Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗಣೇಶ ಚತುರ್ಥಿಯಲ್ಲಿ ಲಕ್ಷ್ಮಿ ನಾರಾಯಣ ರಾಜಯೋಗ: ಯಾರಿಗೆಲ್ಲಾ ಅದೃಷ್ಟಕರ ಗೊತ್ತಾ?
ಆಗಸ್ಟ್ ತಿಂಗಳಲ್ಲಿ ಆಗಮಿಸುತ್ತಿರುವ ವಿನಾಯಕ ಚತುರ್ಥಿಯು ಹಲವು ಗ್ರಹಗತಿಗಳ ಬದಲಾವಣೆಗೂ ಕಾರಣವಾಗುತ್ತಿದೆ. ವಿನಾಯಕ ಚತುರ್ಥಿ ಹಬ್ಬವನ್ನು ಆವನಿ ಮಾಸದ ಕ್ಷೀಣ ಚಂದ್ರನ ದಿನದಂದು ಆಚರಿಸಲಾಗುತ್ತದೆ. ಈ ವರ್ಷದ ಗಣೇಶ ಚತುರ್ಥಿ ಹಬ್ಬವನ್ನು ಆಗಸ್ಟ್ 27 ರಂದು ಆಚರಿಸಲಾಗುತ್ತದೆ. ಹಬ್ಬದ ದಿನಗಳಲ್ಲಿ ಕೆಲವು ಯೋಗಗಳು ಗ್ರಹಗಳ ಸ್ಥಾನಗಳಿಂದಾಗಿ ರೂಪುಗೊಳ್ಳುತ್ತವೆ.
ಹಾಗೆ ಈ ಬಾರಿಯ ಗಣೇಶ ಚತುರ್ಥಿಯ ದಿನದಂದು ಗ್ರಹಗಳ ಅಪರೂಪದ ಸಂಯೋಗನೆಯ ಕಾರಣದಿಂದಾಗಿ ಅನೇಕ ಯೋಗಗಳ ನೋಡಬಹುದು. ಸರ್ವಾರ್ಥ ಸಿದ್ಧಿ, ರವಿ, ಇಂದ್ರ-ಬ್ರಹ್ಮ ಯೋಗಗಳು ಈ ಸಮಯದಲ್ಲಿ ರೂಪುಗೊಳ್ಳುವುದು ನೋಡಬಹುದು. ಇದರ ಹೊರತಾಗಿ ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾದ ಬುಧ ಮತ್ತು ರಾಕ್ಷಸರ ಗುರು ಎಂದು ಪರಿಗಣಿಸಲಾದ ಶುಕ್ರ, ಕರ್ಕ ರಾಶಿಯಲ್ಲಿ ಚಲಿಸಲಿದ್ದಾರೆ. ಇದು ಲಕ್ಷ್ಮಿ ನಾರಾಯಣ ರಾಜ ಯೋಗಕ್ಕೆ ಕಾರಣವಾಗಲಿದೆ.

ಹಣಕಾಸು, ವಿದ್ಯೆ, ಆಸ್ತಿ, ವೈವಾಹಿಕ ಜೀವನ, ಭವಿಷ್ಯದ ಐಷಾರಾಮಿ ಜೀವನದ ಕುರಿತಾದ ಬಹಳಷ್ಟು ಲಾಭಗಳಿಗೆ ಈ ಲಕ್ಷ್ಮಿ ನಾರಾಯಣ ಯೋಗವು ಕಾರಣವಾಗುತ್ತಿದೆ. ಹಾಗಾದ್ರೆ ಈ ಸಮಯದಲ್ಲಿ ಯಾವೆಲ್ಲಾ ರಾಶಿಗಳಿಗೆ ಈ ಯೋಗ ಶುಭವಾಗುತ್ತಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ತುಲಾ ರಾಶಿ
ಗಣೇಶ ಚತುರ್ಥಿಯ ಸಮಯದಲ್ಲಿ ರೂಪುಗೊಳ್ಳುವ ಈ ಲಕ್ಷ್ಮಿ ನಾರಾಯಣ ರಾಜಯೋಗವು ಹಲವು ರೀತಿಯ ಲಾಭಗಳಿಗೆ ಕಾರಣವಾಗಲಿದೆ. ಅದ್ರಲ್ಲೂ ವಿಶೇಷವಾಗಿ ಈ ರಾಶಿಯ ಜನರಲ್ಲಿದ್ದ ಹಣಕಾಸು ಸಮಸ್ಯೆಗಳು ದಿಢೀರ್ ಪರಿಹಾರ ಪಡೆಯಬಹುದು. ನಿಮ್ಮ ಸಾಲಗಳು ಮರುಪಾವತಿಯಾಗುತ್ತವೆ, ಹಾಗೆ ನಿಮಗೆ ಬರಬೇಕಿದ್ದ ಹಣ ಕೂಡ ನಿಮ್ಮ ಕೈ ಸೇರಲಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಬಹಳಷ್ಟು ಮಂದಿಯನ್ನು ನೀವು ಭೇಟಿಯಾಗುತ್ತೀರಿ. ಪಿತ್ರಾರ್ಜಿತ ಆಸ್ತಿ ಸಂಬಂಧವಾಗಿ ನೀವು ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು. ಉದ್ಯೋಗಾಕಾಂಕ್ಷಿಗಳಿಗೆ ಈ ಸಮಯದಲ್ಲಿ ಉತ್ತಮ ಅವಕಾಶಗಳು ಹುಡುಕಿ ಬರಬಹುದು.
ಕುಂಭ ರಾಶಿ
ಲಕ್ಷ್ಮಿ ನಾರಾಯಣ ರಾಜಯೋಗವು ಈ ಕುಂಭ ರಾಶಿಯ ಜನರಲ್ಲಿ ವಿಶೇಷ ರೀತಿಯ ಲಾಭಗಳಿಗೆ ಕಾರಣವಾಗಲಿದೆ. ನಿಮ್ಮ ಆದಾಯದ ಮೂಲದಲ್ಲಿ ಲಾಭದಾಯಕ ಬದಲಾವಣೆ ನೋಡಬಹುದು. ನಿಮ್ಮ ವ್ಯವಹಾರಗಳಲ್ಲಿ ಧನಾತ್ಮಕ ಪರಿಸ್ಥಿತಿ ಇರಲಿದೆ. ದಾಂಪತ್ಯ ವಿಚಾರಗಳು ಅತ್ಯಂತ ಮಧುರವಾಗಿ ನಡೆಯಲಿವೆ. ಕುಟುಂಬಸ್ಥರ ಜೊತೆಗಿಂದ್ದ ಮುನಿಸು ಶಮನವಾಗಲಿದೆ. ಶುಭ ಕಾರ್ಯಗಳು, ದೇವಾಲಯ ಭೇಟಿಯಲ್ಲಿ ನಿಮಗೆ ಹೆಚ್ಚಿನ ಆಸಕ್ತಿ ಇರಲಿದೆ. ಪ್ರೀತಿ ಪ್ರೇಮದ ವಿಚಾರವಾಗಿಯೂ ನಿಮಗೆ ಉತ್ತಮ ದಿನಗಳಿವೆ. ಮನೆಗಾಗಿ ನೀವು ಉತ್ತಮ ಕೆಲಸಗಳಿಗೆ ಹಣ ಖರ್ಚು ಮಾಡಬಹುದು. ಮಕ್ಕಳ ವಿಚಾರವಾಗಿಯೂ ಉತ್ತಮ ದಿನಗಳು ಬರಲಿವೆ.
ಮಕರ ರಾಶಿ
ಮಕರ ರಾಶಿಯವರು ಲಕ್ಷ್ಮಿ ನಾರಾಯಣ ರಾಜಯೋಗದಿಂದಾಗಿ ವೃತ್ತಿಪರವಾಗಿ ಉತ್ತಮರಾಗುತ್ತಾರೆ. ಉದ್ಯೋಗ ಹುಡುಕುತ್ತಿರುವವರಿಗೆ ಉತ್ತಮ ಉದ್ಯೋಗ ಸಿಗುವ ಅವಕಾಶಗಳಿವೆ. ನೀವು ಯಾರಿಂದಾದರು ಹಣ ಬಯಸಿದ್ದರೆ ನಿಮ್ಮ ಕೈ ಸೇರಬಹುದು. ಸ್ನೇಹಿತರು ಅಥವಾ ಆಪ್ತರಿಗೆ ನಿಮ್ಮಿಂದ ದೊಡ್ಡ ಮಟ್ಟದ ಸಹಕಾರ ಇರಲಿದೆ. ಕಠಿಣ ಶ್ರಮದಿಂದ ಉತ್ತಮ ಫಲಿತಾಂಶ ಪಡೆಯುವಿರಿ. ಹೊಸ ವಾಹನ ಖರೀದಿಯ ಅವಕಾಶಗಳಿವೆ. ಅನಾರೋಗ್ಯ ಸಮಸ್ಯೆಗಳು ನಿವಾರಣೆಯಾಗಬಹುದು. ಹಲವು ದಿನಗಳಿಂದ ಅರ್ಧಕ್ಕೆ ನಿಲ್ಲಿಸಿದ್ದ ಬಹುಮುಖ್ಯ ಕೆಲಸಗಳನ್ನು ಪೂರ್ಣ ಮಾಡುವಿರಿ. ಇದರಿಂದ ನಿಮಗೆ ಮನಶಾಂತಿ ಸಿಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications