Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಧನು ಸಂಕ್ರಾಂತಿ ಯಾವಾಗ? ಕಷ್ಟಗಳ ನಿವಾರಣೆಗೆ ಈ ದಿನ ಯಾವ ಪರಿಹಾರ ಮಾಡಿದರೆ ಒಳ್ಳೆಯದು?
ಹಿಂದೂ ಧರ್ಮದಲ್ಲಿ ಸೂರ್ಯ ಸಂಕ್ರಾಂತಿಗೆ ತುಂಬಾನೇ ಮಹತ್ವವಿದೆ. ಸೂರ್ಯನು ವೃಶ್ಚಿಕ ರಾಶಿಯಿಂದ ಧನು ರಾಶಿಗೆ ಸಂಚರಿಸುವುದಕ್ಕೆ ಧನು ಸಂಕ್ರಾಂತಿ ಎಂದು ಕರೆಯಲಾಗುವುದು. ಈ ದಿನ ಸೂರ್ಯನ ಪೂಜೆಗೆ ತುಂಬಾನೇ ಮಹತ್ವವಿದೆ.
ಧನು ಸಂಕ್ರಾಂತಿಯಿಂದ ಧರ್ನುಮಾಸ ಪ್ರಾರಂಭವಾಗುವುದು. ಈ ದಿನ ಸೂರ್ಯನಿಗೆ ಆರ್ಘ್ಯ ಅರ್ಪಿಸಲಾಗುವುದು. ಈ ವರ್ಷ ಧನು ಸಂಕ್ರಾಂತಿ ಯಾವಾಗ, ಈ ದಿನ ಕಷ್ಟಗಳ ನಿವಾರಣೆಗೆ ಯಾವ ರೀತಿಯ ಪರಿಹಾರ ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಧನು ಸಂಕ್ರಾಂತಿ ಯಾವಾಗ?
ಸೂರ್ಯ ದೇವನು ವೃಕ್ಷಕ ರಾಶಿಯಿಂದ ಧನು ರಾಶಿಗೆ ಡಿಸೆಂಬರ್ 16 ಸಂಜೆ 3:58ಕ್ಕೆ ಪ್ರವೇಶಿಸುತ್ತಾನೆ. ಇಲ್ಲಿಂದ ಧರ್ನುಮಾಸ ಪ್ರಾರಂಭ.
ಧನು ಸಂಕ್ರಾಂತಿಯಂದು ಮಂಗಳಕರ ಸಮಯ
ಹಿಂದೂ ಪಂಚಾಂಗದ ಪ್ರಕಾರ, ಧನು ಸಂಕ್ರಾಂತಿಯ ಪುಣ್ಯಕಾಲವು ಬೆಳಗ್ಗೆ 9.58 ಕ್ಕೆ ಪ್ರಾರಂಭವಾಗಿ ಸಂಜೆ 4.22 ಕ್ಕೆ ಕೊನೆಗೊಳ್ಳುತ್ತದೆ. ಈ ದಿನ ಪೂರ್ವಜರಿಗೆ ತರ್ಪಣ ಅರ್ಪಿಸಬಹುದು. ಈ ದಿನ ಪುಣ್ಯ ನದಿಯಲ್ಲಿ ಸ್ನಾನ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು. ಈ ದಿನ ಮಾಡುವ ದಾನಕ್ಕೆ ತುಂಬಾನೇ ಮಹತ್ವವಿದೆ.
ಧನು ಸಂಕ್ರಾಂತಿಯಂದು ಈ ರೀತಿ ಮಾಡಿದರೆ ನಿಮ್ಮ ಬದುಕಿನಲ್ಲಿರುವ ತೊಂದರೆಗಳು ದೂರಾಗುವುದು:
* ಧನು ಸಂಕ್ರಾಂತಿಯಂದು ಬೆಳಗ್ಗೆ ಸೂರ್ಯನಿಗೆ ಆರ್ಘ್ಯ ಅರ್ಪಿಸಿ.
* ಧನು ಸಂಕ್ರಾಂತಿಯಂದು ಶಿವನಿಗೆ ಜಲಾಭಿಷೇಕ ಮಾಡಿದರೆ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ.
* ಧನು ಸಂಕ್ರಾಂತಿಯ ದಿನದಂದು ನಿಮ್ಮ ಪೂರ್ವಜರ ಶಾಂತಿಗಾಗಿ ಗಾಯತ್ರಿ ಮಂತ್ರವನ್ನು ಪಠಿಸಿದರೆ ಒಳ್ಳೆಯದು, ಸೂರ್ಯ ದೇವ ನಿಮ್ಮ ಎಲ್ಲಾ ತೊಂದರೆಗಳನ್ನು ನಿವಾರಿಸುತ್ತಾನೆ.
* ಧನು ಸಂಕ್ರಾಂತಿಯ ದಿನದಂದು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದರಿಂದ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
* ಧನು ಸಂಕ್ರಾಂತಿಯಂದು ಭಗವಾನ್ ವಿಷ್ಣು, ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಅದೃಷ್ಟ ಒಲಿಯುವುದು, ಹಣಕಾಸಿನ ಸಮಸ್ಯೆ ಕಡಿಮೆಯಾಗುವುದು.
* ಧನು ಸಂಕ್ರಾಂತಿಯ ನಿಮ್ಮ ಶಕ್ತಿಗೆ ಅನುಸಾರ ನಿರ್ಗತಿಕರಿಗೆ ಅನ್ನದಾನ ಮಾಡಿ, ಬಡವರಿಗೆ ಬೆಚ್ಚನೆಯ ಬಟ್ಟೆ, ಗೋಧಿ, ಎಣ್ಣೆ ಹೊದಿಕೆ ಇತ್ಯಾದಿಗಳನ್ನು ದಾನ ಮಾಡಿ.
ಧರ್ನುಮಾಸದಲ್ಲಿ ಈ ಕಾರ್ಯ ಮಾಡುವಂತಿಲ್ಲ
ಧರ್ನುಮಾಸವನ್ನು ಕರ್ಮ ಮಾಸ ಎಂದು ಕರೆಯಲಾಗುವುದು. ಈ ತಿಂಗಳಿನಲ್ಲಿ ಶುಭ ಕಾರ್ಯ ಮಾಡುವಂತಿಲ್ಲ ಎಂದು ಹೇಳಲಾಗುವುದು, ಆದ್ದರಿಂದ ಈ ತಿಂಗಳಿನಲ್ಲಿ ಈ ಕಾರ್ಯಗಳನ್ನು ಮಾಡುವುದು ಅಷ್ಟು ಶುಭವಲ್ಲ:
* ಈ ತಿಂಗಳಿನಲ್ಲಿ ಯಾವುದೇ ಶುಭ ಕಾರ್ಯ ಮಾಡುವಂತಿಲ್ಲ
* ಹೊಸ ಮನೆಗೆ ಹೋಗಲು ಈ ಸಮಯ ಶುಭವಲ್ಲ
* ಈ ಸಮಯದಲ್ಲಿ ಆಸ್ತಿ ಖರೀದಿ ಅಥವಾ ಹೊಸ ವ್ಯಾಪಾರವನ್ನು ಪ್ರಾರಂಭಿಸಬೇಡಿ.
* ಈ ತಿಂಗಳಿನಲ್ಲಿ ಸಾತ್ವಿಕ ಆಹಾರಕ್ರಮ ಒಳ್ಳೆಯದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
