Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಉತ್ತರ ನಕ್ಷತ್ರಕ್ಕೆ ಕೇತು ಸಂಚಾರ: ಈ 4 ರಾಶಿಯವರಿಗೆ ಅದೃಷ್ಟ ಯೋಗ!
ಜ್ಯೋತಿಷ್ಯಶಾಸ್ತ್ರದಲ್ಲಿ ಕೇತು ಗ್ರಹಗವನ್ನು ಪಾಪ, ನೆರಳಿನ ಗ್ರಹ ಎಂದು ಪರಿಗಣಿಸಲಾಗಿದೆ. ಯಾವ ರಾಶಿಯಲ್ಲಿ ಕೇತು ಸಂಚಾರ ಇರಲಿದ್ಯೋ ಆ ಗ್ರಹದಲ್ಲಿ ಲಾಭ ನಷ್ಟದ ಲೆಕ್ಕಾಚಾರ ನೋಡಬಹುದು. ಹಾಗೆ ಯಾವ ನಕ್ಷತ್ರಕ್ಕೆ ಚಲಿಸಲಿದ್ಯೋ ಉಳಿದೆಲ್ಲಾ ರಾಶಿಗಳ ಮೇಲೆಯೂ ಅದರ ಪರಿಣಾಮ ಬೀರುವುದು ಸಹ ನಾವು ನೋಡಬಹುದು. ಹಾಗೆ ಪ್ರತಿಯೊಬ್ಬರ ಜೀವನದಲ್ಲೂ ಕೇತುವಿನ ಪರಿಣಾಮ ನೋಡಬಹುದು.
ಕೇತು ಗ್ರಹಕ್ಕೆ ಪ್ರತ್ಯೇಕವಾದ ರಾಶಿ ಇಲ್ಲ. ಬದಲಿಗೆ ಎಲ್ಲಾ ರಾಶಿಯಲ್ಲು ಅದರ ಚಲನೆ ನೋಡಬಹುದು. ಕೇತುವಿನ ಸ್ಥಾನವು ಯಾವ ರಾಶಿಯ ಮನೆಯಲ್ಲಿ ಉಂಟಾಗಲಿದ್ಯೋ ಉಳಿದೆಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಹೀಗಾಗಿ ಕೇತು ಗ್ರಹವನ್ನು ಆಧ್ಯಾತ್ಮಿಕತೆ, ನಿಗೂಢತೆ, ಮೋಕ್ಷ ಮತ್ತು ಅದೃಶ್ಯ ಶಕ್ತಿಗಳ ಅಂಶವೆಂದು ಪರಿಗಣಿಸಲಾಗುತ್ತದೆ.

ಈ ಕೇತುವು ಒಬ್ಬ ವ್ಯಕ್ತಿಗೆ ಹಠಾತ್ ಲಾಭದಿಂದ ಹಠಾತ್ ನಷ್ಟಕ್ಕೂ ಕಾರಣವಾಗಲಿದೆ. ಕೇತುವಿನ ಪ್ರಭಾವ ಎಷ್ಟರ ಮಟ್ಟಿಗೆ ಇರಲಿದೆ ಅಂದರೆ ಆತನ ಭವಿಷ್ಯದಲ್ಲಿ ಬಹುದೊಡ್ಡ ಬದಲಾವಣೆಗೂ ಇದು ಕಾರಣವಾಗಲಿದೆ. ಇದೇ ಮಾರ್ಚ್ 16ರಂದು ಕೇತು ತನ್ನ ನಕ್ಷತ್ರ ಬದಲಾಯಿಸುತ್ತಿದೆ. ರಾಹು ಕೂಡ ಇದೇ ತಿಂಗಳು ತನ್ನ ನಕ್ಷತ್ರ ಬದಲಾಯಿಸಿತ್ತು. ಈಗ ಕೇತು ಕೂಡ ನಕ್ಷತ್ರ ಬದಲಾಯಿಸುತ್ತಿದೆ. ಮಾರ್ಚ್ 16ರಂದು ಕೇತು ಉತ್ತರಾ ನಕ್ಷತ್ರಕ್ಕೆ ಚಲಿಸಲಿದ್ದಾನೆ. ಹೀಗಾಗಿ ಹಲವು ರಾಶಿಯವರಲ್ಲಿ ಇದು ಧನಾತ್ಮಕ ಪರಿಣಾಮಕ್ಕೆ ಕಾರಣವಾಗಲಿದೆ.
ಕೇತುವಿನ ಈ ನಕ್ಷತ್ರ ಬದಲಾವಣೆಯು ಹಲವರಲ್ಲಿ ಯಶಸ್ಸು ಹಾಗೂ ಶ್ರೇಯಸ್ಸಿಗೆ ಕಾರಣವಾಗುತ್ತಿದೆ. ಒಂದು ರೀತಿಯಲ್ಲಿ ಇದು ವರದಾನವಾಗಿ ಪರಿಣಮಿಸುತ್ತಿದೆ. ಹಾಗಾದ್ರೆ ನಾವಿಂದು ಕೇತು ಉತ್ತರಾ ನಕ್ಷತ್ರಕ್ಕೆ ಚಲಿಸುವುದು ಯಾರಿಗೆ ಲಾಭವಾಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳೋಣ.
ಕರ್ಕ ರಾಶಿ
ಕೇತು ಕರ್ಕ ರಾಶಿಯ 3ನೇ ಮನೆಯಲ್ಲಿ ಚಲಿಸಲಿದೆ. ಈ ಸಂದರ್ಭದಲ್ಲಿ ಕೇತುವಿನ ಸಂಚಾರವು ಕರ್ಕ ರಾಶಿಯವರಲ್ಲಿ ಲಾಭಕ್ಕೆ ಹಾಗೆ ಧನಾತ್ಮಕ ಪರಿಣಾಮಗಳಿಗೆ ಕಾರಣವಾಗುತ್ತಿದೆ. ವಿಶೇಷವಾಗಿ ಕರ್ಕ ರಾಶಿಯವರಿಗೆ ಕೇತುವಿನಿಂದ ಸಂಪತ್ತು ವೃದ್ಧಿಯ ಸಾಧ್ಯತೆಗಳಿವೆ. ನಿಮ್ಮ ಆರ್ಥಿಕ ಸ್ಥಿತಿಯು ಸುಧಾರಿಸಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನೀಡಲಿದೆ. ನಿಮ್ಮ ಹಲವು ಕೆಲಸ ಕಾರ್ಯಗಳು ಅಡೆತಡೆಗಳು ಇಲ್ಲದೆ ಮುಕ್ತಾಯವಾಗಲಿದೆ. ನಿಮ್ಮ ಕಷ್ಟಗಳ ನಿವಾರಣೆಗೆ ಹೊಸ ಮಾರ್ಗಗಳ ಕಂಡುಕೊಳ್ಳಲಿದ್ದೀರಿ. ಹಲವು ದಿನಗಳಿಂದ ಮುಗಿಸಬೇಕಿದ್ದ ಕೆಲಸಗಳನ್ನು ಮಾಡಿ ಮುಗಿಸಲಿದ್ದೀರಿ. ಮನೆಯ ಸದಸ್ಯರಿಂದ ಬೆಂಬಲ ಸಿಗಲಿದೆ. ವ್ಯಾಪಾರದಲ್ಲಿ ಲಾಭಾಂಶ ಹೆಚ್ಚಾಗುವುದು ನೋಡಬಹುದು.
ಸಿಂಹ ರಾಶಿ
ಕೇತುವಿನ ಸಂಚಾರದಿಂದಾಗಿ ಸಿಂಹ ರಾಶಿಯವರಿಗೆ ಉತ್ತಮ ಆರ್ಥಿಕ ಲಾಭಗಳು ದೊರೆಯುತ್ತವೆ. ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ನಿಮ್ಮಲ್ಲಿ ಹೊಸದಾಗಿ ವಾಹನ ಖರೀದಿಯ ಯೋಗವಿದೆ. ಹಾಗೆ ವಿವಾಹಿತರಲ್ಲಿ ಹೆಚ್ಚಿನ ಆದಾಯ ಮೂಲಗಳು ಕಾಣಿಸಲಿವೆ. ನಿಮ್ಮ ಬಹುದಿನಗಳ ಬಯಕೆಗಳು ಈ ಸಮಯದಲ್ಲಿ ಈಡೇರಬಹುದು. ನಿತ್ಯ ಒಂದಲ್ಲಾ ಒಂದು ವಿಚಾರದಲ್ಲಿ ನಿಮಗೆ ಯಶಸ್ಸು ಸಿಗಲಿದೆ. ದಾಂಪತ್ಯದಲ್ಲಿ ಧನಾತ್ಮಕ ವಿಚಾರಗಳು ಹೆಚ್ಚು ಸದ್ದು ಮಾಡಲಿವೆ. ದೈಹಿಕವಾಗಿ ನೀವು ಆರೋಗ್ಯವಂತರಾಗುತ್ತೀರಿ. ಹಳೆಯ ಕೆಲಸಗಳು ಪೂರ್ಣ ಮಾಡಿಕೊಳ್ಳುವ ಸಮಯ. ಆಪ್ತರಿಂದ ನಿಮಗೆ ಲಾಭವಾಗಲಿದೆ. ಹೊಸ ಉದ್ಯೋಗಗಳು ನಿಮ್ಮನ್ನು ಹುಡುಕಿ ಬರಲಿವೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಕೇತುವಿನ ಸಂಚಾರವು ಅದ್ಭುತ ಪ್ರಯೋಜನ ನೀಡಲಿದೆ. ಅವಿವಾಹಿತರು ಈ ಸಮಯದಲ್ಲಿ ಶುಭ ಸುದ್ದಿ ಕೇಳುವಿರಿ. ನಿಮ್ಮ ವ್ಯಾಪಾರ, ವ್ಯವಹಾರ ಹೂಡಿಕೆಯಲ್ಲಿ ಲಾಭಗಳ ನೋಡಲಿದ್ದೀರಿ. ಹೊಸ ಯೋಜನೆಗಳು ನಿಮ್ಮ ಕೈ ಹಿಡಿಯಲಿವೆ. ಅನಿರೀಕ್ಷಿತವಾಗಿ ಹಲವರು ನಿಮ್ಮ ಬೆಂಬಲಕ್ಕೆ ಬರಲಿದ್ದಾರೆ. ವೈದ್ಯರು, ರಿಯಲ್ ಎಸ್ಟೇಟ್, ಭೂಮಿ ಸಂಬಂಧಿತ ವ್ಯಾಪಾರ ವ್ಯವಹಾರದಲ್ಲಿರುವವರಿಗೆ ಲಾಭ ಹೆಚ್ಚಾಗಲಿದೆ.
ಮಕರ ರಾಶಿ
ಕೇತುವಿನ ಸಂಚಾರದಿಂದಾಗಿ ಮಕರ ರಾಶಿಯವರಿಗೆ ಅದೃಷ್ಟ ಒಲಿಯಲಿದೆ. ನಿಮ್ಮ ಕೆಲಸ ಕಾರ್ಯಗಳಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಲಿಸದೆ. ನಿಮ್ಮ ನಿರೀಕ್ಷೆಯೂ ಮೀರಿದಂತೆ ಸಮಸ್ಯೆಗಳು ಬಗೆಹರಿಯಲಿದೆ, ಗೃಹಿಯರಲ್ಲಿ ಸಂತೋಷದ ದಿನಗಳು ಮರಳಲಿವೆ. ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ನಿರ್ಧಾರ ಕೈಗೊಳ್ಳಲಿದ್ದೀರಿ. ವಿದ್ಯಾರ್ಥಿಗಳಿಗೆ ಇದು ಶುಭ ಕಾಲ ಆಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications