ಭಾದ್ರಪದ ನಕ್ಷತ್ರದಲ್ಲಿ ಶನಿ: ಅಕ್ಟೋಬರ್‌ 3ರವರೆಗ ಈ 3 ರಾಶಿಯವರು ಶನಿಯ ಅದ್ಭುತ ಪ್ರಯೋಜನ ಪಡೆಯಲಿದ್ದಾರೆ

ನವಗ್ರಹಗಳು ಬೀರುವ ಪ್ರಭಾವದಲ್ಲಿ ಶನಿಯ ಪ್ರಭಾವ ತುಂಬಾ ದೀರ್ಘವಾಗಿರುತ್ತದೆ. ಶನಿಯೂ ಎರಡೂವರೆ ವರ್ಷಕ್ಕೊಮ್ಮೆ ರಾಶಿ ಬದಲಾಯಿಸುವುದು. ಇದೀಗ ಶನಿಯು ಕುಂಭ ರಾಶಿಯಲ್ಲಿದೆ ಅಲ್ಲದೆ ಏಪ್ರಿಲ್ 6ಕ್ಕೆ ಭಾದ್ರಪದ ನಕ್ಷ್ರಕ್ಕೆ ಪ್ರವೇಶ ಮಾಡಿದೆ.

ಅಕ್ಟೋಬರ್‌ 3ರವರೆಗೆ ಶನಿಯು ಇದೇ ರಾಶಿಯಲ್ಲಿ ಇರಲಿದೆ. ಶನಿಯು ಭಾದ್ರಪದ ನಕ್ಷತ್ರದಲ್ಲಿ ಇರುವಾಗ ಕೆಲವರಿಗೆ ಒಳ್ಳೆಯದು, ಇನ್ನು ಕೆಲವರಿಗೆಈ ಸಮಯದಲ್ಲಿ ಶನಿಯ ಪ್ರಭಾವ ಅಷ್ಟೊಂದು ಅನುಕೂಲಕರವಲ್ಲ. ಆದರೆ ಈ ಅವಧಿಯಲ್ಲಿ ಕೆಲ ರಾಶಿಗಳು ತುಂಬಾನೇ ಒಳ್ಳೆಯ ಪ್ರಯೋಜನ ಪಡೆಯಲಿದ್ದಾರೆ. ಇದು ಯಾವ ಲಕ್ಕಿ ಡ್ರಾಗಿಂತ ಕಡಿಮೆಯಿಲ್ಲ...

Lord Shani In Bhadrapada Nakshtra

ಪೂರ್ವ ಭಾದ್ರಪದ ನಕ್ಷತ್ರದಲ್ಲಿ ಶನಿಯ ಪ್ರಭಾವ
ಶನಿಯು ಬಾದ್ರಪದ ನಕ್ಷತ್ರದಲ್ಲಿ ಇರುವಾಗ ಕುಂಭದಲ್ಲಿ ಇರುವ ಶನಿಯು ಮತ್ತಷ್ಟು ಪ್ರಭಾವ ಬೀರುತ್ತನೆ.

ಪೂರ್ವ ಭಾದ್ರಪದ ನಕ್ಷತ್ರವು ಹಣಕಾಸು, ಸಮೃದ್ಧಿ, ಆಸ್ತಿಯ ಅಂಶವಾಗಿದೆ. ಇದರಿಂದಾಗಿ ಈ ಅವಧಿಯಲ್ಲಿ ಆರ್ಥಿಕ ಅಭಿವೃದ್ದಿ ಕಂಡು ಬರುವುದು, ಸಮಾಜದಲ್ಲಿ ನಿಮ್ಮ ಸ್ಥಾನ-ಮಾನ ಹೆಚ್ಚಾಗುವುದು.

ಶನಿಯು ಭಾದ್ರಪದ ನಕ್ಷತ್ರದಲ್ಲಿರುವ ಸಮಯ ಈ 3 ರಾಶಿಯವರಿಗೆ ತುಂಬಾ ಅನುಕೂಲಕರವಾಗಿದೆ

ಮೇಷ ರಾಶಿ
ಮೇಷ ರಾಶಿಯವರು ಶನಿ ಕೃಪೆಯಿಂದ ಉತ್ತಮ ಪ್ರಯೋಜನ ಪಡೆಯುತ್ತಾರೆ. ಈ ಸಮಯದಲ್ಲಿ ನೀವು ಹಠಾತ್ ಆರ್ಥಿಕ ಲಾಭವನ್ನು ಪಡೆಯುವ ನಿರೀಕ್ಷೆಯಿದೆ. ಈ ಅವಧಿಯಲ್ಲಿ ನೀವು ವೃತ್ತಿ ಬದುಕಿನಲ್ಲಿ ಪ್ರಗತಿ ಹೊಂದುತ್ತೀರಿ. ಇನ್ನು ನೀವು ಕೆಲಸ ಬದಲಾಯಿಸಲು ಯೋಚಿಸುತ್ತಿದ್ದರೆ ಈ ಅವಧಿ ನಿಮಗೆ ತುಂಬಾ ಅನುಕೂಲಕರವಾಗದೆ. ನಿಮ್ಮ ಆತ್ಮವಿಶ್ವಾಸ ಚೆನ್ನಾಗಿರಲಿದೆ. ಉದ್ಯೋಗಿಗಳು ಬಡ್ತಿ ಪಡೆಯುತ್ತೀರಿ. ವ್ಯಾಪಾರಸ್ಥರು ಈ ಅವಧಿಯಲ್ಲಿ ಹೆಚ್ಚಿನ ಲಾಭ ಪಡೆಯುತ್ತಾರೆ.

ಕುಂಭ ರಾಶಿ
ಕುಂಭ ರಾಶಿಯವರು ಕೂಡ ಶನಿಯು ಭಾದ್ರಪದ ನಕ್ಷತ್ರದಲ್ಲಿರುವಾಗ ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ. ವೈವಾಹಿಕ ಜೀವನ ತುಂಬಾ ಚೆನ್ನಾಗಿರಲಿದೆ. ಮನೆಯಲ್ಲಿ ವಾತಾವರಣ ತುಂಬಾ ಚೆನ್ನಾಗಿರಲಿದೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗುವುದು. ಇನ್ನು ವ್ಯಾಪಾರಸ್ಥರು ಈ ಅವಧಿಯಲ್ಲಿ ಉತ್ತಮ ಲಾಭ ಪಡೆಯಲು ಸಾಧ್ಯವಾಗುವುದು.

ತುಲಾ ರಾಶಿ
ಶನಿಯ ನಕ್ಷತ್ರ ಬದಲಾವಣೆಯಿಂದ ತುಲಾ ರಾಶಿಯವರು ಕೂಡ ಉತ್ತಮ ಪ್ರಯೋಜನ ಪಡೆಯುತ್ತಾರೆ. ಕುಟುಂಬ ಜೀವನ ಚೆನ್ನಾಗಿರಲಿದೆ. ಮಕ್ಕಳ ಅಪೇಕ್ಷಿತ ದಂಪತಿ ಈ ಅವಧಿಯಲ್ಲಿ ಸಿಹಿ ಸುದ್ದಿ ಪಡೆಯುತ್ತೀರಿ. ಉದ್ಯೋಗಿಗಳಿಗೆ, ವ್ಯಾಪಾರಸ್ಥರಿಗೆ ಈ ಅವಧಿ ಉತ್ತಮವಾಗಿರಲಿದೆ.


ರಾಶಿ ಪ್ರಕಾರ ಶನಿ ಕೃಪೆಗೆ ಪರಿಹಾರ

ಮೇಷ ರಾಶಿಯವರು ಪ್ರತಿ ಶನಿವಾರ ಆಲದ ಮರದ ಕೆಳಗಡೆ ಎಳ್ಳೆಣ್ಣೆ ದೀಪ ಹಚ್ಚಬೇಕು
ವೃಷಭ ರಾಶಿಯವರು ಪ್ರತಿ ಶನಿವಾರ ಕಪ್ಪು ಎಳ್ಳು ಹಾಗೂ ಕಪ್ಪು ವಸ್ತುಗಳನ್ನು ದಾನ ಮಾಡಬೇಕು.
ಮಿಥುನ ರಾಶಿಯ ಜನರು ಪ್ರತಿ ಮಂಗಳವಾರ ಮತ್ತು ಶನಿವಾರದಂದು ಆಲದ ಮರದ ಕೆಳಗಡೆ ಸಾಸಿವೆಯೆಣ್ಣೆ ದೀಪ ಹಚ್ಚಬೇಕು.
ಕರ್ಕ ರಾಶಿಯವರು ಹನುಮಾನ್‌ ಚಾಲೀಸ ಪಠಿಸಿ
ಸಿಂಹ ರಾಶಿಯವರು ಪ್ರತಿ ಮಂಗಳವಾರ ಮತ್ತು ಶನಿವಾರದಂದು ಶನಿ ಚಾಲೀಸವನ್ನು ಪಠಿಸಿದರೆ ಹೆಚ್ಚಿನ ಪ್ರಯೋಜನ ಪಡೆಯುತ್ತೀರಿ
ಕನ್ಯಾ ರಾಶಿಯವರು ಕಪ್ಪು ಬಟ್ಟೆ, ಆಹಾರವನ್ನು ದಾನ ಮಾಡಬೇಕು.
ತುಲಾ ರಾಶಿಯವರು ಎಳ್ಳಿನ ಉಂಡೆಯನ್ನು ಮೀನಿಗೆ ಹಾಕಬೇಕು
ವೃಶ್ಚಿಕ ರಾಶಿಯವರು ಶನಿವಾರ ರುದ್ರಾಭಿಷೇಕ ಮಾಡಿಸಿ
ಧನು ರಾಶಿಯವರು ಪ್ರತಿ ಶನಿವಾರ ಹನುಮಾನ್ ಚಾಲೀಸ ಪಠಿಸಿ
ಮಕರ ರಾಶಿಯವರು ಪ್ರತಿ ಶನಿವಾರ ಶನಿ ಬೀಜ ಮಂತ್ರವನ್ನು ಪಠಿಸಬೇಕು.
ಕುಂಭ ರಾಶಿಯವರು ಮಂಗಳವಾರ ಹನುಮಂತನನ್ನು ಪೂಜಿಸಿ ಮಂತ್ರ ಪಠಿಸಬೇಕು
ಮೀನ ರಾಶಿಯ ಶನಿ ರಾಶಿಯವರು ಶನಿ ಸ್ತೋತ್ರವನ್ನು ಪಠಿಸಬೇಕು, ಬಡವಿರಿಗೆ ನಿಮ್ಮ ಶಕ್ತಿಗೆ ತಕ್ಕಂತೆ ದಾನ ಮಾಡಬೇಕು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Lord Shani In Bhadrapada Nakshtra: Lucky To These 3 Zodiac Signs

Lord Shani In Bhadrapada Nakshtra: These 3 zodiac gets more profit in this period, read on...
Story first published: Sunday, May 19, 2024, 14:17 [IST]
X
Desktop Bottom Promotion