Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಈ ವರ್ಷ ಕಾರ್ತಿಕ ಪೂರ್ಣಿಮಾ ಯಾವಾಗ? ಈ ದಿನ ನದಿ ಸ್ನಾನದ ಪ್ರಾಮುಖ್ಯತೆಯೇನು?
ಕಾರ್ತಿಕ ಮಾಸವನ್ನು ದೇವರ ಸೇವೆಗೆ, ಸಾಧನೆಗೆ ಶ್ರೇಷ್ಠವಾದ ತಿಂಗಳು ಎಂದು ಕರೆಯಲಾಗುವುದು. ಏಕೆಂದರೆ ಈ ತಿಂಗಳು ಶಿವ ಆರಾಧನೆಗೆ ಮೀಸಲಾದ ತಿಂಗಳಾಗಿದೆ , ಇದೇ ತಿಂಗಳಿನಲ್ಲಿ ಶ್ರೀ ವಿಷ್ಣು ಚಾತುರ್ಮಾಸ ನಿದ್ದೆಯಿಂದ ಎಚ್ಚೆತ್ತುಕೊಳ್ಳುತ್ತಾನೆ, ತಿರುಪತಿ, ಶಬರಿ ಮಲೆ, ಧರ್ಮಸ್ಥಳ ಮುಂತಾದ ಪ್ರಮುಖ ದೇವಾಲಯಗಳನ್ನು ಈ ತಿಂಗಳಿನಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು.
ಕಾರ್ತಿಕ ತಿಂಗಳಿನಲ್ಲಿ ಪ್ರತಿ ದಿನ ದೀಪಗಳನ್ನು ಹಚ್ಚಿಟ್ಟು ಪೂಜಿಸಲಾಗುವುದು, ಅದರಲ್ಲಿ ಕಾರ್ತಿಕ ಸೋಮವಾರ ಹಾಗೂ ಕಾರ್ತಿಕ ಪೂರ್ಣಿಮಾ ತುಂಬಾ ದಿನಗಳಾಗಿವೆ, ಈ ತಿಂಗಳಿನಲ್ಲಿ ಕಾರ್ತಿಕ ಪೂರ್ಣಿಮೆಯನ್ನು ನವೆಂಬರ್ 27ರಂದು ಆಚರಿಸಲಾಗುವುದು. ಈ ದಿನ ಮಾಡುವ ಸ್ನಾನಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ. ಈ ದಿನದ ವಿಶೇಷತೆಯೇನು, ಏಕೆ ಈ ದಿನ ನದಿ ಸ್ನಾನಕ್ಕೆ ಅಷ್ಟೊಂದು ಪ್ರಾಮುಖ್ಯತೆ ಇದೆ, ಈ ದಿನ ವಿಷ್ಣುವಿನ ಪೂಜೆಗೆ ಶುಭ ಮುಹೂರ್ತ ಯಾವಾಗ ಎಂದು ನೋಡೋಣ ಬನ್ನಿ:

ಕಾರ್ತಿಕ ಪೂರ್ಣಿಮೆಯಂದು ನದಿ ಸ್ನಾನದ ಮಹತ್ವ
ಈ ದಿನ ಶಿವನು ರಾಕ್ಷಸ ತ್ರಿಪುರಾಸುರನನ್ನು ಕೊಂದನು. ಈ ಸಂತಸದಲ್ಲಿ ದೇವತೆಗಳು ದೀಪ ಬೆಳಗಿಸಿ ಸಂಭ್ರಮಿಸಿದರು. ಇದನ್ನು ದೇವ್ ದೀಪಾವಳಿ ಎಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲ ಈ ದಿನ ನದಿಯಲ್ಲಿ ಸ್ನಾನ ಮಾಡಬೇಕಂದು ಹೇಳಲಾಗುವುದು, ನದಿಯಲ್ಲಿ ಪಣ್ಯ ಸ್ನಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುವುದು ಎಂದು ಹೇಳಲಾಗುವುದು.
ಕಾರ್ತಿಕ ಪೂರ್ಣಿಮೆಯ ಪೂಜಾ ವಿಧಾನ:
ಕಾರ್ತಿಕ ಹುಣ್ಣಿಮೆಯಂದು ಬೆಳಗ್ಗೆ ಬೇಗನೆ ಎದ್ದು ನದಿ ಸ್ನಾನ ಮಾಡಬೇಕು. ನದಿಗೆ ಹೋಗಿ ಸ್ನಾನ ಮಾಡಲು ಸಾಧ್ಯವಾಗದೇ ಇದ್ದರೆ ಸ್ನಾನದ ನೀರಿಗೆ ಸ್ವಲ್ಪ ಗಂಗಾ ಜಲವನ್ನು ಹಾಕಿ ಸ್ನಾನ ಮಾಡಿ.
* ಈ ದಿನ ದೀಪಗಳನ್ನು ದಾನ ಮಾಡಬೇಕೆಂದು ಹೇಳಲಾಗುವುದು
* ಈ ದಿನ ನೆಲ್ಲಿಕಾಯಿ ಗಿಡಕ್ಕೆ ಪೂಜೆಯನ್ನು ಸಲ್ಲಿಸಲಾಗುವುದು.
* ಈ ದಿನ ಅಮೃತಬಳ್ಳಿ ಕೆಳಗಡೆ ಆಹಾರವನ್ನು ಸೇವಿಸಿ ಸಂಜೆ ದೀಪವನ್ನು ದಾನ ಮಾಡುವವರಿಗೆ ಇಷ್ಟಾರ್ಥಗಳು ನೆರವೇರುತ್ತದೆ.
* ಕಾರ್ತಿಕ ಹುಣ್ಣಿಮೆಯನ್ನು ಪುಷ್ಕರ್ತೀರ್ಥ, ದ್ವಾರಕಾಪುರಿ, ಸುಕರಕ್ಷೇತ್ರಗಳಲ್ಲಿ ಉಪವಾಸ ಮಾಡುವುದು ವಿಶೇಷವಾಗಿ ಫಲ ನೀಡುತ್ತದೆ
ಎಂದು ಭಾವಿಸಲಾಗಿದೆ.
* ಈ ದಿನಬ ಶ್ರೀ ವಿಷ್ಣುವಿಗೆ ತುಪ್ಪದ ದೀಪವನ್ನು ಹಚ್ಚಿ. ಶ್ರೀ ಹರಿಗೆ ಧೂಪ, ದೀಪ, ಹಣ್ಣುಗಳು, ಹೂವುಗಳನ್ನು ಅರ್ಪಿಸಿ. ಸಂಜೆ ಮತ್ತೆ ವಿಷ್ಣುವನ್ನು ಆರಾಧಿಸಿ, ಭಗವಂತನಿಗೆ ಪಂಚಾಮೃತವನ್ನು ಅರ್ಪಿಸಿ.
* ಈ ದಿನ ನೈವೇದ್ಯ ಮಾಡುವಾಗ ಅದಕ್ಕೆ ತುಳಸಿ ಎಲೆ ಹಾಕಿ ದೇವರಿಗೆ ಅರ್ಪಿಸಿ.
* ಈ ದಿನ ಉಪವಾಸವನ್ನು ರಾತ್ರಿ ಚಂದ್ರನ ನೋಡಿದ ಮೂಲಕ ಮುರಿಯಿರಿ.
ಈ ದಿನ ದೀಪದಾನದ ಮಹತ್ವ
ಈ ದಿನ ಗಂಗಾ ನದಿಯ ದಡದಲ್ಲಿ ದೀಪಗಳನ್ನು ಬೆಳಗುತ್ತಾರೆ. ಈ ದಿನ ಹಿಟ್ಟಿನ ದೀಪಗಳನ್ನು ಮಾಡಿ ಅದನ್ನು ಹಚ್ಚಿ ಅದನ್ನು ನದಿಯಲ್ಲಿ ಹರಿಯ ಬಿಡುವುದರಿಂದ ಇಷ್ಟಾರ್ಥಗಳು ನೆರವೇರುವುದು. ಈ ರೀತಿ ದೀಪಗಳನ್ನು ಹಚ್ಚಿ ನದಿಗೆ ಬಿಡುವುದರಿಂದ ಪಿತೃದೋಷ ನಿವಾರಣೆಯಾಗುವುದು ಎಂದು ಹೇಳಲಾಗುವುದು.
ಈ ದಿನ ದಾನಗಳನ್ನು ಮಾಡಬೇಕು
ಈ ದಿನ ದಾನವನ್ನು ಮಾಡಿದರೆ ಪುಣ್ಯಫಲ ಸಿಗುವುದು. ಈ ದಿನ ದಾನಗಳನ್ನು ಮಾಡುವುದರಿಂದ ಯಜ್ಞಳನ್ನು ಮಾಡಿದ ಫಲ ಸಿಗುವುದು. ಈ ದಿನ ನೀವು ನಿಮ್ಮ ಕೈಲಾದ ಸಹಾಯ ಮಾಡಿ, ದಾನ ಮಾಡಿ, ಇದರಿಂದ ನಿಮ್ಮ ಇಷ್ಟಾರ್ಥಗಳು ನೆರವೇರುವುದು.
ಶ್ರೀವಿಷ್ಣು ಜೊತೆಗೆ ಲಕ್ಷ್ಮಿಯನ್ನು ಆರಾಧಿಸಿ
ಈ ದಿನ ಲಕ್ಷ್ಮಿ ಅಕ್ಕಿ ಪಾಯಸದ ನೈವೇದ್ಯ ಅರ್ಪಿಸಿ ಅಥವಾ ಬಿಳಿ ಬಣ್ಣದ ಸಿಹಿ ತಿಂಡಿಗಳನ್ನು ಅರ್ಪಿಸಿ.
ಅರಳಿ ಮರದ ಕೆಳಗಡೆ ದೀಪವನ್ನು ಹಚ್ಚಿಡಿ
ಈ ದಿನ ಅರಳಿ ಮರದ ಸುತ್ತ ಪ್ರದಕ್ಷಣೆ ಹಾಕಿ 11 ಬಾರಿ ಸುತ್ತು ಹಾಕಿ, ಈ ದಿನ ತುಳಸಿಯನ್ನು ಆರಾಧಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications