Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್
2025ರಲ್ಲಿದೆ ಈ 4 ರಾಶಿಗಳಿಗೆ ಗಜಲಕ್ಷ್ಮಿ ಯೋಗ: ಸಂಪತ್ತು ವೃದ್ಧಿಸಲಿದೆ
2024 ವರ್ಷ ಮುಗೀತಾ ಬಂದಿದೆ, ಇನ್ನೇನು ಕೆಲವೇ ದಿನಗಳಲ್ಲಿ 2025 ವರ್ಷ ಶುರುವಾಗುವುದು, ಹೊಸ ವರ್ಷ ನಮಗೆ ಹೇಗೆ ಇರಲಿದೆ ಎಂಬ ನಿರೀಕ್ಷೆ ಪ್ರತಿಯೊಬ್ಬರಲ್ಲಿಯೂ ಇರುತ್ತದೆ, ಹೊಸ ವರ್ಷದಲ್ಲಿ ಹೊಸ ಉದ್ಯಮ ಪ್ರಾರಂಭಿಸಬೇಕು ಅಥವಾ ಕೆಲಸ ಬದಲಾಯಿಸಬೇಕು, ವಿದೇಶಕ್ಕೆ ಹೋಗಬೇಕು ಎಂದು ಬಯಸುವುದಾದರೆ, ನಮ್ಮ ರಾಶಿಯಲ್ಲಿ ಗ್ರಹಬಲ ಚೆನ್ನಾಗಿ ಇದ್ದರೆ ಎಲ್ಲವೂ ನೆರವೇರುವುದು ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ.
2025ರಲ್ಲಿ ಗಜಲಕ್ಷ್ಮಿ ರಾಜಯೋಗ ಇದೆ, ಗುರು ಮೇ 14ಕ್ಕೆ ಮಿಥುನ ರಾಶಿಗೆ ಸಂಚರಿಸಲಿದೆ, ಶುಕ್ರನು ಜುಲೈ 26ಕ್ಕೆ ಮಿಥುನ ರಾಶಿಗೆ ಸಂಚರಿಲಸಿದೆ. ಆಗಸ್ಟ್ 21ರವರೆಗೆ ಇದೇ ರಾಶಿಯಲ್ಲಿ ಇರಲಿದೆ, ಈ ಎರಡು ಗ್ರಹಗಳು ಸೇರಿ ಇರುವುದರಿಂದ ಗಜಲಕ್ಷ್ಮಿ ರಾಜ ಯೋಗ ಉಂಟಾಗಲಿದೆ. ಈ ರಾಶಿಗಳ ಮೇಲೆ ಗಜಲಕ್ಷ್ಮಿ ರಾಜ ಯೋಗ ಇರಲಿದೆ:

ಮೇಷ ರಾಶಿ
ಮೇಷ ರಾಶಿಯವರು ಈ ಯೋಗದಿಂದಾಗಿ ಅತ್ಯುತ್ತಮ ಪ್ರಯೋಜನ ಪಡೆಯುತ್ತಾರೆ. ಆರ್ಥಿಕವಾಗಿ ತುಂಬಾ ಒಳ್ಳೆಯದಿದೆ, ನೀವು ವ್ಯಾಪಾರಿಗಳಾಗಿದ್ದರೆ ಈ ಅವಧಿಯಲ್ಲಿ ಅತ್ಯುತ್ತಮ ಪ್ರಯೋಜನ ಪಡೆಯುತ್ತೀರಿ. ಈ ಅವಧಿಯಲ್ಲಿ ನೀವು ನಿಮ್ಮ ಆರ್ಥಿಕ ಸ್ಥಿತಿ ಬಲಪಡಿಸಲು ಬಯಸುವುದಾದರೆ ನಿಮ್ಮ ಪ್ರಯತ್ನಗಳು ಯಶಸ್ವಿಯಾಗಲಿದೆ. ಹೂಡಿಕೆಗೆ ಈ ಅವಧಿ ತುಂಬಾನೇ ಅನುಕೂಲಕರವಾಗಿರಲಿದೆ.
ಮಿಥುನ ರಾಶಿ
ಗಜಲಕ್ಷ್ಮಿ ರಾಜಯೋಗ ಮಿಥುನ ರಾಶಿಯವರಿಗೂ ಇರಲಿದೆ, ಗಜಲಕ್ಷ್ಮಿ ರಾಜಯೋಗ ಮಿಥುನ ರಾಶಿಯಲ್ಲಿಯೇ ಉಂಟಾಗಲಿದ್ದು ಈ ಅವಧಿ ನಿಮಗೆ ತುಂಬಾನೇ ಪ್ರಯೋಜನಕಾರಿಯಾಗಿರಲಿದೆ. ಆರ್ಥಿಕವಾಗಿ ಉತ್ತಮ ಲಾಭ ಗಳಿಸುತ್ತೀರಿ, ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗುವುದು, ಹೂಡಿಕೆಗೂ ಈ ಅವಧಿ ತುಂಬಾನೇ ಉತ್ತಮವಾಗಿದೆ.
ತುಲಾ ರಾಶಿ
ಈ ಗಜಲಕ್ಷ್ಮಿ ರಾಜಯೋಗದಿಂದ ತುಲಾ ರಾಶಿಯವರು ಕೂಡ ತುಂಬಾ ಒಳ್ಳೆಯ ಪ್ರಯೋಜನ ಪಡೆಯಲಿದ್ದಾರೆ, ಈ ಅವಧಿಯಲ್ಲಿ ನೀವು ಹೊಸ ವ್ಯಾಪಾರ ಮಾಡಬೇಕು ಅಥವಾ ಉದ್ಯಮ ಪ್ರಾರಂಭಿಸಬೇಕು ಎಂದು ಬಯಸುವುದಾದರೆ ಅದು ನೆರವೇರಲಿದೆ. ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ನಡೆಯಲಿದೆ. ನೀವು ಮನೆ ಮಟ್ಟುತ್ತಿದ್ದೀರಿ ಅಥವಾ ಯಾವುದಾದರು ಪ್ರಾಜೆಕ್ಟ್‌ನಲ್ಲಿ ಇದ್ದೀರಿ ಎಂದಾದರೆ ನಿಮ್ಮ ಕಾರ್ಯಗಳು ಯಶಸ್ವಿಯಾಗಿ ನೆರವೇರಲಿದೆ.
ಕುಂಭ ರಾಶಿ
ಕುಂಭ ರಾಶಿಯಲ್ಲಿ ಶನಿ ಸಾಡೇಸಾತಿ ಪ್ರಭಾವವಿದೆ, ಆದರೂ ಈ ಗಜಲಕ್ಷ್ಮಿ ರಾಜಯೋಗದ ಅವಧಿಯಲ್ಲಿ ನೀವು ಆರ್ಥಿಕವಾಗಿ ತುಂಬಾ ಒಳ್ಳೆಯ ಪ್ರಯೋಜನ ಪಡೆಯುತ್ತೀರಿ, ವ್ಯಾಪಾರಿಗಳು ಆರ್ಥಿಕ ಲಾಭ ಪಡೆಯುತ್ತೀರಿ. ವೃತ್ತಿ ಬದುಕಿನಲ್ಲಿ ಉತ್ತಮ ಯಶಸ್ಸು ಕಾಣುತ್ತೀರಿ, ಈ ಸಮಯದಲ್ಲಿ ಹಣವನ್ನು ಉಳಿತಾಯ ಮಾಡುವುದು ಒಳ್ಳೆಯದು, ಹೂಡಿಕೆ ಮಾಡುವಾಗ ಲೆಕ್ಕಾಚಾರ ಹಾಕಿ ಹೂಡಿಕೆ ಮಾಡಿದರೆ ನೀವು ಉತ್ತಮ ಲಾಭ ಪಡೆಯುತ್ತೀರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











