Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೇ 14ರಿಂದ ಗುರು- ಆದಿತ್ಯ ಯೋಗ: ಈ 3 ರಾಶಿಯವರು ಆರ್ಥಿಕ ಪ್ರಗತಿ ಕಾಣುವಿರಿ
ಮೇ 1ಕ್ಕೆ ಗುರು ವೃಷಭ ರಾಶಿಯನ್ನು ಸಂಚರಿಸಿದೆ, ಇದೀಗ ಮೇ 14ಕ್ಕೆ ಸಂಜೆ 05:41 ಕ್ಕೆ ಸೂರ್ಯನು ವೃಷಭ ರಾಶಿಗೆ ಸಂಚರಿಸಲಿದೆ, ಇದರಿಂದಾಗಿ ವೃಷಭ ರಾಶಿಯಲ್ಲಿ ಗುರು-ಸೂರ್ಯ ಯುತಿ ಉಂಟಾಗಿದೆ, ಇದರಿಂದಾಗಿ ಗುರು-ಆದಿತ್ಯ ಯೋಗದ ಲಕ್ಷಣವಾಗಿದೆ. ಈ ಯುತಿ ತುಂಬಾನೇ ಮಂಗಳಕರ ಎಂದು ಹೇಳಲಾಗುವುದು.

ಗುರು ಆದಿತ್ಯ ಯೋಗದ ಪ್ರಭಾವ
ಸೂರ್ಯ ಅಂದರೆ ಆದಿತ್ಯನನ್ನು ಗ್ರಹಗಳ ರಾಜನೆಂದು ಪರಿಗಣಿಸಲಾಗಿದೆ. ಇನ್ನು ಗುರು ಅದೃಷ್ಟದ ಗ್ರಹವಾಗಿದೆ. ಇದೀಗ ಈ ಎರಡೂ ಗ್ರಹಗಳು ಒಂದೇ ಗ್ರಹದಲ್ಲಿ ಇರುವುದರಿಂದ ಉತ್ತಮ ಪ್ರಯೋಜನ ನೀಡಲಿದೆ. ಈ ಗುರು- ಆದಿತ್ಯ ಯೋಗ ಸಕಾರಾತ್ಮಕ ಫಲಿತಾಂಶಗ ನೀಡುವುದು, ನೀವು ಇದರಿಂದ ಅಪಾರ ಯಶಸ್ಸು ಸಿಗಲಿದೆ.
ಈ ಗುರು ಆದಿತ್ಯ ಪ್ರಭಾವ ಎಲ್ಲಾ ರಾಶಿಗಳಿಗೆ ಇರಲಿದೆ, ಅದರೆ ಈ ರಾಶಿಗಳಿಗೆ ತುಂಬಾನೇ ಪ್ರಯೋಜನಕಾರಿಯಾಗಿದೆ ನೋಡಿ:
12 ವರ್ಷಗಳ ಬಳಿಕ ಉಂಟಾಗಿದೆ ಇಂಥದ್ದೊಂದು ಯೋಗ
ಈ ಯೋಗವನ್ನು ತುಂಬಾ ಶುಭ ಎಂದು ಪರಿಗಣಿಸಲಾಗಿದೆ. ವೃಷಭದಲ್ಲಿ ಇಂಥದ್ದೊಂದು ಯೋಗ ಉಂಟಾಗಿ 12 ವರ್ಷವಾಗಿತ್ತು, ಈ ಯೋಗದ ಪ್ರಯೋಜನದಿಂದಾಗಿ ಕೆಲ ರಾಶಿಯವರ ಬದುಕು ಅದ್ಭುತವಾಗಿ ಬದಲಾಗಲಿದೆ. ಈ ಅವಧಿಯಲ್ಲಿ ವೃತ್ತಿ ಜೀವನದಲ್ಲಿ ಆಗಲಿ, ವೈಯಕ್ತಿಕ ಜೀವನದಲ್ಲಿ ಆಗಲಿ ನೀವು ಉತ್ತಮ ಪ್ರಯೋಜನ ಪಡೆಯುತ್ತಾರೆ.
ಈ ಗುರು ಆದಿತ್ಯ ಯೋಗ ಎಷ್ಟು ಸಮಯವಿರುತ್ತದೆ?
ಈ ಗುರು ಆದಿತ್ಯ ಯೋಗ 30 ದಿನಗಳವರೆಗೆ ಇಲಿದೆ. ಅದಾಗ ಬಳಿಕ ಗುರು ವೃಷಭದಲ್ಲಿಯೇ ಇರುತ್ತದೆ, ಸೂರ್ಯ ಮಿಥುನ ರಾಶಿಗೆ ಪ್ರವೇಶ ಮಾಡಲಿದೆ. ಅಲ್ಲಿಯವರೆಗೆ ಈ ಗುರು ಆದಿತ್ಯ ಯೋಗದ ಪ್ರಯೋಜನ ಸಿಗಲಿದೆ. ಈ ಅವಧಿಯಲ್ಲಿ ಈ ರಾಶಿಯವರು ಏನಾದರೂ ಹೊಸ ಕಾರ್ಯ ಮಾಡಿದರೆ ಉತ್ತಮ ಪ್ರಯೋಜನ ಪಡೆಯುತ್ತಾರೆ.
ಮೇಷ ರಾಶಿ
ನಿಮ್ಮ ರಾಶಿಯ 12ನೇ ಮನೆಯಲ್ಲಿ ಗುರು- ಆದಿತ್ಯ ಉಂಟಾಗಲಿದೆ. ಎರಡನೇ ಮನೆಯು ಆಸ್ತಿ, ಕುಟುಂಬ ಮತ್ತು ಮಾತಿನ ಮನೆಯೆಂದು ಪರಿಗಣಿಸಲಾಗಿದೆ. ಈ ಗುರು-ಆದಿತ್ಯ ಯೋಗದಿಂದಾಗಿ ನೀವು ತುಂಬಾನೇ ಪ್ರಯೋಜನ ಪಡೆಯುತ್ತೀರಿ. ನೀವು ವೃತ್ತಿ ಬದುಕಿನಲ್ಲಿ ಪ್ರಗತಿ ಕಾಣುತ್ತೀರಿ. ವಿದ್ಯಾರ್ಥಿಗಳು ಈ ಅವಧಿಯಲ್ಲಿ ಉತ್ತಮ ಪ್ರಯೋಜನ ಪಡೆಯುತ್ತಾರೆ. ಬಯಸಿದ ಕೋರ್ಸ್ ತೆಗೆದುಕೊಳ್ಳಲು ಸಾಧ್ಯವಾಗುವುದು. ವಿದೇಶದಲ್ಲಿ ನೀವು ಓದಲು ಬಯಸಿದರೆ ಈ ಅವಧಿ ಅನುಕೂಲಕರವಾಗಿದೆ. ವ್ಯಾಪಾರಿಗಳು ತಮ್ಮ ವ್ಯಾಪಾರದಲ್ಲಿ ಉತ್ತಮ ಪ್ರಯೋಜನ ಪಡೆಯುತ್ತೀರಿ. ಈ ಸಮಯ ಆರ್ಥಿಕವಾಗಿ ಒಳ್ಳೆಯದು.
ಸಿಂಹ ರಾಶಿ
ಸಿಂಹ ರಾಶಿಯವರ 4ನೇ ಮನೆಯಲ್ಲಿ ಈ ಯೋಗ ಉಂಟಾಗಿದೆ. ಇದರಿಂದಾಗಿ ಈ ಅವಧಿ ತುಂಬಾ ಚೆನ್ನಾಗಿರಲಿದೆ. ಇನ್ನು ಈ ಅವಧಿಯಲ್ಲಿ ನಿಮ್ಮ ಯಾವುದಾದರು ಕೆಲಸ ಅಪೂರ್ಣವಾಗುದ್ದರೆ ಕೆಲಸದಲ್ಲಿ ಪ್ರಗತಿ ಕಂಡು ಬಿರಲಿದರಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ಉದ್ಯೋಗಿಗಳು ವ್ಯಾಪಾರದಲ್ಲಿ ಪ್ರಗತಿ ಕಂಡು ಬರಲಿದೆ. ಉದ್ಯಮಿಗಳಿಗೂ ಇದು ತುಂಬಾ ಉತ್ತಮವಾಗಿದೆ. ಈ ಅವಧಿಯಲ್ಲಿ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿರಲಿದೆ.
ಮೀನ ರಾಶಿ
ಮೀನ ರಾಶಿಯ 11ನೇ ಮನೆಯಲ್ಲಿ ಗುರು ಆದಿತ್ಯ ಯೋಗ, ಇದರಿಂದಾಗಿ ಈ ಅವಧಿ ತುಂಬಾ ಚೆನ್ನಾಗಿರಲಿದೆ. ವೃತ್ತಿ ಜೀವನದಲ್ಲಿ ಪ್ರಗತಿ ಕಂಡು ಬರಲಿದೆ. ಈ ಅವಧಿಯಲ್ಲಿ ನಿಮ್ಮ ಪ್ರತಿಭೆಗೆ ಮನ್ನಣೆ ದೊರೆಯಲಿದೆ. ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಈ ಅವಧಿಯಲ್ಲಿ ವೃತ್ತಿ ಬದುಕಿನಲ್ಲಿ ಯಶಸ್ಸು ಸಿಗಲಿದೆ. ಹೀಗಾಗಿ ನಿಮ್ಮ ಬದುಕು ಒಳ್ಳೆಯ ರೀತಿಯಲ್ಲಿ ಬದಲಾಗಲಿದೆ. ಆರ್ಥಿಕ ಸಮಸ್ಯೆ ದೂರಾಗುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
