Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕುಬೇರನಿಂದ ಆಶೀರ್ವಾದ ಪಡೆದ ರಾಶಿಗಳಿವು: ಇವರಲ್ಲಿ ಹಣದ ಕೊರತೆ ಕಾಡುವುದೇ ಇಲ್ಲ!
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಚಲನೆ ಹಾಗೂ ನಕ್ಷತ್ರಗಳ ಚಲನೆಯನ್ನು ಬಹಳ ಪ್ರಮುಖ ವಿದ್ಯಮಾನಗಳಾಗಿ ಪರಿಗಣಿಸಲಾಗುತ್ತದೆ. ಹಾಗೆ ಕೆಲವೊಂದು ಗ್ರಹಗಳ ನಿರ್ಧಿಷ್ಟ ಸಮಯದಲ್ಲಿ ಹಲವು ರೀತಿ ಯೋಗಗಳಿಗೆ ಕಾರಣವಾಗುವುದು ಸಹ ನೋಡಬಹುದು. ಹಲವು ದೇವರ ಆಶೀರ್ವಾದವಿರುವ ಗ್ರಹಗಳು ಹಲವು ರೀತಿಯ ಲಾಭಗಳಿಗೆ ಕಾರಣವಾಗುವುದು ಸಹ ಸಹಜ.
ಇನ್ನು ಯಾವ ಗ್ರಹಗಳು ಕುಬೇರ ದೇವರ ಆಶೀರ್ವಾದ ಪಡೆಯುತ್ತಾರೋ ಅವರು ಜೀವನದಲ್ಲಿ ಹಣಕಾಸು ಸಮಸ್ಯೆಗಳ ಎದುರಿಸುವುದಿಲ್ಲ. ಹಾಗೆ ಜೀವನದ ಉದ್ದಕ್ಕೂ ಅವರಲ್ಲೂ ಹಲವು ರೀತಿಯ ಯಶಸ್ಸುಗಳು, ಆರ್ಥಿಕ ಸ್ವಾವಲಂಬನೆ, ವ್ಯವಹಾರ ಪ್ರಗತಿಯಂತಹ ಲಾಭಗಳಿಗೆ ಕಾರಣವಾಗುತ್ತದೆ. ಅವರಲ್ಲಿ ಸಂಪತ್ತಿನ ಕೊರತೆ ಅನ್ನೋದೆ ಕಾಡುವುದಿಲ್ಲವಂತೆ.

ಕುಬೇರ ಆಶೀರ್ವಾದ ಪಡೆದರೆ ಎಲ್ಲರೂ ನೀವು ಅಂದುಕೊಂಡಂತ ರೀತಿಯಲ್ಲಿ ನಡೆಯುತ್ತಿರುತ್ತದೆ. ಅದ್ರಲ್ಲೂ ವೈಭವಯುತ ಜೀವನಕ್ಕೆ ಕುಬೇರ ಕಾರಣನಾಗುತ್ತಾನೆ. ಲಕ್ಷ್ಮೀ ಮತ್ತು ಕುಬೇರನ ಆಶೀರ್ವಾದ ಪಡೆಯುವುದು ಅಂದ್ರೆ ಜೀವನದ ಪೂರ್ತಿ ಸುಖ ಜೀವನ ನಡೆಸುವುದಾಗಿದೆ. ಕುಬೇರವನನ್ನು ಹಿಂದೂ ಶಾಸ್ತ್ರಗಳಲ್ಲಿ ಧನ ಲಾಭಕ್ಕೆ ಸಂಪತ್ತು ಲಾಭ ತರುವಂತಹ ದೇವರೆಂದು ಪರಿಗಣಿಸಲಾಗಿದೆ. ಕುಬೇರ ದೇವನನ್ನು ಯಕ್ಷ ರಾಜ ಎಂದು ಕರೆಯಲಾಗುತ್ತದೆ.
ಹಾಗಾದ್ರೆ ಯಾವೆಲ್ಲಾ ರಾಶಿಯವರು ಕುಬೇರನ ಆಶೀರ್ವಾದ ಪಡೆಯುತ್ತಾರೆ. ಯಾರಿಗೆಲ್ಲಾ ಕುಬೇರನಿಂದ ಲಾಭಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯವರ ಮೇಲೆ ಕುಬೇರನ ಆಶೀರ್ವಾದ ಯಾವಾಗಲು ಇರಲಿದೆ. ಅವರು ಶಾಂತ ಸ್ವಭಾವ, ಸ್ಥಿರ ಮತ್ತು ಸಮರ್ಪಿತ ಭಾವ ಹೊಂದಿರುವವರು. ಅವರ ರಾಶಿಯ ಅಧಿಪತಿ ಕೂಡ ಶುಕ್ರ. ಶುಕ್ರನು ಸಹ ಐಶ್ವರ್ಯ, ಸೌಂದರ್ಯ, ಲಾಭಗಳಿಗೆ ಕಾರಣವಾಗುವವನು. ಹೀಗಾಗಿ ಮೇಷ ರಾಶಿಯವರು ಯಾವಾಗಲು ಹಣಕಾಸಿನ ಸಮಸ್ಯೆಗೆ ತುತ್ತಾಗುವುದಿಲ್ಲ. ಈ ಸಮಸ್ಯೆ ಇದ್ದರೂ ಕೇವಲ ತಾತ್ಕಾಲಿಕ ಅಷ್ಟೇ. ಅವರು ಬೇಡಿದನ್ನು ಲಕ್ಷ್ಮಿ ದೇವಿ ಹಾಗೆ ಕುಬೇರನು ನೀಡಲಿದ್ದಾರೆ. ಇದರಿಂದ ಮೇಷ ರಾಶಿಯವರ ಆರ್ಥಿಕ ಸಮಸ್ಯೆಗಳು ದೀರ್ಘಕಾಲವಾಗಿ ಉಳಿಯುವುದಿಲ್ಲ ಹಾಗೆ ಅವರಲ್ಲಿ ಸಮಸ್ಯೆಗಳ ತರುವುದಿಲ್ಲ. ನಿಮ್ಮ ಎಲ್ಲಾ ಆರ್ಥಿಕ ಕ್ಷೇತ್ರಗಳು ನಿಮಗೆ ಧನಾತ್ಮಕವಾಗಿರುತ್ತವೆ. ಹಾಗೆ ಹಣಕಾಸು ಪ್ರಗತಿ ನೋಡುತ್ತೀರಿ. ಹಾಗೆ ನಿಮ್ಮ ಉಳಿತಾಯಗಳಲ್ಲಿ ನಿಮಗೆ ಲಾಭವಾಗುವುದು ನೋಡಬಹುದು.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಕುಬೇರನಿಂದ ಬಹಳ ಆಶೀರ್ವಾದ ಪಡೆಯುತ್ತಾರೆ. ಕರ್ಕ ರಾಶಿಗೆ ಚಂದ್ರ ಅಧಿಪತಿ. ಹೀಗಾಗಿ ಕುಬೇರ ಹಾಗೂ ಚಂದ್ರನ ಆಶೀರ್ವಾದ ಪಡೆಯುವ ಕಾರಣ ಲಾಭ ಹೆಚ್ಚಾಗುತ್ತದೆ. ನಿಮಗೆ ಅಗತ್ಯ ಬಿದ್ದಗಲೆಲ್ಲ ಹಣಕಾಸು ಹೊಂದಿಕೆಯಾಗುತ್ತದೆ. ಅದರಲ್ಲೂ ಕಷ್ಟದ ಪರಿಸ್ಥಿತಿಯಲ್ಲಿ ಕೂಡ ನೀವು ಬಯಸಿದ ಸಮಯಕ್ಕೆ ಹಣ ಒಲಿದು ಬರಲಿದೆ. ನಿಮಗೆ ಹಣಕಾಸಿನ ಕೊರತೆ ಕಾಡುವುದಿಲ್ಲ. ಹಾಗೆ ನೀವು ಸಮಾಜಮುಖಿ ಕೆಲಸಗಳು, ದಾನ ಧರ್ಮ ಮಾಡಲು ಮುಂದೆ ಇರುತ್ತೀರಿ. ನಿಮ್ಮಲ್ಲಿ ಆಧ್ಯಾತ್ಮಿಕ ತೃಪ್ತಿ ಹೆಚ್ಚು. ನೀವು ಹಣವನ್ನು ಬಹಳ ಗೌರವಯುತವಾಗಿ ಗಳಿಸಲು ಇಚ್ಚಿಸುವವರು.
ತುಲಾ ರಾಶಿ
ತುಲಾ ರಾಶಿಯವರು ಶುಕ್ರನಿಂದ ಆಳಲ್ಪಡುವುದು ಕುಬೇರನ ಆಶೀರ್ವಾದಕ್ಕೆ ಕಾರಣವಾಗುತ್ತದೆ. ನಿಮ್ಮ ಆಲೋಚನೆಗಳಲ್ಲಿ ಪ್ರಬುದ್ಧತೆ ಇರಲಿದೆ. ಹೀಗಾಗಿ ನೀವು ಯಾವುದೇ ದೊಡ್ಡ ಖರ್ಚುಗಳ ಮಾಡುವಾಗ ಹಣದ ಹರಿವು ಚೆನ್ನಾಗಿ ಇರಲಿದೆ. ಅದ್ರಲ್ಲೂ ಐಷಾರಾಮಿ ವಸ್ತುಗಳ ಖರೀದಿಗಾಗಿ ನೀವು ಹಣವನ್ನು ಬಹುಬೇಗ ಗಳಿಸುತ್ತೀರಿ. ನಿಮ್ಮ ಸತ್ಯ, ನ್ಯಾಯದ ನಡೆಯಿಂದಾಗಿ ಎಲ್ಲರ ಪ್ರೀತಿ ಪಾತ್ರರಾಗಿರುತ್ತೀರಿ.
ಧನು ರಾಶಿ
ಧನು ರಾಶಿಯವರು ಧೈರ್ಯಶಾಲಿಗಳು, ದೂರ ದೃಷ್ಟಿಯುಳ್ಳವರು ಮತ್ತು ಸ್ವಭಾವತಃ ಧಾರ್ಮಿಕರು. ನೀವು ಗುರುದಿನ ಆಶೀರ್ವಾದ ಪಡೆದವರು. ಹೀಗಾಗಿ ನಿಮ್ಮಲ್ಲಿ ಹಣಕಾಸು ಸಮಸ್ಯೆಗಳು ತಲೆದೂರುವುದಿಲ್ಲ. ಹಾಗೆ ಆಸ್ತಿ ವಿಚಾರವಾಗಿ ನಿಮಗೆ ಯಾವಾಗಲು ದೊಡ್ಡ ಯಶಸ್ಸುಗಳು ಸಿಗಲಿದೆ. ನಿಮ್ಮ ನೈತಿಕ ಶಕ್ತಿ ನಿಮ್ಮ ಯಶಸ್ಸಿಗೆ ಕಾರಣವಾಗಲಿದೆ. ನಿಮ್ಮಲ್ಲಿ ಕಷ್ಟದ ಸಮಯದಲ್ಲಿ ಆಪ್ತರಿಂದಾಗಲಿ ಅಥವಾ ಕುಟುಂಬಸ್ಥರ ಬಳಿಯಾಗಲಿ ಹಣಕಾಸಿನ ಲಾಭ ಪಡೆಯಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications