Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಮಹಾ ಶಿವರಾತ್ರಿ: ಐಶ್ವರ್ಯ-ಯಶಸ್ವಿಗಾಗಿ ನಿಮ್ಮ ರಾಶಿ ಪ್ರಕಾರ ಶಿವನ ಆರಾಧನೆ
ಮಹಾದೇವನ ಕೃಪೆ ನಿಮ್ಮ ಮೇಲಿರಲಿ, ನಿಮ್ಮೆಲ್ಲಾ ಕೆಲಸ ಕಾರ್ಯಗಳಿಗೆ ಯಶಸ್ಸು ದೊರೆಯುವಂತಾಗಲಿ, ಈ ಮಹಾಶಿವರಾತ್ರಿ ನಿಮ್ಮೆಲ್ಲರ ಬದುಕಿನಲ್ಲಿ ಹೊಸ ಶಕ್ತಿ ತರಲಿ ಎಂದು ಹೇಳುತ್ತಾ ರಾಶಿ ಪ್ರಕಾರ ಶಿವನ ಆರಾಧನೆ ಹೇಗೆ ಮಾಡಬೇಕು ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯವರು ರಕ್ತಚಂದನ ಹಾಗೂ ಕೆಂಪು ಹೂವುಗಳನ್ನು ಅರ್ಪಿಸಿ, ಈ ದಿನ ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡಿ. ಹೀಗೆ ಮಾಡುವುದರಿಂದ ಶಿವಕೃಪೆಯಿಂದ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುವುದು.

ವೃಷಭ ರಾಶಿ
ವೃಷಭ ರಾಶಿಯವರು ಮಹಾಶಿವರಾತ್ರಿಗೆ ಶಿವನಿಗೆ ಮಲ್ಲಿನ ಹೂವುಗಳನ್ನು ಅರ್ಪಿಸಿ, ರುದ್ರಾಷ್ಟಕ ಪಠಿಸಿ, ಹೀಗೆ ಮಾಡುವುದರಿಂದ ನಿಮ್ಮ ಬದುಕಿನಲ್ಲಿರುವ ಅಡೆತಡೆಗಳು ದೂರಾಗುವುದು, ನೀವು ವೃತ್ತಿ ಬದುಕಿನಲ್ಲಿ ಬೆಳವಣಿಗೆ ಕಾಣಬಹುದು.
ಮಿಥುನ ರಾಶಿ
ಮೀನ ರಾಶಿಯವರು ಶಿವನಿಗೆ ಕಬ್ಬಿನ ಜ್ಯೂಸ್ ಅರ್ಪಿಸಿ, ಹೂವುಗಳನ್ನು ಅರ್ಪಿಸಿ, ಪಂಚಾಕ್ಷರಿ ಮಂತ್ರ ಪಠನೆ ಮಾಡಿ, ಹೀಗೆ ಮಾಡಿದರೆ ಶಿವಕೃಪೆಗೆ ಪಾತ್ರರಾಗುತ್ತೀರಿ.
ಕರ್ಕ ರಾಶಿ
ಶಿವನಿಗೆ ರುದ್ರಾಭಿಷೇಕ ಮಾಡಿ, ಶಿವನಿಗೆ ನೀವು ಕೆಂಪು ಬಣ್ಣದ ಹೂವುಗಳನ್ನು ಅರ್ಪಿಸಿ, ಶಿವನ ಮಂತ್ರಗಳನ್ನು ಹೇಳುತ್ತಾ ಶಿವನ ಆರಾಧನೆ ಮಾಡುವುದರಿಂದ ಆರೋಗ್ಯ ಸಮಸ್ಯೆ, ಆರ್ಥಿಕ ಸಮಸ್ಯೆ ಎಲ್ಲಾ ದೂರಾಗುವುದು.
ಸಿಂಹ ರಾಶಿ
ಸಿಂಹ ರಾಶಿಯವರು ರಕ್ತ ಚಂದನ ಅರ್ಪಿಸಿ, ಕೆಂಪು ಹೂವುಗಳನ್ನು ಅರ್ಪಿಸಿ, ನಿಮ್ಮ ಇಷ್ಟಾರ್ಥ ನೆರವೇರಲು ಈ ದಿನ ಶಿಚ ಚಾಲೀಸ ಪಠಿಸಿ. ರಾಜಕಾರಣಿಗಳಿಗೆ ಈ ದಿನ ಅನುಕೂಲಕರವಾಗಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಶಿವನಿಗೆ ಬಿಲ್ವೆಪತ್ರೆ ಅರ್ಪಿಸಿ, ಪಂಚಾಕ್ಷರಿ ಮಂತ್ರ ಪಠಿಸಿ, ಹೀಗೆ ಮಾಡುವುದರಿಂದ ಶಿವ ಕೃಪೆಗೆ ಪಾತ್ರರಾಗಬಹುದು, ನಿಮ್ಮ ಕೆಲಸ ಕಾರ್ಯದಲ್ಲಿ ಯಶಸ್ಸು ದೊರೆಯಲಿದೆ.
ತುಲಾ ರಾಶಿ
ಶಿವನಿಗೆ ಹಾ;ಲಿನ ಅಭಿಷೇಕ ಮಾಡಿಸಿ, ತುಪ್ಪ ಹಾಗೂ ಸುಗಂಧದ್ರವ್ಯದ ಅಭಿಷೇಕ ಕೂಡ ಮಾಡಿ, ನಂತರ ನೈವೇದ್ಯ ಅರ್ಪಿಸಿ, ಹೀಗೆ ಮಾಡುವುದರಿಂದ ವಿದ್ಯಾರ್ಥಿಗಳ ಜ್ಞಾನಾರ್ಜನೆ ಹೆಚ್ಚಾಗುವುದು, ನಿಮ್ಮ ಬದುಕಿನಲ್ಲಿ ಧನಾತ್ಮಕ ಬದಲಾವಣೆ ಕಾಣಬಹುದು.
ವೃಶ್ಚಿಕ ರಾಶಿ
ನೀವು ಯಶಸ್ಸು, ಖ್ಯಾತಿ ಪಡೆಯಲು ಶಿವನಿಗೆ ಕೆಂಪು ಹೂವುಗಳನ್ನು ಅರ್ಪಿಸಿ ಹಾಗೂ ರುದ್ರಾಭಿಷೇಕ ಮಾಡಿ, ರುಸ್ರಾಷ್ಟಕ ಪಠಣೆ ಮಾಡಿ.
ಧನು ರಾಶಿ
ಶಿವನಿಗೆ ಜೇನು ಮಿಕ್ಸ್ ಮಾಡಿ ಜಲಾಭಿಷೇಕ ಮಾಡಿ, ಹೀಗೆ ಮಾಡುವುದರಿಂದ ನಿಮ್ಮ ವೃತ್ತಿ ಬದುಕಿನಲ್ಲಿ ಪ್ರಗತಿ ಕಾಣುತ್ತೀರಿ, ಶಿವನಿಗೆ ಅಕ್ಕಿ ಪಾಯಸವನ್ನು ನೈವೇದ್ಯವಾಗಿ ಅರ್ಪಿಸಿ.
ಮಕರ ರಾಶಿ
ಶಿವನಿಗೆ ಬಿಲ್ವೆಪತ್ರೆ, ಹೂವುಗಳು, ನೈವೇದ್ಯ ಅರ್ಪಿಸಿ ಶಿವ, ಪಾರ್ವತಿ ಮಂತ್ರಗಳನ್ನು ಪಠಿಸಿ. ಶಿವ ಕೃಪೆಯಿಂದ ಸೌಕರ್ಯಗಳು ಹೆಚ್ಚಾಗಲಿದೆ, ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಿದೆ.
ಕುಂಭ ರಾಶಿ
ಶಿವನಿಗೆ ಎಳನೀರು, ಕಬ್ಬು, ಸಾಸಿವೆಯೆಣ್ಣೆ ಅರ್ಪಿಸಿ, ಹೀಗೆ ಮಾಡುವುದರಿಂದ ಮಕ್ಕಳು ಪ್ರಗತಿ ಕಾಣುತ್ತಾರೆ, ಮಕ್ಕಳ ಅಪೇಕ್ಷೆ ಪಡುತ್ತಿರುವ ದಂಪತಿ ಸಂತಾನ ಭಾಗ್ಯ ಪಡೆಯಲು ಉಪವಾಸವಿದ್ದು ಶಿವನ ಆರಾಧನೆ ಮಾಡಿ.
ಮೀನ ರಾಶಿ
ಶಿವನಿಗೆ ಮೊಸರು, ಹಾಲಿನ ಅಭಿಷೇಕ ಮಾಡಿ, ಪಂಚಾಕ್ಷರಿ ಮಂತ್ರವನ್ನು 108 ಬಾರಿ ಪಠಿಸಿ ಇದರಿಂದ ಕುಟುಂಬದಲ್ಲಿನ ಸಮಸ್ಯೆ ಬಗೆಹರಿಯಲಿದೆ, ಆರ್ಥಿಕವಾಗಿ ಪ್ರಯೋಜನ ಪಡೆಯುತ್ತೀರಿ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
