Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೃಗಶಿರ ನಕ್ಷತ್ರದಲ್ಲಿ ಗುರುವಿರುವುದರಿಂದ ಈ ವರ್ಷ ಪೂರ್ತಿ 3 ರಾಶಿಗಳಿಗೆ ಯಾವ ಚಿಂತೆಯೂ ಬೇಡ
ಗುರುವು ವರ್ಷಕ್ಕೊಮ್ಮೆ ರಾಶಿ ಬದಲಾವಣೆ ಮಾಡುತ್ತದೆ, ಇದೀಗ ಗುರುವು ವೃಷಬ ರಾಶಿಯಲ್ಲಿ ಇದೆ, ಆದರೆ ಗುರುವು ಕಾಲ ಕಾಲಕ್ಕೆ ನಕ್ಷತ್ರ ಬದಲಾವಣೆ ಮಾಡ್ತಾ ಇರ್ತಾನೆ, ಈ ರೀತಿ ನಕ್ಷತ್ರ ಬದಲಾವಣೆ ಕೂಡ ಪ್ರತಿಯೊಂದು ರಾಶಿಯ ಮೇಲೆ ಪ್ರಭಾವ ಬೀರುತ್ತದೆ.
ಗುರು ಈ ಆಗಸ್ಟ್ 20ಕ್ಕೆ ಮೃಗಶಿರಾ ನಕ್ಷತ್ರವನ್ನು ಪ್ರವೇಶಿಸಿದ್ದು ಇನ್ನು ಅದು ನಕ್ಷತ್ರ ಬದಲಾವಣೆ 2025ರಲ್ಲಿ ಇರಲಿದೆ, ಈ ವರ್ಷ ಪೂರ್ತಿ ಮೃಗಶಿರ ನಕ್ಷತ್ರದಲ್ಲಿಯೇ ಇರಲಿದೆ, ಗುರು ಮೃಗಶಿರ ನಕ್ಷತ್ರದಲ್ಲಿ ಇರುವ ಈ ಅವಧಿಯು ಈ ರಾಶಿಗಳಿಗೆ ಅನುಕೂಲಕರವಾಗಿದೆ:

ವೃಷಭ ರಾಶಿ
ವೃಷಭ ರಾಶಿಯಲ್ಲಿ ಗುರುವಿನ ಸ್ಥಾನ ತುಂಬಾನೇ ಅನುಕೂಲಕರವಾಗಿದ್ದು, ನೀವು ನಿಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಪಡೆಯುತ್ತೀರಿ. ಗುರುವಿನ ಕೃಪೆಯಿಂದಾಗಿ ವೃತ್ತಿ ಬದುಕಿನಲ್ಲಿ ಉತ್ತಮ ಯಶಸ್ಸು ದೊರೆಯಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ, ಇನ್ನು ಉದ್ಯೋಗದ ಹುಡುಕಾಟದಲ್ಲಿ ಇರುವವರಿಗೆ ಹೊಸ ಉದ್ಯೋಗ ಸಿಗಲಿದೆ, ಉದ್ಯೋಗದಲ್ಲಿ ಬಡ್ತಿ ದೊರೆಯುವುದು. ವ್ಯಾಪಾರಿಗಳು ಕೂಡ ಹೊಸ ವ್ಯಾಪಾರ ಪ್ರಾರಂಭಿಸಿದರೆ ಅಥವಾ ವ್ಯಾಪಾರವನ್ನು ವಿಸ್ತರಿಸಲು ಈ ಸಮಯ ತುಂಬಾ ಅನುಕೂಲಕರವಾಗಿದೆ.
ಗುರುವು ನಿಮಗೆ ಅನುಕೂಲಕರ ಸ್ಥಾನದಲ್ಲಿ ಇರುವುದರಿಂದ ಆರ್ಥಿಕ ಸಮಸ್ಯೆ ಉಂಟಾಗುವುದಿಲ್ಲ, ಆರ್ಥಿಕ ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿದೆ, ಉಳಿತಾಯ ಮಾಡಲು ಸಾಧ್ಯವಾಗುವುದು, ಮನೆ, ಆಸ್ತಿ, ವಾಹನ ಅಂತ ಖರೀದಿಸಲು ಯೋಚಿಸಿದ್ದರೆ ನಿಮ್ಮಾಸೆ ಈಡೇರಲಿದೆ.
ವಿದ್ಯಾರ್ಥಿಗಳಿಗೂ ತುಂಬಾ ಶುಭವಾಗಿದೆ, ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದರೆ ಉತ್ತಮ ಫಲಿತಾಂಶ ಸಿಗಲಿದೆ. ಇನ್ನು ವಿದೇಶಕ್ಕೆ ಹೋಗಲು ಪ್ರಯತ್ನಿಸಿದರೆ ನಿಮಗೆ ಉತ್ತಮ ಅವಕಾಶ ದೊರೆಯಲಿದೆ.
ಕುಟುಂಬ ಜೀವನ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವೆ ಬಾಂಧವ್ಯ ಚೆನ್ನಾಗಿರಲಿದೆ, ಅವಾಹಿತರಿಗೆ ಮದುವೆಗೆ ಈ ಸಮಯ ತುಂಬಾನೇ ಅನುಕೂಲಕರವಾಗಿದೆ.
ಕನ್ಯಾರಾಶಿ
ಕನ್ಯಾ ರಾಶಿಯವರು ಗುರುವಿನ ಸ್ಥಾನದಿಂದಗಿ ಈ ವರ್ಷ ಅತ್ಯುತ್ತಮ ಫಲ ಪಡೆಯುತ್ತೀರಿ. ಅದೃಷ್ಟದ ಬೆಂಬಲ ನಿಮ್ಮ ಜೊತೆಗೆ ಇರುವುದರಿಂದ ನೀವು ಮುಟ್ಟಿದೆಲ್ಲಾ ಚಿನ್ನ ಎಂಬಂತೆ ನಿಮ್ಮ ಪ್ರತಿಯೊಂದು ಕಾರ್ಯದಲ್ಲಿಯೂ ಯಶಸ್ಸು ದೊರೆಯಲಿದೆ. ವೃತ್ತಿ ಬದುಕಿನಲ್ಲಿ ನಿಮಗೆ ಒಳ್ಳೆಯ ಅವಕಾಶ ಸಿಗಲಿದೆ, ಪ್ರಯತ್ನ ಹಾಕಿದರೆ ಬಯಸಿದ ಕೆಲಸ ಪಡೆಯುವುದು ಅಷ್ಟೇನೂ ದೊಡ್ಡ ಸಮಸ್ಯೆಯಲ್ಲ. ಕೆಲಸದಲ್ಲಿ ಈ ಹಿಂದೆ ಎದುರಾಗಿದ್ದ ಅಡೆತಡೆಗಳು ದೂರಾಗಲಿದೆ.
ವ್ಯಾಪಾರಸ್ಥರು ತಮ್ಮ ವ್ಯಾಪಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣಬಹುದು. ನಿಮ್ಮ ವ್ಯಾಪಾರ ಶೈಲಿ ಗ್ರಾಹಕರನ್ನು ಆಕರ್ಷಿಸುತ್ತದೆ. ಹೀಗಾಗಿ ಆರ್ಥಿಕವಾಗಿ ಸಮಸ್ಯೆಯಾಗಲ್ಲ. ಹೂಡಿಕೆ ಮಾಡಲು ಕೂಡ ಈ ಸಮಯ ಉತ್ತಮವಾಗಿದೆ. ಆದಾಯ ಹೆಚ್ಚಾಗುವುದು, ಮನೆ, ಗಾಡಿ ಎಂಬ ನಿಮ್ಮ ಕನಸು ಈ ಅವಧಿಯಲ್ಲಿ ನೆರವೇರಲಿದೆ.
ಅವಾಹಿತರಿಗೆ ಮದುವೆ ಸಂಬಂಧ ಕೂಡಿ ಬರಲಿದೆ, ಮನೆಯಲ್ಲಿ ಶುಭ ಕಾರ್ಯ ನಡೆಯುವುದು. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ.
ಕರ್ಕ ರಾಶಿ
ಮೃಗಶಿರ ನಕ್ಷತ್ರದಲ್ಲಿ ಗುರು ಇರುವ ಅವಧಿಯಲ್ಲಿ ಕರ್ಕ ರಾಶಿಯವರು ಕೂಡ ಅತ್ಯುತ್ತಮವಾದ ಪ್ರಯೋಜನ ಪಡೆಯುತ್ತೀರಿ. ವೃತ್ತಿ ಹಾಗೂ ವೈಯಕ್ತಿಕ ಬದುಕು ಎರಡೂ ಚೆನ್ನಾಗಿರಲಿದೆ. ಆದಾಯ ಕೂಡ ಉತ್ತಮವಾಗಿರಲಿದೆ.ಕೆಲಸ ಬದಲಾವಣೆಗೆ ಪ್ರಯತ್ನಿಸಿದರೆ ಉತ್ತಮ ಫಲ ಸಿಗಲಿದೆ.
ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ, ನಿಮ್ಮ ಆದಾಯ ಹೆಚ್ಚಾಗಲಿದೆ, ಉಳಿತಾಯ ಮಾಡುತ್ತೀರಿ, ಆಸ್ತಿಯಲ್ಲಿ ಹೂಡಿಕೆ ಮಾಡಲು ಈ ಅವಧಿ ತುಂಬಾ ಚೆನ್ನಾಗಿರಲಿದೆ. ಅಪೂರ್ಣವಾಗಿದ್ದ ಕೆಲಸವು ಈ ಅವಧಿಯಲ್ಲಿ ನೆರವೇರಲಿದೆ, ಮನೆ ಕಟ್ಟುವುದು ಅರ್ಧದಲ್ಲಿ ನಿಂತಿದ್ದರೆ ಅದು ಪೂರ್ಣವಾಗಲಿದೆ. ಕೆಲಸ ಕಾರ್ಯವು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳಲಿದೆ.
ಉದ್ಯಮಿಗಳು ತಮ್ಮ ಉದ್ಯಮದಲಲ್ಲಿ ಮತ್ತಷ್ಟು ಪ್ರಗತಿಯನ್ನು ಕಾಣಬಹುದು, ಉದ್ಯೋಗಿಗಳಿಗೆ ಈ ಸಮಯ ತುಂಬಾ ಚೆನ್ನಾಗಿರಲಿದೆ.
ವೈಯಕ್ತಿಕ ಬದುಕು ಕೂಡ ಚೆನ್ನಾಗಿರಲಿದೆ , ಕುಟುಂಬ ಜೀವನ ಖುಷಿ-ಖುಷಿಯಾಗಿ ಕಳೆಯುತ್ತೀರಿ. ಅವಾಹಿತರಿಗೆ ಮನದುವೆ ಸಂಬಂಧ ಬರಲಿದೆ, ಮದುವೆಗೆ ಇದ್ದಂಥ ಅಡೆತಡೆ ದೂರಾಗಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications