Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ಹೋಳಿ ದಿನ ಈ ರೀತಿ ಮಾಡಿದರೆ ಮನೆಗೆ ಶುಭ: ಸಂತೋಷ, ಸಮೃದ್ಧಿ ಹೆಚ್ಚಾಗುವುದು
ಹೋಳಿ ಹಿಂದೂಗಳಿಗೆ ಪ್ರಮುಖ ಆಚರಣೆ, ಈ ದಿನವನ್ನು ವಿಜಯದ ಸಂಕೇತವಾಗಿ ಆಚರಿಸಲಾಗುವುದು. ಬಣ್ಣವನ್ನು ಎರಚುತ್ತಾ ಸಂತೋಷ, ಸಂಭ್ರಮದಿಂದ ಈ ದಿನ ಆಚರಿಸಲಾಗುವುದು. ಹೋಳಿ ಹಬ್ಬವನ್ನು ಫಾಲ್ಗುಣ ಶುಕ್ಲ ಪಕ್ಷದ ಹುಣ್ಣಿಮೆಯ ರಾತ್ರಿ ನಡೆಸಲಾಗುವುದು.
ಈ ವರ್ಷ ಮಾರ್ಚ್ 24ರಂದು ಹೋಳಿ ಹಬ್ಬವನ್ನು ಆಚರಿಸಲಾಗುವುದು. ಈ ದಿನದಂದು ವಿಧಿ ವಿಧಾನಗಳ ಪ್ರಕಾರ ಪೂಜೆ ಮಾಡಬೇಕೆಂಬ ನಿಯಮವಿದೆ. ಆ ಮನೆಯ ಸಂತೋಷ , ಸಮದ್ಧಿಗೆ ಈ ದಿನ ಕೆಲ ಕಾರ್ಯಗಳನ್ನು ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು. ಈ ದಿನ ಏನು ಮಾಡಿದರೆ ಮನೆಗೆ ಶುಭವಾಗುವುದು ಎಂದು ನೋಡೋಣ ಬನ್ನಿ:

ಬೆಳ್ಳಿ ನಾಣ್ಯ ಖರೀದಿಸಿ
ವಾಸ್ತು ಪ್ರಕಾರ, ಹೋಳಿ ದಿನದಂದು ಬೆಳ್ಳಿ ನಾಣ್ಯದ ಶಾಪಿಂಗ್ ಮಾಡಿದರೆ ಒಳ್ಳೆಯದು, ಇದನ್ನು ಮನೆಯ ಲಕ್ಷ್ಮಿ ಫೋಟೋದ ಜೊತೆ ಇಟ್ಟರೆ ಆರ್ಥಿಕ ಸಮೃದ್ಧಿ ಉಂಟಾಗುವುದು ಎಂಬ ನಂಬಿಕೆ.
ಮಾವಿನ ಎಲೆಯ ತೋರಣ
ಸಾಮಾನ್ಯವಾಗಿ ಹಿಂದುಗಳ ಯಾವುದೇ ಶುಭ ಕಾರ್ಯವಾಗಿರಲಿ ಮನೆಯ ಮುಂದೆ ಮಾವಿನೆಲೆಯ ತಳಿರು-ತೋರಣ ಕಟ್ಟಲಾಗುವುದು, ಹೋಳಿ ದಿನದಂದೂ ಮನೆ ಮುಂದೆ ಮಾವಿನ ಎಲೆಯ ತೋರಣ ಇದ್ದರೆ ಋಣಾತ್ಮಕ ಶಕ್ತಿ ಮನೆಯೊಳಗೆ ಬರದಂತೆ ತಡೆಗಟ್ಟುವುದು. ಮನೆ ಬಾಗಿಲಿನಲ್ಲಿ ತೋರಣವಿದ್ದರೆ ಮನೆಗೆ ವಿಶೇಷ ಕಳೆ, ಮನೆ ನೋಡುವಾಗಲೇ ಧನಾತ್ಮಕ ಶಕ್ತಿಯ ಅನುಭವ ಉಂಟಾಗುವುದು.
ಬಿದಿರು ಗಿಡ ನೆಡಿ
ಹೋಳಿ ಹಬ್ಬದಂದು ನೀವು 7 ಅಥವಾ 11 ಕೋಲುಗಳಿರುವ ಬಿದಿರಿನ ಗಿಡ ನೆಡಿ, ಈ ಗಿಡ ಮನೆಯೊಳಗಡೆ ಇದ್ದರೆ ಶುಭ ಎಂದು ಹೇಳಲಾಗುವುದು. ವಾಸ್ತು ಶಾಸ್ತ್ರದಲ್ಲಿಯೂ ಈ ರೀತಿ ಬಿದಿರು ಗಿಡ ನೆಡುವುದು ಒಳ್ಳೆಯದು ಎಂದು ಹೇಳಲಾಗುವುದು.
ಲೋಹದ ಆಮೆ
ಈ ದಿನದಂದು ಮನೆಗೆ ಲೋಹದ ಆಮೆ ತನ್ನಿ, ಆಮೆಯ ಹಿಂಭಾಗದಲ್ಲಿ ಶ್ರೀ ಯಂತ್ರ ಅಥವಾ ಕುಬೇರ ಯಂತ್ರವನ್ನು ಬರೆದಿರಬೇಕು, ಇದನ್ನು ಮನೆಯಲ್ಲಿ ಇಡುವುದರಿಂದ ಸಂಪತ್ತು ಹೆಚ್ಚಾಗುವುದು.
ಈ ದಿನ ಹೀಗೆ ಮಾಡಿ
- ಈ ದಿನ ಸಾಸಿವೆಯೆಣ್ಣೆ ಮೈ ಹಚ್ಚಿ ಸ್ನಾನ ಮಾಡಬೇಕು, ಹೀಗೆ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ ಹಾಗೂ ಯಾವುದೇ ಋಣಾತ್ಮಕದ ಪ್ರಭಾವ ನಮ್ಮ ಮೇಲೆ ಇರಲ್ಲ.
- ಹೋಲಿಕಾ ದಹನದ ನಂತರ, ಉಳಿದ ಭಸ್ಮವನ್ನು ಹಣೆಯ ಮೇಲೆ ಹಚ್ಚಿಕೊಳ್ಳಿ, ಹೀಗೆ ಮಾಡುವುದರಿಂದ 27 ದೇವತೆಗಳು ಪ್ರಸನ್ನರಾಗುತ್ತಾರೆ. ಮೊದಲ ಸಾಲಿನ ಅಧಿಪತಿ ಮಹಾದೇವ, ಎರಡನೇ ಸಾಲಿನ ಮಹೇಶ್ವರ ಮತ್ತು ಮೂರನೇ ಸಾಲಿನ ಅಧಿಪತಿ ಎಂದು ಆಯುಧ, ಇವುಗಳು ನಮಗೆ ವಿಜಯವನ್ನು ನೀಡುತ್ತದೆ.
- ಈ ದಿನ ದಾನ ಮಾಡಿ: ಹೋಳಿಯ ದಿನದಂದು ನೀವು ದಾನ ಮಾಡುವುದರಿಂದ ಪುಣ್ಯ ಫಲ ಸಿಗುವುದು.
- ಇನ್ನು ವೃತ್ತಿ ಜೀವನದಲ್ಲಿ ಏನಾದರೂ ಅಡೆತಡೆಗಳಿದ್ದರೆ ಅದರ ನಿವಾರಣೆಗೆ ಈ ದಿನ ಹೋಲಿಕಾ ಅಗ್ನಿಯಲ್ಲಿ ತೆಂಗಿನಕಾಯಿ ಹಾಕಿ.
- ಹೋಳಿ ದಿನದಂದು ಸಿಹಿ ತಿಂಡಿ ಹಂಚಿ, ಇದರಿಂದ ಮನೆಯಲ್ಲಿ ಸಂತೋಷ ಹೆಚ್ಚಾಗುವುದು, ನಿಮ್ಮ ಆಸೆ ಈಡೇರುವುದು.
- ದಾನ ಮಾಡಿ: ಈ ದಿನ ನಿಮ್ಮ ಶಕ್ತಿಗೆ ಅನುಸಾರ ದಾನ ಮಾಡಿ, ಬಡವರಿಗೆ ಆಹಾರ ವಸ್ತುಗಳನ್ನು ದಾನ ಮಾಡಿ, ಬಡ ವಿದ್ಯಾರ್ಥಿಗಳಿಗೆ ಓದಲು ಸಹಾಯ ಮಾಡಿ.
ಹೋಳಿ ಪೂಜೆಯ ಮುಹೂರ್ತ
ಹೋಲಿಕಾ ದಹನ್ ಮುಹೂರ್ತ: ಮಾರ್ಚ್ 24ರಂದು ಬೆಳಗ್ಗೆ 09:54ರಿಂದ ರಾfರಿ 11:13ರವರೆಗೆ
ಹೋಳಿ: ಮಾರ್ಚ್ 25
ಪೂರ್ಣಿಮ ತಿಥಿ ಪ್ರಾರಂಭ: ಮಾರ್ಚ್ 24 ಬೆಳಗ್ಗೆ 09:54ಕ್ಕೆ
ಪೂರ್ಣಿಮಾ ತಿಥಿ ಮುಕ್ತಾಯ: ಮಾರ್ಚ್ 25 ಮಧ್ಯಾಹ್ನ 12:29ರವರೆಗೆ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications