Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಏಕಾದಶಿಯಂದು ಅರ್ಪಿಸುವ ನೈವೇದ್ಯ ಹೇಗಿರಬೇಕು? ಉಪವಾಸದ ನಿಯಮಗಳೇನು?
ವರ್ಷದಲ್ಲಿ 24 ಏಕಾದಶಿ ಬರುತ್ತದೆ. ಪ್ರತಿಯೊಂದು ಏಕಾದಶಿಯು ಅದರದ್ದೇ ಆದ ಮಹತ್ವವನ್ನು ಹೊಂದಿದೆ. ಏಕಾದಶಿ ಆಚರಣೆಯಿಂದ ಮೋಕ್ಷ ಸಿಗುವುದರ ಜೊತೆಗೆ ಬದುಕಿನಲ್ಲಿನ ಅನೇಕ ಸಮಸ್ಯೆಗಳು ದೂರಾಗುವುದು. ಈ ಏಕಾದಶಿಯಂದು ಉಪವಾಸವಿದ್ದು ಏಕಾದಶಿಯನ್ನು ಆಚರಿಸುವುದರಿಂದ ಹೆಚ್ಚಿನ ಫಲ ಸಿಗುವುದು, ಇನ್ನು ಏಕಾದಶಿಯಂದು ದೇವರಿಗೆ ನೈವೇದ್ಯ ಅರ್ಪಿಸುವಾಗ ಕೆಲವೊಂದು ಅಂಶಗಳನ್ನು ಗಮನಿಸಬೇಕು.

ತುಳಸಿ ಎಲೆ: ಶ್ರೀವಿಷ್ಣುವಿಗೆ ನೀವು ಏನೇ ಅರ್ಪಿಸಿ , ನೀವು ತುಳಸಿ ಅರ್ಪಿಸಿಲ್ಲ ಎಂದರೆ ಶ್ರೀವಿಷ್ಣುವಿಗೆ ತೃಪ್ತಿಯಾಗಲ್ಲ ಎಂದು ಹೇಳಲಾಗುವುದು. ತುಳಸಿಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ, ಹಾಗಾಗಿ ತುಳಸಿಯನ್ನು ಅರ್ಪಿಸಬೇಕು ಎಂದು ಹೇಳಲಾಗುವುದು.
ಹೂವುಗಳು: ಹಳದಿ ಬಣ್ಣದ, ತಾವರೆ, ಗುಲಾಬಿ, ಚೆಂಡು ಹೂವು ಇವುಗಳನ್ನು ಶ್ರೀವಿಷ್ಣುವಿಗೆ ಅರ್ಪಿಸಬೇಕು. ಏಕಾದಶಿಯಂದು ತಾವರೆ ಅರ್ಪಿಸಿ ಶ್ರೀವಿಷ್ಣುವಿನ ಪೂಜಿಸಬೇಕು ಎಂದು ಹೇಳಲಾಗುವುದು.
ಹಣ್ಣುಗಳು: ಬಾಳೆಹಣ್ಣು, ಸೇಬು, ಕಿತ್ತಳೆ ಈ ಬಗೆಯ ಹಣ್ಣುಗಳನ್ನು ಅರ್ಪಿಸಬೇಕು, ತೆಂಗಿನಕಾಯಿ ಅರ್ಪಿಸಬೇಕು.
ಸಿಹಿ ತಿಂಡಿಗಳು: ಶ್ರೀವಿಷ್ಣುವಿಗೆ ಸಿಹಿ ತಿಂಡಿಗಳು ತುಂಬಾ ಇಷ್ಟ ಎಂದು ಹೇಳಲಾಗುವುದು, ಹಾಗಾಗಿ ಶ್ರೀ ವಿಷ್ಣುವಿಗೆ ಯಾವುದೇ ಸಿಹಿ ತಿಂಡಿಯನ್ನು ನೈವೇದ್ಯವಾಗಿ ಅರ್ಪಿಸಬೇಕು.
ಅಕ್ಕಿಯಿಂದ ಮಾಡಿದ ನೈವೇದ್ಯ: ಅಕ್ಕಿ ಬಳಸಿ ಮಾಡಿದ ಚಿತ್ರಾನ್ನ, ಪುಳಿಯೊಗರೆ, ಮೊಸರನ್ನ, ಅಕ್ಕಿ ಪಾಯಸ ಇವುಗಳನ್ನು ಕೂಡ ನೈವೇದ್ಯವಾಗಿ ಅರ್ಪಿಸಬೇಕು.
ಹಾಲು ಮತ್ತು ಹಾಲಿನ ಉತ್ಪನ್ನಗಳು: ಶ್ರೀವಿಷ್ಣುವಿಗೆ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು
ಇನ್ನು ಏಕಾದಶಿ ಉಪವಾಸಕ್ಕೆ ಕೆಲವೊಂದು ನಿಯಮಗಳಿವೆ:
ಗರ್ಭಿಣಿಯರು ಏಕಾದಶಿ ಉಪವಾಸ ಮಾಡಬಾರದು
ಈ ದಿನ ನೀರು-ಆಹಾರ ಸೇವಿಸಬಾರದು
ಬೆಳಗ್ಗೆ ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ ಉಪವಾಸ ಸಂಕಲ್ಪ ತೆಗೆದುಕೊಳ್ಳಬೇಕು, ಪಾರಣ ಸಮಯದಲ್ಲಿಷ್ಟೇ ಉಪವಾಸ ಮುರಿಯಬೇಕು.
ಸಂಪೂರ್ಣ ಉಪವಾಸ ನಿಯಮ ಅನುಸರಿಸಲು ಸಾಧ್ಯವಾಗದಿದ್ದರೆ ಏನು ಮಾಡಬಹುದು?
ಕೆಲವರಿಗೆ ಅನಾರೋಗ್ಯ ಕಾರಣ ತುಂಬಾ ಹೊತ್ತು ಹಸಿವಿನಿಂದ ಇರಲು ಸಾಧ್ಯವಿಲ್ಲ, ಅವರು ಸಾತ್ವಿಕ ಆಹಾರವನ್ನು ಸೇವಿಸಬಹುದು. ಈ ದಿನ ಅಕ್ಕಿಯ ಆಹಾರ ಪದಾರ್ಥ, ದಾನ್ಯಗಳು, ಗೋಧಿ, ಬೆಳ್ಳುಳ್ಳಿ, ಈರುಳ್ಳಿ ಸೇವಿಸುವಂತಿಲ್ಲ.
ಏಕಾದಶಿ ಉಪವಾಸದ ಮಹತ್ವ
ಯಾರು ಸಂಪೂರ್ಣ ಉಪವಾಸವಿದ್ದು ಏಕಾದಶಿಯನ್ನು ಆಚರಿಸುತ್ತಾರೋ ಅದು ಅಶ್ವಮೇಧ ಯಾಗಕ್ಕೆ ಸಮಯವೆಂದು ಹೇಳಲಾಗುವುದು.
ಉಪವಾಸವನ್ನು ಮಾಡುವುದರಿಂದ ದೇಹವನ್ನು ಡಿಟಾಕ್ಸ್ ಮಾಡಲು ಸಹಕಾರಿ ಎಂದು ಹೇಳಲಾಗುವುದು.
ತಿಂಗಳಿಗೆ ಎರಡು ಬಾರಿ ಏಕಾದಶಿ ಬರುತ್ತದೆ, ಈ ಏಕಾದಶಿಯಂದು ಉಪವಾಸ ಮಾಡುವುದರಿಂದ ಚಯಪಚಯ ಕ್ರಿಯೆಗೆ ತುಂಬಾನೇ ಒಳ್ಳೆಯದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications