ಇಷ್ಟಾರ್ಥ ಸಾಧನೆಗೆ ಮಹಾಶಿವರಾತ್ರಿಯಂದು ಬಿಲ್ವಪತ್ರೆ ಅರ್ಪಿಸುವಾಗ ಈ ನಿಯಮ ಪಾಲಿಸಲೇಬೇಕು

ಮಹಾಶಿವರಾತ್ರಿಯಂದು ಶಿವನ ಆರಾಧನೆ ಮಾಡುವಾಗ ತಪ್ಪದೆ ಬಳಸುವ ವಸ್ತುಗಳಲ್ಲೊಂದು ಬಿಲ್ವೆಪತ್ರೆ. ಶಿವನ ಪೂಜೆಯಲ್ಲಿ ಇದಕ್ಕೆ ತುಂಬಾನೇ ಮಹತ್ವದ ಸ್ಥಾನವಿದೆ. ನೀವು ಸಿವನಿಗೆ ಬಿಲ್ವೆಪತ್ರೆ ಅರ್ಪಿಸುವಾಗ ಕೆಲವೊಂದು ನಿಯಮಗಳಿವೆ ಅದರಂತೆ ಅರ್ಪಿಸಿದರೆ ನಿಮ್ಮೆಲ್ಲಾ ಕಷ್ಟ ದೂರಾಗಿ ಇಷ್ಟಾರ್ಥ ನೆರವೇರುವುದು.

ಶಿವ ಪೂಜೆಯಲ್ಲಿ ಇರಲೇಬೇಕು ಬಿಲ್ವಪತ್ರೆ

ಪೌರಾಣಿಕ ಕತೆ ಪ್ರಕಾರ ಬಿಲ್ವ ಪತ್ರೆ ಮರವು ಪಾರ್ವತಿ ದೇವಿಯ ಬೆವರಿನಿಂದ ಹುಟ್ಟಿಕೊಂಡಿತು ಎಂದು ಹೇಳಲಾಗಿದೆ. ಬಿಲ್ವಪತ್ರೆಯಲ್ಲಿ ಪಾರ್ವತಿ ದೇವಿ ನೆಲೆಸಿರುತ್ತಾಳೆ, ಗಿರಿಜೆಯಾಗಿ ಈ ಮರದ ಬೇರುಗಳಲ್ಕಿ, ಮಹೇಶ್ವರಿಯಾಗಿ ಈ ಮರದ ಕಾಂಡದಲ್ಲಿ, ದಾಕ್ಷಾಯಣಿಯಾಗಿ ಕೊಂಬೆಗಳಲ್ಲಿ, ಪಾರ್ವತಿಯಾಗಿ ಇದರ ಎಲೆಗಳಲ್ಲಿ, ಕಾತ್ಯಾಯನಿಯಾಗಿ ಈ ಮರದ ಹಣ್ಣುಗಳಲ್ಲಿ, ಗೌರಿಯಾಗಿ ಬಿಲ್ವಪತ್ರೆ ಹೂಗಳಲ್ಲಿ ನೆಲೆಸಿರುತ್ತಾಳೆ ಎಂದು ಹೇಳಲಾಗುವುದು.

Maha Shivratri 2024

ಪಾರ್ವತಿಯ ಎಲ್ಲಾ ಸ್ವರೂಪಗಳು ಈ ಮರದ ರೂಪದಲ್ಲಿ ಇದೆ, ಆದ್ದರಿಂದ ಶಿವನಿಗೆ ಬಿಲ್ವಪತ್ರೆ ಎಂದರೆ ಅಷ್ಟೊಂದು ಅಚ್ಚುಮೆಚ್ಚು ಎಂದು ಕರೆಯಲಾಗುವುದು. ಬಿಲ್ವಪತ್ರೆ ಮರ ಸ್ವರ್ಗದಲ್ಲಿರುವ ಕಲ್ಪ ವೃಕ್ಷಕ್ಕೆ ಸಮ ಎಂದು ಹೇಳಲಾಗುವುದು. ಹಾಗಾಗಿ ಶಿವ ಪೂಜೆಗೆ ಯಾವ ಆಡಂಬರದ ವಸ್ತುಗಳೂ ಬೇಕಾಗಿಲ್ಲ ಈ ಬಿಲ್ವಪತ್ರೆ ಇಟ್ಟು ಪೂಜಿಸಿದರೆ ಸಾಕು ಶಿವನು ನಿಮ್ಮ ಪೂಜೆಗೆ ಒಲಿಯುತ್ತಾನೆ ಎಂದು ಹೇಳಲಾಗುವುದು.

ಶಿವನಿಗೆ ಬಿಲ್ವಪತ್ರೆ ಹೇಗೆ ಅರ್ಪಿಸಬೇಕು ಎಂಬುವುದಕ್ಕೂ ನಿಯಮಗಳಿವೆ, ಆ ನಿಯಮ ಪಾಲಿಸಿ:
ನೀವು ಶಿವನಿಗೆ ಬಿಲ್ವಪತ್ರೆ ಎಲೆಯನ್ನು ಒಂದಾಗಿ ಅರ್ಪಿಸಬಾರದು, ಮೂರು ಎಲೆಗಳನ್ನು ಜೊತೆಯಾಗಿ ಶಿವನಿಗೆ ಅರ್ಪಿಸಬೇಕು.
ಹಾಗೆ ನೀವು ಬಿಲ್ವ ಪತ್ರೆ ಎಲೆಗಳನ್ನು ಕೀಳುವಾಗ ನೋಡಿಕೊಂಡ ಬಳಸಬೇಕು, ಶಿವನಿಗೆ ಅರ್ಪಿಸುವ ಬಿಲ್ವಪತ್ರೆ ಎಲೆಗಳು ಹರಿದಿರಬಾರದು, ಹುಳು ಕಚ್ಚಿರಬಾರದು, ರಂಧ್ರಗಳಿರಬಾರದು.
ಬಿಲ್ವಪತ್ರೆ ಯಾವತ್ತಿಗೂ ಅಪವಿತ್ರವಾಗುವುದಿಲ್ಲ, ಹಾಗಾಗಿ ಒಮ್ಮೆ ಪೂಜೆಗೆ ಅರ್ಪಿಸಿದ ಎಲೆಗಳನ್ನು ಶಿವ ಪೂಜೆಯಲ್ಲಿ ಬಳಸುವುದಿಲ್ಲ, ಆದರೆ ಇತರ ಪೂಜೆಯಲ್ಲಿ ಬಳಸಬಹುದು.
ನೀವು ಬಿಲ್ವ ಪತ್ರೆ ಅರ್ಪಿಸುವಾಗ ಬಿಲ್ವಪತ್ರೆಯ ಮೃದು ಭಾಗ ಮೇಲಿರುವಂತೆ ಎಲೆಗಳನ್ನು ಅರ್ಪಿಸಬೇಕು, ಅದನ್ನು ಮಗುಚಿ ಇಟ್ಟು ಅರ್ಪಿಸಬೇಡಿ.
ಶಿವನಿಗೆ ಜಲಾಭಿಷೇಕ ಮಾಡುವಾಗ ಬಿಲ್ವಪತ್ರೆ ಅರ್ಪಿಸಿ.
ಶಿವನಿಗೆ ಬಿಲ್ವಪತ್ರೆ ಅರ್ಪಿಸುವಾಗ ಉಂಗುರ ಬೆರಳು, ಮಧ್ಯ ಬೆರಳು, ಹೆಬ್ಬರಳು ಬಳಸಿ ಅರ್ಪಿಸಬೇಕು.
ನೀವು ಬಿಲ್ವಪತ್ರೆ ಎಲೆಗಳನ್ನು ಕೀಳುವಾಗ ಹಾಗೂ ಅದನ್ನು ಶಿವನಿಗೆ ಅರ್ಪಿಸುವಾಗ ಈ ನಿಯಮಗಳನ್ನು ಮರೆಯಬೇಡಿ.

ಇನ್ನು ಬಿಲ್ವಪತ್ರೆ ಎಲೆ ಕೀಳುವಾಗ ನೀವು ಹಾಗೆಯೇ ಕೀಳಬಾರದಯ ಓಂ ನಮಃ ಶಿವಾಯ ಮಂತ್ರ ಪಠಿಸುತ್ತಾ ಕೀಳಬೇಕು. ಬಿಲ್ವಪತ್ರೆ ಎಲೆಗಳನ್ನು ಕೀಳುವಾಗ ಮಡಿಯಾಗಿರಬೇಕು. ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿ, ಬಿಲ್ವ ಪತ್ರೆ ಮರವನ್ನು ಪೂಜಿಸಿ ಅದರ ಅನುಮತಿ ಕೇಳಿ ನಂತರವಷ್ಟೇ ಎಲೆಗಳನ್ನು ಕೀಳಬೇಕು.
ಬಿಲ್ವಪತ್ರೆ ಕಿತ್ತ ಬಳಿಕ ಅವುಗಳನ್ನು ಶುದ್ಧ ನೀರಿನಿಂದ ತೊಳೆಯಬೇಕು. ನಂತರ ಎಲೆಗಳ ಮೇಲೆ ಓಂ ಅಂತ ಚಂದನ ಪೇಸ್ಟ್‌ನಿಂದ ಬರೆದು ನಂತರ ಶಿವನಿಗೆ ಅರ್ಪಿಸಿ. ಬಿಲ್ವ ಪತ್ರೆ ಎಲೆಗಳನ್ನು ತೊಟ್ಟು ಸಹಿತ ಅರ್ಪಿಸಬೇಕು.

ಯಾವ ದಿನಗಳಲ್ಲಿ ಬಿಲ್ವಪತ್ರೆ ಕೀಳಬಾರದು?
ಸೋಮವಾರ, ಅಮವಾಸ್ಯೆ, ಮಕರ ಸಂಕ್ರಾಂತಿ, ಪೂರ್ಣಿಮಾ, ಅಷ್ಟಮಿ, ನವಮಿಯಂದು ಬಿಲ್ವಪತ್ರೆ ಎಲೆಗಳನ್ನು ಕೀಳಬಾರದು

ಮನೆ ಮುಂದೆ ಬಿಲ್ವಪತ್ರೆ ಇರಲಿ
ಬಿಲ್ವಪತ್ರೆಯನ್ನು ಶ್ರೀವೃಕ್ಷ ಎಂದು ಕರೆಯಲಾಗುವುದು, ಈ ಮರ ಮನೆಯಲ್ಲಿದ್ದರೆ ಮನೆಯಲ್ಲಿ ಯಾವುದೇ ಕಷ್ಟವಿರಲ್ಲ, ಮನೆಗೆ ಕೆಡಕು ಉಂಟಾಗುವುದನ್ನು ಈ ಮರ ತಡೆಯುತ್ತದೆ ಎಂದು ಹೇಳಲಾಗುವುದು.

ಬಿಲ್ವಪತ್ರೆ ಮರನೆಟ್ಟು ಅದಕ್ಕೆ ಪ್ರತಿನಿತ್ಯ ಸಪೂಜೆ ಮಾಡಬೇಕು, ಯಾರು ಬಿಲ್ವಪತ್ರೆ ಮರಕ್ಕೆ ಪ್ರತಿದಿನ ಪೂಜೆ ಸಲ್ಲಿಸುತ್ತಾರೋ ಅವರಿಗೆ ಶಿವನ ಕೃಪೆ ಸದಾ ಇರುತ್ತದೆ ಎಂದು ಹೇಳಲಾಗುವುದು. ಇನ್ನು ಈ ಬಿಲ್ವ ಪತ್ರೆ ಮರವನ್ನು ವಾಯುವ್ಯ ದಿಕ್ಕಿನಲ್ಲಿ ನೆಟ್ಟರೆ ಒಳ್ಳೆಯದು ಎಂದು ಹೇಳಲಾಗುವುದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Maha Shivratri 2024: Things To Know When You Offer Bilva Patre Or Bel Leaves To Lord Shiva

Maha Shivratri 2024: When you offer Bilva Patre to lord shiva you must follow these puja rules, read on..
X
Desktop Bottom Promotion