Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ವರ್ಷ ಸಿಂಹ ರಾಶಿಗೆ ಸಂಚಾರವಾಗುತ್ತಿದ್ದಂತೆ ಈ 3 ರಾಶಿಗಳ ಅದೃಷ್ಟವೇ ಬದಲಾಗಲಿದೆ
ವೈದಿಕ ಶಾಸ್ತ್ರದಲ್ಲಿ ರಾಹು ಮತ್ತು ಕೇತುವನ್ನು ನೆರಳಿನ ಗ್ರಹವೆಂದು ಕರೆಯಲಾಗುವುದು. ಈ ರಾಹು ಮತ್ತು ಕೇತುಗಳು 18 ತಿಂಗಳಿಗೊಮ್ಮೆ ರಾಶಿ ಬದಲಾವಣೆ ಮಾಡುತ್ತದೆ. ಈ ವರ್ಷ ರಾಹು ಹಾಗೂ ಕೇತು ರಾಶಿ ಬದಲಾವಣೆ ಮಾಡಲಿದೆ. ಕೇ ತು ಮತ್ತು ರಾಹುವನ್ನು ದೋಷದ ಗ್ರಹಗಳೆಂದು ಕರೆಯುವುದಾದರೂ ಇವುಗಳ ಸ್ಥಾನದ ಅನುಸಾರ ಇದು ನಮ್ಮ ಮೇಲೆ ಪ್ರಭಾವ ಬೀರುತ್ತದೆ. ಇವುಗಳು ನಮ್ಮ ರಾಶಿಯಲ್ಲಿ ಅನುಕೂಲಕರ ಸ್ಥಾನದಲ್ಲಿದ್ದರೆ ಇದು ಬೀರುವ ಪ್ರಭಾವ ಮಾತ್ರ ಅದ್ಭುತವಾಗಿರುತ್ತದೆ.
ಈ ವರ್ಷ ಕೇತು ಮೇ 18ಕ್ಕೆ ಸಿಂಹ ರಾಶಿಗೆ ಸಂಚಾರ ಮಾಡಲಿದೆ. ಕೇತು ಸಿಂಹ ರಾಶಿಗೆ ಪ್ರವೇಶ ಮಾಡಿದಾಗ ಇದರ ಸಂಚಾರ ಎಲ್ಲಾ ರಾಶಿಗಳ ಮೇಲೆ ಇರಲಿದ್ದು ಈ ರಾಶಿಯವರು ಅದ್ಭುತವಾದ ಪ್ರಯೋಜನ ಪಡೆಯಲಿದ್ದಾರೆ:

ಕೇತು ಸಂಚಾರ ಈ ರಾಶಿಯವರು ಉತ್ತಮ ಪ್ರಯೋಜನ ಪಡೆಯುತ್ತೀರಿ:
ಮಿಥುನ ರಾಶಿ
ಕೇತು ಸಿಂಹ ರಾಶಿಗೆ ಸಂಚಾರ ಮಾಡಿದಾಗ ಮಿಥುನ ರಾಶಿಯವರು ತುಂಬಾ ಉತ್ತಮವಾದ ಪ್ರಯೋಜನ ಪಡೆಯುತ್ತೀರಿ. ನೀವು ಆರ್ಥಿಕವಾಗಿ ತುಂಬಾನೇ ಬೆಳವಣಿಗೆ ಕಾಣಲು ಸಾಧ್ಯವಾಗಲಿದೆ. ನೀವು ಉದ್ಯೋಗ ಬದಲಾವಣೆ ಅಥವಾ ಹೊಸ ವ್ಯವಹಾರ ಮಾಡಲು ಬಯಸುವುದಾದರೆ ಈ ಸಮಯ ಅನುಕೂಲಕರವಾಗಿದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿಯನ್ನು ಕಾಣಲು ಸಾಧ್ಯವಾಗುವುದು. ಕೇತು ಸಿಂಹ ರಾಶಿಗೆ ಬಂದಾಗಿನಿಂದ ನಿಮಗೆ ಆದಾಯಕ್ಕೆ ಯಾವುದೇ ತೊಂದರೆಯಾಗಲ್ಲ. ಕೆಲಸದಲ್ಲಿ ಹೊಸ ಆಫರ್‌ಗಳು ಬರಬಹುದು. ಇನ್ನು ಕೆಲಸದ ಜೊತೆಗೆ ಪಾರ್ಟ್‌ಟೈಂ ಬ್ಯುಸ್‌ನೆಸ್ ಮಾಡಲು ಬಯಸುವುದಾದರೆ ಅವರಿಗೂ ಈ ಅವಧಿ ಅನುಕೂಲಕರವಾಗಿದೆ. ಇನ್ನು ಗೃಹ ನಿರ್ಮಾಣದಂಥ ಪ್ರಮುಖ ಕೆಲಸ ಅಪೂರ್ಣವಾಗಿದ್ದರೆ ಅಥವಾ ಹಣದ ಕಾರಣದಿಂದ ಕೆಲ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ಕೇತು ಸಂಚಾರ ಆ ಎಲ್ಲಾ ಸಮಸ್ಯೆ ನೀಗುಸಲಿದೆ.
ವೃಶ್ಚಿಕ ರಾಶಿ
ಕೇತು ಸಿಂಹ ರಾಶಿಗೆ ಸಂಚಾರ ಮಾಡಿದಾಗಿನಿಂದ ವೃಶ್ಚಿಕ ರಾಶಿಯವರು ಪ್ರತಿಯೊಂದು ಹೆಜ್ಜೆಯಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗಲಿದೆ. ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಇನ್ನು ಅದೃಷ್ಟದ ಬೆಂಬಲ ನಿಮಗೆ ಇರುವುದರಿಂದ ಕೆಸದಲ್ಲಿ ಯಶಸ್ಸು ಸಿಗಲಿದೆ, ಇದರಿಂದ ಆರ್ಥಿಕವಾಗಿ ಪ್ರಯೋಜನ ಪಡೆಯುತ್ತೀರಿ. ಇನ್ನು ವೃಶ್ಚಿಕ ರಾಶಿಯವರು ಬ್ಯುಸ್‌ನೆಸ್ ಮಾಡುತ್ತಿದ್ದರೆ ಈ ಕೇತು ಸಂಚಾರ ನಿಮಗೆ ಅನುಕೂಲಕರವಾದ ಫಲಿತಾಂಶ ನೀಡಲಿದೆ. ಈ ಅವಧಿಯಲ್ಲಿ ಹಣ ಉಳಿತಾಯ ಮಾಡಬಹುದು. ಖರ್ಚುಗಳ ಬಗ್ಗೆ ಚಿಂತೆ ಇರಲ್ಲ, ಏಕೆಂದರೆ ಆದಾಯ ಚೆನ್ನಾಗಿರುತ್ತದೆ. ಹೂಡಿಕೆ ಮಾಡಲು ಕೂಡ ಈ ಅವಧಿ ನಿಮಗೆ ತುಂಬಾನೇ ಪ್ರಯೊಜನಕಾರಿಯಾಗಿದೆ.
ಧನು ರಾಶಿ
ಧನು ರಾಶಿಯವರು ಈ ಅವಧಿಯಲ್ಲಿ ತುಂಬಾ ಅದ್ಭುತ ಪ್ರಯೋಜನ ಪಡೆಯುತ್ತೀರಿ. ನೀವು ಈಗ ಏನಾದರು ವೃತ್ತಿ ಬದುಕಿನಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದರೆ ಈ ಅವಧಿಯ ನಂತರ ನೀವು ಉತ್ತಮ ಪ್ರಯೋಜನ ಪಡೆಯುತ್ತೀರಿ. ವೃತ್ತಿ ಬದುಕಿಲ್ಲಿ ಉತ್ತಮ ಪ್ರಯೋಜನ ಪಡೆಯುತ್ತೀರಿ. ಸಾಲ ಮಾಡಿದ್ದರೆ ಈ ಸಮಯದಲ್ಲಿ ಸಾಲ ತೀರಿಸಲು ಸಾಧ್ಯವಾಗುವುದು. ನಿಮ್ಮ ಕೆಲಸಕ್ಕೆ ಉತ್ತಮ ಫಲಿತಾಂಶ ದೊರೆಯಲಿದೆ. ಪ್ರತಿಕೂಲ ಸಂದರ್ಭದಲ್ಲಿ ಕುಟುಂಬಸ್ಥರ ನೆರವು ಕೂಡ ಸಿಗಲಿದೆ. ನೀವು ಬಡ್ತಿಗಾಗಿ ಕಾಯುತ್ತಿದ್ದರೆ ವೃತ್ತಿ ಬದುಕಿನಲ್ಲಿ ಮತ್ತಷ್ಟು ಬೆಳೆಯಲು ಸಾಧ್ಯವಾಗುವುದು. ಗೃಹ ನಿರ್ಮಾಣದಂಥ ಪ್ರಮುಖ ಕನಸು ನೆರವೇರಲಿದೆ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications