Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
12 ವರ್ಷಗಳ ನಂತರ ಮಿಥುನ ರಾಶಿಯಲ್ಲಿ ಗುರು ಉದಯ: 3 ರಾಶಿಯವರ ಜೀವನ ಬದಲಾಗೋ ಸಂಭವ
ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುವನ್ನು ಶುಭ ತರುವ ಗ್ರಹ ಎಂದು ಪರಿಗಣಿಸಲಾಗುತ್ತದೆ. ಹಾಗೆ ಗುರುವಿನಿಂದ ನಿಮಗೆ ಉತ್ತಮ ಸಂಪತ್ತು, ಧನ, ಆಸ್ತಿ, ಆರೋಗ್ಯದಲ್ಲಿ ಲಾಭವಾಗುತ್ತದೆ. ಇನ್ನು ಗುರು ಗ್ರಹವು ಒಂದೇ ರಾಶಿಯಲ್ಲಿ 12 ತಿಂಗಳ ಕಾಲ ಪ್ರಯಾಣಿಸಲಿದೆ. ಈಗ ಗುರು ಮಿಥುನ ರಾಶಿಯಲ್ಲಿ ಅಸ್ತಮಿಸುತ್ತಿದ್ದಾನೆ.
ಗುರು 12 ವರ್ಷಗಳ ನಂತರ ಮಿಥುನ ರಾಶಿಯಲ್ಲಿ ಉದಯಿಸಲಿದ್ದಾನೆ. ಈ ಜುಲೈ 09ರ ವರೆಗೂ ಮಿಥುನ ರಾಶಿಯಲ್ಲಿರಲಿದ್ದಾನೆ. ನಂತರ ಉದಯಿಸಲಿದ್ದಾನೆ. ಹೀಗಾಗಿ ಎಲ್ಲಾ 12 ರಾಶಿಗಳ ಮೇಲೆಯೂ ಆತನ ಪ್ರಭಾವ ನಾವು ನೋಡಬಹುದು. ಜೂನ್ 09ರಲ್ಲಿ ಮಿಥುನ ರಾಶಿ ಪ್ರವೇಶಿಸಲಿದ್ದಾನೆ. ಹಾಗೆ ಜುಲೈನಲ್ಲಿ ಅಸ್ತಮನಾಗಲಿದ್ದಾನೆ.

ಗುರುವಿನ ಪರಿಣಾಮವು 27 ದಿನಗಳ ಕಾಲ ಮಂದವಾಗಬಹುದು. ಆದ್ರೆ ಕೆಲವೊಂದು ರಾಶಿಗಳ ಮೇಲೆ ಆತನ ಪ್ರಭಾವ ಇದ್ದೇ ಇರಲಿದೆ. ಹಾಗಾದ್ರೆ ಮಿಥುನ ರಾಶಿಗೆ ಗುರುವಿನ ಪ್ರಯಾಣವು ಯಾವ ರೀತಿಯ ಪರಿಣಾಮಕ್ಕೆ ಕಾರಣವಾಗಲಿದೆ? ಯಾರಿಗೆ ಲಾಭದಾಯಕ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
ಗುರುವು ಮೇಷ ರಾಶಿಯ 3 ನೇ ಮನೆಯಲ್ಲಿ ಸ್ಥಾನ ಪಡೆಯಲಿದ್ದಾನೆ. ಇದರಿಂದಾಗಿ ಹಲವು ರೀತಿಯ ಲಾಭಗಳಿಗೆ ಕಾರಣವಾಗಲಿದೆ. ನಿಮ್ಮ ಆಸ್ತಿ ಸಂಬಂಧಿತ ಪ್ರಯೋಜನಗಳು ಹೆಚ್ಚಾಗಲಿದೆ. ಜಾಗದ ವಿಚಾರವಾಗಿ ನೀವು ಸಮಸ್ಯೆಗಳ ಎದುರಿಸುತ್ತಿದ್ದರೆ, ಇಲ್ಲವೆ ಬಾಡಿಗೆ ವಿಚಾರವಾಗಿ ಎದುರಾಗಿರುವ ಹಲವು ಸಮಸ್ಯೆಗಳು ಈಗ ನಿವಾರಣೆಯಾಗಬಹುದು. ನಿಮ್ಮ ಕೆಲಸ ಕಾರ್ಯಗಳಲ್ಲಿ ಧನಾತ್ಮಕ ಬದಲಾವಣೆಗಳ ನೋಡಲಿದ್ದೀರಿ. ನಿಮ್ಮ ಕೆಲಸದಲ್ಲಿ ಅದೃಷ್ಟದ ಸಹಕಾರ ನೀವು ಬಯಸುತ್ತಿದ್ದರೆ ಈ ಸಮಯದಲ್ಲಿ ನಿಮಗೆ ಲಾಭವಾಗಬಹುದು. ಗುರು ಹಿರಿಯರಿಂದ ನೀವು ಬಯಸಿದ್ದ ವಸ್ತು ಪಡೆಯಬಹುದು. ಕುಟುಂಬದಲ್ಲಿ ನಿಮ್ಮಿಂದಾಗಿ ಕಷ್ಟಗಳು ನಿವಾರಣೆಯಾಗಬಹುದು.
ಮಕರ ರಾಶಿ
ಗುರುವು ಮಕರ ರಾಶಿಯ 6ನೇ ಮನೆಯಲ್ಲಿ ಚಲಿಸಲಿದ್ದಾನೆ. ಹೀಗಾಗಿ ಮಕರ ರಾಶಿಯವರಲ್ಲಿ ಆರ್ಥಿಕ ಸಮಸ್ಯೆಗಳು ಕೊಂಚ ಮಟ್ಟಿಗೆ ವಿರಾಮ ಪಡೆಯಲಿವೆ. ಹೊಸ ಆದಾಯ ಮೂಲಗಳು ನಿಮ್ಮನ್ನು ಹುಡುಕಿ ಬರಲಿವೆ. ನೀವು ಬುದ್ದಿವಂತಿಕೆಯಿಂದ ಖರ್ಚು ಮಾಡಲು ಮುಂದಾದರೆ ಮುಂದಿನ ತಿಂಗಳಲ್ಲಿ ಹಣಕಾಸು ಸಮಸ್ಯೆ ತಪ್ಪಿಸಬಹುದು. ಸರ್ಕಾರಿ ಉದ್ಯೋಗದಲ್ಲಿರುವವರು ವರ್ಗಾವಣೆ ಸಂಬಂಧವಾಗಿ ಶುಭ ಸುದ್ದಿ ಪಡೆಯಬಹುದು. ನೀವು ಯಾರಿಗಾದರು ಹಣಕಾಸಿನ ನೆರವು ನೀಡಿದ್ದರೆ ಈ 20 ದಿನಗಳ ಒಳಗೆ ಇದನ್ನು ಮರಳಿ ಪಡೆಯಬಹುದು. ನಿಮ್ಮ ಕೆಲಸದಲ್ಲಿ ಎದುರಾಗಿದ್ದ ಸಮಸ್ಯೆ ದೂರಾಗಲಿದೆ, ಬಹುಕಾಲದ ಅನಾರೋಗ್ಯ ಸುಧಾರಿಸಲಿದೆ. ಪ್ರಯಾಣಗಳು ನಿಮಗೆ ಲಾಭದಾಯಕವಾಗಿ ಪರಿಣಮಿಸಲಿವೆ.
ಕುಂಭ ರಾಶಿ
ಗುರುವು ಕುಂಭ ರಾಶಿಯ 5ನೇ ಮನೆಯಲ್ಲಿ ಕಾಣಸಿಗುತ್ತಾನೆ. ಇದು ಕುಂಭ ರಾಶಿಯವರಲ್ಲಿ ಮಿಶ್ರ ಫಲಕ್ಕೆ ಕಾರಣವಾಗಲಿದೆ. ವಿದ್ಯಾರ್ಥಿಗಳಿಗೆ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಹಲವು ಅವಕಾಶಗಳು ಒದಗಿ ಬರಲಿದೆ. ನೀವು ಹೂಡಿಕೆ, ಉಳಿತಾಯದಲ್ಲಿ ಆಸಕ್ತಿ ಹೊಂದಿದವರಾಗಿದ್ದರೆ ಈ ಸಮಯದಲ್ಲಿ ಅಂತಹ ಮೂಲದಿಂದ ಧನಾತ್ಮಕ ಬದಲಾವಣೆ ನೋಡಲಿದ್ದೀರಿ. ಅನಗತ್ಯ ಖರ್ಚುಗಳಿಂದ ದೂರ ಇರುವುದರಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಮನೆಯ ಸದಸ್ಯರೊಬ್ಬರ ಅನಾರೋಗ್ಯ ನಿವಾರಣೆ ಸಂಭವವಿದೆ. ವ್ಯಾಪಾರಿಗಳಲ್ಲಿನ ಗೊಂದಲ ಹಾಗೂ ಅಡ್ಡಿ ಆತಂಕ ದೂರಾಗಲಿದೆ. ಸಂಗಾತಿ ಜೊತೆಗಿನ ಮನಸ್ತಾಪವೊಂದು ನಿಮ್ಮ ಮಾತುಕತೆಯಿಂದ ದೂರಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications










