Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಕಾರ್ತಿಕ ಶನಿವಾರ ಈ ಪರಿಹಾರ ಮಾಡಿದರೆ ಕಷ್ಟಗಳು ದೂರಾಗುವುದು
ಹಿಂದೂಗಳಿಗೆ ಪವಿತ್ರ ಮಾಸಗಳಲ್ಲೊಂದು ಕಾರ್ತಿಕ ಮಾಸ, ಕಾರ್ತಿಕ ಮಾಸದಲ್ಲಿ ಶಿವನ ಹಾಗೂ ಶ್ರೀ ವಿಷ್ಣುವಿನ ಆರಾಧನೆ ಮಾಡಲಾಗುವುದು. ಕಕಾರ್ತಿಕ ದೀಪಗಳನ್ನು ಹಚ್ಚಿ ಕಾರ್ತಿಕ ಪೂಜೆ ಮಾಡಲಾಗುವುದು. ಕಾರ್ತಿಕ ಮಾಸದಲ್ಲಿ ದೀಪಗಳನ್ನು ಹಚ್ಚಿ ಪೂಜಿಸುವುದರಿಂದ ತುಂಬಾ ಒಳ್ಳೆಯದು, ದೇವರ ಕೃಪೆಯಿಂದ ನಮ್ಮ ಬದುಕಿನಲ್ಲಿರುವ ಅನೇಕ ಸಮಸ್ಯೆಗಳು ದೂರಾಗುವುದು.
ಕಾರ್ತಿಕ ಮಾಸದಲ್ಲಿ ಕಾರ್ತಿಕ ಶನಿವಾರ, ಕಾರ್ತಿಕ ಸೋಮವಾರ ಮತ್ತಷ್ಟು ವಿಶೇಷವಾದ ದಿನವಾಗಿದೆ. ಕಾರ್ತಿಕ ಶನಿವಾರ ಕೆಲವೊಂದು ಪರಿಹಾರ ಮಾಡಿದರೆ ಶನಿ ಸಾಡೇಸಾತಿಯಂಥ ಕಠಿಣ ದೋಷವಿದ್ದರೂ ಅದರ ಕೆಟ್ಟ ಪರಿಣಾಮ ಕಡಿಮೆಯಾಗಲಿದೆ.
ಕಾರ್ತಿಕ ಶನಿವಾರ ಈ ರೀತಿ ಮಾಡಿದರೆ ಕಷ್ಟಗಳು ದೂರಾಗಿ ಒಳಿತಾಗುವುದು ಎಂಬುವುದು ಧಾರ್ಮಿಕ ನಂಬಿಕೆ:

ಶನಿ ದೇವಾಲಯಕ್ಕೆ ಭೇಟಿ ನೀಡಿ: ಅದರಲ್ಲಿಯೂ ಶನಿ ಧೈಯ್ಯ, ಶನಿ ದೋಷ ಇರುವವರು ಶನಿವಾರದಂದು ಶನಿ ದೇವಾಲಯಕ್ಕೆ ಭೇಟಿ ನೀಡಿ, ಎಳ್ಳೆಣ್ಣೆಯಲ್ಲಿ ನಿಮ್ಮ ಮುಖ ನೋಡಿ ಆ ಎಣ್ಣೆಯನ್ನು ದಾನ ಮಾಡಿ, ಎಣ್ಣೆ ದಾನದಿಂದ ಸಂಕಷ್ಟಗಳು ಕಡಿಮೆಯಾಗಲಿದೆ.
ಶಿವನಿಗೆ ಅಭಿಷೇಕ ಮಾಡಿಸಿ
ಕಾರ್ತಿಕ ಶನಿವಾರದಂದು ಶಿವನಿಗೆ ಅಭಿಷೇಕ ಮಾಡಿ, ಶಿವ ಮಂತ್ರಗಳನ್ನು ಪಠಿಸಿ. ಈ ದಿನ ಓಂ ನಮಃ ಶಿವಾಯ ಈ ಮೂಲ ಮಂತ್ರ ಪಠಣೆ ಮಾಡುತ್ತಲೇ ಶಿವ ಪೂಜೆ ಮಾಡಿ, ಹೀಗೆ ಮಾಡುವುದರಿಂದ ಶನಿ ದೋಷವಿದ್ದರೆ ಅದು ದೂರಾಗುವುದು ಅಲ್ಲದೆ ಶಿವನ ಕೃಪೆಯಿಂದ ಬದುಕಿನಲ್ಲಿ ಪ್ರಗತಿಯನ್ನು ಕಾಣಬಹುದು.
ಈ ದಿನ ನಿಮ್ಮ ಶಕ್ತಿಗೆ ಅನುಸಾರ ದಾನ ಮಾಡಿ
ಶನಿವಾರದ ದಿನ ನಿಮ್ಮ ಶಕ್ತಿಗೆ ಅನುಸಾರ ದಾನ ಮಾಡಿ. ಶನಿವಾರ ದಿನ ಬಡವರಿಗೆ ದಾನ ಮಾಡಿ,ಕಪ್ಪು ಎಳ್ಳು ಜೊತೆಗೆ ಆಹಾರ ವಸ್ತುಗಳನ್ನು ದಾನ ಮಾಡಿ, ವಸ್ತ್ರಗಳನ್ನು ದಾನ ಮಾಡಿ, ಕಪ್ಪು ಕಂಬಳಿ ದಾನ ಮಾಡಿ, ಹೀಗೆ ದಾನ ಮಾಡುವುದರಿಂದ ಶನಿಯ ಕೃಪೆಗೆ ಪಾತ್ರರಾಗಬಹುದು, ಅಲ್ಲದೆ ಅಲ್ಲದೆ ಕಾರ್ತಿಕ ಮಾಸವಾಗಿರುವುದರಿಂದ ದಾನದ ಮಹತ್ವ ಹೆಚ್ಚಾಗಲಿದೆ.
ಆಲದ ಮರದ ಕೆಳಗಡೆ ದೀಪ ಹಚ್ಚಿ
ಕಾರ್ತಿಕ ಶನಿವಾರದಂದು ಆಲದ ಮರದ ಕೆಳಗಡೆ ದೀಪ ಹಚ್ಚಿ, ಆಲದ ಮರದ ಕೆಳಗಡೆ ಎಳ್ಳೆಣ್ಣೆ ದೀಪ ಹಚ್ಚುವುದರಿಂದ ನಿಮಗೆ ತುಂಬಾನೇ ಶುಭವಾಗಲಿದೆ. ಈ ರೀತಿ ದೀಪ ಹಚ್ಚಿಡುವುದರಿಂದ ಶನಿ ದೋಷವಿದ್ದರೆ ಆ ದೋಷಗಳು ಕಡಿಮೆಯಾಗುವುದು.
ಶನಿದೋಷವಿದ್ದರೆ ಎಲ್ಲಾ ಶನಿವಾರ ಶನಿದೇವನಿಗೆ ವಿಶೇಷ ಪೂಜೆ ಸಲ್ಲಿಸಿ ಅದರಲ್ಲಿಯೂ ಕಾರ್ತಿಕ ಶನಿವಾರ ಈ ಬಗೆಯ ಪರಿಹಾರ ಮಾಡುವುದರಿಂದ ಶನಿದೋಷ ತುಂಬಾನೇ ಕಡಿಮೆಯಾಗಲಿದೆ.
ಈಗ ಯಾವೆಲ್ಲಾ ರಾಶಿಗಳಲ್ಲಿ ಶನಿದೋಷವಿದೆ?
ಮಕರ, ಕುಂಭ, ಮೀನ ರಾಶಿಯಲ್ಲಿ ಶನಿ ಸಾಡೇಸಾತಿ ನಡೆಯುತ್ತಿದೆ. ಈ ರಾಶಿಯವರು ಶನಿಸಾಡೇಸಾತಿ ಇರುವುದರಿಂದ ಈ ಅವಧಿಯಲ್ಲಿ ಹೆಚ್ಚಿನ ಸಮಸ್ಯೆ ಎದುರಿಸುತ್ತಿರುವಿರಿ. ಮಕರ ರಾಶಿಗೆ 2025ಕ್ಕೆ ಶನಿ ಸಾಡೇಸಾತಿ ಮುಗಿಯಲಿದೆ. ನಂತರ ಮಕರ ರಾಶಿಯವರ ಬದುಕಿನಲ್ಲಿ ಧನಾತ್ಮಕ ಬದಲಾವಣೆ ಕಾಣಲಿದೆ.
ಕಾರ್ತಿಕ ಮಾಸದಲ್ಲಿ ದೀಪ ಬೆಳಗುವುದರ ಮಹತ್ವ
ಕಾರ್ತಿಕ ಮಾಸದಲ್ಲು ದೀಪ ಬೆಳಗುವುದನ್ನು ಮಂಗಳಕರ ಎಂದು ಪರಿಗಣಿಸಲಾಗುವುದು, ಕಾರ್ತಿಕ ದೀಪ ಬೆಳಗುವುದರಿಂದ ದೈವ ಕೃಪೆ ನಮ್ಮ ಮೇಲೆ ಇರಲಿದೆ. ನಕರಾತ್ಮಕತೆ ದೂರಾಗುವುದು, ಜೀವನದಲ್ಲಿ ಸಂತೋಷ, ನೆಮ್ಮದಿ ಇರಲಿದೆ.
ಕಾರ್ತಿಕ ಮಾಸದಲ್ಲಿ ತುಳಸಿ ಕಟ್ಟೆಯ ಸುತ್ತ ದೀಪ ಹಚ್ಚಿಡಲಾಗುವುದು, ದೇವಾಲಯಗಳಲ್ಲಿ ಸುತ್ತಲೂ ಹಣತೆಗಳನ್ನು ಹಚ್ಚಿಡಲಾಗುವುದು. ಸೂರ್ಯೋದಯಕ್ಕೆ ಮುನ್ನ ಹಾಗೂ ಸೂರ್ಯಾಸ್ತದ ನಂತರ ವಿಶೇಷ ಪೂಜೆ ಸಲ್ಲಿಸಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
