Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಸಾಧ್ಯವಿಲ್ಲ ಎಂದಾದರೆ ಈ ವಸ್ತುಗಳನ್ನು ತನ್ನಿ, ಸಂಪತ್ತು ವೃದ್ಧಿಸುವುದು
ಸನಾತನ ಧರ್ಮದಲ್ಲಿ ಅಕ್ಷಯ ತೃತೀಯ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ದಿನ ವರ್ಷದಲ್ಲಿಯೇ ಅತ್ಯಂತ ಶುಭ ದಿನವೆಂದು ಹೇಳಲಾಗುವುದು. ಈ ದಿನ ಲಕ್ಷ್ಮಿ ಪೂಜೆ ಮಾಡಿ ನಂತರ ಚಿನ್ನ, ಬೆಳ್ಳಿ ಖರೀದಿಸುತ್ತಾರೆ.
ಇನ್ನು ಕೆಲವರು ಹೊಸ ಮನೆಗೆ ಹೋಗುತ್ತಾರೆ, ವಾಹನಗಳನ್ನು ಖರೀದಿಸುತ್ತಾರೆ. ಈ ರೀತಿಯ ಐಷಾರಾಮಿ ವಸ್ತುಗಳನ್ನು ಖರೀದಿಸುವುದರಿಂದ ನಮ್ಮ ಸೌಕರ್ಯ ಹೆಚ್ಚಾಗುತ್ತದೆ, ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆ.

ಆದರೆ ಅಕ್ಷಯ ತೃತೀಯದಂದು ಚಿನ್ನ ತೆಗೆದುಕೊಳ್ಳಲು ಎಲ್ಲರಿಗೆ ಸಾಧ್ಯವಾಗಲ್ಲ ಏಕೆಂದರೆ ಅಷ್ಟೊಂದು ದುಬಾರಿಯಾಗಿದೆ, ಆದರೆ ಚಿನ್ನದಷ್ಟೇ ಶುಭಫಲ ನೀಡುವ ವಸ್ತುವನ್ನು ನೀವು ಖರೀದಿಸಬಹುದು, ಅದಕ್ಕೆ 200--300 ರುಪಾಯಿ ಸಾಕು, ಅದನ್ನು ಮನೆಗೆ ತಂದರೆ ಸಂಪತ್ತು ವೃದ್ಧಿಸುವುದು ಎಂಬ ನಂಬಿಕೆ. ಆ ವಸ್ತು ಯಾವುದೆಂದು ನೋಡುವುದಾದರೆ
ಮಣ್ಣಿನ ಮಡಿಕೆ
ಹೌದು ನೀವು ಚಿನ್ನ ಖರೀದಿಸಲು ಸಾಧ್ಯವಾಗದಿದ್ದರೆ ಮಣ್ಣಿನ ಮಡಿಕೆ ತಂದರೆ ಸಾಕು. ಮಣ್ಣಿನ ಮಡಿಕೆ ತಂದು ಅದರಲ್ಲಿ ಭತ್ತ ಮತ್ತು ಅರಿಶಿಣದ ಕೊಂಬು ಹಾಕಿ ಕಟ್ಟಿಡಬೇಕು, ಹೀಗೆ ಮಾಡುವುದರಿಂದ ಸಂಪತ್ತು ವೃದ್ಧಿಸುತ್ತದೆ, ಮನೆಯಲ್ಲಿ ಆಹಾರಕ್ಕೆ ಯಾವುದೇ ಕೊರತೆಯಾಗುವುದಿಲ್ಲ. ಇದನ್ನು ಮುಂದಿನ ವರ್ಷ ಅಕ್ಷಯ ತೃತೀಯದವರೆಗೆ ಇಡಬೇಕು.
ಇನ್ನೇನು ತರಬಹುದು?
ನೀವು ಈ ದಿನ ಕಲ್ಲು ಉಪ್ಪನ್ನು ತನ್ನಿ. ಈ ದಿನ ನೀವು ಕಲ್ಲು ಉಪ್ಪನ್ನು ಖರೀದಿಸಿದರೆ, ನಿಮ್ಮ ಸಂಪತ್ತು ಹೆಚ್ಚಾಗುತ್ತದೆ. ಆದರೆ, ಈ ದಿನ ಕಲ್ಲು ಉಪ್ಪನ್ನು ಸೇವಿಸುವುದರಿಂದ ಒಳ್ಳೆಯದು ಎಂದು ಹೇಳಲಾಗುವುದು. ಈ ದಿನ ಹೂಜಿ, ದೀಪ ಇತ್ಯಾದಿ ಮಣ್ಣಿನ ಪಾತ್ರೆಗಳನ್ನು ಖರೀದಿಸಿ ಮನೆಗೆ ತರಬಹುದು. ಈ ದಿನ ನೀವು ತಾಮ್ರ ಅಥವಾ ಹಿತ್ತಾಳೆಯ ಪಾತ್ರೆಗಳನ್ನು ಖರೀದಿಸಬಹುದು. ಇನ್ನು ಗೋವುಗಳನ್ನು ಮನೆಗೆ ತಂದು ಪೂಜಿಸಿ.
ಅಕ್ಷಯ ತೃತೀಯ ಮಹತ್ವ
ಅಕ್ಷಯ ತೃತೀಯವನ್ನು ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗಿದೆ, ಈ ದಿನದಂದು ಭಗವಾನ್ ವಿಷ್ಣುವಿನ ಪರಶುರಾಮ ಜನಿಸಿದರು, ಈ ದಿನದಂದು ಪರಶುರಾಮ ಜಯಂತಿ ಆಚರಿಸಲಾಗುವುದು. ಪೌರಾಣಿಕ ಕತೆ ಪ್ರಕಾರ ಈ ದಿನ, ಶ್ರೀಕೃಷ್ಣನು ಯುಧಿಷ್ಠಿರನಿಗೆ ಅಕ್ಷಯಪಾತ್ರವನ್ನು ನೀಡಿದನು ಎಂದು ಹೇಳಲಾಗುವುದು. ಯುಧಿಷ್ಠಿರನು ಈ ಅಕ್ಷಯ ಪಾತ್ರದಿಂದ ನಿರ್ಗತಿಕರಿಗೆ ಆಹಾರವನ್ನು ನೀಡುತ್ತಿದ್ದನು, ಆ ಪಾತ್ರೆ ಯಾವತ್ತೂ ಖಾಲಿಯಾಗಿಲ್ಲ.
ದಾನದ ಮಹತ್ವ
ಅಕ್ಷಯ ತೃತೀಯ ದಿನದಂದು ದಾನ ಮಾಡುವುದು ಮತ್ತು ಶಾಪಿಂಗ್ ಮಾಡುವುದು ಕೂಡ ತುಂಬಾನೇ ಮುಖ್ಯ. ಇದಲ್ಲದೇ ಅಕ್ಷಯ ತೃತೀಯ ದಿನದಿಂದ ತ್ರೇತಾಯುಗ ಪ್ರಾರಂಭವಾಯಿತು, ಈ ಶುಭ ದಿನದಂದು ಗಂಗೆಯೂ ಭೂಮಿಗೆ ಇಳಿದಳು. ಹೀಗಾಗಿ ವರ್ಷದಲ್ಲಿ ಈ ದಿನ ಅತ್ಯಂತ ಶುಭವಾಗಿದೆ.
ಅಕ್ಷಯ ತೃತೀಯದಂದು ವಸ್ತುಗಳನ್ನು ಖರೀದಿಸಲು ಶುಭ ಸಮಯ
ಶುಭ ಸಮಯ ಮುಂಜಾನೆ 4:17 ರಿಂದ ಆರಂಭವಾಗುತ್ತದೆ ಮತ್ತು ಇದು ಮೇ 11 ರಂದು ರಾತ್ರಿ 2:50 ರವರೆಗೆ ಇರಲಿದೆ. ಈ ಸಮಯದಲ್ಲಿ ಮನೆಗೆ ಶುಭ ತರುವ ವಸ್ತುಗಳನ್ನು ತರಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications