Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಧರ್ನುಮಾಸದ ವಿಶೇಷತೆಯೇನು? ಬ್ರಾಹ್ಮಿ ಮುಹೂರ್ತದಲ್ಲಿಯೇ ಪೂಜೆಮಾಡಬೇಕು ಏಕೆ?
ಡಿಸೆಂಬರ್ 16ಕ್ಕೆ ಸೂರ್ಯ ಧರ್ನು ರಾಶಿಗೆ ಸಂಚರಿಸಿದಾಗ ಧರ್ನುಮಾಸ ಪ್ರಾರಂಭವಾಗಲಿದೆ. ಈ ಮಾಸದಲ್ಲಿ ಮಾಡುವ ಪೂಜೆಗೆ ತುಂಬಾನೇ ಮಹತ್ವವಿದೆ. ಧರ್ನುಮಾಸದಲ್ಲಿ ಪೂಜೆಯನ್ನು ಬ್ರಾಹ್ಮಿ ಮುಹೂರ್ತದಲ್ಲಿ ಅಂದರೆ ಸೂರ್ಯದಯಕ್ಕಿಂತ ಮೊದಲು ಎದ್ದು ಮಾಡಬೇಕು. ಧರ್ನುಮಾಸ ಪೂಜೆಯ ಮಹತ್ವವೇನು ಎಂದು ನೋಡೋಣ ಬನ್ನಿ:

ಬ್ರಾಹ್ಮಿಮುಹೂರ್ತದಲ್ಲಿ ಪೂಜೆ ಮಾಡಬೇಕು?
ಈ ಧರ್ನುಮಾಸದಲ್ಲಿ ಸೂರ್ಯೋದಯಕ್ಕೆ ಮೊದಲೇ ಎದ್ದೇಳಬೇಕು. ಈ ಬ್ರಾಹ್ಮಿ ಮುಹೂರ್ತದಲ್ಲಿ ಪೂಜೆ ಮಾಡಿದರೆ ಅದರ ಫಲ ಹೆಚ್ಚು ಎಂದು ಹೇಳಲಾಗುವುದು. ಪ್ರತಿದಿನ ಒಂದೇ ಸಮಯದಲ್ಲಿ ಪೂಜೆ ಮಾಡಬೇಕು, ತಮ್ಮ ಅನುಕೂಲಕ್ಕೆ ತಕ್ಕಂತೆ ಯಾವಾಗಾದರೂ ಪೂಜೆ ಮಾಡಿದರೆ ಅದರ ಫಲ ಸಿಗುವುದಿಲ್ಲ. ಧರ್ನುಮಾಸ ಪೂಜೆಯಲ್ಲಿ ತುಂಬಾ ಕಟ್ಟುನಿಟ್ಟಾಗಿ ಇರಬೇಕು. ಅಲ್ಲದೆ ಪೂಜೆಗೆ ನೈವೇದ್ಯ ತಯಾರಿಸುವಾಗಲೂ ಅಷ್ಟೇ ಅಕ್ಕಿ ಹಾಗೂ ಹೆಸರು ಬೇಳೆಯನ್ನು ಸಮ ಪ್ರಮಾಣದಲ್ಲಿ ಸೇರಿಸಿ ತಯಾರಿಸಬೇಕೆಂದು ಹೇಳಲಾಗುವುದು.
ಧರ್ನುಮಾಸದ ಮಹತ್ವವೇನು?
ಪೌರಾಣಿಕ ನಂಬಿಕೆ ಪ್ರಕಾರ ವರ್ಷವನ್ನು ಉತ್ತರಾಯಣ ಹಾಗೂ ದಕ್ಷಣಾಯಣ ಎಂದು ಎರಡು ಭಾಗಗಳನ್ನಾಗಿ ಮಾಡಲಾಗಿದೆ. ಧರ್ನುಮಾಸ ದೇವರಿಗೆ ರಾತ್ರಿ ಕೊನೆಗೊಳ್ಳುವ ಕೊನೆಯ ದಿನವೆಂದು ಹೇಳಲಾಗುವುದು. ಹಾಗಾಗಿ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ದೇವರಿಗೆ ಪೂಜೆ ಮಾಡಬೇಕು. ಹೀಗೆ ಮಾಡಿದರೆ ಸಾವಿರ ಪೂಜೆಯ ಫಲ ಸಿಗುವುದು ಎಂದು ಹೇಳಲಾಗುವುದು.
ಧರ್ನುಮಾಸದಲ್ಲಿ ಪೂಜಾ ವಿಧಾನಗಳು
* ಈ ತಿಂಗಳಿನಲ್ಲಿ ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡಿ ಪೂಜೆ ಮಾಡಬೇಕು
* ಭಗವಾನ್ ವಿಷ್ಣುವಿನ ಶ್ಲೋಕವನ್ನು ಪಠಿಸಬೇಕು.
* ಈ ದಿನಗಳಲ್ಲಿ ಬಡವರಿಗೆ ನಿಮ್ಮ ಕೈಯಲ್ಲಾದಷ್ಟು ದಾನ ಮಾಡಿ.
* ಬ್ರಾಹ್ಮಣರಿಗೆ ಕಾಣಿಕೆ ನೀಡಿ
* ಯಾರು ಈ ಮಾಸದಲ್ಲಿ ಶ್ರೀ ವಿಷ್ಣವಿನ ಪೂಜೆಯನ್ನು ತಪ್ಪದೆ ಮಾಡುತ್ತಾರೋ ಅವರಿಗೆ ಪೂಜಾ ಫಲದಿಂದ ಕಷ್ಟಗಳು ದೂರಾಗಿ ಇಷ್ಟಾರ್ಥಗಳು ನೆರವೇರುವುದು.
ಕಾತ್ಯಾಯನಿ ವ್ರತ
ಧರ್ನುಮಾಸದಲ್ಲಿ ಕಾತ್ಯಾಯನು ವ್ರತವೆಂದು ಆಚರಿಸಲಾಗುವುದು. ಇದನ್ನು ಮದುವೆಯಾಗದ ಹೆಣ್ಮಕ್ಕಳು ಆಚರಿಸುತ್ತಾರೆ. ಈ ವ್ರತವನ್ನು ಆಚರಣೆ ಮಾಡುವುದರಿಂದ ಗುಣವಂತ ಪತಿ ಸಿಗುತ್ತಾನೆ ಎಂಬ ನಂಬಿಕೆ.
ಧರ್ನುಮಾಸದ ಪೂಜೆಗೆ ಶ್ರೇಷ್ಠ, ಶುಭಕಾರ್ಯಗಳನ್ನು ಮಾಡಬಾರದು
ಧರ್ನುಮಾಸ ಶ್ರೀ ವಿಷ್ಣುವಿನ ಪೂಜೆಗೆ ಶ್ರೇಷ್ಠವಾದ ಮಾಸ, ಆದರೆ ಈ ತಿಂಗಳಿನಲ್ಲಿ ಮದುವೆ, ನಾಮಕರಣ, ಗೃಹ ಪ್ರವೇಶ ಅಂತ ಯಾವುದೇ ಶುಭ ಕಾರ್ಯ ಮಾಡುವಂತಿಲ್ಲ.
ಮುದ್ಗಾನ್ನ ನೈವೇದ್ಯ
ಧರ್ನುಮಾಸದಲ್ಲಿ ಮುದ್ಗಾನ್ನ ನೈವೇದ್ಯ ಮಾಡಿ ದೇವರಿಗೆ ಅರ್ಪಿಸಲಾಗುವುದು. ಇದನ್ನು ಖಿಚಡಿ ಅಥವಾ ಉತ್ತರ ಕನ್ನಡದಲ್ಲಿ ಧನುಮಡ್ಡಿ ಪ್ರಸಾದ ಎಂದು ಕರೆಯಲಾಗುವುದು. ಹೆಸರು ಬೇಳೆ, ಅಕ್ಕಿ ಸಮಪ್ರಮಾಣದಲ್ಲಿ ಹಾಕಿ, ಬೆಲ್ಲ, ಜೀರಿಗೆ ಪುಡಿ, ಮೆಂತೆ ಪುಡಿ ಸೇರಿಸಿ ಮಾಡುವ ಈ ಪ್ರಸಾದವನ್ನು ದೇವರಿಗೆ ಅರ್ಪಿಸಲಾಗುವುದು.
ಧರ್ನುಮಾಸದಲ್ಲಿ ಯಾವಾಗ ಎದ್ದೇಳಬೇಕು?
ಧರ್ನುಮಾಸದಲ್ಲಿ ಸೂರ್ಯೋದಯಕ್ಕೆ ಮುಂಚೆ ಎದ್ದೇಳಬೇಕು. ಬೆಳಗ್ಗೆ 4-30ರಿಂದ 6.30ರ ಒಳಗೆ ಪೂಜೆ ಮಾಡಿ ಪ್ರಸಾದವನ್ನು ಅರ್ಪಿಸಬೇಕು.
ಧರ್ನುಮಾಸದಲ್ಲಿ ಯಾವ ದೇವರನ್ನು ಆರಾಧಿಸಲಾಗುವುದು?
ಧರ್ನುಮಾಸದಲ್ಲಿ ವಿಷ್ಣು ಅಥವಾ ನಾರಾಯಣವನ್ನು ಆರಾಧಿಸಲಾಗುವುದು. ಈ ದಿನ ಪ್ರತಿದಿನ ಓಂ ನಮೋ ಭಗವತೇ ವಾಸುದೇವಾಯ' ಮಂತ್ರ ಪ್ರತಿದಿನ ಪಠಿಸಿ.
ಧರ್ನುಮಾಸದಲ್ಲಿ ಮದುವೆ ಏಕೆ ಮಾಡುವುದಿಲ್ಲ
ಧರ್ನುಮಾಸವನ್ನು ಕರ್ಮದ ಮಾಸವೆಂದು ಕರೆಯಲಾಗುವುದು, ಆದ್ದರಿಂದ ಕರ್ಮದ ಮಾಸದಲ್ಲಿ ಮದುವೆ ಮಾಡಿದರೆ ಶುಭವಲ್ಲ, ಹೀಗಾಗಿ ಮದುವೆ ಮುಂತಾದ ಶುಭ ಕಾರ್ಯ ಮಾಡುವುದಿಲ್ಲ.
ಧರ್ನುಮಾಸದಲ್ಲಿ ತಿರುಪತಿ ಪೂಜೆ
ಧರ್ನುಮಾಸದಲ್ಲಿ 30 ದಿನವೂ ತಿರುಪತಿಯಲ್ಲಿ ವಿಶೇಷ ಪೂಜೆಯನ್ನು ಮಾಡಲಾಗುವುದು.
ಧರ್ನುಮಾಸದ ವಿಶೇಷ ದಿನಗಳು
ಡಿಸೆಂಬರ್ 16: ಧನು ಸಂಕ್ರಾಂತಿ
ಡಿಸೆಂಬರ್ 17: ವಿವಾಹ ಪಂಚಮಿ
ಡಿಸೆಂಬರ್ 22: ಮೋಕ್ಷದ ಏಕಾದಶಿ
ಡಿಸೆಂಬರ್ 22: ಗೀತಾ ಜಯಂತಿ
ಡಿಸೆಂಬರ್ 26: ಮಾರ್ಗಶಿರ ಪೂರ್ಣಿಮಾ
ಜನವರಿ 7: ಸಫಲ ಏಕಾದಶಿ
ಜನವರಿ 11: ಮಾರ್ಗಶಿರ ಅಮವಾಸ್ಯೆ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications