Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಲಕ್ಷ್ಮೀ ನಾರಾಯಣ ಯೋಗದಿಂದ ಈ ರಾಶಿಯವರ ಸಂಪತ್ತು ವೃದ್ಧಿ..! ಯಾರ ಜೀವನ ಬದಲು.?
ಜ್ಯೋತಿಷ್ಯದಲ್ಲಿ ಗ್ರಹಗತಿಗಳ ಬದಲಾವಣೆಯನ್ನು ಬಹಳ ಪ್ರಮುಖ ವಿದ್ಯಮಾನವೆಂದು ಪರಿಗಣಿಸಲಾಗುತ್ತದೆ. ಗ್ರಹಗಳ ಚಲನೆ ರಾಶಿಗಳ ಉಂಟಾಗುವ ಬದಲಾವಣೆಯು ಎಲ್ಲರ ಜೀವನದಲ್ಲೂ ಬದಲಾವಣೆಗೆ ಕಾರಣವಾಗುತ್ತದೆ. ಹೀಗಾಗಿ ಗ್ರಹಗಳ ಸಂಚಾರವು ಜ್ಯೋತಿಷ್ಯ ಶಾಸ್ತ್ರದಲ್ಲಿ ಬಹಳ ಮುಖ್ಯ ಎಂದು ಪರಿಗಣಿಸುತ್ತಾರೆ. ಹಾಗೆ ಗ್ರಹಗಳ ಸಂಚಾರವು ಯೋಗಗಳಿಗೆ ಕಾರಣವಾಗುವುದು ಸಹ ನೋಡಬಹುದು.
ಈಗ ಶುಕ್ರ ಹಾಗೂ ಬುಧ ಗ್ರಹಗಳ ಸಂಯೋಗವು ಅಪರೂಪದ ಲಕ್ಷ್ಮೀ ನಾರಾಯಣ ರಾಜಯೋಗಕ್ಕೆ ಕಾರಣವಾಗುತ್ತಿದೆ. ಇದನ್ನು ಶಕ್ತಿಶಾಲಿ ಯೋಗ ಎಂದು ಪರಿಗಣಿಸಲಾಗಿದೆ. ಶುಕ್ರ ಸಂಪತ್ತು ಮತ್ತು ಸೌಕರ್ಯವನ್ನು ಪ್ರತಿನಿಧಿಸುತ್ತದೆ. ಹಾಗೆ ಬುಧನು ವ್ಯವಹಾರವಾಗಿ ಹಾಗೆ ಹಣಕಾಸು ವಿಚಾರವಾಗಿ ಪರಿಗಣಿಸಲಾಗುತ್ತದೆ.

ಹಾಗಾದ್ರೆ ಈ ಶುಕ್ರ ಹಾಗೂ ಬುಧನ ಸಂಯೋಗದಿಂದಾಗಿ ಉಂಟಾಗುತ್ತಿರುವ ಈ ಲಕ್ಷ್ಮೀ ನಾರಾಯಣ ರಾಜಯೋಗದಿಂದ ಯಾವ ರಾಶಿಯವರಿಗೆ ಲಾಭವಾಗುತ್ತದೆ. ಯಾರಿಗೆ ಇದು ಶುಭ ತರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ವೃಷಭ ರಾಶಿ
ಜೂನ್ ತಿಂಗಳಲ್ಲಿ ಲಕ್ಷ್ಮಿ ನಾರಾಯಣ ರಾಜಯೋಗ ಉಂಟಾಗುವುದರಿಂದ ವೃಷಭ ರಾಶಿಯವರಿಗೆ ಪ್ರಬಲ ಲಾಭ ನೋಡಬಹುದು. ಈ ಯೋಗವು ಆರ್ಥಿಕ ಲಾಭ ತರಬಹುದು. ಈ ಸಮಯದಲ್ಲಿ ಹೂಡಿಕೆ ಮಾಡುವುದು ಬಹಳ ಲಾಭದಾಯಕವಾಗಲಿದೆ. ನೀವು ಯಾವುದಾದರು ಉಳಿತಾಯ ಅಥವಾ ಬ್ಯಾಂಕ್ ಸಂಬಂಧಿಸಿದಂತೆ ಎಫ್‌ಡಿ ಇಡುವುದು, ಇನ್ಸುರೆನ್ಸ್‌ನಂತಹ ಕೆಲಸದಕ್ಕೆ ಮುಂದಾಗುತ್ತೀರಿ. ನಿಮ್ಮ ಒಟ್ಟಾರೆ ಸಂಪತ್ತು ಮತ್ತು ಸ್ಥಿರತೆಯನ್ನು ಹೆಚ್ಚಿಸಲ ಇದು ನೆರವಾಗಲಿದೆ.
ಈ ಅವಧಿಯಲ್ಲಿ ಉದ್ಯಮಿಗಳು ಅತ್ಯುತ್ತಮ ಲಾಭ ನಿರೀಕ್ಷಿಸಬಹುದು, ಮತ್ತು ವೈಯಕ್ತಿಕ ಸಂಬಂಧಗಳು ಬಲಗೊಳ್ಳುವ ನಿರೀಕ್ಷೆಯಿದೆ. ನಿಮ್ಮ ಆನೇಕ ಸಮಸ್ಯೆಗಳನ್ನ ಬಗೆಹರಿಸಲು ನೀವು ಹಣ ಖರ್ಚು ಮಾಡಬೇಕಾಗಿ ಬರಬಹುದು. ನಿಮ್ಮ ಆರ್ಥಿಕ ಸಮಸ್ಯೆಗಳ ನಡುವೆ ಒಂದಿಷ್ಟು ಲಾಭದಾಯಕ ದಿನಗಳ ನೋಡಬಹುದು.
ತುಲಾ ರಾಶಿ
ತುಲಾ ರಾಶಿಯವರು ಲಕ್ಷ್ಮಿ ನಾರಾಯಣ ರಾಜಯೋಗದ ರಚನೆಯಿಂದ ವೃತ್ತಿಪರ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ನಿರೀಕ್ಷಿಸಬಹುದು. ಬಹಳ ಸಮಯದಿಂದ ಅಡೆತಡೆಯೊಂದಿಗೆ ಅರ್ಧಕ್ಕೆ ನಿಂತಿದ್ದ ವ್ಯವಹಾರಗಳು ಈ ಸಮಯದಲ್ಲಿ ಪೂರ್ಣ ಮಾಡುವಿರಿ. ಹೊಸ ವ್ಯವಹಾರಗಳು ಉದ್ಯೋಗಗಳ ಆರಂಭಿಸಲು ಇದು ಸೂಕ್ತ ಸಮಯ. ನಿಮ್ಮ ಆರೋಗ್ಯದಲ್ಲಿ ಉತ್ತಮ ಪ್ರಗತಿ ನೋಡಬಹುದು. ನಿಮ್ಮ ಗುರಿಗಳಿಗೆ ಅಡ್ಡಿಯಾಗಿದ್ದ ವಿಚಾರವು ಈ ಸಮಯದಲ್ಲಿ ನಿವಾರಣೆಯಾಗಲಿದೆ. ಹಾಗೆ ನೀವು ವ್ಯಾಪಾರಿಗಳಾಗಿದ್ದರೆ ಈ ಸಮಯದಲ್ಲಿ ಸವಾಲುಗಳನ್ನು ಧೈರ್ಯವಾಗಿ ಎದುರಿಸಿ. ಇದು ನಿಮ್ಮಲ್ಲಿ ಆರ್ಥಿಕ ಸಮಸ್ಯೆಗಳ ನಿವಾರಿಸಲಿದೆ. ಸ್ವಂತ ಉದ್ಯೋಗಿಗಳು ತಮ್ಮ ಉದ್ಯೋಗ ವಿಸ್ತರಿಸಬಹುದು. ನೀವು ಬುದ್ದಿವಂತಿಕೆಯಿಂದ ಸಮಸ್ಯೆಗಳ ನಿವಾರಿಸಲಿದ್ದೀರಿ.
ಮಕರ ರಾಶಿ
ಈ ಲಕ್ಷ್ಮಿ ನಾರಾಯಣ ಯೋಗದಿಂದ ಮಕರ ರಾಶಿಯವರು ಗಣನೀಯ ವೃತ್ತಿಪರ ಬೆಳವಣಿಗೆಯ ನೋಡಲಿದ್ದೀರಿ. ಸರ್ಕಾರಿ ಕೆಲಸದಲ್ಲಿರುವವರು ಬಡ್ತಿ, ವರ್ಗಾವಣೆಯಂತಹ ವಿಚಾರದಲ್ಲಿ ಧನಾತ್ಮಕ ಲಾಭ ನೋಡುವಿರಿ. ನಿಮ್ಮ ಆರ್ಥಿಕ ಲಾಭವನ್ನು ಹೆಚ್ಚು ಮಾಡಿಕೊಳ್ಳಬೇಕಾದರೆ ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ನಿಮ್ಮ ಆದಾಯ ಮೂಲದಲ್ಲಿದ್ದ ಸಮಸ್ಯೆಯೊಂದು ನಿವಾರಣೆಯಾಗಲಿದೆ. ದೀರ್ಘಕಾಲದ ಒಂದು ವೈವಾಹಿಕ ಸಮಸ್ಯೆಗೆ ನೀವು ಪರಿಹಾರ ಪಡೆಯುತ್ತೀರಿ.
ಕುಂಭ ರಾಶಿ
ಈ ಲಕ್ಷ್ಮಿ ನಾರಾಯಣ ರಾಜಯೋಗದಿಂದಾಗಿ ಕುಂಭ ರಾಶಿಯ ಜನರು ಸಂಪತ್ತು ಮತ್ತು ಯಶಸ್ಸಿನ ಉತ್ತುಂಗದ ಸಮಯ ಅನುಭವಿಸಲಿದ್ದಾರೆ. ಉದ್ಯಮಿಗಳಿಗೆ ಈ ಸಮಯ ಬಯಸಿದ್ದು ಸಿಗಲಿದೆ. ಸ್ವಂತ ಉದ್ಯೋಗ ಮಾಡುವವರು ಈ ಸಮಯದಲ್ಲಿ ಬಹಳ ಅನೂಕೂಲಕರ ದಿಗಗಳ ನೋಡುತ್ತಾರೆ. ವೈಯಕ್ತಿಕ ಜೀವನ ಬಹಳ ಸುಮಧುರಾಗಿರಲಿದೆ. ಹೊಸ ವ್ಯವಹಾರಗಳು ನಿಮ್ಮ ಕೈ ಹಿಡಿಯಲಿವೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications