Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಕುಂಭ ರಾಶಿಯಲ್ಲಿದೆ ಮಂಗಳ-ಶನಿ ಯುತಿ: ಈ 3 ರಾಶಿಯವರಿಗೆ ಹೊಸ ಉದ್ಯೋಗ ಅವಕಾಶ ದೊರೆಯಲಿದೆ
ಮಾರ್ಚ್ 15ಕ್ಕೆ ಮಂಗಳ ಗ್ರಹವು ಕುಂಭ ರಾಶಿಯನ್ನು ಪ್ರವೇಶಿಸುವುದು, ಇದೇ ರಾಶಿಯಲ್ಲಿ ಶನಿಯೂ ಇದೆ. ಇದರಿಂದಾಗಿ ಶನಿ ಮತ್ತು ಮಂಗಳ ಗ್ರಹದ ಸಂಯೋಗವಾಗಿದೆ. ಇನ್ನು ಒಂದೂವರೆ ತಿಂಗಳು ಶನಿ-ಮಂಗಳ ಒಂದೇ ರಾಶಿಯಲ್ಲಿ ಇರಲಿದೆ. ವೈದಿಕ ಜ್ಯೋತಿಷ್ಯದಲ್ಲಿ, ಮಂಗಳವನ್ನು ಧೈರ್ಯ, ಶೌರ್ಯ, ಯುದ್ಧ ಮತ್ತು ಶಕ್ತಿಯ ಅಂಶವೆಂದು ಪರಿಗಣಿಸಲಾಗುತ್ತದೆ. ಆದರೆ ಶನಿದೇವನನ್ನು ನ್ಯಾಯದ ದೇವತೆ ಎಂದು ಪರಿಗಣಿಸಲಾಗುವುದು.
ಈ ಎರಡು ಗ್ರಹಗಳ ಸಂಯೋಜನೆಯು ಕೆಲವು ರಾಶಿಗಳಿಗೆ ನಕಾರಾತ್ಮಕ ಪರಿಣಾಮ ಬೀರಿದರೆ ಇನ್ನು ಕೆಲವು ರಾಶಿಯವರಿಗೆ ಧನಾತ್ಮಕ ಪರಿಣಾಮ ಬೀರುವುದು. ಕುಂಭದಲ್ಲಿ ಶನಿ-ಮಂಗಳರ ಈ ಸಂಯೋಗ ಸುಮಾರು 30 ವರ್ಷಗಳ ನಂತರ ಆಗುತ್ತಿದೆ. ಮಂಗಳ ಮತ್ತು ಶನಿಯ ಸಂಯೋಗದಿಂದ ಈ ರಾಶಿಗಳ ಮೇಲೆ ಧನಾತ್ಮಕ ಪರಿಣಾಮ ಬೀರುವುದು.

ಮೇಷ ರಾಶಿ
ವೈದಿಕ ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಮಂಗಳ-ಶನಿ ಸಂಯೋಗವು ಮೇಷ ರಾಶಿಯ ಹನ್ನೊಂದನೇ ಮನೆಯಲ್ಲಿ ಆಗಿದೆ. ಅಂತಹ ಪರಿಸ್ಥಿತಿಯಲ್ಲಿ, ಮೇಷ ರಾಶಿಯ ಜನರಿಗೆ ಈ ಸಂಯೋಜನೆಯು ಇತರರಿಗಿಂತ ಕಡಿಮೆಯಿಲ್ಲ. ಈ ರಾಶಿಯವರಿಗೆ ಈ ಸಂಯೋಗ ಅದೃಷ್ಟ ತರಲಿದೆ. ಕೆಲಸದಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ. ಈ ರಾಶಿಯ ಜನರು ಹೂಡಿಕೆಯಿಂದ ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ನೀವು ಹಠಾತ್ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಉದ್ಯೋಗಿಗಳಿಗೆ ಹೊಸ ಉದ್ಯೋಗಗಳ ಅವಕಾಶ ದೊರೆಯುವುದು. ನೀವು ಹೀಗಾಗಲೇ ಯಾವುದಾದರೂ ಕಂಪನಿಗೆ ಸಂದರ್ಶನ ನೀಡಿದ್ದರೆ ಧನಾತ್ಮಕ ಸುದ್ದಿ ಪಡೆಯಬಹುದು. ವ್ಯಾಪಾರಸ್ಥರೂ ಈ ಅವಧಿಯಲ್ಲಿ ಲಾಭ ಗಳಿಸುತ್ತಾರೆ. ಹೊಸ ಹೂಡಿಕೆಗೆ, ನಿಮ್ಮ ವ್ಯವಹಾರ ವಿಸ್ತರಣೆಗೆ ಈ ಅವಧಿ ತುಂಬಾ ಚೆನ್ನಾಗಿರಲಿದೆ.
ಧನು ರಾಶಿ
ಮಂಗಳ ಮತ್ತು ಶನಿಯ ಸಂಯೋಗವು ನಿಮ್ಮ ರಾಶಿಯ ಮೂರನೇ ಮನೆಯಲ್ಲಿ ನಡೆಯಲಿದೆ. ಈ ರೀತಿಯಲ್ಲಿ ಪ್ರಯೋಜನಗಳನ್ನು ಪಡೆಯುವ ಬಲವಾದ ಸಾಧ್ಯತೆಯಿದೆ. ಉದ್ಯೋಗದಲ್ಲಿ ಗೌರವ, ಸ್ಥಾನ ಮತ್ತು ಬಡ್ತಿಯ ಸಾಧ್ಯತೆಗಳಿವೆ. ಉದ್ಯೋಗವನ್ನು ಬದಲಾಯಿಸುತ್ತಿದ್ದರೆ ಈ ಅವಧಿಯಲ್ಲಿ ಉತ್ತಮ ಅವಕಾಶವನ್ನು ಪಡೆಯಬಹುದು. ನೀವು ಅದೃಷ್ಟವನ್ನು ಪಡೆಯುತ್ತೀರಿ. ಪ್ರೇಮಿಗಳಿಗೆ ಪ್ರೇಮ ಜೀವನ ಚೆನ್ನಾಗಿರುತ್ತದೆ. ವ್ಯಾಪಾರದಲ್ಲಿ ಮಾಡಿದ ಹೂಡಿಕೆ ಲಾಭ ತರುವುದು. ಈ ಯುತಿಯ ಅವಧಿಯಲ್ಲಿ ಆರ್ಥಿಕವಾಗಿ ತುಂಬಾ ಅದ್ಭುತವಾಗಿರಲಿದೆ.
ಕುಂಭ ರಾಶಿ
ಕುಂಭ ರಾಶಿಯಲ್ಲಿಯೇ ಮಂಗಳ-ಶನಿ ಸಂಯೋಗವಿರುತ್ತದೆ. ಈ ಸಂಯೋಜನೆಯು ಕುಂಭ ರಾಶಿಯವರಿಗೆ ಫಲಪ್ರದವಾಗಿದೆ. ವೃತ್ತಿ ಜೀವನದಲ್ಲಿ ಅದೃಷ್ಟವನ್ನು ಸಾಬೀತುಪಡಿಸುವಿರಿ. ಉನ್ನತ ಸ್ಥಾನವನ್ನು ಪಡೆಯುವಿರಿ. ಬಡ್ತಿಯ ಅವಕಾಶಗಳಿವೆ. ಉದ್ಯೋಗದಲ್ಲಿ ಉತ್ತಮ ಲಾಭದ ಅವಕಾಶವಿರುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ಸಂಪತ್ತು ಹೆಚ್ಚಾಗುವ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುವುದು. ಮಂಗಳ-ಶನಿಯ ಪ್ರಭಾವ ಅದ್ಭುತವಾಗಿರಲಿದೆ.
ಮಂಗಳ ಮಂತ್ರ:
''ಅಂ ಅಂಗಾರಕಾಯ ಮಹಾಭಾಗಾಯ ನಮಃ'
ಈ ಮಂಗಳ ಮಂತ್ರವನ್ನು ಪ್ರತಿ ಮಂಗಳವಾರ ಪಠಿಸಿದರೆ ಒಳ್ಳೆಯದು.
ಶನಿ ಏಕಾಶರಿ ಮಂತ್ರ
"ಓಂ ಶಂ ಶನೈಶ್ಚರಾಯ ನಮಃ
ಶನಿ ಗಾಯತ್ರಿ ಮಂತ್ರ
"ಓಂ ಶನೈಶ್ಚರಾಯ ವಿದ್ಮಹೇ ಸೂರ್ಯಪುತ್ರಾಯ ಧೀಮಹೀ ತನ್ನೋ ಮಂದಃ ಪ್ರಚೋದಯಾತ್"
ಸಾಡೇಸಾತಿ ಶನಿ ಮಂತ್ರ "ಶ್ರೀ ನೀಲಾಂಜನ ಸಮಾಭಾಸಂ ರವಿ ಪುತ್ರಂ ಯಮಾಗ್ರಜಂ ಛಾಯಾ ಮಾರ್ತಾಂಡ ಸಂಭೂತಾಂ ತಂ ನಮಾಮಿ ಶನೈಶ್ಚರಂ" "ಓಂ ಶನ್ನೋದೇವಿರಾಭಿಷ್ಟಯ ಆಪೋ ಭವಂತು ಪಿತಯೇ ಶನ್ಯೋರಭಿಸ್ತವಂತು ನಃ, ಓಂ ಶಂ ಶನೈಶ್ಚರಾಯ ನಮಃ"
ಶನಿ ವೈದಿಕ ಮಂತ್ರ: "ಓಂ ಶನ್ನೋ ದೇವಿರಭಿಷ್ಟ್ದಾಪೋ ಭವಂತು ಪಿತಯೇ"
ಈ ಮಂತ್ರ ಪಠಣೆ ಮಾಡುವುದರಿಂದ ಈ ಎರಡೂ ಗ್ರಹಗಳೂ ಮತ್ತಷ್ಟು ಒಳ್ಳೆಯ ಪ್ರಭಾವ ಬೀರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications