Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕರ ಸಂಕ್ರಾಂತಿ: ಈ ದಿನ ಯಾವ ವಸ್ತು ಮನೆಗೆ ತಂದರೆ ಒಳ್ಳೆಯದು, ಈ ಸೂರ್ಯ ಮಂತ್ರಗಳನ್ನು ಪಠಿಸಿ
ಈ ವರ್ಷ ಜನವರಿ 15ರಂದು ಮಕರ ಸಂಕ್ರಾಂತಿಯನ್ನು ಆಚರಿಸಲಾಗುವುದು. ಮಕರ ಸಂಕ್ರಾಂತಿ ಪಂಚಾಂಗದ ಪ್ರಕಾರ ಮಹತ್ವದ ದಿನ, ಏಕೆಂದರೆ ಆ ದಿನದಿಂದ ಸೂರ್ಯ ತನ್ನ ಪಥ ಬದಲಾಯಿಸಲಿದೆ, ಮಕರ ಸಂಕ್ರಾಂತಿಯಿಂದ ಉತ್ತರಾಯಣ ಕಾಲ ಪ್ರಾರಂಭ.
ಮಕರ ಸಂಕ್ರಾಂತಿಯಂದು ವಿಶೇಷ ಪೂಜೆಗಳನ್ನು ಮಾಡಲಾಗುವುದು, ಈ ದಿನ ಶಬರಿಮಲೆಯಲ್ಲಿ ಮಕರ ಜ್ಯೋತಿ ಕಾಣಿಸಿಕೊಳ್ಳುವುದರಿಂದ ಈ ದಿನ ಅಯ್ಯಪ್ಪ ಭಕ್ತರಿಗೆ ತುಂಬಾನೇ ವಿಶೇಷವಾಗಿದೆ. ಈ ದಿನ ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ:
ಮಕರ ಸಂಕ್ರಾಂತಿ ದಿನ ಏನು ಮಾಡಬೇಕು?
* ಈ ದಿನ ನೀವು ಸೂರ್ಯ ದೇವನನ್ನು ಆರಾಧಿಸಬೇಕು. ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಸೂರ್ಯನಿಗೆ ಆರ್ಘ್ಯ ಅರ್ಪಿಸಿ ಈ ಮಂತ್ರಗಳನ್ನು ಪಠಿಸಿ.

ನಮಃ ಸೂರ್ಯಾಯ ಶಾಂತಾಯಾ ಸರ್ವರೋಗ ನಿವಾರಿಣೆ
ಆಯುರ್ ಆರೋಗ್ಯ ಮ ಐಶ್ವರ್ಯ ಮ ದೇಹಿ ದೇವಾಃ ಜಗತ್ಪತೆ
ಸೂರ್ಯ ಗಾಯತ್ರಿ ಮಂತ್ರ:
ಓಂ ಆದಿತ್ಯಾಯ ವಿಧ್ಮಹೇ ಮಾರ್ತಾಂಡಾಯ ಧೀಮಹೀ ತನ್ನೋಃ ಸೂರ್ಯಃ ಪ್ರಚೋದಯಾತ್
ಸೂರ್ಯ ಬೀಜ ಮಂತ್ರ:
ಓಂ ಹ್ರಾಂ ಹ್ರೀಂ ಹ್ರೌಂ ಸಹ ಸೂರ್ಯಾಯ ನಮಃ
ಆದಿತ್ಯ ಹೃದಯಂ ಮಂತ್ರ:
ಆದಿತ್ಯ ಹೃದಯ ಪುಣ್ಯಂ ಸರ್ವ ಶತ್ರು ವಿನಾಶನಂ
ಜಯಾವಹಂ ಜಪೇನ್ನಿತ್ಯಂ ಅಕ್ಷಯಂ ಪರಂ ಶಿವಂ
* ಈ ದಿನ ಹಳದಿ ಬಟ್ಟೆಯನ್ನು ಧರಿಸುವುದು ಒಳ್ಳೆಯದು.
* ಈ ದಿನ ಉಪವಾಸವಿದ್ದು ವ್ರತ ಮಾಡಿದರೆ ಇನ್ನೂ ಒಳ್ಳೆಯದು.
* ಬ್ರಾಹ್ಮಣರಿಗೆ ದಕ್ಷಿಣೆ ನೀಡಿ, ಬಡವರಿಗೆ ದಾನ ಮಾಡಿ. ಈ ದಿನ ಹುಗ್ಗಿ ತಯಾರಿಸಿ ದೇವರಿಗೆ ನೈವೇದ್ಯವಾಗಿ ಅರ್ಪಿಸಿ.
* ಸೂರ್ಯ ಎಳ್ಳು, ಬೆಲ್ಲವನ್ನು ಅರ್ಪಿಸಿ.
* ಈ ದಿನ ಎಳ್ಳು, ಬೆಲ್ಲ ದಾನ ಮಾಡುವುದು ಒಳ್ಳೆಯದು
* ಎಳ್ಳು- ಬೆಲ್ಲ ಸವಿಯಿರಿ
ಮಕರ ಸಂಕ್ರಾಂತಿಯಂದು ಏನು ಮಾಡಬಾರದು?
* ಮಾಂಸಾಹಾರ ಸೇವನೆ ಮಾಡಬಾರದು
* ಯಾರಿಗೂ ನೋವುಂಟು ಮಾಡಬಾರದು
* ಮನೆಗೆ ಬಂದವರನ್ನು ಇಂದು ಬರಿಗೈನಲ್ಲಿ ಕಳುಹಿಸಬಾರದು
ಈ ದಿನ ಯಾವ ಕಾರ್ಯಗಳನ್ನು ಮಾಡಿದರೆ ಒಳ್ಳೆಯದು
* ಈ ದಿನ ಮನೆಗೆ ಹೊಸ ಪೊರಕೆ ತಂದರೆ ಒಳ್ಳೆಯದು ಎಂದು ಹೇಳಲಾಗುವುದು.
* ಹಿರಿಯರ ಆಶೀರ್ವಾದ ಪಡೆಯಿರಿ
* ಯಾರಿಗೆ ಅವಶ್ಯಕತೆ ಇದೆಯೋ ಅವರಿಗೆ ದಾನ ಮಾಡಿ
* ಈ ದಿನ ಹುಗ್ಗಿ ಅಥವಾ ಪೊಂಗಲ್ ಸವಿಯಿರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
