Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
ಪೂರ್ವಭಾದ್ರಪದ ನಕ್ಷತ್ರದಲ್ಲಿರುವ ಶನಿ: ಮಾರ್ಚ್ 29ರವರೆಗೆ ಈ ಮೂರು ರಾಶಿಯವರು ಜಾಗ್ರತೆ ಮಾಡಿ
ಶನಿಯನ್ನು ಕರ್ಮದ ದೇವರು ಎಂದು ಕರೆಯಲಾಗುವುದು, ಶನಿಯು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಲು ಎರಡೂವರೆ ವರ್ಷ ಸಮಯ ತೆಗೆದುಕೊಳ್ಳುತ್ತದೆ. ಶನಿಯು ನಕ್ಷತ್ರ ಬದಲಾವಣೆ ಮಾಡುತ್ತಿರುತ್ತದೆ. ಇದೀಗ ಪೂರ್ವಭಾದ್ರಪದ ನಕ್ಷತ್ರದಲ್ಲಿ ಶನಿಯು ಇದೆ. ಶನಿಯು ಈ ನಕ್ಷತ್ರದಲ್ಲಿರುವವರೆಗೆ ಕೆಲ ರಾಶಿಯವರು ಸ್ವಲ್ಪ ಜಾಗ್ರತೆವಹಿಸಬೇಕು.
ಶನಿಯು ಈ ನಕ್ಷತ್ರದಲ್ಲಿರುವಾಗ ಕೆಲ ಸಮಸ್ಯೆಯನ್ನುಂಟು ಮಾಡಬಹುದು. ಶನಿಯ ಪ್ರಭಾವ ಯಾವ ರಾಶಿಗಳಿಗೆ ಅನುಕೂಲಕರವಲ್ಲ, ಕೆಲವು ಅಡೆತಡೆಗಳನ್ನು ಉಂಟುಮಾಡಬಹುದು. ಹಾಗಾಗಿ ಆ ರಾಶಿಯವರು ಜಾಗ್ರತೆವಹಿಸಬೇಕು:

ಶನಿಯು ಪೂರ್ವಭಾದ್ರಪದ ನಕ್ಷತ್ರದಲ್ಲಿರುವ ಸಮಯ ಈ ರಾಶಿಯವರಿಗೆ ಅನುಕೂಲಕರವಲ್ಲ, ಸ್ವಲ್ಪ ಜಾಗ್ರತೆವಹಿಸಿ:
ಕರ್ಕ ರಾಶಿ
ಕರ್ಕ ರಾಶಿಯವರು ಈ ಸಮಯದಲ್ಲಿ ಕೆಲ ಅಡೆತಡೆಗಳನ್ನು ಎದುರಿಸುತ್ತಿರಬಹುದು, ಈ ಸಮಯದಲ್ಲಿ ಆರೋಗ್ಯ ಸಂಬಂಧಿತ ಸಮಸ್ಯೆ ಹೆಚ್ಚು ಕಾಡಬಹುದು. ಈ ಸಮಯದಲ್ಲಿ ಅನಿರೀಕ್ಷಿತ ಒತ್ತಡ ಉಂಟು ಮಾಡಬಹುದು. ಕೆಲಸದ ಜಾಗದಲ್ಲಿ ಅನೇಕ ಸವಾಲುಗಳನ್ನು ತರಬಹುದು. ಇನ್ನು ಕುಟುಂಬ ಜಿವನದಲ್ಲಿಯೂ ಅನೇಕ ಸಮಸ್ಯೆಗಳು ಎದುರಾಗಬಹುದು.
ನಿಮಗೆ ಮಾರ್ಚ್ 29 ನಂತರ ನಿಮ್ಮ ಬದುಕಿನಲ್ಲಿ ಕೆಲ ಬದಲಾವಣೆ ತರಬಹುದು. ಶನಿಯು ಮೀನ ರಾಶಿಗೆ ಸಂಚಾರ ಮಾಡಿದಾಗ ಕರ್ಕ ರಾಶಿಯವರಿಗೆ ಅನುಕೂಲಕರ ಪ್ರಯೋಜನ ನೀಡಲಿದೆ. ಈ ಸಮಯದಿಂದ ವೃತ್ತಿ ಬದುಕಿನಲ್ಲಿ ಬೆಳವಣಿಗೆ ಕಾಣಬಹುದು. ಆರ್ಥಿಕ ತೊಂದರೆಗಳು ದೂರಾಗುವುದು.
ಈ ಮೂರು ತಿಂಗಳು ನೀವು ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವದಲ್ಲಿ ಜಾಗ್ರತೆವಹಿಸುವುದು ಒಳ್ಳೆಯದು.
ಸಿಂಹ ರಾಶಿ
ಶನಿಯು ಪೂರ್ವಭಾದ್ರಪದ ನಕ್ಷತ್ರದಲ್ಲಿ ಇರುವುದರಿಂದ ನಿಮಗೆ ಅನೇಕ ತೊಂದರೆ ಉಂಟು ಮಾಡಬಹುದು. ಈ ಅವಧಿಯಲ್ಲಿ ವೃತ್ತಿ ಬದುಕಿನಲ್ಲಿ ತೊಂದರೆಗಳನ್ನು ಎದುರಿಸುತ್ತಿರಬಹುದು. ಆರ್ಥಿಕ ದೃಷ್ಟಿಯಿಂದಲೂ ಈ ಸಮಯ ಅನುಕೂಲಕರವಲ್ಲ. ಆರೋಗ್ಯ ಸಂಬಂಧಿತ ಸಮಸ್ಯೆ ಕಾಡಬಹುದು. ಅಲ್ಲದೆ ಕುಟುಂಬದಲ್ಲಿಯೂ ಕೆಲ ಭಿನ್ನಾಭಿಪ್ರಾಯ ಉಂಟು ಮಾಡಬಹುದು.
ನೀವು ಬುದ್ಧಿವಂತಿಕೆಯಿಂದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು, ಇನ್ನು ಸಮಸ್ಯೆಗಳನ್ನು ತಾಳ್ಮೆಯಿಂದ ನಿಭಾಯಿಸುವುದು ಒಳ್ಳೆಯದು, ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಿ. ವೃತ್ತಿ ಬದುಕಿನಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ.
ಮಕರ ರಾಶಿ
ಮಕರ ರಾಶಿಯಲ್ಲಿ ಶನಿಯ ಸ್ಥಾನ ಅನುಕೂಲಕರವಲ್ಲ, ಈ ಮೂರು ತಿಂಗಳು ನೀವು ಸ್ವಲ್ಪ ಜಾಗ್ರತಹಿಸಿ. ಈ ಅವಧಿಯಲ್ಲಿ ವೃತ್ತಿ ಬದುಕಿನಲ್ಲಿ ಹಲವು ಸಮಸ್ಯೆಯನ್ನುಂಟು ಮಾಡಬಹುದು. ಮಾನಸಿಕ ಒತ್ತಡ ಹೆಚ್ಚಿರಬಹುದು.
ಈ ಅವಧಿಯಲ್ಲಿ ಆರ್ಥಿಕ ಸಮಸ್ಯೆ ಉಂಟು ಮಾಡಬಹುದು. ನೀವು ಮಿತಿ ಮೀರಿ ಖರ್ಚು ಮಾಡಲು ಹೋಗಬೇಡಿ, ಈ ಅವಧಿಯಲ್ಲಿ ನೀವು ಮಾನಸಿಕ ಒತ್ತಡ ಕಡಿಮೆ ಮಾಡಲು ಪ್ರಯತ್ನಿಸಿ, ನೀವು ಸರಿಯಾಗಿ ಪ್ಲ್ಯಾನ್ ಮಾಡಿದರೆ ಈ ಸಮಸ್ಯೆಯಿಂದ ಹೊರ ಬರಲು ಸಾಧ್ಯವಾಗುವುದು.
ಮೇ29ರ ನಂತರ ನಿಮಗೆ ಅನುಕೂಲಕರ, ಏಕೆಂದರೆ ನೀವು ಶನಿ ಸಾಡೇಸಾತಿಯಿಂದ ಮುಕ್ತಿ ಪಡೆಯುತ್ತೀರಿ. ಮಾರ್ಚ್ 29ರಿಂದ ವೃತ್ತಿ ಬದುಕಿನಲ್ಲಿದ್ದ ಸಮಸ್ಯೆಗಳು, ವೈಯಕ್ತಿಕ ಬದುಕಿನಲ್ಲಿದ್ದ ಸಮಸ್ಯೆಗಳು ದೂರಾಗಲಿದೆ, ನೀವು ಆರ್ಥಿಕವಾಗಿ ಉತ್ತಮ ಪ್ರಯೋಜನ ಪಡೆಯುತ್ತೀರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











