Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ತುಲಾ ಸಂಕ್ರಮಣ: ತಲಾ ಕಾವೇರಿಯ ಕುಂಡಿಕೆಯಲ್ಲಿ ನಡೆಯುವ ಪವಾಡಗಳಿವು
ಬೆಂಗಳೂರು- ತಮಿಳುನಾಡಿನ ಜೀವನದಿ ಕಾವೇರಿ ಕೊಡಗಿನವರು ಪ್ರತಿನಿತ್ಯ ಆರಾಧಿಸುವ ದೇವತೆ. ಯಾವುದೇ ಶುಭ ಕಾರ್ಯ ಪ್ರಾರಂಭಿಸುವ ಮುನ್ನ ಕಾವೇರಿಗೆ ಪೂಜೆ ಸಲ್ಲಿಸುವುದು ಇಲ್ಲಿಯ ಸಂಪ್ರದಾಯ. ಕಾವೇರಿಯ ತೀರ್ಥ ಗಂಗೆಯಷ್ಟೇ ಪವಿತ್ರವಾದದ್ದು. ಆದ್ದರಿಂದ ಮಗು ಜನನವಾದಾಗ ಅದರ ಬಾಯಿಗೆ ಕಾವೇರಿ ತೀರ್ಥವನ್ನು ಹಾಕುತ್ತಾರೆ.
ಇನ್ನು ವ್ಯಕ್ತಿ ಸಾಯುವಾಗ ಬಾಯಿಗೆ ನೀರು ಬಿಡುವಾಗ ಕೂಡ ಕಾವೇರಿ ತೀರ್ಥವನ್ನು ಹಾಕುತ್ತಾರೆ. ಕಾವೇರಿ ತೀರ್ಥವನ್ನು ನೀಡುವುದರಿಂದ ಆ ವ್ಯಕ್ತಿ ಮೋಕ್ಷ ಪಡೆಯುತ್ತಾನೆ ಎಂಬ ನಂಬಿಕೆಯಿದೆ.
ಕಾವೇರಿ ತೀರ್ಥ ವರ್ಷಕ್ಕೊಮ್ಮೆ ಸಿಗುವುದು. ಅದನ್ನು ಬಾಟಲಿಗಳಲ್ಲಿ ಸಂಗ್ರಹಿಸಿಟ್ಟು ಮುಂದಿನ ವರ್ಷದವರೆಗೆ ಬಳಸುತ್ತಾರೆ.

ತುಲಾ ಸಂಕ್ರಾಂತಿಯಂದು ಮಾತ್ರ ಕಾವೇರಿ ತೀರ್ಥ ರೂಪಿಣಿಯಾಣಿ ಭಕ್ತರಿಗೆ ದರ್ಶನ ನೀಡುತ್ತಾಳೆ. ಇದೊಂದು ಪವಾಡ, ಈ ಪವಾಡ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ತಲಾಕಾವೇರಿಗೆ ಬರುತ್ತಾರೆ.
ತಲಾ ಕಾವೇರಿಯ ಕುಂಡಿಕೆಯಲ್ಲಿ ತೀರ್ಥ ರೂಪದಲ್ಲಿ ಉಕ್ಕುವ ಕಾವೇರಿ
ತಲಾ ಕಾವೇರಿಯ ಕುಂಡಿಕೆಯಲ್ಲಿ ಪ್ರತಿ ದಿನ ಪೂಜೆ ಸಲ್ಲಿಸಲಾಗುವುದು. ತುಲಾ ಸಂಕ್ರಮಣದಂದು ಕಾವೇರಿ ತೀರ್ಥ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ. ಈ ದೃಶ್ಯವನ್ನು ಕಣ್ತುಂಬಿಗಳು ಕರ್ನಾಟಕದಿಂದ ಮಾತ್ರವಲ್ಲ ತಮಿಳುನಾಡಿನಿಂದ ಕೂಡ ಜನ ಬರುತ್ತಾರೆ. ಈ ದಿನ ಇಲ್ಲಿಗೆ ಬರುವವರು ತೀರ್ಥವನ್ನು ಕೊಂಡೊಯ್ಯುತ್ತಾರೆ. ಇನ್ನು ಕೆಲವರು ಕೊಡಗಳಲ್ಲಿ ತೀರ್ಥವನ್ನು ತುಂಬಿ ತಮ್ಮ-ತಮ್ಮ ಊರಿಗೆ ಹೀಗಿ ಮನೆ-ಮನೆಗೆ ಹಂಚುತ್ತಾರೆ.
ಪವಾಡ ಕುಂಡಿಕೆ
ಏಕೆ ಇಲ್ಲಿ ತುಲಾ ಸಂಕ್ರಮಣದಂದೇ ತೀರ್ಥ ಉಕ್ಕುತ್ತದೆ ಎಂಬ ಪ್ರಶ್ನೆಗೆ ಉತ್ತರವಿಲ್ಲ, ಜನರ ನಂಬಿಕೆಯಲ್ಲಿ ಕಾವೇರಿ ದೇವತೆ, ಆ ದೇವತೆ ತೀರ್ಥರೂಪದಲ್ಲಿ ತನ್ನ ದರ್ಶನ ನೀಡುತ್ತಾಳೆ ಎಂಬುವುದು ಜನರ ನಂಬಿಕೆ, ಆ ನಂಬಿಕೆಯಂತೆಯೇ ಪ್ರತೀವರ್ಷ ಈ ಕುಂಡಿಕೆಯಲ್ಲಿ ಕಾವೇರಿ ಉಕ್ಕುವುದು ವಿಸ್ಮಯವೇ ಸರಿ. ಇನ್ನು ಈ ಕುಂಡಿಕೆ ಯಾವುದೇ ಕಾಲದಲ್ಲಿಯೂ ಬತ್ತುವುದಿಲ್ಲ , ಬರಗಾಲದ ಸಮಯದಲ್ಲಿಯೂ ಈ ಕುಂಡಿಕೆಯಲ್ಲಿ ನೀರು ಬತ್ತುವುದಿಲ್ಲ.
2023 ತುಲಾ ಸಂಕ್ರಮಣದಂದು ಎಷ್ಟು ಹೊತ್ತಿಗೆ ತೀರ್ಥೋದ್ಭವವಾಗಲಿದೆ?
ಕಾವೇರಿ ಸಂಕ್ರಮಣ ದಿನಾಂಕ : ಅಕ್ಟೋಬರ್ 17 ಮಧ್ಯರಾತ್ರಿ 1:41ಕ್ಕೆ
ಕಾವೇರಿ ಸಂಕ್ರಮಣ ಪುಣ್ಯಕಾಲ ಸಮಯ: ಬೆಳಗ್ಗೆ 06:17ರಿಂದ ಮಧ್ಯಾಹ್ನ 12:12ರವೆರೆಗ
ಕಾವೇರಿ ಸಂಕ್ರಮಣ ತರ್ಪಣ ಮಹಾ ಪುಣ್ಯಕಾಲ ಸಮಯ: ಬೆಳಗ್ಗೆ 6:17ರಿಂದ 8:16ರವರೆಗೆ
ಕಾವೇರಿ ಸಂಕ್ರಮಣ ಪುಣ್ಯಕಾಲ ವಾರ: ಬುಧವಾರ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
