Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
Jupiter Combust In Gemini: ಮಿಥುನ ರಾಶಿಗೆ ಗುರು ಸಂಚಾರ: 3 ರಾಶಿಯವರ ಹಣಕಾಸು ಸಮಸ್ಯೆಗೆ ಪರಿಹಾರ!
ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಗಳನ್ನು ಕೂಡ ಮುಖ್ಯ ಎಂದು ಪರಿಗಣಿಸಲಾಗುತ್ತದೆ. ಹಾಗೆ ಎಲ್ಲಾ ಗ್ರಹಗಳು ಒಂದೊಂದು ರಾಶಿಯಲ್ಲಿ ಚಲಿಸುವುದು ಎಲ್ಲಾ 12 ರಾಶಿಗಳ ಮೇಲೂ ಪರಿಣಾಮ ಬೀರುವುದು ನೋಡಬಹುದು. ಅದರಲ್ಲೂ ಗುರು ಗ್ರಹದ ಸಂಚಾರಕ್ಕೆ ಬಹಳ ಮಹತ್ಬ ನೀಡಲಾಗುತ್ತದೆ. ಗುರುವಿನ ಸಂಚಾರದಿಂದ ಹಲವು ರಾಶಿ ಜನರ ಜೀವನದಲ್ಲಿ ಬದಲಾವಣೆ ಸಂಭವಿಸುವುದು ಖಚಿತ.
ಗುರು ನಿಧಾನವಾಗಿ ಚಲಿಸುವ ಗ್ರಹ ಎಂದು ಪರಿಗಣಿಸಲಾಗಿದೆ. ಈಗ ಗುರು 12 ವರ್ಷಗಳ ಬಳಿಕ ಮಿಥುನ ರಾಶಿಗೆ ಚಲಿಸುತ್ತಿರುವುದು ನೋಡಬಹುದು. ಇದೇ ಜೂನ್ 11ರಂದು ಗುರು ಮಿಥುನ ರಾಶಿಗೆ ಚಲಿಸಲಿದೆ. ಗುರು ಈ ರಾಶಿಯಲ್ಲಿ ಅಸ್ತಮಿಸುತ್ತಿದ್ದಂತೆ ಎಲ್ಲಾ 12 ರಾಶಿಗಳಲ್ಲೂ ಬದಲಾವಣೆಗಳ ನಾವು ನೋಡಬಹುದು.

ಇನ್ನು ಗುರು ಗ್ರಹದ ಈ ಚಲನೆಯು ಹಲವು ರಾಶಿಗಳಲ್ಲಿ ಬದಲಾವಣೆ ಕಾರಣವಾಗುತ್ತಿದೆ. ಗುರುವನ್ನು ಅದೃಷ್ಟ ತರುವ ಗ್ರಹ ಎಂದು ಪರಿಗಣಿಸಲಾಗಿದ್ದು, ಈ ನಡುವೆ ಗುರುವಿನಿಂದ ಯಾವ ರಾಶಿಯವರಿಗೆ ಲಾಭದಾಯಕವಾಗಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಸಿಂಹ ರಾಶಿ
ಗುರು ಗ್ರಹವು ಸಿಂಹ ರಾಶಿಯ 11ನೇ ಮನೆಯಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ನಿಮ್ಮ ಆರ್ಥಿಕ ಸಮಸ್ಯೆಗಳು ಒಂದೊಂದಾಗಿ ನಿವಾರಣೆಯಾಗುವ ಸಮಯ ಎನ್ನಬಹುದು. ಬಹಳ ಕಾಲದಿಂದ ನೀವು ಯಾವುದಾದರು ಒತ್ತಡದ ಹಣಕಾಸು ವ್ಯವಹಾರಗಳ ಮಾಡುತ್ತಿದ್ದರೆ ಅದರಲ್ಲಿ ಉತ್ತಮ ಆಶಾದಾಯಕ ಬೆಳವಣಿಗೆ ನೋಡಲಿದ್ದೀರಿ. ಇದು ನಿಮ್ಮ ಆದಾಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ದೀರ್ಘಕಾಲದಿಂದ ಸಿಲುಕಿರುವ ಹಣಕಾಸು ವ್ಯವಹಾರವು ನಿಮ್ಮ ಕೈಸೇರಲಿದೆ. ವೃತ್ತಿ ಜೀವನದಲ್ಲಿ ಎದುರಿಸುತ್ತಿದ್ದ ಬಹುದೊಡ್ಡ ಸಮಸ್ಯೆಯೊಂದು ನಿವಾರಣೆಯಾಗಲಿದೆ, ಇದರಿಂದ ನಿಮ್ಮ ವೃತ್ತಿ ಸಂಬಂಧಿ ಒತ್ತಡ ಕಡಿಮೆಯಾಗಲಿದೆ. ನೀವು ವಾಹನ ಸಂಬಂಧಿ ಕೆಲಸಗಳಲ್ಲಿ ಯಶಸ್ಸು ಪಡೆಯಬಹುದು. ಪ್ರಯಾಣಗಳು ಸುಖಕರವಾಗಿ ಉತ್ತಮ ಫಲಿತಾಂಶಕ್ಕೆ ಕಾರಣವಾಗಲಿವೆ.
ಕನ್ಯಾ ರಾಶಿ
ಗುರು ಮಿಥುನ ರಾಶಿಗೆ ಚಲಿಸುವುದು ನಿಮ್ಮ ಪಾಲಿಗೆ ಅದ್ಭುತ ದಿನಗಳ ತರಲಿದೆ. ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಉತ್ತಮ ಅವಕಾಶಗಳ ನೀಡಲಿದೆ. ಅದನ್ನು ಬುದ್ದಿವಂತಿಕೆಯಿಂದ ಬಳಸಿಕೊಳ್ಳಬೇಕಿದೆ. ವ್ಯಾಪಾರಿಗಳಿಗೆ ಹಿಂದೆಂದಿಗಿಂತಲೂ ಉತ್ತಮ ಲಾಭದಾಯಕ ದಿನಗಳ ನೋಡಬಹುದು. ಒಟ್ಟಾರೆ ಆರ್ಥಿಕ ಪ್ರಗತಿ ನೋಡಬಹುದು. ನಿಮ್ಮ ಗುರಿಯನ್ನು ತಲುಪಲು ನೀವು ಹೊಸ ದಾರಿಯನ್ನು ಹುಡುಕುತ್ತೀರಿ, ಇದು ಸುಲಭ ಹಾಗೂ ನಿಮಗೆ ಯಶಸ್ಸು ತರುವಂತಹ ಹಾಗೆ ಜೀವನದಲ್ಲಿ ತಿರುವು ಮೂಡಿಸಲಿದೆ. ಬಹುಕಾಲದ ಅನಾರೋಗ್ಯ ಸಮಸ್ಯೆಯಿಂದ ಕೂಡ ನೀವು ಮುಕ್ತಿ ಪಡೆಯುವ ಸಾಧ್ಯತೆ ಇದೆ.
ಮಿಥುನ ರಾಶಿ
ಗುರು ಮಿಥುನ ರಾಶಿಯ ಮೊದಲ ಮನೆಯಲ್ಲಿರುತ್ತಾನೆ. ಇದರಿಂದಾಗಿ ಅವಿವಾಹಿತರಲ್ಲಿ ವಿವಾಹ ಯೋಗದಂತಹ ಲಾಭವಿದೆ. ವಿದ್ಯಾರ್ಥಿಗಳಿಗೆ ಕೂಡ ಇದು ಉತ್ತಮ ಸಮಯ ತರಲಿದೆ. ಆಧ್ಯಾತ್ಮಿಕ ಜೀವನದಲ್ಲಿ ಬಹಳ ಸುಖ ಇರಲಿದೆ. ಈ ಸಮಯದಲ್ಲಿ ನೀವು ಪ್ರವಾಸಗಳು, ಓಡಾಟಗಳಲ್ಲಿ ಭಾಗಿಯಾಗುತ್ತೀರಿ. ದಾಂಪತ್ಯ ಸುಖ ಉತ್ತುಂಗದಲ್ಲಿರಲಿದೆ. ಮಾನಸಿಕ ನೆಮ್ಮದಿಗೆ ಕಾರಣವಾಗುವ ಹಲವು ಕೆಲಸಗಳ ನೀವು ಮಾಡುತ್ತೀರಿ. ಆಪ್ತರೊಬ್ಬರಿಂದ ಬರಬೇಕಿದ್ದ ಹಣ ನಿಮ್ಮ ಕೈ ಸೇರುವ ಸಾಧ್ಯತೆ ಹೆಚ್ಚಾಗಿದೆ. ಉದ್ಯೋಗ ಅರಸುತ್ತಿರುವ ಮಂದಿಗೆ ಉತ್ತಮ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಿದೆ. ವ್ಯಾಪಾರಿಗಳಲ್ಲಿ ಉತ್ತಮ ಲಾಭ ನೋಡಬಹುದು. ಆಸ್ತಿ ಖರೀದಿಯ ಕುರಿತ ನಿಮ್ಮ ಆಲೋಚನೆಗಳು ಮತ್ತೆ ಚಿಗುರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications












