Latest Updates
-
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್
ಶ್ರಾವಣ ಮಾಸದಲ್ಲಿ ಗಜಕೇಸರಿ ಯೋಗ: ಜುಲೈ 22ರಿಂದ ಈ ರಾಶಿಯವರಿಗೆ ಅದೃಷ್ಟ ಆರಂಭ!
ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ಚಲನೆಯನ್ನು ಅತ್ಯಂತ ಪ್ರಮುಖ ವಿದ್ಯಮಾನವಾಗಿ ಪರಿಗಣಿಸಲಾಗಿದೆ. ಗ್ರಹಗಳ ಚಲನೆಯ ಅಥವಾ ಸ್ಥಾನ ಪಲ್ಲಟವು ಹಲವು ರೀತಿಯ ಬದಲಾವಣೆಗಳಿಗೆ ಕಾರಣವಾಗುವುದು ನೋಡಬಹುದು. ಅದ್ರಲ್ಲೂ ವಿಶೇಷವಾಗಿ ಉಂಟಾಗುವ ಯೋಗವು ಹಲವು ರಾಶಿಗಳ ಮೇಲೆ ಪರಿಣಾಮ ಬೀರುವುದು ಕೂಡ ನಾವು ನೋಡಿದ್ದೇವೆ.
ಗ್ರಹಗಳ ಚಲನೆ ಹಾಗೂ ಸಂಯೋಗಗಳು ಹಲವು ಯೋಗಗಳಿಗೆ ಕಾರಣವಾಗುತ್ತವೆ. ಇದು ಮಾನವರ ಜೀವನದಲ್ಲಿ ಅತ್ಯಂತ ದೊಡ್ಡ ಬದಲಾವಣೆಗಳಿಗೆ ಕಾರಣವಾಗುತ್ತದೆ. ಅದ್ರಲ್ಲೂ ಶುಭ ಹಾಗೂ ಅಶುಭ ವಿಚಾರಗಳಿಗೆ ಕಾರಣವಾಗಲಿದೆ. ಇನ್ನು ಪ್ರತಿಯೊಂದು ರಾಶಿಗಳ ಮೇಲೆಯೂ ಇದು ಪರಿಣಾಮ ಬೀರುವುದರಿಂದಾಗಿ ಹಲವು ರೀತಿಯ ಬದಲಾವಣೆಗಳ ನೋಡಬಹುದು.

ಈ ಜುಲೈನಲ್ಲಿ ಗುರು ಹಾಗೂ ಚಂದ್ರನ ಸಂಯೋಗದಿಂದಾಗಿ ಪ್ರಬಲವಾದ ಗಜಕೇಸರಿ ರಾಜಯೋಗ ರೂಪುಗೊಳ್ಳುತ್ತಿದೆ. ಜುಲೈ 22ರಂದು ಗುರು ಹಾಗೂ ಚಂದ್ರನ ಸಂಯೋಗವು ಈ ಗಜಕೇಸರಿ ರಾಜಯೋಗಕ್ಕೆ ಕಾರಣವಾಗುತ್ತಿದೆ. ಅದ್ರಲ್ಲೂ ಶ್ರಾವಣ ಮಾಸದಲ್ಲಿ ಈ ಗಜಕೇಸರಿ ರಾಜಯೋಗ ಆರಂಭವಾಗುತ್ತಿದೆ. ಚಂದ್ರ ಜುಲೈ 22ರಂದು ಮಿಥುನ ರಾಶಿಗೆ ಚಲಿಸಲಿದ್ದಾನೆ. ಆದ್ರೆ ಗುರು ಈಗಾಗಲೆ ಮಿಥುನ ರಾಶಿಯಲ್ಲಿದ್ದು, ಅಲ್ಲಿ ಗಜಕೇಸರಿ ರಾಜಯೋಗಕ್ಕೆ ಕಾರಣವಾಗಲಿದೆ.
ಸದ್ಯ ಈ ಶ್ರಾವಣ ಮಾಸದಲ್ಲಿ ಈ ಅಪರೂಪದ ರಾಜಯೋಗ ಸೃಷ್ಟಿಯಾಗುತ್ತಿರುವುದು ಹಲವರಿಗೆ ಲಾಭದಾಯಕವಾಗುತ್ತಿದೆ. ಹಾಗಾದ್ರೆ ಯಾರಿಗೆಲ್ಲಾ ಈ ಸಮಯದಲ್ಲಿ ಲಾಭದಾಯಕ? ಯಾರಲ್ಲಿ ಶುಭಕಾಲ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಗಜಕೇಸರಿ ರಾಜಯೋಗವು ಹಲವು ರೀತಿ ಲಾಭಗಳಿಗೆ ಕಾರಣವಾಗಲಿದೆ. ನಿಮ್ಮ ಐಷಾರಾಮಿ ಜೀವನದ ಕನಸೊಂದು ನನಸಾಗಬಹುದು, ಅಂದರೆ ಬಹಳ ಸಮಯದಿಂದ ಅಂದುಕೊಂಡಿದ್ದ ಕೆಲಸವೊಂದು ಕೈಗೂಡಬಹುದು. ದಾಂಪತ್ಯದಲ್ಲಿದ್ದ ಸಮಸ್ಯೆಯೊಂದು ನಿವಾರಣೆ ಆಗಲಿದೆ. ಹೊಸ ವಾಹನ ಖರೀದಿಯ ಅವಕಾಶ ಕೂಡ ಒಲಿದು ಬರಲಿದೆ. ನಿಮ್ಮ ದೈನಂದಿನ ಕೆಲಸ ಸಂಬಂಧ ಬದಲಾವಣೆ ನೋಡುವಿರಿ. ವ್ಯಾಪಾರಿಗಳಲ್ಲಿ ದೊಡ್ಡ ಮಟ್ಟದ ಲಾಭ ನೋಡಬಹುದು. ಆರೋಗ್ಯ ಚತರಿಕೆಯಿಂದ ನಿಮ್ಮಲ್ಲಿ ಸಂತಸ ಇರಲಿದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಗಜಕೇಸರಿ ರಾಜಯೋಗವು ಉತ್ತಮ ಪ್ರಯೋಜನಗಳನ್ನು ತರುತ್ತದೆ. ಅವರಿಗೆ ಅವರ ಕುಟುಂಬದಿಂದ ಸಂಪೂರ್ಣ ಬೆಂಬಲ ಸಿಗುತ್ತದೆ. ನೀವು ಅನೇಕ ಕ್ಷೇತ್ರಗಳಲ್ಲಿ ಉತ್ತಮ ಯಶಸ್ಸು ಪಡೆಯುತ್ತೀರಿ. ಕುಟುಂಬದಲ್ಲಿದ್ದ ಹಣಕಾಸು ಸಮಸ್ಯೆಯೊಂದು ಬಗೆಹರಿಯಲಿದೆ. ವಿದೇಶ ಪ್ರಯಾಣದಂತಹ ಲಾಭಕ್ಕೆ ನೀವು ನಿರೀಕ್ಷಿಸಬಹುದು. ಆರ್ಥಿಕ ವಿಚಾರವಾಗಿ ನಿಮಗೆ ಉತ್ತಮ ದಿನಗಳು ಬರಲಿವೆ. ಯಾರೊಬ್ಬರ ಕೈಯಲ್ಲಿ ನಿಮ್ಮ ಹಣ ಸಿಲುಕಿದ್ದರೆ ಈ ಸಮಯದಲ್ಲಿ ಸಂದಾಯ ಆಗುವ ಸಾಧ್ಯತೆ ದಟ್ಟವಾಗಿರಲಿದೆ. ಆಸ್ತಿ, ಜಮೀನು, ಮನೆ ವಿಚಾರದಲ್ಲಿ ಧನಾತ್ಮಕ ವಿಚಾರಗಳು ನಡೆಯಲಿದೆ
ಧನು ರಾಶಿ
ಧನು ರಾಶಿ ರಾಶಿಯವರಿಗೆ ಗಜಕೇಸರಿ ರಾಜಯೋಗ ಅದೃಷ್ಟ ತರಲಿದೆ. ನೀವು ಪ್ರವಾಸಗಳ ಕೈಗೊಳ್ಳುವಲ್ಲಿ ತೊಡಗಬಹುದು. ಕುಟುಂಬ ಸದಸ್ಯರಿಂದ ನಿಮಗೆ ಎಲ್ಲಾ ಕೆಲಸದಲ್ಲೂ ಬೆಂಬಲ ಸಿಗಬಹುದು. ದಾಂಪತ್ಯದಲ್ಲಿ ಸಂತಸಮಯ ಸಮಯಗಳಿವೆ. ಮಕ್ಕಳ ವಿಚಾರಗಾಗಿ ಕಾಡಿದ್ದ ಚಿಂತೆಯೊಂದು ದೂರಾಗಲಿದೆ. ವ್ಯಾಪಾರದಲ್ಲಿ ಅಡ್ಡಿ ಆತಂಕವು ದೂರಾಗಲಿದೆ, ಬಹಳ ಸಮಯದ ಅನಾರೋಗ್ಯ, ಹಣಕಾಸು ಸಮಸ್ಯೆ ಕೂಡ ನಿವಾರಣೆಯಾಗಲಿದೆ. ಇದರಿಂದ ನಿಮ್ಮಲ್ಲಿ ನೆಮ್ಮದಿಯ ಭಾವನೆ ಮೂಡಲಿದೆ. ನಿಮ್ಮಲ್ಲಿ ವಾಹನ ಲಾಭದಂತಹ ಐಷಾರಾಮಿ ಲಾಭಕ್ಕೆ ಇದು ಕಾರಣವಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











