Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
12 ವರ್ಷದ ಬಳಿಕ ಗಜಲಕ್ಷ್ಮೀ ರಾಜಯೋಗ: ಈ ರಾಶಿಯವರಲ್ಲಿ ಹಣದ ಹೊಳೆ ಖಚಿತ!
ವೈದಿಕ ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳ ಚಲನೆಯನ್ನು ಪ್ರಮುಖ ವಿದ್ಯಮಾನ ಎಂದು ಪರಿಗಣಿಸಲಾಗುತ್ತದೆ. ಗ್ರಹಗಳ ಚಲನೆಯು ಎಲ್ಲಾ 12 ಗ್ರಹಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಒಂದೊಂದು ಗ್ರಹವು ಒಂದೊಂದು ರೀತಿಯಲ್ಲಿ ಪರಿಣಾಮಕಾರಿಯಾಗಿರಲಿದೆ. ಹಾಗೆ ಎಲ್ಲಾ ರಾಶಿಗಳ ಮೇಲೆಯೂ ಗ್ರಹಗಳ ಚಲನೆಯು ಪರಿಣಾಮ ಬೀರುವುದು ಎಲ್ಲರ ಜೀವನದಲ್ಲೂ ಬದಲಾವಣೆಗಳಿಗೆ ಕಾರಣವಾಗಲಿವೆ.
ಜುಲೈನಲ್ಲಿ ಹಲವು ರಾಶಿಗಳು ತಮ್ಮ ಸ್ಥಾನವನ್ನು ಬದಲಾಯಿಸುತ್ತವೆ. ಅದ್ರಲ್ಲೂ ಶುಕ್ರನು ವೇಗವಾಗಿ ಚಲಿಸುವ ಗ್ರಹವಾಗಿದ್ದು ಈ ಜುಲೈನಲ್ಲಿ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಶುಕ್ರನು ಜುಲೈ 26ರಂದು ಮಿಥುನ ರಾಶಿಗೆ ಚಲಿಸಲಿದ್ದಾನೆ. ಆದ್ರೆ ಮಿಥುನ ರಾಶಿಯ ಅಧಿಪತಿ ಬುಧನಾಗಿದ್ದು, ಹಾಗೆ ಗುರು ಕೂಡ ಮಿಥುನ ರಾಶಿಯಲ್ಲಿ ಚಲಿಸುತ್ತಿದ್ದಾನೆ.

ಹೀಗಾಗಿ ಮಿಥುನ ರಾಶಿಯಲ್ಲಿ ಶುಕ್ರ ಹಾಗೂ ಗುರುವಿನ ಸಂಯೋಗವಾಗುತ್ತಿದೆ. ಶುಕ್ರನು ಮಿಥುನ ರಾಶಿಗೆ ಸ್ಥಳಾಂತರಗೊಂಡಾಗ, ಗುರು ಮತ್ತು ಶುಕ್ರನ ಸಂಯೋಜನೆಯು ಗಜಲಕ್ಷ್ಮಿ ರಾಜಯೋಗವನ್ನು ಸೃಷ್ಟಿಸುತ್ತದೆ. ಈ ರಾಜಯೋಗವು 12 ವರ್ಷಗಳ ನಂತರ ರೂಪುಗೊಳ್ಳುತ್ತದೆ. ಈ ರಾಜಯೋಗದ ಪ್ರಭಾವವು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರಲಿವೆ. ಇದರಿಂದ ಹಲವರಿಗೆ ಲಾಭದಾಯಕ ಆಗುವುದು ಸಹ ನೋಡಬಹುದು.
ಗಜಲಕ್ಷ್ಮಿ ಯೋಗದಿಂದಾಗಿ ಮೂರು ರಾಶಿಯವರಿಗೆ ಬಹಳಷ್ಟು ಅನುಕೂಲಕರ ದಿನಗಳು ಕಾದಿವೆ, ಅದ್ರಲ್ಲೂ ನೀವು ಲಕ್ಷ್ಮಿಯ ಅನುಗ್ರಹದಿಂದಾಗಿ ಹಣಕಾಸು, ಆಸ್ತಿ, ಆರೋಗ್ಯ, ಉದ್ಯೋಗದ ವಿಚಾರವಾಗಿ ಬಹಳ ಉತ್ತಮ ದಿನಗಳನ್ನು ಅನುಭವಿಸುತ್ತೀರಿ. ಹಾಗಾದ್ರೆ ಈ ಗಜಲಕ್ಷ್ಮಿ ಯೋಗವು ಯಾರಿಗೆಲ್ಲ ಅನುಕೂಲಕರವಾಗಿರಲಿದೆ. ಯಾರಿಗೆ ಲಾಭದಾಯಕ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ವೃಷಭ ರಾಶಿ
ವೃಷಭ ರಾಶಿಯ 2 ನೇ ಮನೆಯಲ್ಲಿ ಗುರು ಮತ್ತು ಶುಕ್ರರ ಸಂಯೋಗವಾಗುತ್ತಿದೆ. ಇದರಿಂದ ನಿಮ್ಮ ಹಲವು ಸಮಸ್ಯೆಗಳು ನಿವಾರಣೆಯಾಗುತ್ತಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳವಾಗಲಿದೆ. ಕಲಾ ಕ್ಷೇತ್ರದಲ್ಲಿ ತೊಡಗಿರುವವರು, ಹಾಗೆ ವ್ಯಾಪಾರಿಗಳಿಗೆ ಇದು ಬಹಳ ದೊಡ್ಡ ಲಾಭ ತರುವ ಕಾಲ. ನಿಮ್ಮ ಆದಾಯ ದ್ವಿಗುಣ ಆಗುವಂತಹ ಹಲವು ಲಾಭದಾಯಕ ಕೆಲಸ ನಡೆಲಯಲಿವೆ. ಕುಟುಂಬದಲ್ಲಿ ಆರ್ಥಿಕ ಸಂಬಂಧವಾಗಿ ಇದ್ದ ಒತ್ತಡಗಳು ಕಡಿಮೆಯಾಗಲಿದೆ. ಹಾಗೆ ನಿಮ್ಮ ಮುಖ್ಯ ಕೆಲಸವೊಂದಕ್ಕೆ ಬೇಕಾದಾಗ ಹಣ ನಿಮ್ಮ ಕೈ ಸೇರಲಿದೆ. ಉದ್ಯೋಗದಲ್ಲಿನ ಸಮಸ್ಯೆಗಳು ನಿವಾರಣೆಯಾಗಲಿದೆ.
ತುಲಾ ರಾಶಿ
ತುಲಾ ರಾಶಿಯ 9 ನೇ ಮನೆಯಲ್ಲಿ ಗುರು ಮತ್ತು ಶುಕ್ರರ ಸಂಯೋಗ ನೋಡಬಹುದು. ಇದರಿಂದ ತುಲಾ ರಾಶಿಯವರಲ್ಲಿ ಅನೇಕ ಹಣಕಾಸು ಸಂಬಂಧಿ ವಿಚಾರಗಳು ಅಡೆತಡೆಯಿಲ್ಲದೆ ನಡೆಯಲಿವೆ. ಶುಭ ಕಾರ್ಯಕ್ಕಾಗಿ ನೀವು ಹಣಕಾಸು ಒಟ್ಟುಗೂಡಿಸುವ ಕೆಲಸಕ್ಕೆ ಮುಂದಾಗುತ್ತಿದ್ದರೆ ಈ ಸಮಯದಲ್ಲಿ ಉತ್ತಮ ಹಣದ ಹರಿವು ನೋಡಬಹುದು. ಹಾಗೆ ಯಾರ ಬಳಿಯಾದರು ನಿಮ್ಮ ಹಣ ಸಿಲುಕಿದ್ದರೆ ಈ ಸಮಯದಲ್ಲಿ ಸಂದಾಯ ಅಥವಾ ಮರಳಿ ಬರಲಿದೆ. ಆಧ್ಯಾತ್ಮಿಕ ವಿಚಾರದಲ್ಲಿ ನಿಮ್ಮ ನಂಬಿಕೆ ಬಲವಾಗುತ್ತದೆ. ಪ್ರೀತಿ, ವೈವಾಹಿಕ ಜೀವನದಲ್ಲೂ ಕೂಡ ಬಹಳ ಅನುಕೂಲಕರ ದಿನ ಎನ್ನಬಹುದು. ವೇತನ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗಲಿದೆ.
ಕುಂಭ ರಾಶಿ
ಕುಂಭ ರಾಶಿಯ 5 ನೇ ಮನೆಯಲ್ಲಿ ಗುರು ಮತ್ತು ಶುಕ್ರನಿಂದ ಗಜಲಕ್ಷ್ಮಿ ರಾಜಯೋಗ ಸೃಷ್ಟಿಯಾಗಲಿದೆ, ಇದರಿಂದ ನವವಿವಾಹಿತರಲ್ಲಿ ಸಂಬಂಧ ಬಲವಾಗುತ್ತೆ. ವ್ಯಾಪಾರಿ ವರ್ಗವು ತಮ್ಮ ಲಾಭ ಹೆಚ್ಚಿಸಿಕೊಳ್ಳಲು ಬದಲಾವಣೆ ಬಯಸುತ್ತಿದ್ದರೆ ಬಹಳ ಲಾಭದಾಯಕ. ಪ್ರೇಮ ಜೀವನಕ್ಕೆ ಪೂರಕವಾಗುವ ದಿನಗಳನ್ನು ನೋಡುವಿರಿ. ಹೂಡಿಕೆಗಳು, ಉಳಿತಾಯಗಳು ಹೆಚ್ಚಾಗಲಿವೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ ಏಕೈಕ ಉದ್ದೇಶವಾಗಿದೆ)



Click it and Unblock the Notifications