Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ದಾಸವಾಳದ ಚಟ್ನಿ ಮಾಡಿದ್ದೀರಾ, ಒಮ್ಮೆ ಟ್ರೈ ಮಾಡಿ ನೋಡಿ, ರುಚಿ ಸೂಪರ್ ಅನ್ನುವಿರಿ
ದಾಸವಾಳ ಹೂವಿನ ಚಟ್ನಿ ಮಾಡಿದ್ದೀರಾ? ಇದು ಸೂಪರ್ ಆಗಿರುತ್ತದೆ, ಒಮ್ಮೆ ಟ್ರೈ ಮಾಡಿ ನೋಡಿ, ಅಲ್ಲದೆ ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು, ಬನ್ನಿ ದಾಸವಾಳ ಹೂವಿನ ಚಟ್ನಿ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಕೆಂಪು ದಾಸವಳ ಹೂವು , ಬಿಳಿ ಇದ್ದರೆ ಅದನ್ನು ಕೂಡ ಸೇರಿಸಬಹುದು
2-3 ಒಣ ಮೆಣಸು
3-4 ಎಸಳು ಬೆಳ್ಳುಳ್ಳಿ
ಚಿಕ್ಕ ತುಂಡು ಶುಂಠಿ
8-10 ಎಲೆ ಕರಿಬೇವು
1 ಕಪ್ ತೆಂಗಿನತುರಿ
ಸ್ವಲ್ಪ ನಿಂಬೆರಸ
ರುಚಿಗೆ ತಕ್ಕ ಉಪ್ಪು
ಒಗ್ಗರಣೆಗೆ
1 ಚಮಚ ಎಣ್ಣೆ (ಸಾರಿಗೆ ಬಳಸುವ ತೆಂಗಿನೆಣ್ಣೆಯಾದರೆ ಇನ್ನೂ ಒಳ್ಳೆಯದು)
ಸ್ವಲ್ಪ ಕರಿಬೇವು
ಸ್ವಲ್ಪ ಸಾಸಿವೆ
ಒಣಮೆಣಸು ಕೂಡ ಮುರಿದು ಹಾಕಬಹುದು
ಮಾಡುವ ವಿಧಾನ
- ನೀವು ದಾಸವಾಳ ಹೂವು 5-6 ಬಳಸಬಹುದು, ಇದನ್ನು ನೀರಿನಲ್ಲಿ ತೊಳೆದು ಅದರ ಎಸಳು ಬಿಡಿಸಿ
- ಈಗ ಮಿಕ್ಸಿ ಜಾರ್‌ಗೆ ದಾಸವಾಳ ಹೂವು, ಅದಕ್ಕೆ ಶುಂಠಿ, ಬೆಳ್ಳುಳ್ಳಿ, ಸ್ವಲ್ಪ ಕರಿಬೇವು, ತೆಂಗಿನತುರಿ, ನಿಂಬೆರಸ, ರುಚಿಗೆ ತಕ್ಕ ಉಪ್ಪು, ಒಣ ಮೆಣಸು ಸೇರಿಸಿ, ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
- ಈಗ ನೀವು ರೆಡಿಯಾದ ಚಟ್ನಿಗೆ ಒಗ್ಗರಣೆ ಹಾಕಿ, ರುಚಿಯಾದ ಚಟ್ನಿಯನ್ನು ನೀವು ದೋಸೆ ಅಥವಾ ಇಡ್ಲಿ ಜೊತೆ ಸವಿದು ನೋಡಿ ಸೂಪರ್ ಆಗಿರುತ್ತದೆ.
ದಾಸವಾಳದ ಪ್ರಯೋಜನ
ಇದರಲ್ಲಿ antioxidants ಇರುವುದರಿಂದ ಶರೀರಕ್ಕೆ ತುಂಬಾನೇ ಒಳ್ಳೆಯದು, ಅಲ್ಲದೆ ವಿಟಮಿನ್ ಸಿ ಕೂಡ ಇರುವುದರಿಂದ ರೋಗ ನಿರೋಧಕಶಕ್ತಿ ವೃದ್ಧಿಸುವುದು. ಇದು ದೇಹದಲ್ಲಿರುವ ಕಶ್ಮಲವನ್ನು ಹೊರ ಹಾಕಲು ತುಂಬಾನೇ ಸಹಕಾರಿ, ಅಲ್ಲದೆ ಇದು ಅನೇಕ ಕಾಯಿಲೆಗಳನ್ನು ತಡೆಗಟ್ಟುತ್ತದೆ. ದಾಸವಾಳ ಮಹಿಳೆಯರ ಆರೋಗ್ಯಕ್ಕೆ ಅಂತೂ ತುಂಬಾನೇ ಒಳ್ಳೆಯದು.
ಉರಿಯೂತ ತಡೆಗಟ್ಟುತ್ತದೆ
ದಾಸವಾಳ ಉರಿಯೂತದ ಸಮಸ್ಯೆ ತಡೆಗಟ್ಟುತ್ತದೆ ಎಂದು ಹಲವು ಸಂಶೋಧನೆಗಳು ಹೇಳಿವೆ, ದಾಸವಾಳದ ಹೂವು ಸಂಧಿವಾತದ ಸಮಸ್ಯೆ ಇರುವವರಿಗೆ ತುಂಬಾನೇ ಒಳ್ಳೆಯದು.
ರಕ್ತದೊತ್ತಡ ನಿಯಂತ್ರಿಸುತ್ತದೆ
ಅತ್ಯಧಿಕ ರಕ್ತದೊತ್ತಡ ಹೃದಯಾಘಾತ, ಪಾರ್ಶ್ವವಾಯು ಈ ಬಗೆಯ ಸಮಸ್ಯೆಗೆ ಕಾರಣವಾಗಿದೆ. ದಾಸವಾಳದ ಹೂವು ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕಾರಿಯಾಗಲಿದೆ.
ತೂಕ ನಿಯಂತ್ರಣಕ್ಕೆ ಕಾರಣ
ದಾಸವಾಳದ ಹೂವು ತೂಕ ನಿಯಂತ್ರಣಕ್ಕೂ ತುಂಬಾನೇ ಸಹಕಾ ರಿ, ಇದು ಮೈ ಬೊಜ್ಜು ತಡೆಗಟ್ಟಲು ಸಹಕಾರಿ ಆದರೆ ಇದರ ಬಗ್ಗೆ ಮತ್ತಷ್ಟು ಸಹಕಾರಿ
ಲಿವರ್‌ನ ಆರೋಗ್ಯಕ್ಕೆ ಒಳ್ಳೆಯದು
ದಾಸವಾಳದ ಹೂವು ಲಿವರ್‌ನ ಡಿಟಾಕ್ಸ್ ಮಾಡುತ್ತದೆ ಲಿವರ್ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
