Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಕಾರ್ತಿಕ ಮಾಸ ಯಾವಾಗ? ಈ ಮಾಸದಲ್ಲಿ ಬರುವ ಹಬ್ಬಗಳು, ವ್ರತಗಳು
ಕಾರ್ತಿಕ ಮಾಸ ಶಿವನಿಗೆ ಮೀಸಲಾದ ತಿಂಳು, ಇಡೀ ಮಾಸ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು.ತಿಂಗಳ ಪೂರ್ತಿ ಕಾರ್ತಿಕ ದೀಪಗಳನ್ನು ಹಚ್ಚಿ ದಾಮೋದರನಾ ಆರಾಧನೆ ಮಾಡಲಾಗುವುದು.
ಧಾರ್ಮಿಕ ದೃಷ್ಟಿಯಿಂದ ಕಾರ್ತಿಕ ಮಾಸದ ಮಹತ್ವ
ಹಿಂದೂ ಧರ್ಮದಲ್ಲಿ ದಕ್ಷಿಣಾಯನ ಮತ್ತು ಉತ್ತರಾಯಣ ಎಂದು ಕಾಲವನ್ನು ವಿಂಗಡಿಸಲಾಗಿದೆ. ಇದೀಗ ದಕ್ಷಿಣಾಯನ ಕಾಲ, ದಕ್ಷಿಣಾಯನ ಕಾಲ ಧಾರ್ಮಿಕ ಕಾರ್ಯಗಳಿಗೆ ತುಂಬಾನೇ ಮಹತ್ವದ್ದಾಗಿದೆ. ಸ್ಕಂದ ಪುರಾಣದ ಪ್ರಕಾರ ಧಾರ್ಮಿಕ ಕಾರ್ಯ ಮಾಡುವುದರಿಂದ ಆಧ್ಯಾತ್ಮಿಕ ಒಲವು ಹೆಚ್ಚಾಗುವುದು, ಆರ್ಥಿಕ ಜ್ಞಾನ ಹೆಚ್ಚಾಗಲಿದೆ, ಮನಸ್ಸಿಗೆ ನೆಮ್ಮದಿ ದೊರೆಯಲಿದೆ.

ಕಾರ್ತಿಕ ಮಾಸದಲ್ಲಿ ಕಾರ್ತಿಕ ಸೋಮವಾರ
ಶ್ರಾವಣ ಮಾಸದಲ್ಲಿ ಶ್ರಾವಣ ಸೋಮವಾರದಂತೆಯೇ ಕಾರ್ತಿಕ ಸೋಮವಾರವೂ ತುಂಬಾನೇ ಅತ್ಯಂತ ಮಹತ್ವದ್ದಾಗಿದೆ, ಕಾರ್ತಿಕ ಸೋಮವಾರ ಮಾಡಿದರೆ ಕಷ್ಟಗಳು ದೂರಾಗುವುದು ಎಂದು ಹೇಳಲಾಗುವುದು. ಕಾರ್ತಿಕ ಮಾಸದಲ್ಲಿ ಪ್ರತಿದಿನ ದೀಪವನ್ನು ಹಚ್ಚಿಡಲಾಗುವುದು. ಕಾರ್ತಿಕ ದೀಪಗಳನ್ನು ಸೂರ್ಯೋದಯಕ್ಕೆ ಮುನ್ನ ಹಾಗೂ ಸೂರ್ಯಾಸ್ತದ ನಂತರ ಹಚ್ಚಲಾಗುವುದು. ದೇವಾಲಯದಲ್ಲಿ ಸುತ್ತಲೂ ಹಣತೆಯನ್ನು ಹಚ್ಚಲಾಗುವುದು.
ಕರ್ನಾಟಕದಲ್ಲಿ ಕಾರ್ತಿಕ ಮಾಸ ಯಾವಾಗ?
ಕರ್ನಾಟಕದಲ್ಲಿ ಕಾರ್ತಿಕ ಮಾಸವನ್ನು ನವೆಂಬರ್ 2ರಿಂದ ಡಿಸೆಂಬರ್ 1ರವರೆಗೆ ಇರಲಿದೆ. ಬಲಿಪಾಡ್ಯಾಮಿಯನ್ನು ನೆವಂಬರ್ 14ರಂದು ಆಚರಿಸಲಾಗುವುದು.
ಕಾರ್ತಿಕ ಮಾಸದಲ್ಲಿ ಪ್ರದೋಷ ವ್ರತ
ಪ್ರದೋಷ ನವೆಂಬರ್ 13
ಪ್ರದೋಷ ನವೆಂಬರ್ 28
ಸಂಕಷ್ಟಿಹರ ಚತುರ್ಥಿ ವ್ರತ
ಕಾರ್ತಿಕ ಮಾಸದಲ್ಲಿ ಸಂಕಷ್ಟಿಹರ ಚತುರ್ಥಿಯನ್ನು ನವೆಂಬರ್ 18ಕ್ಕೆ ಆಚರಿಸಲಾಗುವುದು.
ಕಾರ್ತಿಕ ಮಾಸದಲ್ಲಿ ಏಕಾದಶಿ ಯಾವಾಗ?
ನವೆಂಬರ್ 12ಕ್ಕೆ ಪ್ರಬೋಧಿನಿ ಏಕಾದಶಿ ಆಚರಣೆ ಮಾಡಲಾಗುವುದು, ಇದನ್ನು ಕಾರ್ತಿಕ ಏಕಾದಶಿ ಎಂದು ಕೂಡ ಕರೆಯಲಾಗುವುದು. ಇದೇ ದಿನ ತುಳಸಿ ವಿವಾಹ ಕೂಡ ಇದೆ. ಸಂತಾನವಿಲ್ಲದ ದಂಪತಿ ಸಂತಾನ ಭಾಗ್ಯಕ್ಕಾಗಿ ಈ ದಿನ ವಿಶೇಷ ಪೂಜೆ ಸಲ್ಲಿಸಲಾಗುವುದು.
ನವೆಂಬರ್ 26ಕ್ಕೆ ಉತ್ಪತ್ತಿ ಏಕಾದಶಿ ಆಚರಿಸಲಾಗುವುದು
ಕಾರ್ತಿಕ ಮಾಸದಲ್ಲಿ ಕಾರ್ತಿಕ ಪೂರ್ಣಿಮಾ ಕೂಡ ತುಂಬಾ ಮಹತ್ವವಾದ ದಿನವಾಗಿದೆ
ನವೆಂಬರ್ 15ಕ್ಕೆ ಕಾರ್ತಿಕ ಪೂರ್ಣಿಮಾ
ಕಾರ್ತಿಕ ಪೂರ್ಣಿಮಾ ತಿಥಿ ಬೆಳಗ್ಗೆ 06:19ಕ್ಕೆ ಪ್ರಾರಂಭವಾಗಿ ನವೆಂಬರ್ 14 ರಾತ್ರಿ 02:58ರವರೆಗೆ ಇರಲಿದೆ
ಪೂರ್ಣಿಮಾ ವ್ರತವನ್ನು ನವೆಂಬರ್ 15ರಂದು ಆಚರಿಸಲಾಗುವುದು
ಈ ದಿನ ಕಾರ್ತಿನ ಸ್ನಾನ ಮುಕ್ತಾಯವಾಗುವುದು
ತುಳಸಿ ಪೂಜೆ ಕೂಡ ಕೊನೆಯಾಗಲಿದೆ.
ಕಾರ್ತಿಕ ಅಮವಾಸ್ಯೆ ಯಾವಾಗ?
ಕಾರ್ತಿಕ ಅಮವಾಸ್ಯೆಯನ್ನು ಡಿಸೆಂಬರ್ 1ರಂದು ಆಚರಿಸಲಾಗುವುದು.
ಅಮವಾಸ್ಯೆ ನವೆಂಬರ್ 30 ಬೆಳಗ್ಗೆ 10:30ರಿಂದ ಡಿಸೆಂಬರ್ 1 ಬೆಳಗ್ಗೆ 11:51ಕ್ಕೆ ಮುಕ್ತಾಯವಾಗಲಿದೆ.
ಕಾರ್ತಿಕ ಮಾಸದಲ್ಲಿ ಈ ಪ್ರಮುಖ ಹಬ್ಬಗಳಿವೆ
ಬಲಿ ಪ್ರತಿಪಾದ ನವೆಂಬರ್ 2
ಯಮ ದ್ವಿತೀಯಾ ನವೆಂಬರ್ 3
ವೈಕುಂಠ ಚತುರ್ದಶಿ ನವೆಂಬರ್ 14
ಕಾಲ ಭೈರವ ಜಯಂತಿ ನವೆಂಬರ್ 23
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications