Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯುಗಾದಿ 2024: ಕ್ರೋಧಿ ನಾಮ ಸಂವತ್ಸರದಲ್ಲಿ ಅನಾಹುತಗಳು ಹೆಚ್ಚಾಗಲಿದೆಯೇ?
ಹಿಂದೂಗಳಿಗೆ ಯುಗಾದಿ ಹೊಸ ವರ್ಷ, ಜೀವನವೆಂದರೆ ನೋವು-ನಲಿವು ಇರುತ್ತದೆ, ಖುಷಿಯಾದಾಗ ಹಿಗ್ಗಬಾರದು, ದುಃಖವಾದಾಗ ಕುಗ್ಗಬಾರದು ಎಂಬ ಆಶಯದಿಂದ ಯುಗಾದಿ ಹಬ್ಬವನ್ನು ಆಚರಿಸಲಾಗುವುದು.
ಈ ವರ್ಷ ಯಗಾದಿಯನ್ನು ಏಪ್ರಿಲ್ 9ರಂದು ಆಚರಿಸಲಾಗುವುದು. ಈ ಯುಗಾದಿ ಧನು ಲಗ್ನದಲ್ಲಿ ಉಂಟಾಗಲಿದೆ. ರಾಹು, ಸೂರ್ಯ, ಶುಕ್ರ,ಚಂದ್ರ ಮೀನದಲ್ಲಿ ರಾಶಿಯಲ್ಲಿ ಇರಲಿದೆ, ಶನಿ ಹಾಗೂ ಮಂಗಳ ಕುಂಭ ರಾಶಿಯಲ್ಲಿ, ಗುರು ಮತ್ತು ಬುಧ ಮೇಷ ರಾಶಿಯಲ್ಲಿ, ಕೇತು ಕನ್ಯಾ ರಾಶಿಯಲ್ಲಿ ಇರಲಿದೆ. ಈ ಗ್ರಹಗಳ ಸ್ಥಾನ ಅನುಕೂಲಕವರಲ್ಲ, ಹಾಗಾಗಿ ಈ ಕ್ರೋಧಿ ಸಂವತ್ಸರದಲ್ಲಿ ಜನರು ಜಾಗ್ರತೆಯಿಂದ ಇರಬೇಕು ಎಂದು ಹೇಳಲಾಗುವುದು.

ಕ್ರೋಧಿ ನಾಮ ಸಂವತ್ಸರ
ಕ್ರೋಧಿ ಅಂದರೆ ಕೋಪ ಎಂದರ್ಥ. ಈ ವರ್ಷ ಜನರು ಬೇಗನೆ ತಾಳ್ಮೆ ಕಳೆದುಕೊಳ್ಳುತ್ತಾರೆ, ಜಗಳ, ಕೆಟ್ಟ ಘಟನೆಗಳು ಹೆಚ್ಚಾಗುವುದು. ಅಲ್ಲದೆ ಕ್ರೋಧಿ ನಾಮ ಸಂವತ್ಸರದಲ್ಲಿ ಜನಿಸಿದವರು ತುಂಬಾ ಕೋಪಿಷ್ಟರಾಗಿರುತ್ತಾರೆ ಎಂದು ಹೇಳಲಾಗುವುದು.
ಈ ವರ್ಷ ಮಂಗಳ ರಾಜನಾಗಿದ್ದರೆ, ಶನಿ ಮಂತ್ರ, ಶುಕ್ರ ಸೇನಾಧಿಪತಿಯಾಗಿರುತ್ತಾರೆ.
ಈ ವರ್ಷ ಮನೆ ಕಟ್ಟಲು, ಗಾಡಿ ಖರೀದಿಸಲು ಹಾಗೂ ಹೊಸ ಮನೆಗೆ ಹೋಗಲು ಈ ಅವಧಿ ಶುಭವಲ್ಲ
ಈ ವರ್ಷ ಏಪ್ರಿಲ್ 27ರಿಂದ ಆಗಸ್ಟ್ 9ರವರೆಗೆ ಶುಭ ಕಾರ್ಯಗಳನ್ನು ಪ್ರಾರಂಭಿಸಲು ಶುಭ ದಿನಗಳಿಲ್ಲ. ಸೂರ್ಯ, ಗುರು ಹಾಗೂ ಶುಕ್ರ ಸಂಚಾರ ಹೊಸ ಮನೆ ಖರೀದಿಸಲು, ಮದುವೆಗೆ, ಯಾವುದಾದರೂ ಹೊಸ ಉದ್ಯಮ ಪ್ರಾರಂಭಿಸಲು , ಆಸ್ತಿಯನ್ನು ಖರೀದಿಲು, ಮಾರಲು, ಹೊಸ ಗಾಡಿ ಖರೀದಿಗೆ ಯಾವುದೇ ಶುಭ ದಿನಾಂಕಗಳಿಲ್ಲ.
ಕ್ರೋಧಿ ನಾಮ ಸಂವವತ್ಸರ ಯುಗಾದಿ ಭವಿಷ್ಯ
ಏಪ್ರಿಲ್ 9-ಜೂನ್ 30
ಮೀನ ರಾಶಿಯಲ್ಲಿ ನಾಲ್ಕು ಗ್ರಹಗಳಿರಲಿದೆ ನಂತರ ಮೇಷ ರಾಶಿಯಲ್ಲಿ ಮೂರು ಗ್ರಹಗಳ ಇರಲಿದೆ, ಈ ಅವಧಿ ಅನೇಕ ಅನುಕೂಲಕರವಾಗಿರಲ್ಲ.
ಈ ಅವಧಿಯಲ್ಲಿ ಕೆಲ ಪ್ರಸಿದ್ಧ ರಾಜಕಾರಣಿಗಳಿಗೆ ಅಪಾಯವಿದೆ
ವ್ಯವಹಾರ ಪ್ರಗತಿ ನಿಧಾನವಾಗಲಿದೆ ಎಂದು ಹೇಳಲಾಗುವುದು.
ಚಿಕ್ಕ ಹೂಡಿಕೆ ಮಾಡುವವರಿಗೆ ಈ ಅವಧಿ ಅನುಕೂಲಕರವಲ್ಲ.
ಜುಲೈ 1-ಸೆಪ್ಟೆಂಬರ್ 30
2 ಅಥವಾ 3 ಗ್ರಹಗಳು ಒಂದೇ ರಾಶಿಯಲ್ಲಿ ಇರಲಿದೆ. ಅಲ್ಲದೆ ಶನಿ ಮತ್ತು ಕೇಸು ಆಡಳಿತ ಮೇಲೆ ಪರಿಣಾಮ ಬೀರುವುದು.
ಅಲ್ಲದೆ ಅಪಘಾತ ಹೆಚ್ಚಾಗಲಿದೆ, ಪ್ರವಾಹ , ಬಿರುಗಾಳಿ ಬರಬಹುದು, 48-72 ಗಂಟೆ ನಿರಂತರ ಮಳೆಯಿಂದಾಗಿ ದೇಶದ ಕೆಲವಡೆ ಪ್ರವಾಹ ಉಂಟಾಗುವುದು
ಒರಿಸ್ಸಾ, ಆಂಧ್ರಪ್ರದೆಶ, ತಮಿಳುನಾಡು, ಮಹಾರಾಷ್‌ಟರ, ಗುಜರಾತ್‌ನಲ್ಲಿ ಪ್ರವಾಹದ ಅಪಾಯವಿದೆ
ಪಾಕಿಸ್ತಾನ, ನೇಪಾಖ, ಚೀನಾ, ಕೊರಿಯಾ, ಜಪಾನ್, ಆಸ್ಟ್ರೇಲಿಯಾ, ನ್ಯೂಜೆಲ್ಯಾಂಡ್‌ನಲ್ಲಿ ಭೂಕಂಪನದ ಅಪಾಯವಿದೆ.
ಅಕ್ಟೋಬರ್ 1-ಡಿಸೆಂಬರ್ 31
ಮಂಗಳ ಕರ್ಕದಲ್ಲಿ ಇರುವ ಸಮಯ ಅನುಕೂಲಕರವಲ್ಲ
ಹೊಸ ಕಾನೂನು ಅನ್ನು ಜನರು ಖಂಡಿಸಬಹುದು
ನೀರಿನ ಅವಘಡದಿಂದಾಗಿ ಅನೇಕರ ಪ್ರಾಣಕ್ಕೆ ಅಪಾಯ ಉಂಟಾಗುವುದು
ಹೊಸ ಕಾನೂನು ರೈತರಿಗೆ ಅನುಕೂಲಕರವಾಗಲಿದೆ.
ಹೆಚ್ಚು ಮಳೆಯಿಂದಾಗಿ ಆಫೀಸ್, ಶಿಕ್ಷಣ ಸಂಸ್ಥೆಗಳು ಮುಚ್ಚಲಾಗುವುದು
ಗಡಿ ಭಾಗದಲ್ಲಿ ಆತಂಕ ಹೆಚ್ಚಿರಲಿದೆ.
ಜನವರಿ 1- ಮಾರ್ಚ್ 29
ಶುಕ್ರ ಮತ್ತು ಶನಿಯ ಸಂಯೋಜನೆಯಾಗಲಿದೆ. ರಾಹುವಿನಿಂದಾಗಿ ಅನೇಕ ಸಮಸ್ಯೆಗಳು ಉಂಟಾಗುವುದು.
ಮಂಜು ಕಾರಣದಿಂದ ಅಪಘಾತ ಹೆಚ್ಚಾಗುವುದು
ಚಿನ್ನ, ಬೆಳ್ಳಿ ಮತ್ತಷ್ಟು ದುಬಾರಿಯಾಗಲಿದೆ
ಉತ್ತರ-ಪೂರ್ವ ಭಾಗದಲ್ಲಿ ಮತೀಯ ಗಲಭೆ ಉಂಟಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications