Latest Updates
-
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ?
ಸಮಧಾನ ಮೂಡಿಸಿದ ಕಾರ್ಣಿಕ ಭವಿಷ್ಯ: ನವರಾತ್ರಿ ಸಮಯದಲ್ಲಿ ನುಡಿಯುವ ಭವಿಷ್ಯದ ಮಹತ್ವವೇನು?
ಈ ಬಾರಿಯ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ನುಡಿದ ಭವಿಷ್ಯ ಜನರಲ್ಲಿ ಹರ್ಷ ತಂದಿದೆ. ಈ ಬಾರಿ ಗೊರವಯ್ಯ 'ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್' ಎಂದು ನುಡಿದಿರುವುದರಿಂದ ನಾಡಿಗೆ ಶುಭ ಸೂಚನೆ ಎಂದು ಹೇಳಲಾಗುತ್ತಿದೆ.
ಈ ಭವಿಷ್ಯವಾಣಿಯು ರಾಜ್ಯದಲ್ಲಿ ಒಳ್ಳೆಯ ಮಳೆ-ಬೆಳೆ ಇರಲಿದೆ, ರೈತರು ಖುಷಿಯಾಗುತ್ತಾರೆ, ರಾಜಕೀಯವಾಗಿ ಒಳ್ಳೆಯ ಬೆಳವಣಗೆಯಾಗುತ್ತದೆ, ರಾಜ್ಯದ ಕೀರ್ತಿ ಹೆಚ್ಚಾಗಲಿದೆ, ಈಗಿರುವ ನಾಯಕತ್ವ ಜನ ಒಪ್ಪಿಕೊಳ್ಳುತ್ತಾರೆ, ಆಕಾಶದತ್ತ ಬೆಳೆದ ಮರ ಹೇಳಿದಂತೆ ಬೇರುಗಳು ಕೇಳುತ್ತವೆ, ಅಂದರೆ ನಾಯಕರು ಹೇಳಿದನ್ನು ಇತರರು ಅನುಸರಿಸುತ್ತಾರೆ ಎಂದು ದೇವರಗುಡ್ಡ ಮಾಲತೇಶಸ್ವಾಮಿ ದೇವಾಸ್ಥಾನದ ಪ್ರಧಾನ ಅರ್ಚಕರಾದ ಸಂತೋಷ್ ಭಟ್ ಅವರು ಈ ಕಾರ್ಣಿಕವನ್ನು ವಿವರಿಸಿದ ರೀತಿಯಿಂದ ತಿಳಿದು ಬಂದು ಅಂಶವಾಗಿದೆ.

ನವರಾತ್ರಿ ಸಮಯದಲ್ಲಿ ನುಡಿಯುವ ಕಾರ್ಣಿಕ ಭವಿಷ್ಯಕ್ಕೆ ತುಂಬಾನೇ ಮಹತ್ವವಿದೆ
ಈ ಕಾರ್ಣಿಕ ಭವಿಷ್ಯದಲ್ಲಿ ಏನು ನುಡಿಯುವುದೋ ಅದರಂತೆ ನಡೆಯುವುದರಿಂದ ಈ ಕಾರ್ಣಿಕ ಭವಿಷ್ಯ ಏನಿದೆ ಎಂದು ತಿಳಿಯಲು ಜನರು ಭಕ್ತಿ ಮತ್ತು ಕಾತುರದಿಂದ ಕಾಯುತ್ತಾರೆ. ಈ ಕಾರ್ಣಿಕ ನುಡಿಯುವ ಗೊರವಯ್ಯು 9 ಇನ ಉಪವಾಸವಿದ್ದು, ನವರಾತ್ರಿಯಂದು 18 ಅಡಯ ಬಿಲ್ಲನ್ನೇರಿ ಭವಿಷ್ಯ ನುಡಿಯುತ್ತಾರೆ. ಈ ಭವಿಷ್ಯ ನುಡಿಯುವಾಗ ಸಾವಿರಾರು ಭಕ್ತರು ನೆರೆದಿರುತ್ತಾರೆ, ಕಾರ್ಣಿಕ ಭವಿಷ್ಯ ನುಡಿದ ತಕ್ಷಣವೇ ದೊಪ್ಪನೆ ಕೆಳಗಿಳಿದು ಬಿಡುತ್ತಾರೆ. ಸಾವಿರರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು ಗೊರವಯ್ಯ ಭವಿಷ್ಯ ನುಡಿಯುವ ಸಮಯದಲ್ಲಿ ಯಾರೂ ಮಾತನಾಡುವುದಿಲ್ಲ, ಸದ್ದು ಮಾಡುವುದಿಲ್ಲ, ಎಲ್ಲರು ಮೌನಾಗಿ ನಿಂತು ಗೊರವಯ್ಯ ಏನು ಹೇಳುತ್ತಾರೆ ಎಂಬುವುದ್ನು ಕಿವಿಗೊಟ್ಟು ಕೇಳುತ್ತಾರೆ.
ದೇವರಗುಡ್ಡ ಮಾಲತೇಶ ಸ್ವಾಮಿ ದೇವಾಲಯ ಎಲ್ಲಿದೆ
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನಲ್ಲಿ ಈ ದೇವಾಲಯವಿದೆ. ಇಲ್ಲಿ ದಸರ ಹಬ್ಬದ ಪ್ರಯುಕ್ತ ದೇವಸ್ಥಾನದಲ್ಲಿ ಹಬ್ಬ ನಡೆಯಲಿದ್ದು ಪ್ರತಿವರ್ಷವೂ ಗೊರವಯ್ಯ ಕಾರ್ಣಿಕ ನುಡಿಯತ್ತಾರೆ.
ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕ ಕೂಡ ಇದೇ ರೀತಿ ಹೇಳಿತ್ತು'
ಈ ವರ್ಷ ಫೆಬ್ರವರಿಯಲ್ಲಿ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ನುಡಿದ ಕಾರ್ಣಿಕದಲ್ಲಿ 'ಸಂಪಾಯಿತಲೇ ಪರಾಕ್ ' ಎಂದು ಹೇಳಲಾಗಿತ್ತು. ಇದು ಕೂಡ ಮಳೆ-ಬೆಳೆ ಚೆನ್ನಾಗಿರಲಿದೆ, ಸಂಪತ್ತು, ಸಮೃದ್ಧಿ ಇರಲಿದೆ ಎಂಬುವುದನ್ನು ಸೂಚಿಸಿತ್ತು.
2023ರ ಕಾರ್ಣಿಕ ಭವಿಷ್ಯ
ಕಳೆದ ವರ್ಷ "ಮುಕ್ಕೋಟಿ ಚೆಲ್ಲೀತಲೇ ಕಲ್ಯಾಣ ಕಟ್ಟೀತಲೇ ಪರಾಕ್" ಎಂದು ನುಡಿದಿತ್ತು
ಈ ವರ್ಷ ಮಳೆಯ ಕೊರತೆ ಇರಲಿದೆ, ರೈತರಿಗೆ ತುಂಬಾನೇ ನಷ್ಟವಾಗಲಿದೆ ರೈತರು ಭೂಮಿಗೆ ಹಾಕಿದ ಹಣ ಮರಳಿ ಸಿಗುವುದು ಕಷ್ಟ, ಬರಗಾಲದ ಪರಿಸ್ಥಿತಿ ಇರಲಿದೆ ಎಂದು ನೋಡಿತ್ತು. ಅದರಂತೆ ರಾಜ್ದದಲ್ಲಿ ಮಳೆಯ ಅಭಾವ ಕೂಡ ಉಂಟಾಗಿತ್ತು ರೈತರಿಗೆ ಬೆಳೆದ ಬೆಳೆಗೆ ಫಸಲು ಸಿಗದೆ ಜನರು ಸಂಕಷ್ಟ ಅನುಭವಿಸಿದ್ದರು.
ಈ ಬಾರಿ ಮಳೆ-ಬೆಳೆ ಚೆನ್ನಾಗಿ ಬೆಳೆಯಲಿದೆ ಎಂಬ ಭವಿಷ್ಯ ಜನರಲ್ಲಿ, ರೈತರಲ್ಲಿ ಸಮಧಾನ ಮೂಡಿಸಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications