ಗುರು ಸಂಚಾರದಿಂದ ಈ 3 ರಾಶಿಯವರಿಗೆ ಊಹಿಸದಷ್ಟು ಲಾಭವಿದೆ..! ಯಾರಿಗೆಲ್ಲಾ ನೋಡಿ..!!

ನವೆಂಬರ್ ತಿಂಗಳಲ್ಲಿ ಅನೇಕ ಗ್ರಹಗಳು ತಮ್ಮ ರಾಶಿಗಳನ್ನು ಬದಲಾಯಿಸುತ್ತಿವೆ. ಅವುಗಳಲ್ಲಿ ಒಂದು ಗುರು ಗ್ರಹ. ಗುರುವನ್ನು ಅತ್ಯಂತ ಮಂಗಳಕರ ಗ್ರಹ ಎಂದು ಪರಿಗಣಿಸಲಾಗಿದೆ. ಗುರು ಗ್ರಹವು ಪ್ರತಿ 18 ತಿಂಗಳಿಗೊಮ್ಮೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುತ್ತಾನೆ. ಗುರು ಯಾವ ರಾಶಿಯಲ್ಲಿ ನೆಲೆಸುರುತ್ತಾನೋ ಆ ರಾಶಿಯ ಜನರಿಗೆ ಅತ್ಯಂತ ಮಂಗಳಕರ ದಿನಗಳ ಬರಲಿವೆ ಎಂದು ನಂಬಲಾಗಿದೆ.

ಆತ ಸಮೃದ್ಧಿಯುತ ಜೀವನ ನಡೆಸಲು ಏನೆಲ್ಲಾ ಬೇಕಾಗುತ್ತದೆಯೋ ಅದನೆಲ್ಲಾ ನೀಡುತ್ತಾನೆ. ಹೀಗಾಗಿ ಯಶಸ್ಸಿನ ಉತ್ತುಂಗದಲ್ಲಿರುವವರಿಗೆ ಗುರು ಬಲ ಚೆನ್ನಾಗಿದೆ ಎಂಬ ಮಾತು ಅವರ ಕುರಿತು ಹೇಳುವುದನ್ನು ನಾವು ನೋಡಬಹುದು. ಈಗ ಗುರು ಗ್ರಹವು ಹಿಮ್ಮುಖ ಚಲನೆಯಲ್ಲಿದೆ ಎಂಬುದನ್ನು ನಾವು ತಿಳಿದಿದ್ದೇವೆ.

Guru Transit Will Bring Luck To These 3 Zodiac Signs

ಗುರು ಗ್ರಹವು ಈ ರೀತಿ ಹಿಮ್ಮುಖ ಚಲನೆಯಲ್ಲಿದ್ದಾಗ ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುತ್ತದೆ. ದೀಪಾವಳಿಯ ನಂತರ ಗುರು ರೋಹಿಣಿ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಈ ಅವದಿಯಲ್ಲಿ ಕೆಲವು ರಾಶಿಗಳಲ್ಲಿ ಅತ್ಯುತ್ತಮ ಧನಾತ್ಮಕ ಬದಲಾವಣೆ ನಾವು ನೋಡಬಹುದಾಗಿದೆ. ನವೆಂಬರ್ 28 ರಂದು ಮಧ್ಯಾಹ್ನ 1:10 ಕ್ಕೆ ಗುರು ರೋಹಿಣಿ ನಕ್ಷತ್ರವನ್ನು ಪ್ರವೇಶಿಸುತ್ತಾನೆ

ಹೀಗಾಗಿ ಯಾವ 3 ರಾಶಿಯವರಿಗೆ ಈ ಗುರು ಸಂಚಾರದಿಂದ ಲಾಭವಾಗಲಿದೆ. ಈ ರಾಶಿಯವರಲ್ಲಿ ಯಾವ ರೀತಿಯ ಧನಾತ್ಮಕ ಬದಲಾವಣೆ ನೋಡಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಗುರುವಿನ ಹಿಮ್ಮುಖ ಚಲನೆಯು ಧನಾತ್ಮಕ ಬದಲಾವಣೆಗೆ ಕಾರಣವಾಗಲಿದೆ. ಗುರು ಸಂಚಾರದಿಂದ ಸಿಂಹ ರಾಶಿಯವರಿಗೆ ಧನಲಾಭದ ಜೊತೆಗೆ ಹತ್ತು ಹಲವು ಪ್ರಯೋಜನಗಳಿವೆ. ಅನಿರೀಕ್ಷಿತ ಆರ್ಥಿಕ ಲಾಭಗಳ ಜೊತೆಗೆ ಹೊಸ ಹೊಸ ಆಲೋಚನೆಗಳು ನಿಮ್ಮ ಅಣತಿಯಂತೆ ನಡೆಯಲಿದೆ. ವ್ಯವಹಾರಗಳು, ವ್ಯಾಪಾರಗಳಲ್ಲಿ ಲಾಭದಾಯಕವಾಗಲಿದೆ. ಆರ್ಥಿಕವಾಗಿ ನೀವು ಮತ್ತಷ್ಟು ಸದೃಢರಾಗುತ್ತೀರಿ. ಹಾಗೆ ಇಷ್ಟ ವರ್ಷದಿಂದ ನಿಮ್ಮ ದೌರ್ಬಲ್ಯವಾಗಿದ್ದ ಕೆಲವು ವಿಚಾರಗಳಲ್ಲಿ ನಿಮಗೆ ಮೇಲುಗೈ ಉಂಟಾಗಲಿದೆ. ಅಂತಹ ದೌರ್ಬಲ್ಯದಿಂದ ನೀವು ಹೊರಬರುತ್ತೀರಿ. ಭವಿಷ್ಯದ ಕುರಿತು ಇದ್ದ ಚಿಂತೆಗಳು ದೂರಾಗಲಿದೆ.

ತುಲಾ ರಾಶಿ

ತುಲಾ ರಾಶಿಯವರಲ್ಲಿ ಗುರು ಗ್ರಹದ ಚಲನೆಯು ಎಲ್ಲಾ ಕ್ಷೇತ್ರಗಳಲ್ಲಿ ಅವರ ಖ್ಯಾತಿ ಹೆಚ್ಚಾಗಲು ಕಾರಣವಾಗಲಿದೆ. ಉದ್ಯೋಗ, ಮನೆ ಹೀಗೆ ಎಲ್ಲಾ ಕಡೆಗಳಲ್ಲೂ ನಿಮಗೆ ಕೀರ್ತಿ ಹೆಚ್ಚಾಗುತ್ತದೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ನಿಮ್ಮ ಅನುಕೂಲದಂತೆ ಮುಗಿಯುತ್ತವೆ. ನಿಮ್ಮ ಆರ್ಥಿಕ ಸ್ಥಿತಿ ನೀವು ಅಂದುಕೊಂಡದ್ದಕ್ಕಿಂತಲು ಹೆಚ್ಚಾಗಿ ಬಲವಾಗುತ್ತದೆ. ಆಸ್ತಿ ಖರೀದಿ, ಮನೆ, ಜಾಗ ಇಂತಹ ವಿಚಾರದಲ್ಲಿ ನಿಮ್ಮ ಕೆಲಸಗಳು ಸುಲಭವಾಗಲಿದೆ. ಕುಟುಂಬಸ್ಥರಲ್ಲಿದ್ದ ನಿಮ್ಮ ಕುರಿತ ಭಯ ದೂರಾಗಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದ್ದೀರಿ. ಬಹುಕಾಲದ ಅನಾರೋಗ್ಯ ಸಮಸ್ಯೆ ದೂರಾಗಲಿದೆ.

ವೃಷಭ ರಾಶಿ

ವೃಷಭ ರಾಶಿಯವರಲ್ಲಿ ವಿಶೇಷ ಲಾಭಕ್ಕೆ ಕಾರಣವಾಗಲಿದೆ. ಗುರು ಹಿಮ್ಮುಖ ಚಲನೆಯಿಂದಾಗಿ ನಿಮ್ಮ ಕೆಲಸ ಕಾರ್ಯದಲ್ಲಿ ಇಷ್ಟು ದಿನಗಳ ಕಾಲ ಎದುರಾಗುತ್ತಿದ್ದ ಅಡ್ಡಿ ಆತಂಕಗಳು ದೂರಾಗುತ್ತವೆ. ದೀರ್ಘಕಾಲದ ಬಾಕಿ ಉಳಿದ ಕೆಲಸ ಪೂರ್ಣವಾಗುತ್ತದೆ, ಅವಿವಾಹಿತರಿಗೆ ಈ ಕಾಲ ಬಹಳ ಒಳ್ಳೆಯ ಸಮಯವಾಗಲಿದೆ. ವಾಹನ, ಹಣ, ಆರ್ಥಿಕ ಲಾಭವಾಗುವಂತಹ ವಿಚಾರಗಳು ನಿಮ್ಮಲ್ಲಿ ನಡೆಯಲಿದೆ. ಕುಟುಂಬಸ್ಥರ ಪ್ರೀತಿಗೆ ನೀವು ಪಾತ್ರರಾಗುತ್ತೀರಿ. ನಿಮ್ಮ ಹಳೆಯ ಕನಸುಗಳು ನೆರವೇರಿಸಿಕೊಳ್ಳಲು ಒಳ್ಳೆಯ ಸಮಯ ಇದಾಗಲಿದೆ. ಹೊಸ ಉದ್ಯೋಗ ಹುಡುಕುತ್ತಿದ್ದ ಮಂದಿಗೆ ಮನಸ್ಸಿಗೆ ನೆಮ್ಮದಿ ತರುವಂತಹ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಹತ್ತಾರು ವರ್ಷದಿಂದ ನೀವು ಆಲೋಚಿಸುತ್ತಿದ್ದ ಕಾರ್ಯವನ್ನೀಗ ನೆರವೇರಿಸುವ ಸಮಯವಾಗಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Guru Transit Will Bring Luck To These 3 Zodiac Signs

People of 3 zodiac signs will benefit from this Jupiter transit. Find out here what kind of positive changes can be seen in these zodiac signs.
Story first published: Thursday, November 7, 2024, 21:01 [IST]
X
Desktop Bottom Promotion