Latest Updates
-
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ
ಮಹಾಶಿವರಾತ್ರಿಯಂದು ರಾಶಿ ಪ್ರಕಾರ ಹೀಗೆ ಪೂಜಿಸಿ, ಆರೋಗ್ಯ, ಸಂಪತ್ತು ವೃದ್ಧಿಯಾಗುವುದು
ಮಹಾಶಿವರಾತ್ರಿಯಂದು ನಿಮ್ಮ ರಾಶಿಯ ಪ್ರಕಾರ ಮಹಾದೇವನ ಆರಾಧನೆ ಮಾಡಿದರೆ ಒಳ್ಳೆಯದು, ಯಾವ ರಾಶಿಯವರು ಶಿವನಿಗೆ ಯಾವ ಬಣ್ಣದ ಹೂವುಗಳನ್ನು ಅರ್ಪಿಸಬೇಕು ಎಂದು ನೋಡೋಣ ಬನ್ನಿ:
ಮೇಷ ರಾಶಿ'
ಮೇಷ ರಾಶಿಯವರು ಮಹಾಶಿವರಾತ್ರಿಯಂದು ಕೆಂಪು ಹೂವುಗಳನ್ನು ಅರ್ಪಿಸಿದರೆ ಒಳ್ಳೆಯದು, ಅಲ್ಲದೆ ಈ ದಿನ ಮಹಾ ಮೃತ್ಯುಂಜಯ ಮಂತ್ರ ಪಠಣೆ ಮಾಡಿ. ಈ ದಿನ ಉಪವಾಸವಿದ್ದು ಶಿವನಾಮ ಪಠಣೆ ಮಾಡಿ.

ವೃಷಭ ರಾಶಿ
ವೃಷಭ ರಾಶಿಯವರು ಶಿವನಿಗೆ ಬಿಳಿ ಹೂಗಳನ್ನು ಅರ್ಪಿಸಿದರೆ ಒಳ್ಳೆಯದು. ಈ ದಿನ ರುದ್ರಾಭಿಷೇಕ ಪೂಜೆ ಮಾಡಿಸಿ. ಇದರಿಂದ ಉತ್ತಮ ಆರೋಗ್ಯ ಹೆಚ್ಚುವುದು, ಸಂಪತ್ತು ವೃದ್ಧಿಯಾಗುವುದು.
ಮಿಥುನ ರಾಶಿ
ಮಹಾ ಮೃತ್ಯುಂಜಯ ಮಂತ್ರ ಪಠಿಸಿ, ಪೂಜೆ ಮಾಡುವಾಗ ಹಸಿರು ಬಣ್ಣದ ಹಣ್ಣುಗಳನ್ನು ಅರ್ಪಿಸಿ, ಹೀಗೆ ಮಾಡುವುದರಿಂದ ನಿಮ್ಮ ಗುರಿಯಲ್ಲಿ ಯಶಸ್ಸು ಕಾಣಬಹುದು.
ಕರ್ಕ ರಾಶಿ
ಕರ್ಕ ರಾಶಿಯವರು ಶಿವನಿಗೆ ಬಿಳಿ ಹೂವುಗಳನ್ನು ಅರ್ಪಿಸಿ, ಶಿವನಿಗೆ ಹಾಲಿನಿಂದ ಅಭಿಷೇಕ ಮಾಡಿ, ಮಹಾ ಮೃತ್ಯುಂಜಯ ಮಂತ್ರ ಪಠಣೆ ಮಾಡಬೇಕು.
ಸಿಂಹ ರಾಶಿ
ಸಿಂಹ ರಾಶಿಯವರು ಶಿವ ರಾತ್ರಿಯಂದು ರುದ್ರಾಭಿಷೇಕ ಮಾಡಿಸಿ, ಮಹಾ ಮೃತ್ಯುಂಜಯ ಮಂತ್ರ ಪಠಿಸಿ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಬಿಳಿ ಹೂವುಗಳನ್ನು ಅರ್ಪಿಸಿ, ಹಾಲನ್ನು ಅರ್ಪಿಸಿ, ರುದ್ರಾಭಿಷೇಕ ಮಾಡಿಸಿ. ಈ ದಿನ ಶಿವ ಮಂತ್ರ ಪಠಣೆ ಮಾಡುತ್ತಲೇ ಇರಿ.
ತುಲಾ ರಾಶಿ
ತುಲಾ ರಾಶಿಯವರು ಶಿವನಿಗೆ ಬಿಳಿ ಹೂವುಗಳನ್ನು ಅರ್ಪಿಸಿದರೆ ಒಳ್ಳೆಯದು, ಶಿವ ಪಂಚಾಕ್ಷರಿ ಹಾಗೂ ಮಹಾ ಮೃತ್ಯುಂಜಯ ಮಂತ್ರ ಪಠಿಸಿ. ಇದರಿಂದ ಉತ್ತಮ ಆರೋಗ್ಯ ಸಿಗುವುದು, ಸಂಪತ್ತು ವೃದ್ಧಿಸುವುದು.
ವೃಶ್ಚಿಕ ರಾಶಿ
ಈ ದಿನ ನೀವು ರುದ್ರಾಭಿಷೇಕ ಮಾಡಿಸಿ, ನೀವು ಈ ದಿನ ಶಿವನಿಗೆ ಕೆಂಪು ಹೂಗಳನ್ನು ಅರ್ಪಿಸಿ, ಉಪವಾಸವಿದ್ದು ಶಿವನ ಆರಾಧನೆ ಮಾಡುವುದರಿಂದ ಶಿವಕೃಪೆಗೆ ಪಾತ್ರರಾಗುತ್ತೀರಿ.
ಧನು ರಾಶಿ
ಧನು ರಾಶಿಯವರು ಶಿವನಿಗೆ ಹಳದಿ ಬಣ್ಣದ ಹೂಗಳನ್ನು ಅರ್ಪಿಸಿ, ಮಹಾಮೃತ್ಯುಂಜಯ ಮಂತ್ರ ಪಠಿಸಿ. ಇದರಿಂದ ನಿಮ್ಮ ಇಷ್ಟಾರ್ಥಗಳು ನೆರವೇರುವುದು.
ಮಕರ ರಾಶಿ
ನೀವು ಶಿವನಿಗೆ ನೀಲಿ ಬಣ್ಣದ ಹೂಗಳನ್ನು ಅರ್ಪಿಸಿ, ಶಂಖ ಪುಷ್ಪವಾದರೆ ಇನ್ನೂ ಒಳ್ಳೆಯದು. ಈ ದಿನ ಸಮೀಪದ ಶಿವ ದೇವಾಲಯಕ್ಕೆ ಭೇಟಿ ನೀಡಿ.
ಕುಂಭ ರಾಶಿ
ಶಿವನಿಗೆ ಬಿಳಿ ಬಣ್ಣದ ಹೂವುಗಳನ್ನು ಅರ್ಪಿಸಿ. ನೀವು ಈ ದಿನ ಓಂ ನಮಃ ಶಿವಾಯ ಪಠಿಸಿ. ಈ ದಿನ ನೀವು ಉಪವಾಸವಿದ್ದು ಶಿವನ ಆರಾಧನೆ ಮಾಡಿ.
ಮೀನ ರಾಶಿ
ಮೀನ ರಾಶಿಯವರು ಹಳದಿ ಹೂವುಗಳನ್ನು ಅರ್ಪಿಸಿ ರುದ್ರಾಭಿಷೇಕ ಮಾಡಿಸಿ. ಇದರಿಂದ ಶಿವನ ಕೃಪೆಯಿಂದ ನಿಮ್ಮ ಸಂಪತ್ತು ವೃದ್ಧಿಸುವುದು.
ಮಂತ್ರ
ॐ ತ್ರ್ಯಂಬಕಂ ಯಜಾಮಹೆ ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್.
ಅರ್ಥ
ಶಿವನೇ ನಾವು ನಿನ್ನನ್ನು ಧ್ಯಾನಿಸುತ್ತೇವೆ. ಸಾವಿನ ಬಂಧಗಳಿಂದ ತಪ್ಪಿಸಿಕೊಳ್ಳಲು ನಮಗೆ ಸಹಾಯ ಮಾಡಿ ಮತ್ತು ಅಮರತ್ವವು ಸಾಧ್ಯವಾಗದಿದ್ದರೂ, ದಯವಿಟ್ಟು ಮೋಕ್ಷವನ್ನು ಸಾಧಿಸಲು ನಮಗೆ ಸಹಾಯ ಮಾಡಿ. ಮಂತ್ರವನ್ನು ಹಲವು ರೀತಿಯಲ್ಲಿ ವ್ಯಾಖ್ಯಾನಿಸಬಹುದು. ಜನರಿಗೆ ದೀರ್ಘಕಾಲ ಬದುಕಲು ಸಹಾಯ ಮಾಡುತ್ತದೆ ಎಂದು ಸಾಮಾನ್ಯವಾಗಿ ಭಾವಿಸಲಾಗಿದೆ ಆದರೆ ಅನಿವಾರ್ಯ ಸಾವು ಬಂದಾಗ ಜನರು ಮರಣದ ಭಯವಿಲ್ಲದೆ ಬದುಕಲು ಸಹಾಯ ಮಾಡು, ಮೋಕ್ಷವನ್ನು ಕಲ್ಪಿಸು.
ಪಂಚಾಕ್ಷರಿ ಶಿವ ಮಂತ್ರ
ಓಂ ನಮಃ ಶಿವಾಯ
ಓಂ ನಮಃ ಶಿವಾಯದ ಅರ್ಥವೇನೆಂದರೆ ಶಿವನಿಗೆ ನಾನು ನಮಸ್ಕರಿಸುತ್ತಿದ್ದೇನೆ. ಶಿವ ಇಲ್ಲಿ ಸರ್ವೋಚ್ಛ. ಈ ಮಂತ್ರದ ಅರ್ಥವೆಂದರೆ ಶಿವ ಆಂತರಿಕ ಆತ್ಮ. ಈ ಮಂತ್ರವನ್ನು ಪಠಿಸುವುದರಿಂದಾಗಿ ನಾವು ಮ್ಮ ಅಂತರಾತ್ಮವನ್ನು ಕರೆಯುತ್ತೀವಿ. ಈ ಮಂತ್ರ ಪಠಣೆ ಮಾಡುವುದರಿಂದ ಸುರಕ್ಷತೆ ಮತ್ತು ರಕ್ಷಣೆ ಸಿಗುವುದು. ಈ ಮಂತ್ರ ಪಠಣೆ ಮಾಡುವುದರಿಂದ ನಮ್ಮೊಳಗೆ ಶಕ್ತಿ ಧನಾತ್ಮಕ ಶಕ್ತಿ ತುಂಬಿರುತ್ತದೆ. ಈ ಮಂತ್ರವನ್ನು ಯಾರು ಬೇಕಾದರೂ ಹೇಳಬಹುದು, ಇದನ್ನು ನೀವು ಯಾವ ಸಮಯದಲ್ಲಿ ಬೇಕಾದರೂ ಪಠಿಸಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











