Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಹಾಶಿವರಾತ್ರಿಗೆ ಮುನ್ನ ನಿಮಗೆ ಈ ಕನಸು ಬಿದ್ದರೆ ತುಂಬಾನೇ ಶುಭ, ನಿಮ್ಮ ಬದುಕೇ ಬದಲಾಗುವುದು
ಮಹಾಶಿವರಾತ್ರಿ ಹಿಂದೂಗಳಿಗೆ ತುಂಬಾನೇ ಮಹತ್ವದ ದಿನ. ಈ ದಿನಕ್ಕೆ ಮುನ್ನ ಕೆಲವೊಂದು ಕನಸು ಕಂಡರೆ ಅದು ನಮ್ಮ ಮುಂದಿನ ಭವಿಷ್ಯದ ಬಗ್ಗೆ ಹೇಳುತ್ತದೆ ಎಂದು ಹೇಳಲಾಗುವುದು. ಯಾವ ಬಗೆಯ ಕನಸು ಏನನ್ನು ಸೂಚಿಸುತ್ತದೆ ಎಂದು ನೋಡೋಣ ಬನ್ನಿ:
ಮಹಾಶಿವರಾತ್ರಿಯನ್ನು ಮಾರ್ಚ್ 8ರಂದು ಆಚರಿಸಲಾಗುವುದು, ಹಿಂದೂಗಳಿಗೆ ಈ ದಿನ ತುಂಬಾ ಪ್ರಮುಖ ದಿನ, ಈ ಶುಭದಿನದಂದು ಲಕ್ಷಾಂತರ ಶಿವ ಭಕ್ತರು ಜಾಗರಣೆ ಇದ್ದು ಶಿವನ ಆರಾಧನೆ ಮಾಡುತ್ತಾರೆ. ಶಿವರಾತ್ರಿ ಹತ್ತಿರ ಬರುತ್ತಿದ್ದಂತೆ ಶಿವ ಭಕ್ತರು ಸಂಪೂರ್ಣವಾಗಿ ಶಿವನ ಧ್ಯಾನದಲ್ಲಿ ಮಗ್ನರಾಗಿರುತ್ತಾರೆ, ಹೀಗಾಗಿ ಕನಸಿನಲ್ಲಿಯೂ ಶಿವನ ದೈವಿಕ ಅನುಭವ ಉಂಟಾಗುವುದು.

ಕನಸಿನಲ್ಲಿ ಶಿವನಿಗೆ ಸಂಬಂಧಿಸಿದ ಈ ವಸ್ತುಗಳನ್ನು ಕಂಡರೆ
ಕನಸಿನಲ್ಲಿ ಶಿವಲಿಂಗ ಬಂದರೆ: ಮಹಾಶಿವರಾತ್ರಿಗೆ ಮುನ್ನ ಶಿವಲಿಂಗದ ಕನಸು ಬಿದ್ದರೆ ತುಂಬಾನೇ ಶುಭ, ಶಿವ ಶಿವಲಿಂಗದಲ್ಲಿ ನೆಲೆಸಿದ್ದಾನೆ ಎಂದು ಹೇಳಲಾಗುವುದು. ಶಿವಲಿಂಗ ಕಂಡು ಬಂದರೆ ವೃತ್ತಿ ಬದುಕಿನಲ್ಲಿ ತುಂಬಾನೇ ಯಶಸ್ಸು ಕಾಣುತ್ತೀರಿ.
ಬಿಲ್ವಪತ್ರೆ ಕನಸಿನಲ್ಲಿ ಬಂದರೆ: ಮಹಾಶಿವರಾತ್ರಿಗೆ ಮುನ್ನ ಬಿಲ್ವಪತ್ರೆ ಕಂಡು ಬದರೆ ತುಂಬಾನೇ ಶುಭ. ನಿಮ್ಮ ಕನಸಿನಲ್ಲಿ ಬಿಲ್ವಪತ್ರೆ ಬಂದರೆ ಆರ್ಥಿಕ ತೊಂದರೆಗಳು ದೂರಾಗುವುದು, ನಿಮ್ಮೆಲ್ಲಾ ಸಮಸ್ಯೆಗಳು ಕೊನೆಯಾಗಲಿದೆ ಎಂದರ್ಥ. ಬಿಲ್ವಪತ್ರೆ ಶಿವನಿಗೆ ಇಷ್ಟವಾದ ಎಲೆಯಾಗಿದೆ, ಬಿಲ್ವಪತ್ರೆ ಅರ್ಪಿಸಿದೆ ಪೂಜೆ ಮಾಡಿದರೆ ಆ ಪೂಜೆ ಸಂಪೂರ್ಣವಾಗುವುದಿಲ್ಲ. ಶಿವ ಪೂಜೆಗೆ ಯಾವ ವಸ್ತುಗಳು ಇಲ್ಲದಿದ್ದರೆ ನಡೆಯುತ್ತೆ, ಆದರೆ ಬಿಲ್ವಪತ್ರೆ ಅರ್ಪಿಸಿದರೆ ಸಾಕು.
ಕನಸಿನಲ್ಲಿ ನಂದಿ ಕಾಣಿಸಿದರೆ
ನಿಮ್ಮ ಕನಸಿನಲ್ಲಿ ನಂದಿ ಕಾಣಿಸಿದರೆ ತುಂಬಾನೇ ಶುಭ. ನಿಮ್ಮ ಕನಸಿನಲ್ಲಿ ನಂದಿ ಕಾಣಿಸಿದರೆ ನಿಮ್ಮ ಮೇಲೆ ಶಿವನ ಕೃಪೆ ಇರಲಿದೆ. ಶಿವನ ಕೃಪೆಯಿಂದ ನಿಮ್ಮೆಲ್ಲಾ ಸಮಸ್ಯೆ ದೂರಾಗಲಿದೆ. ನಿಮ್ಮ ಬದುಕಿನಲ್ಲಿ ಸಂತೋಷ ತುಂಬಲಿದೆ.
ಶಿವಲಿಂಗಕ್ಕೆ ಅಭಿಷೇಕ ಮಾಡುವ ಕನಸು ಬಿದ್ದರೆ
ನಿಮ್ಮ ಕನಸಿನಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡುವ ಕನಸು ಬಿದ್ದರೆ ನಿಮ್ಮ ಬದುಕಿನ ಎಲ್ಲಾ ಸಮಸ್ಯೆ ದೂರಾಗಿ ಬದುಕಿನಲ್ಲಿ ಸಂತೋಷ ತುಂಬಿ ತುಳುಕುವುದು.
ಕನಸಿನಲ್ಲಿ ರುದ್ರಾಕ್ಷಿ ಕಂಡು ಬಂದರೆ
ಕನಸಿನಲ್ಲಿ ರುದ್ರಾಕ್ಷಿ ಕಂಡು ಬಂದರೂ ತುಂಬಾ ಒಳ್ಳೆಯದು ಎಂದು ಹೇಳಲಾಗುವುದು. ಕನಸಿನಲ್ಲಿ ರುದ್ರಾಕ್ಷಿ ಕಂಡು ಬಂದರೆ ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಅದರಿಂದ ಗುಣಮುಕ್ತರಾಗುತ್ತೀರಿ. ನಿಮ್ಮ ಅಪೂರ್ಣವಾಗಿರುವ ಕೆಲಸ ಪೂರ್ಣವಾಗಲಿದೆ.
ಕನಸಿನಲ್ಲಿ ಹಾವು ಕಂಡರೆ
ಶಿವರಾತ್ರಿಗೆ ಮುನ್ನ ಕನಸಿನಲ್ಲಿ ಹಾವು ಬಂದರೆ ತುಂಬಾನೇ ಒಳ್ಳೆಯದಂತೆ. ನಿಮ್ಮ ಕನಸು ನನಸಾಗಲಿದೆ, ಆರ್ಥಿಕ ಸಮಸ್ಯೆ ದೂರಾಗಲಿದೆ ಎಂದರ್ಥ.
ಶಿವನು ತನ್ನ ಭಕ್ತರನ್ನು ಎಲ್ಲಾ ಕಷ್ಟಗಳಿಂದ ಪಾರು ಮಾಡುತ್ತಾನೆ ಎಂದು ಹೇಳಲಾಗುವುದು, ಯಾರು ಶಿವನನ್ನು ತುಂಬಾನೇ ಮೆಚ್ಚಿಕೊಳ್ಳುತ್ತಾರೋ ಅವರನ್ನು ಶಿವ ಸದಾ ರಕ್ಷಣೆ ಮಾಡುತ್ತಾನೆ, ಶಿವ ಭಕ್ತರು ತಮ್ಮ ಅನುಭವಗಳಿಂದ ಕಂಡು ಕೊಂಡ ಸತ್ಯ. ಶಿವ ಎಂಬುವುದು ಒಂದು ಶಕ್ತಿ, ಆ ಶಕ್ತಿ ನಮ್ಮೊಂದಿಗೆ ಇದ್ದರೆ ನಮಗೆ ಯಾವ ಚಿಂತೆಯೂ ಇರಲ್ಲ.
ಶಿವ ಮಂತ್ರ
ಭಗವಾನ್ ಶಿವನ ಮೂಲ ಮಂತ್ರ:
"ಓಂ ನಮಃ ಶಿವಾಯ"
ಶಿವ ನಾಮಾವಳಿ ಮಂತ್ರ:
ಶ್ರೀ ಶಿವಾಯ ನಮಃ
ಶ್ರೀ ಶಂಕರಾಯ ನಮಃ
ಶ್ರೀ ಮಹೇಶ್ವರಾಯ ನಮಃ
ಶ್ರೀ ಸಾಂಬಸದಾಶಿವಾಯ ನಮಃ
ಶ್ರೀ ರುದ್ರಾಯ ನಮಃ
ಓಂ ಪಾರ್ವತೀಪತಯೇ ನಮಃ
ಓಂ ನಮೋ ನೀಲಕಂಠಾಯ
ಶಿವನ ಇತರ ಶಕ್ತಿಯುತ ಮಂತ್ರಗಳು:
ಓಂ ಸಧ್ಯೋಜಾತಾಯ ನಮಃ
ಓಂ ವಾಮ ದೇವಾಯ ನಮಃ
ಓಂ ಅಘೋರಾಯ ನಮಃ
ಓಂ ತತ್ಪುರುಷಾಯ ನಮಃ
ಓಂ ಈಶಾನಾಯ ನಮಃ
ಓಂ ಹ್ರೀಂ ಹ್ರೌಂ ನಮಃ ಶಿವಾಯ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications