Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಧನ ತ್ರಯೋದಶಿಯಂದೇ ಬಂದಿದೆ ಲಕ್ಷ್ಮಿ ನಾರಾಯಣ ಯೋಗ: ಈ ರಾಶಿಯವರಿಗೆ ಶುಭವೋ ಶುಭ
5 ದಿನದ ದೀಪಾವಳಿ ಸಡಗರ ಅಕ್ಟೋಬರ್ 29 ಧನ್ತೇರಸ್ ದಿನದಿಂದಲೇ ಶುರುವಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಈ ದಿನ ತುಂಬಾನೇ ಮುಖ್ಯವಾಗಿದೆ. ಧನ್ತೇರಸ್ ದಿನದಂದು ವಸ್ತುಗಳನ್ನು ಖರೀದಿಸಿದರೆ ಲಕ್ಷ್ಮಿ ಕೃಪೆ ಇರಲಿದೆ ಎಂದು ಹೇಳಲಾಗುವುದು, ಈ ವರ್ಷ ಕಾಕತಾಳೀಯವೆಂಬಂತೆ ಇದೇ ದಿನದಂದು ಲಕ್ಷ್ಮಿ ನಾರಾಯಣ ಯೋಗ ಕೂಡ ಉಂಟಾಗಲಿದೆ. ಹಾಗಾಗಿ ಈ ದನ್ತೇರಸ್ ಅಥವಾ ಧನ ತ್ರಯೋದಶಿ ಮತ್ತಷ್ಟು ವಿಶೇಷವಾಗಿದೆ.

ಈ ಲಕ್ಷ್ಮಿ ನಾರಾಯಣ ಯೋಗ ಎಂದರೇನು?
ಲಕ್ಷ್ಮಿ ನಾರಾಯಣ ಯೋಗವನ್ನು ಅತ್ಯಂತ ಶುಭ ಯೋಗವೆಂದು ಪರಿಗಣಿಸಲಾಗಿದೆ, ವೈದಿಕ ಶಾಸ್ತ್ರದ ಪ್ರಕಾರೆ ರಾಶಿಯಲ್ಲಿ ಬುಧ ಮತ್ತು ಶುಕ್ರನ ಸಂಯೋಗವಾದಾಗ ಲಕ್ಷ್ಮಿ ನಾರಾಯಣ ಯೋಗ ಉಂಟಾಗಲಿದೆ, ಈ ಯೋಗದ ಪ್ರಭಾವದಿಂದಾಗಿ ಶುಕ್ರ ಮತ್ತು ಬುಧನ ಮಂಗಳಕರ ಫಲಿತಾಂಶ ಪಡೆಯಬಹುದು. ಐದನೇ ಮನೆಯಲ್ಲಿ ಲಕ್ಷ್ಮಿ ನಾರಾಯಣ ಯೋಗವಿದ್ದರೆ ಆ ವ್ಯಕ್ತಿ ಮಹಾನ್ ಪಂಡಿತನಾಗುತ್ತಾನೆ ಎಂದು ಹೇಳಲಾಗುವುದು. ಲಕ್ಷ್ಮಿ ನಾರಾಯಣ ಯೋಗದ ಸಮಯದಲ್ಲಿ ಏನೇ ಶುಭ ಕಾರ್ಯ ಮಾಡಿದರೂ ಅದರಲ್ಲಿ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ ಎಂದು ಹೇಳಲಾಗುವುದು.
ಲಕ್ಷ್ಮಿ ನಾರಾಯಣ ಯೋಗ ಮತ್ತು ಧನ್ತೇರಸ್ ಒಂದೇ ದಿನ ಬಂದಿರುವುದರಿಂದ ಈ ದಿನ ಅತ್ಯಂತ ಶುಭವಾಗಿದೆ
ಲಕ್ಷ್ಮಿ ನಾರಾಯಣ ಯೋಗ ಹಾಗೂ ಧನ್ತೇರಸ್ ಎರಡೂ ಒಂದೇ ದಿನ ಬಂದಿರುವುದರಿಂದ ಈ ದಿನ ಮತ್ತಷ್ಟು ವಿಶೇಷವಾಗಿದೆ, ಈ ದನ್ತೇರಸ್ ದಿನದಂದು ನೀವು ಹೊಸ ಉದ್ಯಮ ಪ್ರಾರಂಭಿಸಬೇಕು, ಹೊಸ ಉದ್ಯೋಗ ಪ್ರಾರಂಭಿಸಬೇಕು ಎಂದಾದರೆ ಈ ದಿನ ನಿಮಗೆ ಅತ್ಯಂತ ಮಂಗಳಕರವಾಗಿದೆ.
ಈ ಲಕ್ಷ್ಮಿ ನಾರಾಯಣ ಯೋಗ ಈ ರಾಶಿಯವರಿಗೆ ಹೆಚ್ಚು ಮಂಗಳಕರವಾಗಿದೆ ನೋಡಿ:
ವೃಷಭ ರಾಶಿ: ಲಕ್ಷ್ಮಿ ನಾರಾಯಣ ಯೋಗದಿಂದಾಗಿ ವೃಷಭ ರಾಶಿಯವರು ಅತ್ಯಂತ ಮಂಗಳಕರ ಪ್ರಯೋಜನ ಪಡೆಯಲಿದ್ದೀರಿ. ಈ ಯೋಗದ ಪ್ರಭಾವದಿಂದಾಗಿ ನೀವು ಈ ಅವಧಿಯಲ್ಲಿ ಅನುಭವಿಸುತ್ತಿರುವ ಕಷ್ಟಗಳು ದೂರಾಗಲಿದೆ. ವ್ಯಾಪಾರಿಗಳ ಜೀವನದಲ್ಲಿ ಅಡೆತಡೆಗಳು ದೂರಾಗಲಿದೆ. ನಿಮ್ಮ ಹಾಗೂ ಸಂಗಾತಿ ನಡುವೆ ಏನಾದರು ಭಿನ್ನಾಭಿಪ್ರಾಯವಿದ್ದರೆ ಅದು ಬಗೆಹರಿಯಲಿದೆ.
ಕರ್ಕ ರಾಶಿ
ಲಕ್ಷ್ಮಿ ನಾರಾಯಣ ಯೋಗವು ಕರ್ಕ ರಾಶಿಯವರಿಗೆ ಶುಭವಾಗಿದೆ. ಈ ಅವಧಿಯಲ್ಲಿ ನಿಮ್ಮ ಪ್ರಮುಖ ಸಮಸ್ಯೆ ಬಗೆಹರಿಯುವುದರಿಂದ ಚಿಂತೆ ಮುಕ್ತರಾಗುತ್ತೀರಿ. ನಿಮ್ಮ ವೃತ್ತಿ ಬದುಕಿನಲ್ಲಿ ಉತ್ತಮ ಫಲಿತಾಂಶ ಪಡೆಯುತ್ತೀರಿ. ರಾಜಕೀಯ ಕ್ಷೇತ್ರದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗಲಿದೆ. ಈ ಲಕ್ಷ್ಮಿ ನಾರಾಯಣ ಯೋಗವು ಅತ್ಯಂತ ಮಂಗಳಕರವಾಗಿದೆ.
ಸಿಂಹ ರಾಶಿ
ವೃತ್ತಿ ಬದುಕಿನ ದೃಷ್ಟಿಯಿಂದ ನೋಡುವುದಾದರೆ ಲಕ್ಷ್ಮಿ ನಾರಾಯಣ ಯೋಗ ಸಿಂಹ ರಾಶಿಯವರ ಮೇಲೂ ಅತ್ಯಂತ ಮಂಗಳಕರ ಪ್ರಭಾವ ಬೀರಲಿದೆ. ಹೊಸ ವ್ಯಾಪಾರ ಯೋಜನೆಗಳಲ್ಲಿ ತೊಡಗಿಕೊಳ್ಳಲು ಈ ಅವಧಿ ತುಂಬಾ ಚೆನ್ನಾಗಿರಲಿದೆ. ಆರ್ಥಿಕವಾಗಿ ಪ್ರಗತಿ ಕಾಣಬಹುದು, ಆದರೆ ಆರೋಗ್ಯದ ಕಡೆಗೆ ಗಮನಹರಿಸಬೇಕು.
ಕುಂಭ ರಾಶಿ
ಕುಂಭ ರಾಶಿಯವರಿಗೂ ಈ ಲಕ್ಷ್ಮಿ ನಾರಾಯಣ ಯೋಗವು ಅದೃಷ್ಟವನ್ನು ತರಲಿದೆ. ನ್ಯಾಯಾಲಯದಲ್ಲಿ ಏನಾದರು ತೀರ್ಪು ಇದ್ದರೆ ಅದು ಬಗೆಹರಿಯಲಿದೆ. ಕುಟುಂಬ ಬದುಕಿನಲ್ಲಿನ ಸಮಸ್ಯೆ ಬಗೆಹರಿಯಲಿದೆ. ಲಕ್ಷ್ಮಿ ನಾರಾಯಣ ಯೋಗದ ಬಲದಿಂದ ಆರ್ಥಿಕವಾಗಿ ಹೆಚ್ಚು ಲಾಭ ಗಳಿಸಲು ಸಾಧ್ಯವಾಗುವುದು.
ಮೀನ ರಾಶಿ
ಲಕ್ಷ್ಮಿ ನಾರಾಯಣ ಯೋಗ ಮೀನ ರಾಶಿಯವರಿಗೂ ತುಂಬಾ ಪ್ರಯೋಜನಕಾರಿಯಾಗಿದೆ. ಈ ಯೋಗದಿಂದಾಗಿ ವೃತ್ತಿ ಬದುಕಿನಲ್ಲಿ ಪ್ರಗತಿ ಕಾಣುವಿರಿ, ಆರ್ಥಿಕವಾಗಿ ಉತ್ತಮ ಪ್ರಯೋಜನ ಪಡೆಯುತ್ತೀರಿ. ನಿಮ್ಮ ಹಾಗೂ ಸಂಗಾತಿ ನಡುವೆ ಏನಾದರು ಭಿನ್ನಾಭಿಪ್ರಾಯವಿದ್ದರೆ ಅದು ಬಗೆಹರಿಯಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications

