Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗುರು-ಮಂಗಳ ಹಿಮ್ಮುಖ ಚಲನೆ: 2025 ಫೆಬ್ರವರಿವರೆಗೆ ಈ 3 ರಾಶಿಯವರಿಗೆ ಆರ್ಥಿಕ ಸವಾಲುಗಳಿರಲಿದೆ
ಗುರುವನ್ನು ಅದೃಷ್ಟದ ಗ್ರಹವೆಂದು ಪರಿಗಣಿಸಲಾಗಿದೆ, ಈ ಗ್ರಹ ಅನುಕೂಲಕರ ಸ್ಥಾನದಲ್ಲಿದ್ದರೆ ಸಂಪತ್ತಿನ ಕೊರತೆ ಇರಲ್ಲ, ಅದರಂತೆ ಮಂಗಳ ಗ್ರಹ ಕೂಡ ಅನುಕೂಲಕರ ಸ್ಥಾನದಲ್ಲಿ ಯಾವುದೇ ದೊಡ್ಡ ಸಮಸ್ಯೆ ಇರಲ್ಲ, ಆದರೆ ಈ ಎರಡೂ ಗ್ರಹಗಳು ಹಿಮ್ಮುಖ ಚಲನೆ ಮಾಡಿದಾಗ ಕೆಲ ರಾಶಿಗಳ ಆರ್ಥಿಕ ಜೀವನದ ಮೇಲೆ ತುಂಬಾನೇ ಪರಿಣಾಮ ಬೀರುವುದು.
ಇದೀಗ ಗುರು ಹಿಮ್ಮುಖ ಚಲನೆಯಲ್ಲಿದೆ, ಅಕ್ಟೋಬರ್ 09ರಿಂದ ಗುರು ಹಿಮ್ಮುಖ ಚಲನೆಯಲ್ಲಿದೆ, ಮಂಗಳ ಕೂಡ ಡಿಸೆಂಬರ್ 7ರಿಂದ ಹಿಮ್ಮುಖ ಚಲನೆ ಮಾಡಲಿದೆ, ಗುರು ಫೆಬ್ರವರಿ 4ಕ್ಕೆ , ಮಂಗಳ ಗ್ರಹವು 2025ರ ಫೆಬ್ರವರಿ 24ರವರೆಗೆ ಹಿಮ್ಮುಖ ಚಲನೆ ಮಾಡುತ್ತಿದೆ. ಈ ಗ್ರಹಗಳ ಹಿಮ್ಮುಖ ಚಲನೆ ಕೆಲ ಗ್ರಹಗಳ ಆರ್ಥಿಕ ಪರಿಸ್ಥಿತಿ ಮೇಲೆ ನಕರಾತ್ಮಕ ಪರಿಣಾಮ ಬೀರಲಿದೆ.

ಮೇಷ ರಾಶಿ
ಮಂಗಳ ಹಾಗೂ ಗುರು ಎರಡೂ ಗ್ರಹವು ಹಿಮ್ಮುಖ ಚಲನೆ ಮಾಡುವಾಗ ಮೇಷ ರಾಶಿಯವರಿಗೆ ಆರ್ಥಿಕವಾಗಿ ಒಳ್ಳೆಯದಲ್ಲ. ವೃತ್ತಿ ಬದುಕಿನಲ್ಲಿ ಸವಾಲುಗಳು ಬರಬಹುದು.ವ್ಯಾಪಾರಿಗಳು ಕೂಡ ಈ ಅವಧಿಯಲ್ಲಿ ತುಂಬಾ ಸವಾಲುಗಳನ್ನು ಎದುರಿಸಬಹುದು. ವ್ಯವಹಾರ ನೀವು ಬಯಸಿದಂತೆ ಲಾಭ ಸಿಗಲ್ಲ, ಆದರೆ ಈ ಎರಡು ಗ್ರಹಗಳು ನೇರ ಚಲನೆ ಆರಂಭಿಸಿದಾಗ ಎಲ್ಲವೂ ಸರಿಯಾಗಲಿದೆ.
ಉಳಿತಾಯ ಮಾಡಿದ್ದರೆ ಒಳ್ಳೆಯದು, ಇಲ್ಲದಿದ್ದರೆ ಈ ಅವಧಿ ತುಂಬಾ ಸವಾಲಿನಿಂದ ಕೂಡಿರಲಿದೆ. ಉದ್ಯೋಗದಲ್ಲಿ ಬಡ್ತಿಗೆ ಕಾಯುತ್ತಿದ್ದರೆ ಇನ್ನು ಸ್ವಲ್ಪ ಕಾಯುವುದು ಒಳ್ಳೆಯದು.
ಸಿಂಹ ರಾಶಿ
ಗುರು ಮತ್ತು ಮಂಗಳ ಹಿಮ್ಮುಖ ಚಲನೆ ಮಾಡಿದಾಗ ಸಿಂಹ ರಾಶಿಯವರು ಆರ್ಥಿಕ ಸವಾಲು ಎದುರಿಸಬಹುದು, ಕೆಲಸದಲ್ಲಿ ಅತಿಯಾದ ಒತ್ತಡ ಮಾನಸಿಕ ಒತ್ತಡ ಹೆಚ್ಚಿಸಬಹುದು, ಈ ಅವಧಿಯಲ್ಲಿ ಉದ್ಯೋಗದಲ್ಲ ಅತೃಪ್ತಿ ಇರಲಿದೆ, ಉದ್ಯೋಗ ಬದಲಾವಣೆಯ ಬಗ್ಗೆ ಆಲೋಚಿಸಬಹುದು.. ವ್ಯಾಪಾರಿಗಳು ಕೂಡ ತುಂಬಾ ಜಾಗ್ರತೆವಹಿಸಬೇಕು, ಇಲ್ಲದಿದ್ದರೆ ನಷ್ಟ ಉಂಟಾಗಬಹುದು. ಯಾವುದೇ ದೊಡ್ಡ ಹೂಡಿಕೆ ಮಾಡದಿದ್ದರೆ ಒಳ್ಳೆಯದು. ಯಾವುದೇ ಹೊಸ ಕೆಲಸ ಪ್ರಾರಂಭಿಸುವುದಾದರೆ ಗುರು ಮತ್ತು ಶನಿ ನೇರ ಚಲನೆ ಪ್ರಾರಂಭಿಸಿದ ಮೇಲೆ ಅದರ ಬಗ್ಗೆ ಆಲೋಚನೆ ಮಾಡಿ. ಇನ್ನು ಮೂರು ತಿಂಗಳು ಜಾಗ್ರತೆವಹಿಸಿ.
ನೀವು ಸಂಬಂಧ ಹಾಗೂ ಆರೋಗ್ಯದ ವಿಷಯದಲ್ಲಿ ಜಾಗ್ರತೆವಹಿಸಬೇಕು. ಹಣಕ್ಕೆ ಸಂಬಂಧಿಸಿದ ಯಾವುದೇ ದೊಡ್ಡ ವ್ಯವಹಾರ ಮಾಡಬೇಡಿ.
ವೃಷಭ ರಾಶಿ
ಗುರು ಮತ್ತು ಶುಕ್ರನ ಹಿಮ್ಮುಖ ಚಲನೆ ವೃಷಭ ರಾಶಿಯವರ ಮೇಲೆ ಕೂಡ ನಕರಾತ್ಮಕ ಪ್ರಭಾವ ಬೀರಲಿದೆ. ವೃಷಭ ರಾಶಿಯವರು ಈ ಅವಧಿಯಲ್ಲಿ ಹಣಕಾಸಿನ ವಿಷಯದಲ್ಲಿ ಜಾಗ್ರತೆವಹಿಸಬೇಕು. ಯಾವುದೇ ದೊಡ್ಡ ಹೂಡಿಕೆ ಮಾಡದಿದ್ದರೆ ಒಳ್ಳೆಯದು, ಹಣಕಾಸಿನ ಯೋಜನೆಗಳನ್ನು ಜಾಗ್ರತೆಯಿಂದ ಮಾಡಿ,.
ಹೊಸ ಹೂಡಿಕೆ ಮಾಡುವುದಾದರೆ ಫೆಬ್ರವರಿ ನಂತರ ಆಲೋಚಿಸುವುದು ಒಳ್ಳೆಯದು, ವ್ಯಾಪಾರಿಗಳು ತಮ್ಮ ವ್ಯವಹಾರದ ಕಡೆಗೆ ತುಂಬಾನೇ ಗಮನಹರಿಸಬೇಕು, ಕುಟುಂಬ ಜೀವನದ ಕಡೆಯೂ ಗಮನಹರಿಸಬೇಕು. ಮನೆ ಕಟ್ಟುತ್ತಿದ್ದರೆ ಹಣದ ಕಾರಣದಿಂದಾಗಿ ಕೆಲಸ ಕಾರ್ಯಗಳು ನಿಧಾನವಾಗುವುದು, ಆದರೆ ಫೆಬ್ರವರಿ ಬಳಿಕ ಎಲ್ಲವೂ ಸರಿಯಾಗಲಿದೆ. ಅಲ್ಲಿಯವರೆಗೆ ಮೂರು ರಾಶಿಯವರು ಸ್ವಲ್ಪ ಸಮಧಾನದಿಂದ ವರ್ತಿಸಬೇಕು, ಣದ ವಿಚಾರದಲ್ಲಿ ಜಾಗ್ರತೆವಹಿಸಬೇಕು.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications