Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೇರ ಸಂಚಾರದಲ್ಲಿರುವ ಗುರು ಗ್ರಹ:ಪ್ರತಿಯೊಂದು ರಾಶಿಯ ಮೇಲೆ ಇರಲಿದೆ ಭಿನ್ನ ಪ್ರಭಾವ
ಹಿಮ್ಮುಖ ಚಲನೆಯಲ್ಲಿದ್ದ ಗುರು ಈ ಮಾರ್ಗಿಯಾಗಿದ್ದಾನೆ, ಗುರು ಮಾರ್ಗಿಯಾಗಿ ಸಂಚರಿಸುತ್ತಿರುವುದರಿಂದ ರಾಶಿಗಳಲ್ಲಿ ಅದರ ಸ್ಥಾನದ ಅನುಸಾರ ಪ್ರತಿಯೊಂದು ರಾಶಿಯ ಮೇಲೆ ಭಿನ್ನ ಪ್ರಭಾವ ಬೀರಲಿದೆ, ಯಾವ ರಾಶಿಯ ಹೇಗೆ ಪ್ರಭಾವ ಬೀರಲಿದೆ ಎಂದು ನೋಡೋಣ:

ಮೇಷ ರಾಶಿ
ಮೇಷ ರಾಶಿಯವರಿಗೆ ಗುರು ಮಾರ್ಗಿಯಾಗಿರುವುದರಿಂದ ಅನುಕೂಲಕರ ಪ್ರಯೋಜನ ಪಡೆಯಬಹುದು. ವ್ಯಾಪಾರಿಗಳು ಉತ್ತಮ ಲಾಭ ಪಡೆಯಲು ಸಾಧ್ಯವಾಗಲಿದೆ.ಆರ್ಥಿಕವಾಗಿ ತುಂಬಾ ಚೆನ್ನಾಗಿರಲಿದೆ. ಗುರುವಿನ ಪ್ರಭಾವ ನಿಮ್ಮ ಕುಟುಂಬದ ಮೇಲೆ ಕೂಡ ಉತ್ತಮ ಪ್ರಯೋಜನ ನೀಡಲಿಎ.
ವೃಷಭ ರಾಶಿ
ವೃಷಭ ರಾಶಿಯವರಲ್ಲಿ ಗುರು ಅನುಕೂಲಕರ ಸ್ಥಾನದಲ್ಲಿ ಇಲ್ಲ, ಈ ಅವಧಿಯಲ್ಲಿ ನೀವು ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯಲು ಸಾಧ್ಯವಾಗದೆ ಇರುವುದರಿಂದ ಸ್ವಲ್ಪ ಚಿಂತೆ ಕಾಡಬಹುದು. ಈ ಅವಧಿಯಲ್ಲಿ ಖರ್ಚು ಹೆಚ್ಚಿರಲಿದೆ, ಯಾವುದೇ ಹೂಡಿಕೆ ಮಾಡುವುದಾದರೆ ತುಂಬಾನೇ ಜಾಗ್ರತೆವಹಿಸಿ.
ಮಿಥುನ ರಾಶಿ
ನೀವು ಅನಗ್ಯತ ಚಿಂತೆ ಮಾಡಬೇಡಿ ಎಂದು ಸಲಹೆ ನೀಡಲಾಗುವುದು. ಸ್ವಂತ ವ್ಯಾಪಾರ ಮಾಡುವವರು ಈ ಅವಧಿಯ್ಲ್ಲಿ ಜಾಗ್ರತೆವಹಿಸಬೇಕು, ಸಾಲ ಮಾಡಿ ಹಣ ಹೂಡಿಕೆ ಮಾಡಲು ಹೋಗಬೇಡಿ. ಖರ್ಚು ಹೆಚ್ಚಿರಲಿದೆ.
ಕರ್ಕ ರಾಶಿ
ವೃತ್ತಿ ಬದುಕಿನಲ್ಲಿ ಹೆಚ್ಚು ಒತ್ತಡವಿರಲಿದೆ, ವ್ಯಾಪಾರಸ್ಥರಿಗೆ ಲಾಭ ಗಳಿಸಲು ಸಾಧ್ಯವಾಗಲಿದೆ, ಹಣಕಾಸಿನ ವ್ಯವಹಾರದಲ್ಲಿ ಹೆಚ್ಚು ಜಾಗ್ರತೆ ಮಾಡಬೇಕು, ಬಜೆಟ್ ಮೀರಿ ಖರ್ಚು ಮಾಡಲು ಹೋಗಬೇಡಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಗುರು ಅನುಕೂಲಕರ ಪ್ರಭಾವ ಬೀರಲಿದ್ದಾನೆ, ಈ ಅವಧಿಯಲ್ಲಿ ನಿಮ್ಮ ಪ್ರಮುಖ ಆಸೆ ಈಡೇರಲಿದೆ. ಕೆಲಸ ಕಾರ್ಯದಲ್ಲಿ ಪ್ರಗತಿ ಕಾಣಬಹುದು. ವ್ಯಾಪಾರಿಗಳು ಉತ್ತಮ ಲಾಭ ಪಡೆಯಲು ಸಾಧ್ಯವಾಗುವುದು. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ತುಂಬಾನೇ ಪ್ರಯೋಜನ ಕಾಣುತ್ತೀರಿ.
ಕನ್ಯಾ ರಾಶಿ
ಗುರು ಮಾರ್ಗಿಯಾಗಿರುವುದರಿಂದ ಕನ್ಯಾ ರಾಶಿಯವರು ಕೂಡ ಅದ್ಭುತ ಪ್ರಯೋಜನ ಪಡೆಯುತ್ತೀರಿ, ವ್ಯಾಪಾರಸ್ಥರು ಉತ್ತಮ ಲಾಭ ಪಡೆಯಲು ಸಾಧ್ಯವಾಗಲಿದೆ. ನಿಮ್ಮ ಆದಾಯದಲ್ಲಿ ಬೆಳವಣಿಗೆ ಕಂಡು ಬರಲಿದೆ. ಅದೃಷ್ಟದ ಬೆಂಬಲ ನಿಮ್ಮ ಜೊತೆ ಇರುವುದರಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಂಡು ಬರಲಿದೆ.
ತುಲಾ ರಾಶಿ
ಗುರುವಿನ ದೆಸೆಯಿಂದಾಗಿ ವೃತ್ತಿ ಬದುಕಿನಲ್ಲಿ ಉತ್ತಮ ಯಶಸ್ಸು ದೊರೆಯಲಿದೆ, ವ್ಯಾಪಾರಿಗಳು ಉತ್ತಮ ಲಾಭ ಪಡೆಯಲುಸಾಧ್ಯವಾಗಲಿದೆ, ಆರ್ಥಿಕವಾಗಿ ಉತ್ತಮ ಲಾಭ ಪಡೆಯುತ್ತೀರಿ, ಕುಟುಂಬ ಜೀವನ ಚೆನ್ನಾಗಿರಲಿದೆ.
ವೃಶ್ಚಿಕ ರಾಶಿ
ಗುರು ಮಾರ್ಗಿಯಾಗಿರುವ ಈ ಅವಧಿ ಸರಾಸರಿಯಾಗಿರಲಿದೆ, ಆರ್ಥಿಕ ಸಮಸ್ಯೆ ಕಡಿಮೆಯಾಗಲಿದೆ, ವಿದ್ಯಾರ್ಥಿಗಳಿಗೆ ಈ ಅವಧಿ ಅನುಕೂಲಕರವಾಗಿದೆ. ಈ ಸಂಚಾರ ನಿಮಗೆ ಸರಾಸರಿ ಪ್ರಯೋಜನ ನೀಡಲಿದೆ.
ಧನು ರಾಶಿ
ಧನು ರಾಶಿಯವರಿಗೆ ಈ ಅವಧಿ ತುಂಬಾ ಚೆನ್ನಾಗಿರಲಿದೆ, ಸಮಾಜದಲ್ಲಿ ನಿಮ್ಮ ಸ್ಥಾನ ಮಾನ ಹೆಚ್ಚಾಗಲಿದೆ, ಕೆಲಸದ ಜಾಗದಲ್ಲಿ ಉತ್ತಮ ಅವಕಾಶಗಳು ದೊರೆಯಬಹುದು. ಏನಾದರು ಸಮಸ್ಯೆವಿದ್ದರೆ ಎಲ್ಲವೂ ಬಗೆಹರಿಯಲಿದೆ.
ಮಕರ ರಾಶಿ
ಮಕರ ರಾಶಿಯವರಿಗೆ ಈ ಅವಧಿ ಅನುಕೂಲಕರವಾಗಿದೆ, ವ್ಯಾಪಾರಸ್ಥರಿಗೆ ಉತ್ತಮ ಲಾಭ ಪಡೆಯಲು ಸಾಧ್ಯವಾಗಲಿದೆ. ಈ ಸಮಯದಲ್ಲಿ ಖರ್ಚು ಕಡಿಮೆ ಇರುವುದರಿಂದ ಉಳಿತಾಯ ಮಾಡಲು ಸಾಧ್ಯವಾಗಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ.
ಕುಂಭ ರಾಶಿ
ಗುರು ಮಾರ್ಗಿಯಾಗಿರುವುದರಿಂದ ಕುಂಭ ರಾಶಿಯವರು ಉತ್ತಮ ಪ್ರಯೋಜನ ಪಡೆಯಬಹುದು,ಕುಟುಂಬ ಬದುಕು ತುಂಬಾ ಚೆನ್ನಾಗಿರಲಿದೆ, ಈ ಅವಧಿಯಲ್ಲಿ ಅಪೂರ್ಣವಾಗಿದ್ದ ಕೆಲಸ ಕಾರ್ಯಗಳು ಪೂರ್ಣವಾಗಲಿದೆ.
ಮೀನ ರಾಶಿ
ಮೀನ ರಾಶಿಯವರಿಗೆ ಈ ಗುರು ಸಂಚಾರ ತುಂಬಾನೇ ಅನುಕೂಲಕರವಾಗಿದೆ, ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಿದೆ, ಹೂಡಿಕೆಯಿಂದ ಲಾಭ ಗಳಿಸಲು ಸಾಧ್ಯವಾಗಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











