Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
ನವಗ್ರಹಗಳಲ್ಲಿ ಗುರು ಗ್ರಹವನ್ನು ಅದೃಷ್ಟದ ಗ್ರಹ ಎಂದು ಹೇಳಲಾಗುವುದು. ಈ ಗುರುವಿನ ಪ್ರಭಾವ ದೀರ್ಘವಾಗಿರುತ್ತದೆ. ಗುರು ಅನುಕೂಲಕರ ಸ್ಥಾನದಲ್ಲಿದ್ದರೆ ಅಷ್ಟೂ ಸಮಯ ನಮಗೆ ಒಳ್ಳೆಯ ಸಮಯವೆಂದೇ ಹೇಳಬಹುದು. ಗುರು ಮೇ 1ಕ್ಕೆ ರಾಶಿ ಬದಲಾವಣೆ ಮಾಡಲಿದೆ. ಗುರು ಈಗ ನಿಮ್ಮ ಲಗ್ನ ಮನೆಯಲ್ಲಿ ಇದೆ. ನಂತರ ವೃಷಭ ರಾಶಿಗೆ ಹೋಗಲಿದೆ.

ಈ ಗುರು ಸಂಚಾರ ನಿಮ್ಮ ರಾಶಿಯ ಮೇಲೆ ಪರಿಣಾಮ ಬೀರಲಿದೆ ಎಂದು ನೋಡೋಣ ಬನ್ನಿ:
ಗುರು ಮೇಷದಿಂದ ವೃಷಭ ರಾಶಿಗೆ ಸಂಚರಿದಾಗ ನಿಮ್ಮ ರಾಶಿಯಲ್ಲಿ ಎರಡನೇ ಮನೆಯಲ್ಲಿ ಇರಲಿದೆ. ಈ ಮನೆಯನ್ನು ಸಂಪತ್ತಿನ ಮನೆಯೆಂದು ಕರೆಯಲಾಗುವುದು. ಈ ಅವಧಿಯಲ್ಲಿ ನೀವು ಉತ್ತಮ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಈ ವರ್ಷ ಉಳಿತಾಯ ಮಾಡಲು ಸಾಧ್ಯವಾಗುವುದು. ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ. ನೀವು ಪೂರ್ವಜರ ವ್ಯಾಪಾರ ಮಾಡುತ್ತಿದ್ದರೆ ನೀವು ಉತ್ತಮ ಲಾಭ ಗಳಿಸಬಹುದು.
ಕುಟುಂಬ ಜೀವನ
ಎರಡನೇ ಮನೆಯಲ್ಲಿ ದೇವ ಗುರು ಇರುವುದರಿಂದ ಕುಟುಂಬ ಜೀವನ ಚೆನ್ನಾಗಿರಲಿದೆ. ಮಗು ಬೇಕೆಂದು ಬಯಸುತ್ತಿದ್ದಾರೆ ಈ ವರ್ಷ ಶುಭ ಶುಭ ಸುದ್ದಿ ಪಡೆಯುತ್ತೀರಿ. ನಿಮ್ಮ ಮಕ್ಕಳು ಶಿಕ್ಷಣದಲ್ಲಿ, ಕೆಲಸಕ್ಕೆ ಹೋಗುವ ಮಕ್ಕಳಿದ್ದರೆ ಅವರ ವೃತ್ತಿ ಬದುಕಿನಲ್ಲಿ ಬೆಳವಣಿಯನ್ನು ಕಾಣಬಹುದು.
ಸಾಲ ಮುಕ್ತರಾಗಬಹುದು
ಈ ಸಮಯದಲ್ಲಿ ಈ ಹಿಂದೆ ಮಾಡಿದಂಥ ಸಾಲ ತೀರಿಸಲು ಸಾಧ್ಯವಾಗುವುದು. ಕುಟುಂಬದಲ್ಲಿ ಯಾರೊಂದಿಗಾದರೂ ಭಿನ್ನಾಭಿಪ್ರಾಯವಿದ್ದರೆ ಎಲ್ಲವೂ ಸರಿಯಾಗಲಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿಯ ನಡುವೆ ಪ್ರೀತಿ ಹೆಚ್ಚಾಗಲಿದೆ. ಹತ್ತನೇ ಮನೆಯ ಮೇಲೆ ದೇವಗುರು ಗುರುವಿನ ಅಂಶದಿಂದಾಗಿ, ವೃತ್ತಿಜೀವನದಲ್ಲಿ ಉತ್ತಮ ಯಶಸ್ಸು ಸಿಗಲಿದೆ. ಮೇ 3 ಮತ್ತು ಜೂನ್ 3 ರ ನಡುವೆ, ದೇವ ಗುರು ಗುರುವು ದಹನ ಸ್ಥಿತಿಯಲ್ಲಿರುತ್ತದೆ, ಈ ಸಮಯದಲ್ಲಿ ಕೆಲ ಅಡೆತಡೆಗಳು ಬರಬಹುದು, ಆದರೆ ನಂತರ ಎಲ್ಲವೂ ಸರಿಯಾಗಲಿದೆ.
ಆದ್ದರಿಂದ ಚಿಕ್ಕ ಪುಟ್ಟ ಸಮಸ್ಯೆಗೆ ತಲೆಕೆಡಿಸಿಕೊಳ್ಳದೆ ಆತ್ಮವಿಶ್ವಾಸದಿಂದ ಮುಂದುವರೆಯಿರಿ, ಗುರು ಕೃಪೆಯಿಂದ ಇಟ್ಟ ಹೆಜ್ಜೆಯಲ್ಲಿ ಯಶಸ್ಸು ಪಡೆಯುತ್ತೀರಿ.
ಈ ಅವಧಿಯಲ್ಲಿ ಜಾಗೃತಿವಹಿಸಿ
ಅಕ್ಟೋಬರ್ 9 ರಿಂದ ವರ್ಷಾಂತ್ಯದವರೆಗೆ, ಗುರುವು ಹಿಮ್ಮುಖ ಸ್ಥಿತಿಯಲ್ಲಿದ್ದಾಗ, ಆ ಸಮಯದಲ್ಲಿ ನೀವು ಹಣವನ್ನು ಉಳಿಸುವಲ್ಲಿ ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ , ಆದರೆ ಈ ಸಮಸ್ಯೆ ತುಂಬಾ ಸಮಯ ಇರಲ್ಲ, ಬೇಗನೆ ಪರಿಸ್ಥಿತಿ ಸುಧಾರಿಸುವುದು. ದೇವಗುರು ನಿಮಗೆ ಒಳಿತು ಮಾಡಲಿದ್ದಾನೆ.
ವೈದಿಕ ಶಾಸ್ತ್ರದಲ್ಲಿ ಗುರು
ಗುರು ಗ್ರಹವು ಬೋಧನೆ, ಸಂಪಾದನೆ, ಪಾನವಾಡಿ, ಮಿಠಾಯಿ, ಸುಗಂಧ ದ್ರವ್ಯದ ಕೆಲಸ, ಚಲನಚಿತ್ರ ನಿರ್ಮಾಣ, ಹಳದಿ ಸರಕುಗಳ ವ್ಯಾಪಾರ, ಆಭರಣ ಮಾರಾಟಗಾರ ಇತ್ಯಾದಿಗಳಿಗೆ ಸಂಬಂಧಿಸಿದೆ.
ಉತ್ಪನ್ನಗಳು - ಲೇಖನ ಸಾಮಗ್ರಿಗಳಿಗೆ ಸಂಬಂಧಿಸಿದ ವಸ್ತುಗಳು, ಆಹಾರ ಉತ್ಪನ್ನಗಳು, ಬೆಣ್ಣೆ, ತುಪ್ಪ, ಸಿಹಿತಿಂಡಿಗಳು, ಕಿತ್ತಳೆ, ಬಾಳೆಹಣ್ಣು, ಅರಿಶಿನ, ಹಳದಿ ಹೂವುಗಳು, ಕಾಳುಗಳು ಇತ್ಯಾದಿಗಳನ್ನು ಗುರು ಗ್ರಹ ಪ್ರತಿನಿಧಿಸುತ್ತದೆ.
ಸ್ಥಳ - ಸ್ಟೇಷನರಿ ಅಂಗಡಿ, ನ್ಯಾಯಾಲಯ, ಧಾರ್ಮಿಕ ಪೂಜಾ ಸ್ಥಳ, ಶಾಲೆ, ಕಾಲೇಜು, ಅಸೆಂಬ್ಲಿ ಇತ್ಯಾದಿಗಳನ್ನು ಪ್ರತಿನಿಧಿಸುವುದು.
ಪ್ರಾಣಿಗಳು ಮತ್ತು ಪಕ್ಷಿಗಳು - ಜ್ಯೋತಿಷ್ಯದಲ್ಲಿ, ಗುರು ಗ್ರಹವು ಕುದುರೆ, ಕೋಣ, ಆನೆ, ಹದ್ದು, ನವಿಲು, ತಿಮಿಂಗಿಲ ಮೀನು, ಡಾಲ್ಫಿನ್ ಪ್ರಾಣಿಗಳನ್ನು ಪ್ರತಿನಿಧಿಸುತ್ತದೆ
ಗುರುವಿನ ಹೆಚ್ಚಿನ ಫಲಕ್ಕೆ ಪರಿಹಾರ
ರತ್ನ - ನೀಲಮಣಿ.
ರುದ್ರಾಕ್ಷ - ಐದು ಮುಖಿ ರುದ್ರಾಕ್ಷ.
ಯಂತ್ರ - ಗುರು ಯಂತ್ರ.
ಬಣ್ಣ - ಹಳದಿ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











