Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಅಶುಭ ಅಂಗಾರಕ ಯೋಗ ಮುಕ್ತಾಯ: ಪ್ರತಿಯೊಂದು ರಾಶಿಗೆ ಈ ರೀತಿಯೆಲ್ಲಾ ಪ್ರಯೋಜನ ಸಿಗಲಿದೆ
ರಾಹು ಮತ್ತು ಮಂಗಳ ಮೀನ ರಾಶಿಯಲ್ಲಿ ಇದ್ದಾಗ ಮಂಗಾಳರಕ ಯೋಗ ಉಂಟಾಗಿತ್ತು, ಈ ಮಂಗಳಾರಕ ಯೋಗ ಜೂನ್ 01 ರಂದು ಕೊನೆಯಾಗಿದೆ. ಏಕೆಂದರೆ ಮಂಗಳ ಗ್ರಹವು ಮೇಷ ರಾಶಿಗೆ ಪ್ರವೇಶಿಸಿದೆ, ಆದ್ದರಿಂದ ಅಶುಭ ಅಂಗಾರಕ ಯೋಗ ಕೊನೆಯಾಗಿದೆ.
ವೈದಿಕ ಜ್ಯೋತಿಷ್ಯದಲ್ಲಿ ಈ ಅಂಗಾರಕ ಯೋಗವನ್ನು ಮಂಗಳಕರ ಎಂದು ಪರಿಗಣಿಸಲಾಗುವುದಿಲ್ಲ.

ಅಂಗಾರಕ ಯೋಗ ಹೇಗೆ ರೂಪುಗೊಳ್ಳುತ್ತದೆ?
ರಾಹು ಮತ್ತು ಮಂಗಳ ಒಂದೇ ರಾಶಿಯಲ್ಲಿದ್ದಾಗ ಈ ಅಂಗಾರಕ ಯೋಗ ಉಂಟಾಗುವುದು. ಈ ಅಂಗಾರಕ ಯೋಗ ಕೆಲ ರಾಶಿಯವರಿಗೂ ತುಂಬಾನೇ ಸವಾಲಿನಿಂದ ಕೂಡಿರಲಿದೆ. ವ್ಯಕ್ತಿಯು ತುಂಬಾನೇ ಕೋಪಗೊಳ್ಳುತ್ತಾನೆ, ಈ ಅವಧಿಯಲ್ಲಿ ಅವರು ಜೀವನದಲ್ಲಿ ತುಂಬಾನೇ ಸವಾಲುಗಳನ್ನು ಎದುರಿಸುತ್ತಾರೆ. ಈಗ ಅಂಗಾರಕ ಯೋಗ ಅಂತ್ಯವಾಗಿರುವುದರಿಂದ ಈ ರಾಶಿಯವರು ಇನ್ನು ಉತ್ತಮ ಪ್ರಯೋಜನ ಪಡೆಯುತ್ತೀರಿ.
ಮೀನ ರಾಶಿ
ಮೀನ ರಾಶಿಯವರು ಅಂಗಾರಕ ಯೋಗದ ಸಮಯದಲ್ಲಿ ಆರೋಗ್ಯ ಮತ್ತು ಆರ್ಥಿಕ ಸಮಸ್ಯೆ ಅನುಭವಿಸಿದ್ದರು, ಇನ್ನು ಈ ಬಗೆಯ ಸಮಸ್ಯೆ ದೂರಾಗುವುದು.
ಕುಂಭ ರಾಶಿ
ಅಂಗಾರಕ ಯೋಗ ಇದ್ದಾಗ ಹಣಕಾಸಿನ ತೊಂದರೆ ಉಂಟಾಗಿತ್ತು, ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ದೂರಾಗಲಿದೆ.
ಮಕರ ರಾಶಿ
ಈ ಅವಧಿಯಲ್ಲಿ ಒಡಹುಟ್ಟಿದವರೊಂದಿಗೆ ಉಂಟಾದ ಸಮಸ್ಯೆ ಬಗೆಹರಿಯಲಿದೆ. ನಿಮ್ಮ ನಡುವಿನ ಸಮಸ್ಯೆ ಬಗೆಹರಿಯಲಿದೆ.
ಧನು ರಾಶಿ
ಅಂಗಾರಕ ಯೋಗದ ಸಮಸಯದಲ್ಲಿ ನೀವು ಆರೋಗ್ಯದ ಸಮಸ್ಯೆ ಅನುಭವಿಸಿರುತ್ತೀರಿ ಆರ್ಥಿಕ ನಷ್ಟ ಅನುಭವಿಸಿದ್ದರೆ ಹೆಚ್ಚು ಚಿಂತೆ ಬಿಡಿ, ಈ ಅವಧಿ ಆರ್ಥಿಕ ಸುಧಾರಣೆ ಕಂಡು ಬರುವುದು.
ವೃಶ್ಚಿಕ ರಾಶಿ
ಮಕ್ಕಳಿಗೆ ಸಂಬಂಧಿಸಿದ ಚಿಂತೆ ದೂರಾಗುವುದು. ಅವರ ಪ್ರಗತಿ ನಿಮಗೆ ಖುಷಿ ನೀಡುವುದು.
ತುಲಾ ರಾಶಿ
ನಿಮ್ಮ ಕೆಟ್ಟ ಚಟ, ಕೋಪದ ಸ್ವಭಾವದಿಂದ ಮನೆಯ ನೆಮ್ಮದಿ ಹಾಳಾಗಿತ್ತು, ಆದರೆ ಈ ಸಮಯದಲ್ಲಿ ನಿಮ್ಮ ಮನೆಯ ವಾತಾವರಣದಲ್ಲಿ ಧನಾತ್ಮಕ ಬದಲಾವಣೆ ಕಾಣುತ್ತೀರಿ.
ಕನ್ಯಾ ರಾಶಿ
ಅಂಗಾರಕ ಯೋಗದ ಸಮಯದಲ್ಲಿ ವೈವಾಹಿಕ ಜೀವನದಲ್ಲಿ ಹಲವು ಭಿನ್ನಾಭಿಪ್ರಾಯ ಉಂಟಾಗಿತ್ತು, ಇದೀಗ ನಿಮ್ಮ ನಡುವಿನ ಮುನಿಸು ದೂರಾಗಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ಅಂಗಾರಕ ಯೋಗ ಉಂಟಾಗಿದ್ದಾಗ ಇದ್ದ ಸಮಸ್ಯೆಗಳು ದೂರಾಗಲಿದೆ, ಈ ಮಾಸ ಚೆನ್ನಾಗಿರಲಿದೆ.
ಕರ್ಕ ರಾಶಿ
ನಿಮ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿದ ಸಮಸ್ಯೆ ಬಗೆಹರಿಯುವುದು.
ಮಿಥುನ ರಾಶಿ
ಈ ಅವಧಿ ಆರ್ಥಿಕವಾಗಿ ಒಳ್ಳೆಯದು, ಹಣಕ್ಕೆ ಸಂಬಂಧಿಸಿದ ಸಮಸ್ಯೆ ದೂರಾಗುವುದು.
ವೃಷಭ ರಾಶಿ
ಅಂಗಾರಕ ಯೋಗದಿಂದಾಗಿ ಅವಮಾನ ಅನುಭವಿಸುವ ಪರಿಸ್ಥಿತಿ ಉಂಟಾಗಿರಬಹುದು, ಆದರೆ ಈಗ ಅಂಗಾರಕ ಯೋಗ ಅಂತ್ಯವಾಗಿರುವುದರಿಂದ ಚಿಂತೆ ಇಲ್ಲ.
ಮೇಷ ರಾಶಿ
ಅಂಗಾರಕ ಅವಧಿ ಮುಗಿದಿರುವುದರಿಂದ ಮಂಗಳ ಮೇಷ ರಾಶಿಗೆ ಸಂಚರಿಸಿದ ಅವಧಿ ನಿಮಗೆ ಅನುಕೂಲಕರವಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications