Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಈ ವರ್ಷ ಧನ್ತೇರಸ್ 29ಕ್ಕಾ 30ಕ್ಕಾ? ಯಾವ ಘಳಿಗೆಯಲ್ಲಿ ಗಾಡಿ ಮುಂತಾದ ವಸ್ತುಗಳ ಖರೀದಿ ಶುಭ
ಅಕ್ಷಯ ತೃತೀಯಾದಂತೆಯೇ ತುಂಬಾ ಪ್ರಮುಖವಾದ ದಿನ ಧನ್ತೇರಸ್. ದೀಪಾವಳಿಯ ಮುನ್ನ ದಿನ ಬರುವ ಧನ್ತೇರಸ್‌ಗೆ ಚಿನ್ನ ಬೆಳ್ಳಿ ಸೇರಿದಂತೆ ಕೆಲವೊಂದು ವಸ್ತುಗಳನ್ನು ಖರೀದಿ ಮಾಡಿದರೆ ಶುಭ ಎಂದು ಪರಿಗಣಿಸಲಾಗಿದೆ. ಹಾಗಾಗಿ ಧನ್ತೇರಸ್ ದಿನದಲ್ಲಿಶುಭ ಸಮಯದಲ್ಲಿ ವಸ್ತುಗಳನ್ನು ಖರೀದಿಸಲು ಜನರು ಕಾಯುತ್ತಿರುತ್ತಾರೆ.
ಈ ವರ್ಷ ಧನ್ತೇರಸ್ ಯಾವಾಗ ಬಂದಿದೆ, ಯಾವ ಶುಭ ಘಳಿಗೆಯಲ್ಲಿ ವಸ್ತುಗಳನ್ನು ಖರೀದಿಸಬೇಕು ಎಂಬೆಲ್ಲಾ ಮಾಹಿತಿ ನೋಡೋಣ ಬನ್ನಿ:

ಈ ವರ್ಷ ಧನ್ತೇರಸ್ ಯಾವಾಗ ಆಚರಿಸಲಾಗುವುದು?
ಈ ವರ್ಷ 29ಕ್ಕೆ ಆಚರಿಸಲಾಗುವುದಾ? 30ಕ್ಕೆ ಆಚರಿಸಲಾಗುವುದಾ ಎಂಬ ಗೊಂದಲ ಕೆಲವರಲ್ಲಿದೆ, ಆದರೆ ಪಂಚಾಂಗ ಪ್ರಕಾರ ದೀಪಾವಳಿಯನ್ನು ಅಕ್ಟೋಬರ್ 29ರಂದು ಆಚರಿಸಲಾಗುವುದು.
ವಸ್ತುಗಳ ಖರೀದಿಗೆ ಶುಭ ಸಮಯ ಯಾವಾಗ?
ಇಡೀ ದಿನವನ್ನು ವಸ್ತುಗಳ ಖರೀದಿಗೆ ಶುಭ ಎಂದು ಪರಿಗಣಿಸಲಾಗುವುದು. ಆದರೆ ಈ ದಿನದಂದು ಬೆಳಗ್ಗೆ 10:31ರಿಂದ ಅಕ್ಟೋಬರ್ 30 ಮಧ್ಯಾಹ್ನ 1:11ರವರೆಗೆ ಒಳ್ಳೆಯ ಸಮಯವಿದೆ. ಹಾಗಾಗಿ ಧನ್ತೇರಸ್‌ಗೆ ತುಂಬಾ ರಶ್ ಇರುತ್ತೆ, ನೂಕು ನುಗ್ಗಲಿನಲ್ಲಿ ಖರೀದಿ ಬೇಡ ಎಂದಾದರೆ ಅಕ್ಟೋಬರ್ 30ರಂದು ಖರೀದಿಸಬಹುದು.
ಗಾಡಿ ಮುಂತಾದ ವಸ್ತುಗಳನ್ನು ಈ ಶುಭ ಘಳಿಗೆಯಲ್ಲಿ ಖರೀದಿಬಹುದು.
ಬೆಳಗ್ಗೆ 09: 18ರಿಂದ 10:41ರವರೆಗೆ ಇರಲಿದೆ
ಲಾಭ ಘಳಿಗೆ : ಬೆಳಗ್ಗೆ 10:41ರಿಂದ 12:05ರವರೆಗೆ
ಅಮೃತಘಳಿಗೆ: ಬೆಳಗ್ಗೆ 12:05ರಿಂದ 1:28ರವರೆಗೆ ಇರಲಿದೆ
ಲಾಭ ಘಳಿಗೆ : ಸಂಜೆ 07:15ರಿಂದ 8:15ರವರೆಗೆ ಸಮಯವಿದೆ.
ಧನ್ತೇರಸ್ ಅನ್ನು ಧನ ತ್ರಯೋದಶಿಯಂದು ಎಂದು ಕೂಡ ಕರೆಯಲಾಗುವುದು
ಈ ದಿನ ನೀವು ಯಾವುದೇ ಪ್ರಮುಖ ವಸ್ತು ಖರೀದಿ ಮಾಡಬೇಕೆಂದಿದ್ದರೆ ಅದನ್ನು ಖರೀದಿಸುವ ಮುನ್ನ ಲಕ್ಷ್ಮಿಗೆ ದೀಪ ಹಚ್ಚಿ ಧನ್ವಂತರಿ ಕುರಿತ ಈ ಮಂತ್ರ ಪಠಣೆ ಮಾಡಿ
ಓಂ ನಮೋ ಭಗವತೇ ಮಹಾಸುದರ್ಶನಾಯ ವಾಸುದೇವಾಯ ಧನ್ವಂತಯೇ
ಅಮೃತ ಕಲಶ ಹಸ್ತಯ ಸರ್ವಭಯ ವಿನಾಶ, ಸರ್ವ ರೋಗ ನಿವಾರಣಾ
ತ್ರಿಲೋಕಪಥಯ ತ್ರಿಲೋಕನಾಥಾಯ ಶ್ರೀ ಮಹಾವಿಷ್ಣು ಸ್ವರೂಪ
ಶ್ರೀ ಧನ್ವಂತರಿ ಸ್ವರೂಪ ಶ್ರೀ ಶ್ರೀ ಶ್ರೀ ಔಷಧಚಕ್ರ ನಾರಾಯಣಾಯ ನಮಃ॥
ಅಲ್ಲದೆ ಈ ದಿನ ವಸ್ತುಗಳ ಖರೀದಿಗೆ ಎಷ್ಟು ಮಹತ್ವವಿದೆ ಹಾಗೆಯೇ ಈ ದಿನ ಕೆಲವೊಂದು ವಸ್ತುಗಳ ದಾನಕ್ಕೂ ಅಷ್ಟೇ ಮಹತ್ವವಿದೆ. ಈ ದಿನದಂದು ಈ ಬಗೆಯ ವಸ್ತುಗಳನ್ನು ದಾನ ಮಾಡಿದರೆ ಸಂಪತ್ತು ಹೆಚ್ಚಾಗಲಿದೆ ಎಂಬ ನಂಬಿಕೆಯಿದೆ:
ತಾಂಬೂಲ
ಈ ದಿನ ತಾಂಬೂಲ ನೀಡಿದರೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ತಾಂಬೂಲದಲ್ಲಿ ತೆಂಗಿನಕಾಯಿ, ವೀಳ್ಯೆದೆಲೆ, ಹೂವುಗಳು, ಹಣ್ಣುಗಳು, ಅಡಿಕೆ ಇವುಗಳನ್ನು ಇಟ್ಟು ದಾನ ಮಾಡಬೇಕು.
ಸಿಹಿ ತಿನಿಸುಗಳನ್ನು ದಾನ ಮಾಡಬೇಕು
ದೀಪಾವಳಿಗೆ ಎಲ್ಲರೂ ಸಿಹಿ ತಿಂಡಿಗಳನ್ನು ನೀಡುತ್ತಾರೆ, ಏಕೆ ಗೊತ್ತೇ? ಈ ರೀತಿ ಸಿಹಿ ತಿನಿಸುಗಳನ್ನು ದಾನ ಮಾಡುವುದರಿಂದ ಸಂತೋಷ, ಸಂಪತ್ತು ಹೆಚ್ಚಾಗಲಿದೆ ಎಂದು ನಂಬಲಾಗಿದೆ.
ಬ್ರಾಹ್ಮಣರಿಗೆ ವಸ್ತ್ರ ದಾನ
ಈ ದಿನದಂದು ಬ್ರಾಹ್ಮಣರಿಗೆ ವಸ್ತ್ರ ದಾನ ಮಾಡಿದರೆ ಶುಭ ಉಂಟಾಗುವುದು ಎಂದು ನಂಬಲಾಗಿದೆ.
ಬಡವರಿಗೆ ಸಹಾಯ ಮಾಡಿ
ಬಡವರಿಗೆ ಆಹಾರ,ಬಟ್ಟೆ ಅಂತ ದಾನ ಮಾಡಿದರೆ ಕೂಡ ಶುಭ ಉಂಟಾಗುವುದು, ಈ ಕಾರ್ಯಗಳನ್ನು ಮಾಡುವುದರಿಂದ ನಾವು ಚಿನ್ನ-ಬೆಳ್ಳಿ ಖರೀದಿ ಮಾಡಿದಷ್ಟು ಶುಭ ಉಂಟಾಗಲಿದೆ.
ಧನ ತ್ರಯೋದಶಿಯಂದು ಒಳ್ಳೆಯ ಕಾರ್ಯಗಳನ್ನು ಮಾಡಬೇಕು, ಇದರ ಫಲ ನೂರು ಪಟ್ಟು ಹೆಚ್ಚು ಸಿಗಲಿದೆ ಎಂಬ ನಂಬಿಕೆಯಿದೆ. ಚಿನ್ನ-ಬೆಳ್ಳಿಯಲ್ಲಿ ಲಕ್ಷ್ಮಿಯನ್ನು ನೋಡುತ್ತೇವೆ, ಹಾಗಾಗಿ ಆ ದಿನದಂದು ಜನರು ಚಿನ್ನ-ಬೆಳ್ಳಿ ಖರೀದಿ ಮಾಡುತ್ತಾರೆ, ಇದು ಸಾಧ್ಯವಾಗದಿದ್ದರೆ ಅರಿಶಿಣದ ಕೊಂಬು ಖರೀದಿಸಿದರೂ ಸಾಕು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications