Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Malavya Rajyoga: ಸಂಗಾತಿಯಿಂದ ಅದೃಷ್ಟ, ವಿದೇಶದಿಂದ ಹಣ.. ಈ 5 ರಾಶಿಗೆ ಭರಪೂರ ಲಾಭ
ಇಂದು ಮಾಲವ್ಯ ರಾಜಯೋಗ. ಈ 5 ರಾಶಿಗಳಿಗೆ ಮಹಾ ಅದೃಷ್ಟ, ಕಷ್ಟಗಳೆಲ್ಲಾ ದೂರ. ಹೌದು, ಇಂದು (ಜುಲೈ 23, ಬುಧವಾರದಂದು) ಮಾಲವ್ಯ ರಾಜಯೋಗವು (Malavya Rajyog) ಕೆಲವು ರಾಶಿಗಳ ಕಷ್ಟಗಳನ್ನು ದೂರ ಮಾಡಲಿದೆ. ಬುಧವಾರದ ಅದೃಷ್ಟವು ಕೆಲವು ರಾಶಿಗಳ ಮೇಲೆ ಬೀರಲಿದೆ. ಮಾಲವ್ಯ ರಾಜಯೋಗದೊಂದಿಗೆ ಹರ್ಷ ಯೋಗ ಮತ್ತು ಅನೇಕ ಶುಭ ಯೋಗಗಳು ಸೃಷ್ಟಿಯಾಗುತ್ತಿವೆ. ಈ ಕಾರಣದಿಂದಾಗಿ ಕೆಲವು ರಾಶಿಗಳಿಗೆ ಇದು ಶುಭವಾಗಲಿದೆ. ಗಣೇಶನ ಅನುಗ್ರಹ ಯಾವ ರಾಶಿಯವರ ಮೇಲೆ ಇರಲಿದೆ? ಯಾವ ರಾಶಿಯವರಿಗೆ ಅದೃಷ್ಟ ಇರಲಿದೆ? ಎಂಬುದನ್ನು ತಿಳಿಯೋಣ ಬನ್ನಿ.
ಮಾಲವ್ಯ ರಾಜಯೋಗ ಮತ್ತು ಹರ್ಷ ಯೋಗದೊಂದಿಗೆ ಅನೇಕ ಶುಭ ಯೋಗಗಳು ರೂಪುಗೊಳ್ಳುತ್ತಿವೆ. ಈ ದಿನದ ಮಹತ್ವವು ಹೆಚ್ಚಾಗಲಿದೆ. ಈ ಶುಭ ಯೋಗಗಳ ಲಾಭವನ್ನು ಕೆಲವು ರಾಶಿಗಳು ಪಡೆಯಲಿವೆ. ಈ ರಾಶಿಯವರ ಕೆಲಸ ಮತ್ತು ವ್ಯಾಪಾರದಲ್ಲಿ ಅಭಿವೃದ್ಧಿಯಾಗುವುದರೊಂದಿಗೆ ಆರ್ಥಿಕ ಸ್ಥಿತಿಯು ಬಲಗೊಳ್ಳಲಿದೆ. ಗಣೇಶನ ಕೃಪೆಯಿಂದ ಕಷ್ಟಗಳೆಲ್ಲ ದೂರವಾಗಿ, ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ಈ ಐದು ರಾಶಿಗಳು ಕೆಲವು ಪರಿಹಾರಗಳನ್ನು ಪಾಲಿಸಬೇಕು. ಈ ಪರಿಹಾರಗಳಿಂದ ಬುಧ ಗ್ರಹದ ಸ್ಥಾನ ಬಲಗೊಳ್ಳುತ್ತದೆ.

ಮೇಷ ರಾಶಿ
ಮೇಷ ರಾಶಿಯವರಿಗೆ ಸಂಗಾತಿಯ ಸ್ನೇಹ ಲಭಿಸುವುದು ಮತ್ತು ನಿಮ್ಮ ನಡುವಿನ ಸಂಬಂಧವು ಸಂತೋಷದಿಂದ ಕೂಡಿರಲಿದೆ. ಶಿವ ಮತ್ತು ಗಣೇಶನ ಕೃಪೆಯಿಂದ ನೀವು ಅಂದುಕೊಂಡ ಲಾಭವನ್ನು ಪಡೆಯುವ ಅವಕಾಶವಿದೆ. ಧೈರ್ಯದಿಂದ ಉತ್ತಮ ನಿರ್ಧಾರವನ್ನು ತೆಗೆದುಕೊಂಡು ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ಕೆಲಸದ ನಿಮಿತ್ತ ಅಲ್ಪ ದೂರ ಪ್ರಯಾಣಿಸುವ ಯೋಗವಿದೆ. ಇದರಿಂದ ಹೆಚ್ಚಿನ ಪ್ರಯೋಜನವಾಗುವುದರೊಂದಿಗೆ ಅಂದುಕೊಂಡ ಫಲಿತಾಂಶವನ್ನು ಪಡೆಯುವಿರಿ. ಮನೆಯಲ್ಲಿ ಸುಖ, ಶಾಂತಿ ನೆಲೆಸುವುದು. ನೀವು ಶಿವ ಪಂಚಾಕ್ಷರಿ ಸ್ತೋತ್ರವನ್ನು ಪಠಿಸಿ. ಗಣೇಶನಿಗೆ ಮೋದಕವನ್ನು ಅರ್ಪಿಸಿ.
ಕಟಕ ರಾಶಿ
ಕಟಕ ರಾಶಿಯವರಿಗೆ ಇಂದು ವಿದೇಶದಿಂದ ಲಾಭ ದೊರೆಯುವುದು. ಸುಖ, ಸಮೃದ್ಧಿಗಾಗಿ ಹಣವನ್ನು ಖರ್ಚು ಮಾಡುವಿರಿ. ದಾನ ಧರ್ಮ ಕೆಲಸಗಳಲ್ಲಿ ಆಸಕ್ತಿಯನ್ನು ಹೊಂದುವಿರಿ. ಮನೆಯಲ್ಲಿ ಸಂತೋಷಮಯ ವಾತಾವರಣ ಇರುತ್ತದೆ. ಸಂಗಾತಿ ನೀವು ಹೇಳದೆಯೇ ನಿಮ್ಮ ಮಾತುಗಳನ್ನು ಅರ್ಥಮಾಡಿಕೊಳ್ಳುವರು. ಹಣಕಾಸಿಗೆ ಸಂಬಂಧಿಸಿದ ಕೆಲಸ ಮಾಡುವ ಜನರಿಗೆ ಹೆಚ್ಚಿನ ಲಾಭ ಸಿಗುತ್ತದೆ. ವಿದೇಶಕ್ಕೆ ತೆರಳಲು ಪ್ರಯತ್ನಿಸುವವರಿಗೆ ಶುಭ ಸುದ್ದಿ ಸಿಗಲಿದೆ. ನ್ಯಾಯಾಲಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರವನ್ನು ಹೊಂದುವಿರಿ. ನೀವು ಗಣೇಶ ಅಥರ್ವ ಶೀರ್ಷವನ್ನು ಪಠಿಸಿ. ಶಿವಲಿಂಗಕ್ಕೆ ಗಂಗಾ ಜಲ, ಹಾಲು, ಮೊಸರು, ಜೇನುತುಪ್ಪ ಮತ್ತು ಬಿಲ್ವಪತ್ರೆ ಇತ್ಯಾದಿಗಳನ್ನು ಅರ್ಪಿಸಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ದಿನವು ಮಂಗಳದಾಯಕ. ಹಳೆಯ ಆಸೆಗಳು ಈಡೇರುತ್ತವೆ. ಇದರಿಂದ ಮನಸ್ಸಿಗೆ ಸಂತೋಷವಾಗುವುದು. ಮಕ್ಕಳಿಂದ ಶುಭ ಸುದ್ದಿ ಲಭಿಸುವುದು. ಗೌರವ, ಖ್ಯಾತಿ ಹೆಚ್ಚಾಗಲಿದೆ. ಸಂಗಾತಿ ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಸಹಾಯ ಮಾಡುವುದರಿಂದ ಲಾಭವನ್ನು ಗಳಿಸುವಿರಿ. ಧನ ಪ್ರಾಪ್ತಿಗಾಗಿ ಹೊಸ ಅವಕಾಶಗಳನ್ನು ಪಡೆಯುವಿರಿ. ಆದಾಯದಲ್ಲಿ ಹೆಚ್ಚಳವಾಗುವ ಯೋಗವಿದೆ. ರಾಜಕೀಯ ಮತ್ತು ಸಮಾಜ ಸೇವೆಗೆ ಸಂಬಂಧಿಸಿದ ಜನರಿಗೆ ಉತ್ತಮ ದಿನ. ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುವುದು. ನೀವು 'ಓಂ ನಮಃ ಶಿವಾಯ' ಮಂತ್ರವನ್ನು ಜಪಿಸಿ. ಇಂದು ದಾನ ಮಾಡಿದರೆ ಉತ್ತಮ ಫಲಿತಾಂಶ ಕಾಣಬಹುದು.
ಧನು ರಾಶಿ
ಧನು ರಾಶಿಯವರಿಗೆ ಈ ದಿನವು ಶುಭಕರ. ನಿಮ್ಮ ಸಂಗಾತಿಯ ಅದೃಷ್ಟದಿಂದಾಗಿ ನೀವು ಹೆಚ್ಚಿನ ಲಾಭವನ್ನು ಪಡೆಯುವಿರಿ. ಮನೆಯವರ ಸಂಪೂರ್ಣ ಬೆಂಬಲ ಮತ್ತು ಸ್ನೇಹ ದೊರೆಯುವುದು. ಸಂಗಾತಿಯೊಂದಿಗಿನ ಮನಸ್ತಾಪಗಳೆಲ್ಲಾ ದೂರವಾಗಲಿದೆ. ಸಂಬಂಧ ಮೊದಲಿಗಿಂತ ಉತ್ತಮವಾಗಿರುತ್ತದೆ. ಪ್ರೇಮ ಸಂಬಂಧಕ್ಕೆ ಸಂಬಂಧಿಸಿದಂತೆ ಅನುಕೂಲಕರ ದಿನವಾಗಿರಲಿದೆ. ಸಂಗಾತಿಯೊಂದಿಗೆ ಹೊರಗೆ ಸುತ್ತಾಡಲು ಹೋಗುವ ಯೋಜನೆಯನ್ನು ರೂಪಿಸುವಿರಿ. ಹೊಸ ಕೆಲಸವನ್ನು ಪ್ರಾರಂಭಿಸಲು ಯೋಚಿಸುವವರಿಗೆ ಉತ್ತಮ ದಿನವಾಗಿರುತ್ತದೆ. ನೀವು ಶಿವಲಿಂಗದ ಮೇಲೆ ಕನಿಷ್ಠ 21 ಬಿಲ್ವ ಪತ್ರೆ ಎಲೆಗಳನ್ನು ಅರ್ಪಿಸಿ. ಶಿವ ಮತ್ತು ಗಣೇಶ ಚಾಲೀಸಾವನ್ನು ಪಠಿಸಿ.
ಮೀನ ರಾಶಿ
ಮೀನ ರಾಶಿಯವರಿಗೆ ಈ ದಿನ ಉತ್ತಮವಾಗಿರುತ್ತದೆ. ಮನೆಯವರು ಪ್ರತಿ ಹೆಜ್ಜೆಯಲ್ಲಿ ನಿಮ್ಮೊಂದಿಗೆ ಇರುವರು. ಕುಟುಂಬ ವ್ಯವಹಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಲಾಭವನ್ನು ಪಡೆಯುವ ಅವಕಾಶವಿದೆ. ವಿಶೇಷವಾಗಿ, ತಾಯಿಯಿಂದ ಹೆಚ್ಚಿನ ಲಾಭ ದೊರೆಯುವುದು. ತಂದೆ ತಾಯಿಯೊಂದಿಗೆ ತೀರ್ಥಯಾತ್ರೆಗೆ ಪ್ರಯಾಣಿಸುವ ಬಗ್ಗೆ ಯೋಜನೆಯನ್ನು ರೂಪಿಸುವ ಅವಕಾಶ ದೊರೆಯುವುದು. ವೈವಾಹಿಕ ಜೀವನ ಸಂತೋಷದಿಂದ ಕೂಡಿರಲಿದೆ. ನೀವು ಶಿವಲಿಂಗದ ಮೇಲೆ ಗಂಗಾಜಲದಿಂದ ಅಭಿಷೇಕ ಮಾಡಿ. 'ಓಂ ಗಣಪತಯೇ ನಮಃ' ಮಂತ್ರವನ್ನು 108 ಬಾರಿ ಜಪಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
