Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ರೋಹಿಣಿ ನಕ್ಷತ್ರಕ್ಕೆ ಗುರು ಸಂಚಾರ: ಈ 3 ರಾಶಿಯವರಿಗೆ ಪ್ರಗತಿಯ ಸಮಯವಿದು
ವೃಷಭ ರಾಶಿಯಲ್ಲಿ ದೇವಗುರುವಿದೆ. ಇದೀಗ ಗುರು ಗ್ರಹವು ನಕ್ಷತ್ರ ಬದಲಾವಣೆ ಕೂಡ ಮಾಡಿದೆ, ಇದು ಶುಕ್ರನ ರೋಹಿಣಿ ನಕ್ಷತ್ರಕ್ಕೆ ಸಂಚರಿಸಿದೆ. ಸುಮಾರು 12 ವರ್ಷಗಳ ಬಳಿಕ ಇಂಥ ಘಟನೆ ಸಂಭವಿಸಿದೆ, ಈ ಸಂಚಾರ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರುವುದಾದರೂ ಈ ರಾಶಿಯವರು ಹೆಚ್ಚಿನ ಪ್ರಯೊಜನ ಪಡೆಯಲಿದ್ದಾರೆ.
ಗುರು ರೋಹಿಣಿ ನಕ್ಷತ್ರಕ್ಕೆ ಸಂಚರಿಸಿರುವುದರಿಂದ ಈ ರಾಶಿಗಳಿಗೆ ಲಾಭ...

ವೃಷಭ ರಾಶಿ
ಗುರು ವೃಷಭ ರಾಶಿಯ ಲಗ್ನ ಮನೆಯಲ್ಲಿದೆ, ಅಲ್ಲದೆ ರೊಹಿಣಿ ನಕ್ಷತ್ರಕ್ಕೆ ಸಂಚರಿಸಿದ್ದರಿಂದ ತುಂಬಾ ಒಳ್ಳೆಯದಿದೆ, ಈ ಅವಧಿಯಲ್ಲಿ ನೀವು ಉತ್ತಮ ಆರ್ಥಿಕ ಲಾಭ ಪಡೆಯುತ್ತೀರಿ. ನೀವು ಆಸ್ತಿ ಅಥವಾ ಷೇರು ಮಾರುಕಟ್ಟೆ ಇತ್ಯಾದಿಗಳಲ್ಲಿ ಹಣವನ್ನು ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಹೂಡಿಕೆ ಮಾಡಲೊಉ ಈ ಸಮಯ ತುಂಬಾನೇ ಸೂಕ್ತವಾಗಿದೆ. ಅಲ್ಲದೆ ಆ ಹೂಡಿಕೆಯಿಂದ ನೀವು ಉತ್ತಮ ಲಾಭ ಕೂಡ ಗಳಿಸುತ್ತೀರಿ. ಈ ಅವಧಿಯಲ್ಲಿ ಕುಟುಂಬ ಜೀವನ, ವೈವಾಹಿಕ ಜೀವನ ಚೆನ್ನಾಗಿರಲಿದೆ. ಮದುವೆಗೆ ಸಂಬಂಧ ಹುಡುಕುತ್ತಿದ್ದರೆ ಮದುವೆ ಪ್ರಸ್ತಾಪ ಬರಲಿದೆ.
ಸಿಂಹ ರಾಶಿ
ಗುರುವು ಸಿಂಹ ರಾಶಿಯ ಕರ್ಮದ ಮನೆಯಲ್ಲಿರುವುದರಿಂದ ಗುರುವಿನ ಸ್ಥಾನ ನಿಮಗೆ ತುಂಬಾನೇ ಅನುಕೂಲಕರವಾಗಿದೆ. ಉದ್ಯಮಿಗಳಿಗೆ ಉತ್ತಮ ಯಶಸ್ಸು ಸಿಗಲಿದದೆ. ಉದ್ಯೋಗಿಗಳಿಗೂ ಇದು ಅನುಕೂಲಕರ ಸಮಯ. ಆರ್ಥಿಕವಾಗಿ ಈ ಅವಧಿ ಉತ್ತಮವಾಗಿದೆ. ಉದ್ಯಮಿಗಳು ಹೆಚ್ಚಿನ ಲಾಭ ಗಳಿಸುವ ಅವಕಾಶವನ್ನು ಪಡೆಯುತ್ತಾರೆ. ಹೊಸ ಕೆಲಸ ಮಾಡಲು ಪ್ರಾರಂಭಿಸಿದರೆ ಈ ಅವಧಿ ಅನುಕೂಲಕರವಾಗಿದೆ.
ಧನು ರಾಶಿ
ಗುರುವು ನಿಮ್ಮ ಅದೃಷ್ಟ ಬದಲಾಯಿಸಲಿದದೆ, ಈ ಅವಧಿಯಲ್ಲಿ ನಿಮ್ಮೆಲ್ಲಾ ಕಷ್ಟಗಳು, ಸವಾಲುಗಳು ದೂರಾಗಲಿದೆ, ನ್ಯಾಯಾಲಯದಲ್ಲಿ ಏನಾದರೂ ಪ್ರಕರಣವಿದ್ದರೆ ಅದರ ತೀರ್ಪು ನಿಮ್ಮ ಪರವಾಗಿ ಬರಲಿದೆ, ಆರ್ಥಿಕವಾಗಿ ಈ ಅವಧಿ ಉತ್ತಮವಾಗಿದೆ, ನೀವು ಹೂಡಿಕೆ ಮಾಡುತ್ತೀರಿ, ಅಲ್ಲದೆ ಆ ಹೂಡಿಕೆಯಿಂದ ಉತ್ತಮ ಲಾಭ ಕೂಡ ಗಳಿಸುತ್ತೀರಿ, ಕುಟುಂಬ ಜೀವನ ಚೆನ್ನಾಗಿರಲಿದೆ, ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿದೆ. ಕೆಲಸದಲ್ಲಿ ಬಡ್ತಿ ಸಿಗಲಿದೆ. ವೃತ್ತಿ ಬದುಕಿನಲ್ಲಿ ತೃಪ್ತಿ ಇರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
