ಹೋಳಿ ಹಬ್ಬದ ಕುರಿತಂತೆ ಹೆಚ್ಚಿನವರಿಗೆ ತಿಳಿದಿರದ 6 ಆಸಕ್ತಿಕರ ಸಂಗತಿಗಳು

ಬಣ್ಣಗಳ ಹಬ್ಬ ಹೋಳಿ , ಈ ದಿನ ಶುಭಾಶಯ ಕೋರುತ್ತಾ ಬಣ್ಣಗಳನ್ನು ಎರಚಿ ಹೋಳಿ ಹಬ್ಬವನ್ನು ಆಚರಿಸಲಾಗುವುದು, ಹೋಳಿ ಆಚರಣೆಗೂ ಒಂದು ಆಚರಣೆಯಿದೆ, ಹೋಳಿಯ ಮುನ್ನ ದಿನ ಹೋಲಿಕಾ ದಹನ ಎಂದು ಉತ್ತರ ಭಾರತದ ಕಡೆ ಹಾಗೂ ಕರ್ನಾಟಕದ ಕೆಲ ಭಾಗಗಳಲ್ಲಿ ಮಾಡಲಾಗುವುದು. ಈ ಹೋಳಿ ಹಬ್ಬದ ಬಗ್ಗೆ ಅನೇಕ ಆಸಕ್ತಿಕರ ಸಂಗತಿಗಳಿವೆ, ಅವುಗಳ ಬಗ್ಗೆ ಹೆಚ್ಚಿನವರಿಗೆ ತಿಳಿದರಲ್ಲ, ಅದರ ಬಗ್ಗೆ ನೋಡೋಣ ಬನ್ನಿ:

Holi Festival 2024

ಪೌರಾಣಿಕ ಕತೆ: ಹೋಳಿ ಹಬ್ಬವನ್ನು ಕೆಟ್ಟದ್ದರ ವಿರುದ್ಧ ವಿಜಯದ ಸಂಕೇತವಾಗಿ ಆಚರಿಸಲಾಗುವುದು. ಮತ್ತೊಂದು ಕತೆ ಪ್ರಕಾರ ಹಿರಣ್ಯಕಶ್ಯಪು ಎಂಬ ರಾಕ್ಷಸ ವಿಷ್ಣು ಭಕ್ತನಾದ ತನ್ನ ಮಗ ಪ್ರಹ್ಲಾದನನ್ನು ಕೊಲ್ಲಲು ಬಯಸುತ್ತಾನೆ, ಹೀಗಾಗಿ ಆತ ತಂಗಿ ಹೋಲಿಕಾ ಬಳಿ ತನ್ನ ಮಗನ ಜೊತೆಗೆ ಅಗ್ನಿಯಲ್ಲಿ ಕೂರುವಂತೆ ಹೇಳುತ್ತಾನೆ, ಅವಳ ಬಳಿ ಅಗ್ನಿಯಲ್ಲಿ ದಹಿಸದ ಒಂದು ಹೊದಿಕೆ ಇರುತ್ತಾಳೆ, ಅದನ್ನು ಹೊದ್ದು ಕೂತರೆ ಅಗ್ನಿ ಏನೂ ಮಾಡುವುದಿಲ್ಲ.

ಹೀಗಾಗಿ ಆಕೆ ಆ ಹೊದಿಕೆಯನ್ನು ಹೊದ್ದು ಅಗ್ನಿಯಲ್ಲಿ ಕೂರುತ್ತಾಳೆ, ಪ್ರಹ್ಲಾದನನ್ನು ಹಿಡಿದಿರುತ್ತಾಳೆ, ಆದರೆ ಅಚ್ಚರಿಯೆಂದರೆ ದುಷ್ಟೆ ಹೋಲಿಕಾ ದಹನವಾಗುತ್ತಾಳೆ, ಪ್ರಹ್ಲಾದ ಬೆಂಕಿಯಿಂದ ಹೊರಬರುತ್ತಾನೆ, ಅವನಿಗೆ ಏನೂ ಆಗುವುದಿಲ್ಲ, ಕೆಟ್ಟದ್ದು ನಾಶವಾಗುವುದು, ಒಳ್ಳೆಯತನ ಉಳಿಯುವುದು ಎಂಬುವುದರ ಸಂಕೇತವಾಗಿ ಈ ಹೋಲಿಕಾ ದಹನ ಆಚರಿಸಲಾಗುವುದು.

ಮತ್ತೊಂದು ಪೌರಾಣಿಕ ಕತೆಯ ಪ್ರಕಾರ ಶ್ರೀಕೃಷ್ಣ ರಾಧೆಯಂತೆ ನನ್ನ ಮೈ ಬಣ್ಣವಿಲ್ಲ ಎಂದು ತಾಯಿ ಬಳಿ ಹೇಳಿದಾಗ ತಾಯಿ ಯಶೋಧೆ ಕೃಷ್ಣನಿಗೆ ನಿನಗೆ ಇಷ್ಟವಾದ ಬಣ್ಣವನ್ನು ಆಕೆಗೆ ಹಾಕು ಅಂತಾಳೆ, ಅದರಂತೆ ಶ್ರೀಕೃಷ್ಣ ರಾಧೆಗೆ ಬಣ್ಣ ಎರಚುತ್ತಾನೆ, ಇಲ್ಲಿ ಹೋಳಿ ಆಚರಣೆ ಆರಂಭವಾಯ್ತು ಎಂದು ಹೇಳಲಾಗುವುದು.

ಹೋಳಿಯ ಪ್ರತಿಯೊಂದು ಬಣ್ಣವೂ ಅದರದ್ದೇ ಆದರ ಮಹತ್ವ ಹೊಂದಿದೆ
ಕೆಂಪು ಬಣ್ಣ ಪ್ರೀತಿ, ಫಲವತ್ತತೆ, ನೀಲಿ ಶಾಂತಿ, ದೈವಿಕತೆ, ಹಸಿರು ಕೊಯ್ಲು ಸಮಯ, ಹಳದಿ ಜ್ಞಾನದ ಸಂಕೇತವಾಗಿದೆ. ಕೆಲವರು ಬಣ್ಣ ಹಚ್ಚುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಇನ್ನು ಓ ಹೋಳಿ ಹಬ್ಬವೂ ಚಳಿಗಾಲ ಕಳೆದು ಬೇಸಿಗೆಯ ಸಂಕೇತವಾಗಿ ಆಚರಿಸಲಾಗುವುದು.

ಪ್ರೀತಿ, ಸಮಾನತೆ'
ಈ ಹೋಳಿ ಹಬ್ಬವನ್ನು ಬಡವ ಶ್ರೀಮಂತ, ಜಾತಿ-ಧರ್ಮದ ಬೇಧವಿಲ್ಲದೆ ಎಲ್ಲರೂ ಜೊತೆಯಾಗಿ ಆಚರಿಸುತ್ತಾರೆ. ಈ ಹಬ್ಬ ಪರಸ್ಪರ, ಪ್ರೀತಿ, ನಂಬಿಕೆ ಸಮಾಜದಲ್ಲಿ ಶಾಂತಿ ಉಳಿಸಲು ಸಹಕಾರಿ.

ಈ ಹೋಳಿ ಹಬ್ಬವನ್ನು ಭಾರತದಿಂದ ಆಚೆಗೂ ಆಚರಿಸಲಾಗುವುದು
ಹೋಳಿ ಹಬ್ಬವಬ್ಬು ಭಾರತದಲ್ಲಿ ಮಾತ್ರವಲ್ಲ ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ ಇನ್ನು ಇತರ ದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರು ಒಟ್ಟಾಗಿ ಈ ಹಬ್ಬವನ್ನು ಆಚರಿಸುತ್ತಾರೆ.

ಹೋಲಿಕಾ ದಹನದಂದು ನೃತ್ಯ, ಸಂಗೀತ
ಈ ದಿನ ಹೋಲಿಕಾ ದಹನದಂದು ಮನೆಯವರು, ಅಕ್ಕ-ಪಕ್ಕದವರು ಜೊತೆಯಾಗಿ ನೃತ್ಯ ಮಾಡುವುದು, ಸಂಗೀತ ಹಾಡುವುದು ಹೀಗೆ ಸಂತೋಷ-ಸಂಭ್ರಮದಿಂದ ಸಮಯ ಕಳೆಯುತ್ತಾರೆ. ಎಲ್ಲಾ ಕೆಟ್ಟತನ ದೂರಾಗಲಿ, ಒಳ್ಳೆತನ ಬೆಳೆಯಲಿ ಎಂಬ ಆಶಯದಿಂದ ಈ ಹೋಳಿ ಹಬ್ಬವನ್ನು ಆಚರಿಸಲಾಗುವುದು.

ಹಿಂದೆಯಲ್ಲಾ ಹೋಳಿ ಹಬ್ಬದಂದು ನೈಸರ್ಗಿಕ ಬಣ್ಣ ಬಳಸುತ್ತಿದ್ದರು, ಆದರೆ ಈಗ ರಸಾಯನಿಕ ಬಣ್ಣಗಳನ್ನು ಎರಚುತ್ತಾರೆ. ಈ ರಾಸಾಯನಿಕ ಕಣ್ಣಿನ ಒಳಗಡೆ ಹೋದರೆ ಒಳ್ಳೆಯದಲ್ಲ, ಅಲ್ಲದೆ ತ್ವಚೆ ಸಮಸ್ಯೆಯೂ ಉಂಟಾಗುವುದು, ಆದ್ದರಿಂದ ಹೋಳಿ ಹಬ್ಬಕ್ಕೆ ನೈಸರ್ಗಿಕ ಬಣ್ಣವನ್ನು ಬಳಸಿ, ಈ ಹೋಳಿ ಬಣ್ಣದಂತೆ ನಿಮ್ಮ ಬದುಕು ತುಂಬಾನೇ ಕಲಪ್‌ಫುಲ್ ಆಗಿರಲಿ, ಹೋಳಿ ಹಬ್ಬದ ಶುಭಾಶಯಗಳು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Holi Festival 2024: Less Known Facts About Holi Festival

Holi Festival 2024: These are the less known facts about holi, read on....
Story first published: Monday, March 18, 2024, 11:25 [IST]
X
Desktop Bottom Promotion