Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಕೇತು ಹಸ್ತಾ ನಕ್ಷತ್ರಕ್ಕೆ ಸಂಚರಿಸಿರುವುದರಿಂದ ಈ 3 ರಾಶಿಗಳಿಗೆ ಶುಭ ಫಲ
ಕೇತು ನೆರಳಿನ ಗ್ರಹ, ಇದು ಒಂದು ರಾಶಿಯಲ್ಲಿ 18 ತಿಂಗಳು ಇರುತ್ತದೆ, ನಂತರ ರಾಶಿ ಬದಲಾವಣೆ ಮಾಡುತ್ತದೆ. ಇದೀಗ ಕೇತು ತನ್ನ ನಕ್ಷತ್ರ ಬದಲಾವಣೆ ಮಾಡಿದೆ, ಕೇತು ಹಸ್ತಾ ನಕ್ಷತ್ರಕ್ಕೆ ಸಂಚರಿಸಿದೆ. ಕೇತು ಅಶುಭ ಗ್ರಹವೆಂದು ಕರೆಯಲ್ಪಟ್ಟರೂ ಎಲ್ಲರಿಗೂ ಇದು ಅಶುಭ ಫಲ ನೀಡುವುದಿಲ್ಲ. ತನ್ನ ಸ್ಥಾನದ ಪ್ರಕಾರ ಶುಭ ಫಲವನ್ನೂ ನೀಡುವುದು, ಕೇತು ಹಸ್ತಾ ನಕ್ಷತ್ರಕ್ಕೆ ಸಂಚರಿಸಿರುವುದರಿಂದ ಈ ರಾಶಿಯವರಿಗೆ ಅನುಕೂಲಕರ.

ಈ 3 ರಾಶಿಯವರಿಗೆ ಕೇತು ಶುಭ ಫಲ ನೀಡುವುದು
ಮೇಷ ರಾಶಿ
ನಿಮಗೆ ಈ ಸಂಚಾರ ತುಂಬಾ ಶುಭವಾಗಿದೆ. ಈ ಅವಧಿಯಲ್ಲಿ ನೀವು ಸವಾಲುಗಳನ್ನು ಧೈರ್ಯದಿಂದ ಎದುರಿಸುತ್ತೀರಿ, ಆದಾಯ ಹೆಚ್ಚಾಗಲಿದೆ. ಇನ್ನು ಅವಾಹಿತರಾಗಿದ್ದರೆ ಈ ಅವಧಿಯಲ್ಲಿ ಮದುವೆ ಪ್ರಸ್ತಾಪ ಬರಬಹುದು, ಆಸ್ತಿ ಅಥವಾ ವಾಹನವನ್ನು ಖರೀದಿಸಲು ತುಂಬಾ ಸಮಯದಿಂದ ಬಯಸುತ್ತಿದ್ದರೆ ಈ ಅವಧಿ ಉತ್ತಮವಾಗಿರಲಿದೆ, ನಿಮ್ಮಾಸೆ ಈಡೇರಲಿದೆ.ಜನರು ಈಗ ಈ ದಿಕ್ಕಿನಲ್ಲಿ ಹೆಜ್ಜೆ ಹಾಕುತ್ತಾರೆ. ಎಲ್ಲೋ ಹಣ ಸಿಕ್ಕಿ ಹಾಕಿಕೊಂಡವರು ಈಗ ಆ ಹಣವನ್ನು ವಾಪಸ್ ಪಡೆಯಬಹುದು. ಈ ಸಮಯದಲ್ಲಿ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ.
ವೃಷಭ ರಾಶಿ
ಹಸ್ತಾ ನಕ್ಷತ್ರದಲ್ಲಿ ಕೇತುವಿನ ಸಂಚಾರ ವೃಷಭ ರಾಶಿಯವರಿಗೆ ಈ ಅವಧಿ ಮಂಗಳಕರವಾಗಿದೆ. ಆರ್ರಥಿಕವಾಗಿ ಈ ಅವಧಿ ಉತ್ತಮವಾಗಿದೆ. ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಕಂಡು ಬರಲಿದೆ. ಈ ಅವಧಿಯಲ್ಲಿ ಆರ್ಥಿಕ ಪ್ರಗತಿ ಕಂಡು ಬರುವುದು, ನೀವು ಉಳಿತಾಯ ಕೂಡ ಮಾಡುತ್ತೀರಿ. ಈ ಸಮಯದಲ್ಲಿ ನಿಮ್ಮ ಬಹುದೊಡ್ಡ ಆಸೆ ಈಡೇರಲಿದೆ. ಆಸ್ತಿ, ಗಾಡಿ ಅಂತ ಸೌಕರ್ಯಗಳು ಹೆಚ್ಚಾಗಿದೆ. ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ.
ಮಕರ ಸಂಕ್ರಾಂತಿ
ಹಸ್ತಾ ನಕ್ಷತ್ರದಲ್ಲಿ ಕೇತುವಿನ ಸಂಚಾರವು ಮಕರ ರಾಶಿಯವರಿಗೆ ತುಂಬಾನೇ ಶುಭವಾಗಿದೆ, ಈ ಸಮಯ ಆರ್ಥಿಕವಾಗಿ ತುಂಬಾ ಉತ್ತಮವಾಗಿದೆ. ವ್ಯಾಪಾರಿಗಳಿಗೆ ಧನ ಲಾಭ ಸಿಗಲಿದೆ. ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ. ಮಕರ ರಾಶಿಯವರ ಆರ್ಥಿಕ ಸ್ಥಿತಿಯು ಮೊದಲಿಗಿಂತ ಮತ್ತಷ್ಟು ಬಲವಾಗಿರುತ್ತದೆ. ಇನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಈ ಅವಧಿಯಲ್ಲಿ ಉತ್ತಮ ಫಲ ಪಡೆಯುತ್ತೀರಿ.
ಕೇತು ಅನುಕೂಲಕರ ಸ್ಥಾನದಲ್ಲಿದ್ದರೆ
ಕೇತು ನಮ್ಮ ರಾಶಿಯಲ್ಲಿ ಬಲವಾಗಿದ್ದರೆ ಸಂಪತ್ತು ಹೆಚ್ಚಾಗುವುದು
ವಿದ್ಯಾರ್ಥಿಗಳಿಗೆ ತುಂಬಾ ಒಳ್ಳೆಯದು, ಏನಾದರೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಯಾರಿ ನಡೆಸುತ್ತಿದ್ದರೆ ಉತ್ತಮ ಫಲ ಪಡೆಯುತ್ತೀರಿ.
ಸಮಾಜದಲ್ಲಿ ಸ್ಥಾನ ಮಾನ ಗೌರವ ಹೆಚ್ಚಾಗಲಿದೆ
ಧಾರ್ಮಿಕ ಒಲವು ಹೆಚ್ಚಾಗುವುದು
ಜ್ಞಾನ ಹೆಚ್ಚಾಗಲಿದೆ.
ಕೇತುವಿಗೆ ಯಾವ ಬಣ್ಣ ಅದೃಷ್ಟಕರ
ಕೇತುವಿನ ಪ್ರಯೋಜನ ಪಡೆಯಲು ನೀವು ಗಣೇಶನ ಆರಾಧನೆ ಮಾಡಿ, ಹಳದಿ ಬಣ್ಣದ ಡ್ರೆಸ್ ಹಾಕಿ ಪೂಜೆ ಸಲ್ಲಿಸಿ.
ಕೇತುವಿನ ಶುಭ ಫಲ ಹೆಚ್ಚಾಗುವುದು
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
