Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನ.14ಕ್ಕೆ ಗೋವರ್ಧನ ಪೂಜೆ: ಪೂಜೆಗೆ ಶುಭ ಮುಹೂರ್ತ ಯಾವಾಗ? ಅತಿಗಂಡ ಯೋಗದಲ್ಲಿ ಪೂಜೆ ಮಾಡಬಾರದು
ಈ ವರ್ಷ ನವೆಂಬರ್ 14ಕ್ಕೆ ಗೋವರ್ಧನ ಪೂಜೆಯನ್ನು ಮಾಡಲಾಗುವುದು. ದಕ್ಷಿಣ ಭಾರತದಲ್ಲಿ ದೀಪಾವಳಿ ಹಬ್ಬದ ಕೊನೆಯ ದಿನ ಗೋವರ್ಧನ ಪೂಜೆ ಅಮತ ಮಾಡಲಾಗುವುದು, ಉತ್ತರ ಭಾರತದಲ್ಲಿ ಗೋವರ್ಧನ ಪೂಜೆ ಬಳಿಕ ಭಾಯಿ ಧೂಜ್ ಕೂಡ ಆಚರಿಸುತ್ತಾರೆ. ಗೋವರ್ಧನ ಪೂಜೆಯಲ್ಲಿ ಗೋವುಗಳನ್ನು ಪೂಜಿಸಲಾಗುವುದು. ಈ ಸಾಲಿನಲ್ಲಿ ಯಾವ ಶುಭ ಸಮಯದಲ್ಲಿ ಗೋವರ್ಧನ ಪೂಜೆ ಮಾಡಬೇಕು ಎಂದು ನೋಡೋಣ ಬನ್ನಿ:
ಗೋವರ್ಧನ ಪೂಜೆಯಂದು ಹಸುಗಳನ್ನು ಪೂಜಿಸುವುದರಿಂದ ಇಷ್ಟಾರ್ಥಗಳು ನೆರವೇರುವುದು ಎಂಬ ನಂಬಿಕೆಯಿದೆ. ಈ ದಿನ ಕೃಷ್ಣನಿಗೆ 56 ಅಥವಾ 108 ಬಗೆಯ ಖಾದ್ಯಗಳನ್ನು ನೈವೇದ್ಯವನ್ನಾಗಿ ಅರ್ಪಿಸಲಾಗುವುದು. ಗೋವರ್ಧನ ಪೂಜೆ ಮಾಡುವುದರಿಂದ ಮನೆಯಲ್ಲಿ ಸಮತೋಷ, ಸಮದ್ಧಿ ನೆಲೆಸುವುದು, ಆರೋಗ್ಯ ಲಭಿಸುವುದು ಎಂಬ ನಂಬಿಕೆ.

ಈ ದಿನದಂದು ಗೋವುಗಳನ್ನು ಸ್ನಾನ ಮಾಡಿಸ, ಕೊಟ್ಟಿಗೆಯನ್ನು ಸ್ವಚ್ಛ ಮಾಡಿ ಶುಭ್ರ ಮಾಡಲಾಗುವುದು. ಗೋವುಗಳ ಹಣೆಗೆ ಕುಂಕುಮ ಹಚ್ಚಿ , ಗೋವುಗಳನ್ನು ಅಲಂಕರಿಸಿ ಪೂಜಿಸಲಾಗುವುದು.
ಗೋವರ್ಧನ ಪೂಜೆಗೆ ಸಮು
ಈ ಬಾರಿ ಪ್ರತಿಪದ ದಿನಾಂಕವು ನವೆಂಬರ್ 13 ಸೋಮವಾರದಂದು ಮಧ್ಯಾಹ್ನ 02:56 ರಿಂದ ಪ್ರಾರಂಭವಾಗಿ ಮರುದಿನ ನವೆಂಬರ್ 14 ಮಂಗಳವಾರ ಮಧ್ಯಾಹ್ನ 02:36 ಕ್ಕೆ ಕೊನೆಗೊಳ್ಳುತ್ತದೆ. ಹಿಂದೂ ಧರ್ಮದಲ್ಲಿ ಉದಯ ತಿಥಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗುವುದು, ಹೀಗಾಗಿ ನವೆಂಬರ್ 14ರಂದು ಗೋವರ್ಧನ ಊಜೆ ಮಾಡಲಾಗುವುದು.ಡೃಕ್ ಪಂಚಾಂಗದ ಪ್ರಕಾರ, ಮಂಗಳಕರವಾದ ಗೋವರ್ಧನ ಪೂಜೆಯ ಮುಹೂರ್ತವು ನವೆಂಬರ್ 14 ರಂದು ಬೆಳಿಗ್ಗೆ 6:43 ರಿಂದ 08:52 ರವರೆಗೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಗೋವರ್ಧನ ಪೂಜೆಯ ಪೂಜೆ ಸಮಯವು ಎರಡು ಗಂಟೆ ಒಂಬತ್ತು ನಿಮಿಷಗಳವರೆಗೆ ಇರಲಿದೆ.
ಗೋವರ್ಧನ ಪೂಜೆಯಂದು ಶುಭ ಯೋಗ ಉಂಟಾಗಲಿದೆ
ಗೋವರ್ಧನ ಪೂಜೆಯಂದು ಈ ಯೋಗಗಳು ರೂಪುಗೊಳ್ಳಲಿದೆ
ಈ ಬಾರಿ ಗೋವರ್ಧನ ಪೂಜೆಯ ದಿನದಂದು ಶೋಭನ ಯೋಗವು ರೂಪುಗೊಳ್ಳುತ್ತದೆ. ಶೋಭನ ಯೋಗವು ಬೆಳಿಗ್ಗೆಯಿಂದ ಮಧ್ಯಾಹ್ನ 01:57 ರವರೆಗೆ ಇರಲಿದೆ. ಆ ನಂತರ ಅತಿಗಂಡ ಯೋಗ ಆರಂಭವಾಗುತ್ತದೆ. ಅತಿಗಂಡ ಯೋಗ ಪೂಜೆಗೆ ಶುಭವಲ್ಲ. ಶೋಭನ ಯೋಗವನ್ನು ಮಂಗಳಕರ ಯೋಗವೆಂದು ಪರಿಗಣಿಸಲಾಗಿದೆ. ಇದಲ್ಲದೇ ಗೋವರ್ಧನ ಪೂಜೆಯ ದಿನದಂದು ಬೆಳಗ್ಗೆಯಿಂದಲೇ ಅನುರಾಧಾ ನಕ್ಷತ್ರ ಇದೆ.
ಗೋವರ್ಧನ ಪೂಜೆಯ ಹಿಂದಿರುವ ಪೌರಾಣಿಕ ಕತೆ
ವೃಂದಾವನದ ಜನರು ಇಂದ್ರಯಜ್ಞಕ್ಕೆ ಸಿದ್ಧತೆ ಮಾಡುತ್ತಿದ್ದರು. ಇದನ್ನು ತಿಳಿದ ಶ್ರೀ ಕೃಷ್ಣ ಪರಮಾತ್ಮನನ್ನು ಇಂದ್ರನನ್ನು ಪೂಜಿಸುವ ಬದಲಿಗೆ ಗೋವರ್ಧನ ಗಿರಿಯನ್ನು ಆರಾಧಿಸಬೇಕೆಂದು ಸೂಚಿಸಿದನು. ಅದರಂತೆ ವೃಂದಾವನದ ಜನರು ಗೋವರ್ಧನ ಗಿರಿಯನ್ನು ಪೂಜಿಸಲು ನಿಶ್ಚಿಯಿಸಿದರು. ಇದರಿಂದ ಕೋಪಗೊಂಡ ಇಂದ್ರನು ಕೋಪದಿಂದ ಭಾರಿ ಮಳೆ ಸುರಿಸಲು ವರುಣನಿಗೆ ಹೇಳುತ್ತಣೇ. ಆಗ ಕೃಷ್ಣನು ತನ್ನ ಕಿರು ಬೆರಳಿನಿಂದ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದು ವೃಂದಾವನದ ಎಲ್ಲ ನಿವಾಸಿಗಳಿಗೆ ಅದರ ಕೆಳಗೆ ಆಶ್ರಯ ನೀಡುತ್ತಾನೆ. ಇದರಿಂದಾಗಿ ಇಂದ್ರನಿಗೆ ತಾನು ಮಾಡಿದ ಅರಿವಾಗಿ ಕೃಷ್ಣನ ಬಳಿ ಬಂದು ಕ್ಷಮೆ ಯಾಚಿಸಿದ.ಲೌಕಿಕ ಅನುಕೂಲಕ್ಕಾಗಿ ಯಾವ ದೇವತೆಯನ್ನೂ ಪೂಜಿಸುವ ಅಗತ್ಯ ಇಲ್ಲ ಎನ್ನುವ ಅಂಶವನ್ನು ಕೃಷ್ಣನು ಹೇಳಿದನು. ಇದು ಗೋವರ್ಧನ ಲೀಲೆ ಎಂದು ಪ್ರಸಿದ್ಧಿಯಾಗಿದೆ.
ಗೋವರ್ಧನದಂದು ಗೋವಿನ ಸಗಣಿಯಿಂದ ಗೋವರ್ಧನವನ್ನು ಮಾಡಿ ಮನೆಯ ಅಂಗಳದಲ್ಲಿ ಪೂಜಿಸಲಾಗುತ್ತದೆ. ಗೋವರ್ಧನ ಪೂಜೆಯನ್ನು ಪ್ರಕೃತಿಯ ಆರಾಧನೆ ಎಂದೂ ಕರೆಯುತ್ತಾರೆ.
ಪೂಜಾ ವಿಧಾನ
* ಗೋವರ್ಧನ ಪೂಜೆಯ ಹಬ್ಬವನ್ನು ಪ್ರತಿಪಾದದ ದಿನದಂದು ಆಚರಿಸಲಾಗುವುದು. ಈ ದಿನದಂದು ಮೈಗೆ ಎಣ್ಣೆ ಹಚ್ಚಿ ನಂತರ ಸ್ನಾನ ಮಾಡಲಾಗುವುದು.
* ಇದರ ನಂತರ, ಮನೆಯ ಮುಖ್ಯ ಬಾಗಿಲಲ್ಲಿ ಗೋವಿನ ಸಗಣಿಯಿಂದ ಸಾಂಕೇತಿಕ ಗೋವರ್ಧನ ಪರ್ವತವನ್ನು ಮಾಡಬೇಕು, ಅದರ ಮಧ್ಯದಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಇರಿಸಬೇಕು.
* ನಂತರ ಗೋವರ್ಧನ ಪರ್ವತ ಮತ್ತು ಗೋವಿನ ಸಗಣಿಯಿಂದ ಮಾಡಿದ ಶ್ರೀಕೃಷ್ಣನಿಗೆ ವಿವಿಧ ರೀತಿಯ ಭಕ್ಷ್ಯಗಳು ಅರ್ಪಿಸುತ್ತಾರೆ. ಅನಂತರ ಆ ತಿನಿಸುಗಳನ್ನು ಎಲ್ಲರಿಗೂ ಪ್ರಸಾದವಾಗಿ ಹಂಚಲಾಗುವುದು. ಇದನ್ನು ಅನ್ನಕೂಟ ಉತ್ಸವ ಎಂದೂ ಕೂಡ ಕರೆಯುತ್ತಾರೆ
. * ಈ ದಿನ ಇಂದ್ರ, ವರುಣ, ಅಗ್ನಿಯನ್ನು ಪೂಜಿಸಲಾಗುವುದು
. * ನಂತರ ಗೋವರ್ಧನ ಬೆಟ್ಟದ ಕತೆಯನ್ನು ಕೇಳಲಾಗುವುದು. ಅದಾದ ಬಳಿಕ ಬ್ರಾಹ್ಮಣರಿಗೆ ದಾನ ಮತ್ತು ದಕ್ಷಿಣೆ ನೀಡಿ ಎಲ್ಲರಿಗೆ ಪ್ರಸಾದವನ್ನು ಹಂಚಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications