಸುದ್ದಿ ಕೇಳುವಿರಿ. ಗಾರ್ಮೆಂಟ್, ಚಿಲ್ಲರೆ ವ್ಯಾಪಾರಿಗಳು, ದಿನಗೂಲಿ ನೌಕರರಿಗೆ ಈ ದಿನ ಶುಭವಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಇಂದು ತಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ನೀವು ಹೊಸ ವಾಹನ ಖರೀದಿಯ ಕುರಿತು ಆಲೋಚಿಸಿದ್ದರೆ ಈ ದಿನ ಅದಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಲಿದೆ. ನಿಮ್ಮ ಕೆಲಸ ಮಾಡುವ ಸ್ಥಳದಲ್ಲಿ ಒತ್ತಡ ಹೆಚ್ಚಾಗಬಹುದು ಇದು ನಿಮ್ಮ ಮಾನಸಿಕ ಸ್ಥಿತಿ ಹಾಳು ಮಾಡಬಹುದು. ಆರೋಗ್ಯದಲ್ಲೂ ಸಣ್ಣ ಪುಟ್ಟ ಸಮಸ್ಯೆ ಎದುರಿಸಬೇಕಾಗಬಹುದು. ಹೀಗಾಗಿ ವಿಶ್ರಾಂತಿ ಪಡೆಯುವುದು ಬಹಳ ಮುಖ್ಯ. ನಿಮ್ಮ ಗುರಿ ತಲುಪುವ ಗಡೆಗೆ ನಿಮ್ಮ ಗಮನವಿರಲಿ. ಪಿಂಚಣಿ ಸಂಬಂಧ ನೀವು ಎದುರಿಸಿದ್ದ ಸಮಸ್ಯೆಗಳು ಇಂದು ನಿವಾರಣೆಯಾಗಬಹುದು.
ಸಿಂಹ ರಾಶಿ
ಸಿಂಹ ರಾಶಿಯವರು ಇಂದು ಅತ್ಯಂತ ನೆಮ್ಮದಿಯ ದಿನವನ್ನು ನೋಡಲಿದ್ದಾರೆ. ನಿಮ್ಮ ತಲೆಯಲ್ಲಿದ್ದ ಗೊಂದಲಗಳು, ಪ್ರಶ್ನೆಗಳಿಗೆ ಉತ್ತರ ಸಿಗುವ ಜೊತೆಗೆ ನಿಮ್ಮ ಮನಸ್ಸಿನಲ್ಲಿ ಶಾಂತಿ ಮೂಡಲಿದೆ. ಹಣಕಾಸು ವಿಚಾರದಲ್ಲಿ ಸಮಧಾನಕರ ದಿನವಾಗಿರಲಿದೆ. ನೀವು ಅಸಂಘಟಿತ ವಲಯದ ವ್ಯಾಪಾರದಲ್ಲಿದ್ದರೆ ನಿಮಗೆ ಹಣಕಾಸಿನ ಲಾಭವಾಗುವ ನಿರೀಕ್ಷೆ ಇದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗುತ್ತಿದೆ. ಸರ್ಕಾರಿ ನೌಕರರಿಗೆ ವಿಶೇಷವಾಗಿ ಶಿಕ್ಷಕರಿಗೆ ಈ ದಿನ ಶುಭವಾಗುತ್ತದೆ. ವಾಹನ ಮಾಲಿಕರು ಎಚ್ಚರಿಕೆ ವಹಿಸಿ. ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಈ ದಿನ ತಮ್ಮ ನಾಯಕತ್ವ ಪ್ರದರ್ಶನ ಮಾಡಲು ಅತ್ಯುತ್ತಮ ಸಮಯವಾಗಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ದಿನ ಮಿಶ್ರ ಫಲ ನೀಡಲಿದೆ. ನೀವು ದಿನದ ಆರಂಭದಲ್ಲಿ ಹಣಕಾಸು ವಿಚಾರದಲ್ಲಿ ಲಾಭ ಮಾಡಬಹುದು. ಹಾಗೆ ದಿನದ ಅಂತ್ಯದಲ್ಲಿ ಖರ್ಚು ಹೆಚ್ಚಾಗಬಹುದು. ಇಂದು ಅನಗತ್ಯ ಚರ್ಚೆ ಹಾಗೂ ಅಪರಿಚಿತರೊಂದಿಗೆ ಮಾತುಕತೆಗೆ ಇಳಿಯಬೇಡಿ. ಬಾಕಿ ಉಳಿಸಿಕೊಂಡಿರುವ ಕೆಲಸಗಳನ್ನು ಸೂಕ್ತ ಸಮಯಕ್ಕೆ ಪೂರ್ಣಗೊಳಿಸಿ. ಈ ದಿನ ಯಾರಿಗೂ ಹಣ ನೀಡುವ ಕೆಲಸಕ್ಕೆ ಮುಂದಾಗಬೇಡಿ. ಕೆಲಸ ಕಾರಣಕ್ಕೆ ನೀವು ದೂರ ಪ್ರಯಾಣಕ್ಕೆ ಮುಂದಾಗಬೇಕಾಗಬಹುದು. ಕುಟುಂಬದಲ್ಲಿ ಅಶಾಂತಿ ಇರಲಿದೆ.
ತುಲಾ ರಾಶಿ
ತುಲಾ ರಾಶಿಯವರು ಇಂದು ತಮ್ಮ ಕೆಲಸದ ಸ್ಥಳದಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹಲವು ದಿನಗಳ ಆರ್ಥಿಕ ಸಮಸ್ಯೆ ಪರಿಹಾರಕ್ಕೆ ಮಾರ್ಗ ಸಿಗಲಿದೆ. ಕುಟುಂಬಸ್ಥರ ಜೊತೆಗೆ ನೀವು ಪ್ರವಾಸ ಕೈಗೊಳ್ಳಬಹುದು. ನಿಮಗೆ ಮನೆಯಲ್ಲಿ ಸೂಕ್ತ ಬೆಂಬಲ ಸಿಗದೆ ಇರಬಹುದು. ನಿಮ್ಮ ಮಾತುಗಳ ಮೇಲೆ ಹಿಡಿತವಿರಲಿ. ಉದ್ಯೋಗ ಬದಲಿಸುವ ನಿಮ್ಮ ಬಯಕೆಗಳಿಗೆ ಇಂದು ಪರಿಪೂರ್ಣವಾದ ಪ್ರಯತ್ನ ಮಾಡಿ ಇದರಿಂದ ಧನಾತ್ಮಕ ಫಲಿತಾಂಶ ಪಡೆಯಬಹುದಾಗಿದೆ. ಅನಿರೀಕ್ಷಿತ ಮೂಲದಿಂದ ನಿಮಗೆ ಆರ್ಥಿಕ ಲಾಭ ಆಗಬಹುದು. ಆಸ್ತಿ, ಕಾನೂನು ಹೋರಾಟ, ವ್ಯಾಜ್ಯಗಳಂತಹ ವಿಚಾರದಲ್ಲಿ ನಿಮ್ಮ ಪರವಾದ ಒಲವು ಇರಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಈ ದಿನ ಹೊಸ ಪ್ರಯತ್ನಗಳು ಕೈಹಿಡಿಯಲಿದೆ. ನಿಮ್ಮ ವೈಯಕ್ತಿಕ ಜೀವನದ ಕಡೆಗೆ ಹೆಚ್ಚು ಗಮನವಿಡಿ. ಇಂದು ನಿಮ್ಮ ಆಧ್ಯಾತ್ಮಿಕ ವಿಚಾರಗಳು ಈ ದಿನದಂದು ಗಟ್ಟಿಯಾಗಲಿವೆ. ಯಾವುದೇ ಕೆಲಸವನ್ನಾದರು ಇಂದು ಶ್ರಮ ಹಾಕಿ ಪ್ರಮಾಣಿಕವಾಗಿ ಮಾಡಿ ಮುಗಿಸಿ ಇದು ನಿಮಗೆ ಉತ್ತಮ ಪ್ರತಿಫಲ ನೀಡಲಿದೆ. ಇಂದು ಬಹುಮುಖ್ಯವಾದ ವ್ಯಕ್ತಿಯೊಬ್ಬರನ್ನು ನೀವು ಭೇಟಿಯಾಗಲಿದ್ದೀರಿ. ಒಂದೇ ಬಾರಿಗೆ ಹಲವು ಕೆಲಸಗಳ ನಿರ್ವಹಿಸುವುದರಿಂದ ಆತಂಕ ಉಂಟಾಗಬಹುದು.
ಧನು ರಾಶಿ
ಧನು ರಾಶಿಯವರು ಇಂದು ತರಾತುರಿಯಲ್ಲಿ ನಿರ್ಧಾರ ತೆಗೆದುಕೊಳ್ಳುವುದನ್ನು ಬಿಡಬೇಕು. ದಾಂಪತ್ಯ ಜೀವನದಲ್ಲಿ ಸುಖ ಇರಲಿದೆ, ಮನೆಯಲ್ಲಿ ಮಕ್ಕಳು ಹಾಗೂ ಹಿರಿಯರೊಂದಿಗೆ ನೀವು ಹೆಚ್ಚು ಸಮಯ ಕಳೆಯುತ್ತೀರಿ. ನಿಮ್ಮ ವ್ಯಪಾರ ವೃದ್ಧಿಸಲು ನೀವು ಮುಂದಾಗಬಹುದು. ಹೊಸದಾಗಿ ವ್ಯವಹಾರ ಆರಂಭಿಸುವುದು ಈ ಸಮಯದಲ್ಲಿ ಸೂಕ್ತ ನಿರ್ಧಾರ ಆಗಿರುವುದಿಲ್ಲ. ನಿಮ್ಮ ಕೋಪವನ್ನು ಕೈಗೆ ನೀಡಬೇಡಿ, ಮಾತುಕತೆಯ ಮೂಲಕ ಆದಷ್ಟು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮುಂದಾಗಿ. ಮೂಳೆ, ಕೀಲುಗಳಿಗೆ ಸಂಬಂಧಿಸಿದ ಸಣ್ಣ ಸಮಸ್ಯೆಗಳಿಗೆ ನೀವು ಒಳಗಾಗಬಹುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವಂತಹ ಕೆಲಸ ಮಾಡಬಹುದು.
ಮಕರ ರಾಶಿ
ಮಕರ ರಾಶಿಯವರು ಈ ದಿನ ವ್ಯವಹಾರಿಕ ಲಾಭಕ್ಕೆ ಕಾರಣವಾಗಲಿದೆ. ನೀವು ಹಣಕಾಸು ವಿಚಾರವಾಗಿ ಸಾಲಕ್ಕೆ ಪ್ರಯತ್ನಿಸುತ್ತಿದ್ದರೆ ಈ ದಿನ ಸುಲಭವಾಗಿ ಈ ಕೆಲಸ ಬಗೆಹರಿಯಲಿದೆ. ಹಲವು ದಿನದಿಂದ ನಿಮ್ಮಲ್ಲಿ ಸಮಸ್ಯೆಗೆ ಕಾರಣವಾಗಿದ್ದ ವಿಚಾರವೊಂದು ಬಗೆಹರಿಯಲಿದೆ. ನಿಮ್ಮ ಅದಾಯಕ್ಕಿಂತ ಹೆಚ್ಚು ಖರ್ಚು ಮಾಡಲು ಹೋಗಬೇಡಿ. ಮನೆಗೆ ನೀವು ಅಗತ್ಯ ವಸ್ತುವೊಂದನ್ನು ಖರೀದಿಸಲು ಮುಂದಾಗಬಹುದು. ಅಪಾಯಕಾರಿ ಕೆಲಸಗಳನ್ನು ಮಾಡುವ ನೌಕರರು ಈ ದಿನ ಎಚ್ಚರಿಕೆ ವಹಿಸುವುದು ಉತ್ತಮ. ಉದರ ಸಂಬಂಧಿ ಸಮಸ್ಯೆ ಇದ್ದರೆ ನಿವಾರಣೆಯಾಗಬಹುದು.
ಕುಂಭ ರಾಶಿ
ಕುಂಭ ರಾಶಿಯವರು ಈ ದಿನ ವ್ಯಾಪಾರದಲ್ಲಿ ಹೊಸ ರೀತಿಯ ಪ್ರಯತ್ನ ಮಾಡಿದರೆ ಯಶಸ್ಸು ಆಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶ ಪಡೆಯಲಿದ್ದೀರಿ. ಹೊಸ ಅವಕಾಶಗಳು ನಿಮ್ಮನ್ನ ಹುಡುಕಿ ಬಂದಾಗ ಬುದ್ಧಿವಂತಿಕೆಯಿಂದ ನಿರ್ಧಾರಗಳ ತೆಗೆದುಕೊಳ್ಳಿ. ಹಲವು ಮೂಲಗಳಿಂದ ನಿಮ್ಮ ಬೆಂಬಲಕ್ಕೆ ಕೆಲವರು ಆಗಮಿಸುತ್ತಾರೆ, ಇದು ನಿಮಗೆ ನೈತಿಕವಾಗಿ ಯಶಸ್ಸು ಗಳಿಸಲು ಕಾರಣವಾಗಬಹುದು. ಕೆಲಸದ ಕಾರಣದಿಂದ ದೂರ ಪ್ರಯಾಣಕ್ಕೆ ತೆರಳಬೇಕಾಗಬಹುದು. ಯಾವುದೇ ಕಾರಣಕ್ಕೂ ಈ ದಿನ ಸಾಲ ನೀಡುವ ಕಾರ್ಯ ಮಾಡಬೇಡಿ, ಇದರಿಂದ ನಿಮ್ಮ ಮುಂದೆ ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಸ್ವಂತ ಉದ್ಯಮ ನಡೆಸುವವರಿಗೆ ಇಂದು ಅನಿರೀಕ್ಷಿತ ಲಾಭವಾಗುವ ಸಾಧ್ಯತೆ.
ಮೀನ ರಾಶಿ
ಮೀನ ರಾಶಿಯವರಿಗೆ ಇಂದು ಶುಭ ದಿನವಾಗಲಿದೆ. ನಿಮ್ಮ ಬಹುದಿನಗಳ ಆಸೆಯೊಂದನ್ನು ಈಡೇರಿಸಿಕೊಳ್ಳಲಿದ್ದೀರಿ. ಹಲವು ಸಮಯ ನೀವು ಮನೆಯಿಂದ ಹೊರಗೆ ಕಳೆಯಬೇಕಾಗುತ್ತದೆ. ನಿಮ್ಮ ಅನುಭವ ಇಂದು ಕೆಲಸಕ್ಕೆ ಬರಲಿದೆ. ದಾಂಪತ್ಯದಲ್ಲಿ ಸಣ್ಣಪುಟ್ಟ ಮನಸ್ಥಾಪಗಳನ್ನು ಕುಳಿತು ಮಾತುಕತೆ ಮೂಲಕ ಇಂದು ಬಗೆಹರಿಸಿಕೊಳ್ಳಿ, ಬಹಳ ದೊಡ್ಡದಾಗಿ ಬೆಳೆಯಲು ಬಿಡಬೇಡಿ. ಕೆಲಸದ ಸ್ಥಳದಲ್ಲಿ ಹೊಸ ರೀತಿಯ ಒತ್ತಡ ನಿಮಗೆ ಕಾಡಬಹುದು. ಅಂದುಕೊಂಡಿದ್ದ ಕೆಲಸವನ್ನು ಮಾಡಿ ಮುಗಿಸುವುದು ಉತ್ತಮ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











