Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಿಥುನ ರಾಶಿಯಲ್ಲಿ ಗಜಕೇಸರಿ ರಾಜಯೋಗ: ಈ ಮೂರು ರಾಶಿಯವರಿಗೆ ಜಾಕ್‌ಪಾಟ್..!!
ವೈದಿಕ ಶಾಸ್ತ್ರದಲ್ಲಿ ಗ್ರಹಗಳ ಚಲನೆಗೆ ಬಹಳ ಪ್ರಾಮುಖ್ಯತೆ ನೀಡಲಾಗುತ್ತೆ. ಗ್ರಹಗಳ ಚಲನೆಯು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡುವುದು ಹಾಗೆ ಎಲ್ಲರ ಜೀವನದಲ್ಲೂ ಬದಲಾವಣೆಗೆ ಕರಣವಾಗುವುದು ಸಾಮಾನ್ಯ ಎನ್ನಬಹುದು. ಇನ್ನು ಹಲವು ಗ್ರಹಗಳ ಚಲನೆಯು ಹಲವು ರೀತಿಯ ಲಾಭಕ್ಕೆ ಕಾರಣವಾಗುವುದು ಕೂಡ ನಾವು ನೋಡಬಹುದು. ಮತ್ತೆ ಕೆಲವು ರಾಶಿಯಲ್ಲಿ ಗ್ರಹಗಳ ಸಂಯೋಗವು ಅಪರೂಪದ ಯೋಗಕ್ಕೆ ಕಾರಣವಾಗುತ್ತದೆ.
ಇಂತಹ ಅಪರೂಪದ ಯೋಗಗಳು ಉಂಟಾದಾಗ ಹಲವು ರಾಶಿಯವರಿಗೆ ಲಾಭದಾಯಕವಾಗಿ ಪರಿಣಮಿಸಲಿದೆ. ಈಗ ಗುರು ಗ್ರಹವು ಬರೋಬ್ಬರಿ 12 ವರ್ಷಗಳ ಬಳಿಕ ಮಿಥುನ ರಾಶಿಗೆ ಚಲಿಸಲಿದ್ದಾನೆ. ಗುರು ಬಹಳ ನಿಧಾನವಾಗಿ ಚಲಿಸುವ ಗ್ರಹವಾಗಿರುವುದರಿಂದ ಮಿಥುನ ರಾಶಿಗೆ 12 ವರ್ಷಗಳ ನಂತರ ಚಲಿಸಲಿದ್ದಾನೆ. ಹೀಗಾಗಿ ಅವರಿಗೆ ಗುರುಬಲದ ಜೊತೆಗೆ ಹಲವು ರೀತಿ ಯೋಗಗಳಿವೆ.

ಗುರುವು ವರ್ಷಕ್ಕೊಮ್ಮೆ ತನ್ನ ರಾಶಿ ಬದಲಾಯಿಸುತ್ತಾನೆ, ಈ ಕಾರಣದಿಂದಾಗಿ ಒಂದು ರಾಶಿಗೆ ಮರಳಲು ಸುಮಾರು 12 ವರ್ಷಗಳು ಬೇಕಾಗುತ್ತದೆ. ಮೇ 15, 2025 ರಂದು ಬುಧ ಗ್ರಹವು ರಾಶಿಚಕ್ರ ಚಿಹ್ನೆಯಾದ ಮಿಥುನ ರಾಶಿಗೆ ಚಲಿಸುತ್ತದೆ. ಇದರೊಂದಿಗೆ ಚಂದ್ರನು ಮೇ 29, 2025 ರಂದು ಮಿಥುನ ರಾಶಿಗೆ ಚಲಿಸಲಿದ್ದಾನೆ.
ಹೀಗಾಗಿ ಮಿಥುನ ರಾಶಿಯಲ್ಲಿ ಗುರು ಹಾಗೂ ಚಂದ್ರರ ಅಪರೂಪದ ಸಂಯೋಗವು ಗಜಕೇಸರಿ ರಾಜಯೋಗಕ್ಕೆ ಕಾರಣವಾಗಲಿದೆ. ಇದು ಹಲವು ರಾಶಿಗಳ ಮೇಲೆ ಧನಾತ್ಮಕ ಪರಿಣಾಮಕ್ಕೆ ಕಾರಣವಾಗುತ್ತಿದೆ. ಹಾಗಾದ್ರೆ ಯಾವ ರಾಶಿಯ ಮೇಲೆ ಈ ಗಜಕೇಸರಿ ರಾಜಯೋಗ ಪರಿಣಾಮ ಉಂಟು ಮಾಡಲಿದೆ ಯಾರಿಗೆ ಇದು ಲಾಭದಾಯಕವಾಗಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ವೃಷಭ ರಾಶಿ
ವೃಷಭ ರಾಶಿಯ ಎರಡನೇ ಮನೆಯಲ್ಲಿ ಗಜಕೇಸರಿ ರಾಜಯೋಗ ರೂಪುಗೊಳ್ಳಲಿದೆ. ಈ ಅವಧಿಯಲ್ಲಿ ವೃಷಭ ರಾಶಿಯವರು ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮ ಯಶಸ್ಸನ್ನು ಸಾಧಿಸಲಿದ್ದಾರೆ. ನಿಮ್ಮ ಕುಟುಂಬದಿಂದ ನಿಮಗೆ ಎಲ್ಲಾ ವಿಚಾರದಲ್ಲೂ ಬೆಂಬಲ ಸಿಗಲಿದೆ. ಆರ್ಥಿಕವಾಗಿ ನಿಮ್ಮಲ್ಲಿದ್ದ ಸಮಸ್ಯೆಗಳು ಬಹುತೇಕ ದೂರಾಗುತ್ತವೆ. ವ್ಯಾಪಾರ ಮಾಡುತ್ತಿದ್ದ ಮಂದಿ ಎದುರಿಸಿದ್ದ ಹಲವು ಅಡೆತಡೆಗಳು ನಿವಾರಣೆಯಾಗಲಿದೆ. ವೈವಾಹಿಕ ಜೀವನದಲ್ಲಿ ನೀವು ಅನುಭವಿಸಿದ್ದ ಸಮಸ್ಯೆಯೊಂದು ಬಗೆಹರಿಯಲಿದೆ. ನೀವು ಸರ್ಕಾರಿ ಉದ್ಯೋಗಕ್ಕಾಗಿ ಶ್ರಮ ಹಾಕುತ್ತಿದ್ದರೆ ಈ ಸಮಯದಲ್ಲಿ ಲಾಭದಾಯಕ ಬೆಳವಣಿಗೆ ಇರಲಿದೆ. ಮನೆಯಲ್ಲಿ ನಿಮ್ಮಿಂದ ಶಾಂತಿ ನೆಲೆಸಲಿದೆ. ಶುಭ ಕಾರ್ಯಗಳಲ್ಲಿ ನೀವು ಭಾಗಿಯಾಗುತ್ತೀರಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಗಜಕೇಸರಿ ರಾಜಯೋಗವು ಸಕಾರಾತ್ಮಕ ಬದಲಾವಣೆಗಳ ತರಲಿದೆ ಏಕೆಂದರೆ ಗುರು ಮತ್ತು ಚಂದ್ರರ ಸಂಯೋಗ ಇಲ್ಲಿನ 8ನೇ ಮನೆಯಲ್ಲಿ ನಡೆಯಲಿದೆ. ಈ ಅವಧಿಯಲ್ಲಿ ಅದೃಷ್ಟದ ದಿನಗಳ ನೋಡಲಿದ್ದೀರಿ. ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಬಹುದು. ನಿಮ್ಮ ವ್ಯಾಪಾರ ವಿಸ್ತರಿಸಲು ನೀವು ಆಲೋಚಿಸುತ್ತಿದ್ದರೆ ಇದು ಅತ್ಯಂತ ಶುಭ ಸಮಯ. ಹಲವು ಕೆಲಸಗಳಿಂದ ನಿಮಗೆ ಹಠಾತ್ ಧನಲಾಭವಾಗುವ ನಿರೀಕ್ಷೆಗಳಿವೆ. ಪೂರ್ವಜರ ಆಸ್ತಿ ಸಂಬಂಧವಾಗಿ ಯಾವುದಾದರು ಸಮಸ್ಯೆಗಳಿದ್ದರೆ ಈ ಸಮಯದಲ್ಲಿ ಬಗೆಹರಿಯಬಹುದು. ಕುಟುಂಬದಲ್ಲಿ ಒತ್ತಡ ಕಡಿಮೆಯಾಗಲಿದೆ.
ಕುಂಭ ರಾಶಿ
ಕುಂಭ ರಾಶಿಯ 5ನೇ ಮನೆಯಲ್ಲಿ ಗಜಕೇಸರಿ ರಾಜಯೋಗ ರೂಪುಗೊಳ್ಳಲಿದೆ. ಈ ಸಮಯದಲ್ಲಿ ನಿಮ್ಮ ಹಣಕಾಸಿನ ಸ್ಥಿತಿಯು ಬಲವಾಗಲಿದೆ. ಶುಕ್ರನ ಬಲದಿಂದಾಗಿ ನೀವು ಆಸ್ತಿ, ಜಮೀನು, ವ್ಯಾಪಾರದಂತಹ ಕೆಲಸದಲ್ಲಿ ಯಾವುದೇ ಅಡೆತಡೆಯಿಲ್ಲದೆ ಭಾಗಿಯಾಗಬಹುದು. ವಿದ್ಯಾರ್ಥಿಗಳು ಉನ್ನತ ಶಿಕ್ಷಣದತ್ತ ಮನಸ್ಸು ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಅವಿವಾಹಿತರಿಗೆ ಈ ಸಮಯ ಬಹಳ ಧನಾತ್ಮಕವಾಗಿ ಬದಲಾಗಲಿದೆ. ನೀವು ವಾಹನ ಲಾಭದ ನಿರೀಕ್ಷೆ ಇಟ್ಟುಕೊಳ್ಳಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications