Latest Updates
-
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ!
ಕೇತು ರಾಶಿ ಬದಲಾವಣೆ: ಈ ರಾಶಿಯವರಿಗೆ ದೊಡ್ಡ ಸಂಕಷ್ಟ! ಹಣಕಾಸು, ಆರೋಗ್ಯ ಏರುಪೇರು.. ಯಾರಿಗೆಲ್ಲ ನೋಡಿ
ಜನವರಿ 25 ರಿಂದ ಕೇತು ರಾಶಿ ಬದಲಾವಣೆ! ಈ ರಾಶಿಯವರಿಗೆ ಸಂಕಷ್ಟದ ಕಾಲ.. ಕೆಲಸಗಳಲ್ಲಿ ಅಡೆತಡೆ ಉಂಟಾಗಬಹುದು, ಎಚ್ಚರ! ಯಾರಿಗೆ ಸಂಕಷ್ಟ? ಯಾರಿಗೆ ಲಾಭ? ಇಲ್ಲಿದೆ ಸಂಪೂರ್ಣ ಮಾಹಿತಿ. ಹೌದು, ಕೇತುವನ್ನು (Ketu) 'ಛಾಯಾ ಗ್ರಹ' ಹಾಗೂ 'ಮೋಕ್ಷ ಕಾರಕ' ಎಂದು ಪರಿಗಣಿಸಲಾಗುತ್ತದೆ. ಶುಭ ಸ್ಥಾನದಲ್ಲಿದ್ದಾಗ ಆಧ್ಯಾತ್ಮಿಕ ಉನ್ನತಿ ನೀಡುವ ಕೇತು, ಅಶುಭ ಸ್ಥಾನದಲ್ಲಿದ್ದರೆ ಜೀವನವನ್ನೇ ಅಸ್ತವ್ಯಸ್ತಗೊಳಿಸಬಲ್ಲ (Ketu Transit Effects) ಶಕ್ತಿ ಹೊಂದಿದೆ.
2026ರ ಜನವರಿ 25ರಂದು ಕೇತುವು ಪೂರ್ವಾಫಾಲ್ಗುಣಿ ನಕ್ಷತ್ರದ ಎರಡನೇ ಹಂತದಿಂದ ಮೊದಲನೇ ಹಂತಕ್ಕೆ ಸ್ಥಾನ ಬದಲಾಯಿಸಲಿದೆ. ಮಾರ್ಚ್ 26, 2026ರವರೆಗೆ ಪ್ರಭಾವಶಾಲಿಯಾಗಿರಲಿದೆ. ಶುಕ್ರನ ನಕ್ಷತ್ರವಾದ ಪೂರ್ವಾಫಾಲ್ಗುಣಿಯಲ್ಲಿ ಕೇತುವಿನ ಈ ಚಲನೆಯು (Ketu Gochar 2026) ಕೆಲ ರಾಶಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಮುಖ್ಯವಾಗಿ ಕೌಟುಂಬಿಕ ಹಾಗೂ ವೃತ್ತಿ ಬದುಕಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಈ ರಾಶಿಯವರು ಹೆಚ್ಚು ಜಾಗರೂಕರಾಗಿರುವುದು ಅಗತ್ಯ.

ಮಿಥುನ: ಸವಾಲುಗಳ ಸುರಿಮಳೆ
ಮಿಥುನ ರಾಶಿಯವರಿಗೆ ಕೇತು ಸಂಚಾರ ವೃತ್ತಿ ಹಾಗೂ ವೈಯಕ್ತಿಕ ನೆಮ್ಮದಿಯ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ಕೆಲಸದ ಸ್ಥಳದಲ್ಲಿ ಶ್ರಮಕ್ಕೆ ಮನ್ನಣೆ ಸಿಗದೆ ಮಾನಸಿಕ ಒತ್ತಡ ಹೆಚ್ಚಬಹುದು. ಹೊಸ ಉದ್ಯೋಗಾವಕಾಶಗಳು ಕೈತಪ್ಪುವ ಸಾಧ್ಯತೆಗಳೂ ಇವೆ. ವ್ಯಾಪಾರಸ್ಥರು ದೊಡ್ಡ ಹೂಡಿಕೆ ಮಾಡುವ ಮುನ್ನ ಎಚ್ಚರ ವಹಿಸಬೇಕು.
ವೈಯಕ್ತಿಕವಾಗಿ, ದಾಂಪತ್ಯದಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ಮನಸ್ತಾಪ ಉಂಟಾಗಬಹುದು. ಸಂಗಾತಿಯ ಭಾವನೆಗಳನ್ನು ಅರ್ಥೈಸಿಕೊಳ್ಳುವುದು ಈ ಸಮಯದಲ್ಲಿ ಮುಖ್ಯ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳು ಹೆಚ್ಚು ಶ್ರಮ ಹಾಕಬೇಕಾಗುತ್ತದೆ, ಇಲ್ಲದಿದ್ದರೆ ಏಕಾಗ್ರತೆಯ ಕೊರತೆ ಕಾಡಬಹುದು.
ತುಲಾ: ಹಣಕಾಸು, ಸಂಬಂಧಗಳ ಸಂಕಷ್ಟ
ತುಲಾ ರಾಶಿಯವರಿಗೆ ಮನೆಯೊಳಗೂ ಹೊರಗೂ ಸಮತೋಲನ ಕಾಪಾಡುವುದು ಕಷ್ಟವಾಗಬಹುದು. ಹಣಕಾಸಿನ ವಿಷಯದಲ್ಲಿ, ಆದಾಯಕ್ಕಿಂತ ಖರ್ಚು ಹೆಚ್ಚಾಗಿ ಆರ್ಥಿಕ ಮುಗ್ಗಟ್ಟು ಎದುರಾಗಬಹುದು. ಹೂಡಿಕೆಯಿಂದ ಲಾಭ ಬಂದರೂ, ಅದು ಅನಗತ್ಯ ವೈದ್ಯಕೀಯ ವೆಚ್ಚಗಳಿಗೆ ವ್ಯಯವಾಗುವ ಸಂಭವವಿದೆ.
ಪ್ರೇಮ ಜೀವನದಲ್ಲಿ ಬಿರುಕು ಮೂಡಿ, ವಿವಾಹದ ಮಾತುಕತೆಗಳಲ್ಲಿ ಅಡೆತಡೆಗಳು ಉಂಟಾಗಬಹುದು. ಸಂಗಾತಿಯೊಂದಿಗೆ ಸೌಮ್ಯವಾಗಿ ವರ್ತಿಸುವುದು ಒಳಿತು. ಮಾನಸಿಕ ನೆಮ್ಮದಿ ಕಡಿಮೆಯಾಗುವುದರಿಂದ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ತಮ್ಮ ಹಾಗೂ ಆತ್ಮೀಯರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸುವುದು ಉತ್ತಮ.
ಮೀನ: ಆರೋಗ್ಯ ಮತ್ತು ಆರ್ಥಿಕ ಏರುಪೇರು
ಮೀನ ರಾಶಿಯವರು ಈ ಅವಧಿಯಲ್ಲಿ ಅತ್ಯಂತ ಜಾಗರೂಕತೆಯಿಂದ ಇರಬೇಕು. ಕೆಲಸಗಳು ಪೂರ್ಣಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳ ಬಹುದು. ಹಿರಿಯ ಅಧಿಕಾರಿಗಳಿಂದ ಟೀಕೆಗೆ ಗುರಿಯಾಗುವ ಸಾಧ್ಯತೆಗಳಿರುವುದರಿಂದ, ಹೊಸ ಕೆಲಸಕ್ಕೆ ಸೇರುವ ನಿರ್ಧಾರವನ್ನು ಸದ್ಯಕ್ಕೆ ಮುಂದೂಡುವುದು ಉತ್ತಮ.
ಹಣಕಾಸು ವ್ಯವಹಾರಗಳಲ್ಲಿ ಸಾಲ ನೀಡುವುದು ಅಥವಾ ಹೊಸ ಸಾಲ ಪಡೆಯುವುದು ಅಪಾಯಕಾರಿ. ಹಣದ ವಹಿವಾಟಿನಲ್ಲಿ ವಂಚನೆಯಾಗುವ ಸಂಭವವಿರುವುದರಿಂದ ಎಚ್ಚರ ವಹಿಸಬೇಕು. ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯ. ಋತುಮಾನದ ಕಾಯಿಲೆಗಳು ಕಾಡಬಹುದು, ಆದ್ದರಿಂದ ಸರಿಯಾದ ಆಹಾರ ಪದ್ಧತಿ ರೂಢಿಸಿಕೊಳ್ಳುವುದು ಒಳಿತು.
ಅಶುಭ ಫಲಗಳಿಂದ ಪಾರಾಗಲು ಪರಿಹಾರಗಳು
ಕೇತುವಿನ ನಕಾರಾತ್ಮಕ ಪ್ರಭಾವವನ್ನು ಕಡಿಮೆ ಮಾಡಲು ಜ್ಯೋತಿಷ್ಯ ಶಾಸ್ತ್ರವು ಕೆಲವು ಸರಳ ಪರಿಹಾರಗಳನ್ನು ಸೂಚಿಸಿದೆ. ಗಣೇಶ ಆರಾಧನೆ, ದಾನ ಮತ್ತು ಸೇವೆ ಮತ್ತು ಮಂತ್ರ ಜಪ ಮಾಡುವ ಮೂಲಕ ಪಾರಾಗಬಹುದು.
- ಕೇತು ಗ್ರಹಕ್ಕೆ ಅಧಿಪತಿ ಗಣಪತಿ. ಪ್ರತಿದಿನ 'ಓಂ ಗಂ ಗಣಪತಯೇ ನಮಃ' ಮಂತ್ರ ಜಪಿಸುವುದರಿಂದ ಅಡೆತಡೆಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ.
- ಕಪ್ಪು ಮತ್ತು ಬಿಳಿ ಮಿಶ್ರಿತ ಕಂಬಳಿ ಅಥವಾ ಎಳ್ಳನ್ನು ಬಡವರಿಗೆ ದಾನ ಮಾಡುವುದು ಸೂಕ್ತ. ಬೀದಿ ನಾಯಿಗಳಿಗೆ ಆಹಾರ ನೀಡುವುದು ಸಹ ಕೇತು ಗ್ರಹದ ಶಾಂತಿಗೆ ಉತ್ತಮ ಮಾರ್ಗವಾಗಿದೆ.
- 'ಓಂ ಕೆಂ ಕೇತವೇ ನಮಃ' ಮಂತ್ರವನ್ನು ಪ್ರತಿದಿನ 108 ಬಾರಿ ಪಠಿಸುವುದು ಕೇತುವಿನ ಅಶುಭ ಪರಿಣಾಮಗಳನ್ನು ಕಡಿಮೆ ಮಾಡಲು ಸೂಚಿಸಲಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











