Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಧಾರವಾಡದ ಯುಗಾದಿ ಬೊಂಬೆ ಭವಿಷ್ಯ: ಪ್ರಧಾನಿ ಹಾಗೂ ಮಳೆಯ ಬಗ್ಗೆ ಈ ಗೊಂಬೆ ನುಡಿದರುವ ಭವಿಷ್ಯವೇನು?
ಧಾರವಾಡದ ಹನುಮನಕೊಪ್ಪದಲ್ಲಿ ಯುಗಾದಿ ಹಬ್ಬದ ದಿನದ ಭವಿಷ್ಯ ನುಡಿಯಲಾಗುವುದು. ಈ ಭವಿಷ್ಯದಲ್ಲಿ ರಾಜ್ಯ-ದೇಶದ ಬಗ್ಗೆ ಹೇಳಲಾಗುವುದು. ಈ ಭವಿಷ್ಯ ನಿಜವಾಗುವುದರಿಂದ ಎಲ್ಲರು ಈ ಭವಿಷ್ಯವನ್ನು ಕಾತುರದಿಂದ ಎದುರು ನೋಡುತ್ತಾರೆ. ಈ ವರ್ಷದ ಭವಿಷ್ಯದಲ್ಲಿ ರಾಜಕೀಯದ ಬಗ್ಗೆಯೂ ಹೇಳಲಾಗಿದೆ.

ಹನುಮನಕೊಪ್ಪದ ಯುಗಾದಿ ಭವಿಷ್ಯ
ಹನುಮನಕೊಪ್ಪ ಯುಗಾದಿ ಭವಿಷ್ಯದ ಪ್ರಕಾರ ಈ ವರ್ಷವೂ ಮಳೆಯ ಅಭಾವ ಇರಲಿದೆ. ಮುಂಗಾರಿನಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ಇರಲಿದೆ, ಹಿಂಗಾರು ಮಳೆ ಕೈ ಕೊಡಲಿದೆ. ಈ ಭವಿಷ್ಯವಾಣಿ ಭಯ ಹುಟ್ಟಿಸುವಂತಿದೆ, ಏಕೆಂದರೆ ಈಗಾಗಲೇ ಬರಗಾಲದಿಂದ ಸಂಕಷ್ಟ ಅನುಭವಿಸಿದ್ದೇವೆ, ಈ ವರ್ಷವೂ ಮಳೆಯ ಅಭಾವ ಉಂಟಾದರೆ ಪರಿಸ್ಥಿತಿ ತುಂಬಾನೇ ಕೆಟ್ಟದಾಗಿ ಇರುವುದು.
ರಾಜಕೀಯ ಭವಿಷ್ಯ
ಧಾರವಾಡದ ಬೊಂಬೆ ಭವಿಷ್ಯ ಪ್ರಕಾರ ಈ ವರ್ಷದ ರಾಜಕಾರಣದಲ್ಲ ಯಾವುದೋ ಬದಲಾವಣೆ ಇರಲ್ಲ ಎಂದು ಭವಿಷ್ಯ ನುಡಿದಿದೆ. ಈ ಬಾರಿಯೂ ಪ್ರಧಾನಿ ಮೋದಿಯೇ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದೆ.
ಈ ಬೊಂಬೆ ಭವಿಷ್ಯ ಹೇಳಲಾಗುವುದು?
ಯುಗಾದಿ ಅಮವಾಸ್ಯೆಯಂದು ತುಪ್ಪರಿ ಹಳ್ಳದಲ್ಲಿ ಒಂದು ಆಕೃತಿ ಮಾಡಿ ಅದರ ನಾಲ್ಕೂ ದಿಕ್ಕಿಗೆ ರಾಜಕೀಯದ ಭವುಷ್ಯ ನುಡಿಯುವ ಗೊಂಬೆಗಳನ್ನು ಇಡಲಾಗುವುದು. ನಾಲ್ಕೂ ದಿಕ್ಕಿಗೆ ಅನ್ನದ ಉಂಡೆ ಇಟ್ಟು ಎಲ್ಲಾ ಮಳೆಯ ಹೆಸರಿನಲ್ಲಿ ಎಲೆಗಳನ್ನು ಹಾಕಲಾಗುವುದು. ಹಿಂಗಾರು ಬೆಳೆಯ ಧಾನ್ಯಗಳನ್ನು ಇಡಲಾಗುವುದು, ಬಳಿಕ ಎತ್ತು, ಚಕ್ಕಡಿ ಆಕೃತಿಯನ್ನು ಮಾಡಿ ಇಡಲಾಗುವುದು. ಮಾರನೇಯ ದಿನ ಬೆಳಗ್ಗೆ ಎಲ್ಲಾ ಗೊಂಬೆಗಳನ್ನು ನೋಡಿದಾಗ ಯಾವುದಾದರೂ ಗೊಂಬೆಗೆ ಹಾನಿಯಾಗಿದ್ದರೆ ಅದರ ಮೇಲೆ ಭವಿಷ್ಯ ಹೇಳಲಾಗುವುದು.
ಈ ವರ್ಷದ ಭವಿಷ್ಯದ ಪ್ರಕಾರ ರಾಜಕೀಯ ಕ್ಷೇತ್ರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂಬಂತಿದೆ.
ಈ ಗೊಂಬೆ ನುಡಿದ ರಾಜಕೀಯ ಭವಿಷ್ಯ ನಿಜವಾಗುವುದು
ಇಂದಿರಾ ಗಾಂಧಿ ಹತ್ಯೆಯ ಸಮಯದಲ್ಲಿ ದೊಡ್ಡ ಗೊಂಬೆಗೆ ಹಾನಿಯಾಗಿತ್ತು, ಆವಾಗ ರಾಜಕೀಯದ ಉನ್ನತ ಸ್ಥಾನದಲ್ಲಿ ಇರುವವರು ಸಾಯುತ್ತಾರೆ ಎಂಬ ಭವಿಷ್ಯ ನೀಡಿತ್ತು, ಆ ವರ್ಷ ಇಂದಿರಾಗಾಂಧಿ ಸಾವನ್ನಪ್ಪಿದರು. ಯಡಿಯೂರಪ್ಪ ಅಧಿಕಾರ ಬಿಟ್ಟು ಕೆಳಗಿಳಿದ ವರ್ಷ ಕೂಡ ರಾಜಕೀಯ ಗೊಂಬೆ ತಲೆಗಕೆಳಗಾಗಿತ್ತು, ಅದರಂತೆ ಆ ವರ್ಷ ಯಡಿಯೂರಪ್ಪ ತಮ್ಮ ಸ್ಥಾನದಿಂದ ಕೆಳಗಿಳಿದರು. ಕಳೆದ ವರ್ಷ ಕೂಡ ಮಳೆಯ ಅಭಾವವಾಗಿದೆ ಎಂಬ ಭವಿಷ್ಯ ನುಡಿದಿತ್ತು, ಆ ಭವಿಷ್ಯ ನಿಜವಾಗಿದೆ.
ಈಗ ಕ್ರೋಧಿನಾಮ ಸಂವತ್ಸರ ಶುರುವಾಗಿದೆ. ಈ ಕ್ರೋಧಿ ನಾಮ ಸಂವತ್ಸರ ಹೆಚ್ಚು ಅನುಕೂಲಕರವಾಗಿರುವುದಿಲ್ಲ ಎಂದು ಹೇಳಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications