Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಧನ್ತೇರಸ್ ಪ್ರದೋಷ ಕಾಲದಿಂದ ಈ 4 ರಾಶಿಯವರು ಹೆಜ್ಜೆ ಹೆಜ್ಜೆಯಲ್ಲೂ ಆರ್ಥಿಕವಾಗಿ ಬೆಳೆಯುತ್ತಾರೆ
ಧನ್ತೇರಸ್ ದಿನದಂದು ಚಿನ್ನ, ಬೆಳ್ಳಿ ಖರೀದಿಸಿದರೆ ತುಂಬಾನೇ ಶುಭ, ಸಂಪತ್ತು ವೃದ್ಧಿಸುವುದು, ಹಾಗಾಗಿ ಈ ದಿನದಂದು ಚಿನ್ನ-ಬೆಳ್ಳಿ ಖರೀದಿಸುತ್ತಾರೆ, ಚಿನ್ನ ಖರೀದಿಸದಿದ್ದರೂ ಬೆಳ್ಳಿಯನ್ನಾದರೂ ಖರೀದಿಸುತ್ತಾರೆ. ಅಲ್ಲದೆ ಈ ದಿನ ಮನೆಗೆ ವಸ್ತುಗಳನ್ನು ಖರೀದಿಸುವುದು ಶುಭ ಎಂದು ಪರಿಗಣಿಸಲಾಗಿದೆ. ಅಕ್ಷಯ ತೃತಿಯಂತೆಯೇ ಈ ದಿನ ಕೂಡ ತುಂಬಾನೇ ಶುಭವಾಗಿದೆ. ಈ ಭಾರಿ ಧನ್ತೇರಸ್‌ಗೆ ಅದ್ಭುತ ಯೋಗ ಕೂಡ ಬಂದಿದೆ.
ಪ್ರದೋಷ ಸಮಯದಲ್ಲಿ ಇಂಥ ಯೋಗ ಬಂದಿರುವುದು 59 ವರ್ಷಗಳ ಬಳಿಕ.
ಶುಕ್ರವಾರ ಲಕ್ಷ್ಮಿ ಪೂಜೆಗೆ ಶ್ರೇಷ್ಠವಾದ ದಿನ, ಈ ದಿನದಂದು ಪ್ರದೋಷ ಸಮಯದಲ್ಲಿ ಕುಬೇರ, ಧನ್ವಂತರಿ, ಲಕ್ಷ್ಮಿಯನ್ನು ಆರಾಧಿಸಲಾಗುವುದು. ಈ ಪ್ರದೋಷಕಾಲದಿಂದ ಈ 4 ರಾಶಿಯವರ ಮೇಲೆ ಲಕ್ಷ್ಮಿ ಕೃಪೆ ಹೆಚ್ಚಿರಲಿದೆ. ಆರ್ಥಿಕವಾಗಿ ತುಂಬಾನೇ ಪ್ರಗತಿ ಕಾಣುವಿರಿ.

ಮೇಷ ರಾಶಿ
ಧನ್ತೇರಸ್ ದಿನದಿಂದ ಮೇಷ ರಾಶಿಯವರಿಗೆ ಒಳ್ಳೆಯ ಸಮಯ ಶುರುವಾಗಲಿದೆ. ನೀವು ವೃತ್ತಿ ಜೀವನದಲ್ಲಿ ಮತ್ತಷ್ಟು ಪ್ರಗತಿ ಕಾಣಬಹುದು, ಬಡ್ತಿ ಸಿಗಲಿದೆ, ಆರ್ಥಿಕ ಸಂಪತ್ತು ಹೆಚ್ಚಾಗುವುದರಿಂದ ಸೌಕರ್ಯಗಳು ಹೆಚ್ಚಾಗಲಿದೆ. ಕುಟುಂಬ ಜೀವನ ತುಂಬಾನೇ ಚೆನ್ನಾಗಿರಲಿದೆ. ನೀವು ಮನೆಕಟ್ಟಬೇಕು, ಆಸ್ತಿ ಖರೀದಿಸಬೇಕು ಎಂದು ಬಯಸುತ್ತಿದ್ದರೆ ಈ ಅವಧಿ ನಿಮಗೆ ತುಂಬಾನೇ ಅನುಕೂಲಕರವಾಗಿದೆ.
ಮಿಥುನ ರಾಶಿ
ಈ ಧನ್ತೇರಸ್ ದಿನದಿಂದ ಮಿಥುನ ರಾಶಿಯವರಿಗೆ ಲಕ್ಷ್ಮಿ ಒಲಿಯಲಿದ್ದಾಳೆ. ಹಣದ ಕೊರತೆಯೇ ಇರುವುದಿಲ್ಲ. ನೀವು ಆಸ್ತಿ ಖರೀದಿಸಬೇಕು, ಮನೆ ಕಟ್ಟಬೇಕು ಎಂದು ಬಯಸುತ್ತಿದ್ದರೆ ಈ ಅವಧಿಯಲ್ಲಿ ನೆರವೇರಲಿದೆ. ಉದ್ಯೋಗಿಗಳು ಅಥವಾ ಸ್ವಂತ ವ್ಯವಹಾರ ಮಾಡುವವರು ಮುಂದಿನ ವರ್ಷ ತುಂಬಾನೇ ಪ್ರಯೋಜನ ಕಾಣುವಿರಿ.
ಸಿಂಹ ರಾಶಿ
ಧನ್ತೇರಸ್ ನಿಮಗೆ ಲಕ್ಷ್ಮಿ ಕೃಪೆ ತಂದಿದೆ. ಅಪೂರ್ಣವಾಗಿದ್ದ ನಿಮ್ಮ ಎಲ್ಲಾ ಕಾರ್ಯಗಳು ಪೂರ್ಣವಾಗಲಿದೆ. ಈ ಅವಧಿಯಲ್ಲಿ ಹಣಕಾಸಿಗೆ ಸಂಬಂಧಿಸಿದಂತೆ ಉತ್ತಮ ಸುದ್ದಿ ಪಡೆಯುತ್ತೀರಿ. ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆ ಬಗೆಹರಿಯಲಿದೆ. ನೀವು ಮನೆ ಕಟ್ಟುವುದು, ಆಸ್ತಿ ಖರೀದಿಸುವುದು ಈ ಬಗ್ಗೆ ಯೋಚಿಸುತ್ತಿದ್ದರೆ ನಿಮ್ಮ ಆಸೆ ನೆರವೇರಲಿದೆ.
ಕುಂಭ ರಾಶಿ
ಕುಂಭ ರಾಶಿಯವರು ಕೂಡ ತುಂಬಾನೇ ಆರ್ಥಿಕ ಲಾಭ ಪಡೆಯುತ್ತೀರಿ. ನೀವು ವ್ಯವಹಾರ ಮಾಡುತ್ತಿದ್ದರೆ ನಿಮ್ಮ ಬ್ಯುಸ್‌ನೆಸ್ ಮತ್ತಷ್ಟು ದೊಡ್ಡದಾಗಲಿದೆ, ಆರ್ಥಿಕ ಲಾಭ ಪಡೆಯುತ್ತೀರಿ. ಆದಾಯಕ್ಕೆ ಹೊಸ ಅವಕಾಶಗಳನ್ನು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ಸ್ನೇಹಿತರ ಜೊತೆ ಖುಷಿಯಿಂದ ಸಮಯ ಕಳೆಯುತ್ತೀರಿ. ಉದ್ಯೋಗಿಗಳು ಬಡ್ತಿಯನ್ನು ಪಡೆಯುತ್ತೀರಿ.
ಧನ್ತೇರಸ್ ದಿನದಂದು ಯಾವ ವಸ್ತುಗಳನ್ನು ಖರೀದಿಸಿದರೆ ಒಳ್ಳೆಯದು?
ಧನ್ತೇರಸ್ ಶುಭ ಮುಹೂರ್ತ ಶುಕ್ರವಾರ ಮಾತ್ರವಲ್ಲ ಶನಿವಾರ ಮಧ್ಯಾಹ್ನದವರೆಗೆ ಇರಲಿದೆ. ಈ ಶುಭ ಘಳಿಗೆಯಲ್ಲಿ ನೀವು ಈ ವಸ್ತುಗಳನ್ನು ಮನೆಗೆ ತಂದರೆ ಒಳ್ಳೆಯದು
* ಈ ದಿನ ಲಕ್ಷ್ಮಿಯ ಮೂರ್ತಿ ಖರೀದಿಸಿ ಪೂಜಿಸಿ
* ಈ ದಿನ ಚಿನ್ನ- ಬೆಳ್ಳಿ ಖರೀದಿಗೆ ಈ ದಿನ ತುಂಬಾನೇ ಶುಭವಾಗಿದೆ.
* ಬೆಳ್ಳಿಯ ಪಾತ್ರೆಗಳನ್ನು ಖರೀದಿಸುವುದು ಶುಭವಾಗಿದೆ.
* ಇದೇ ಆಯುರ್ವೇದ ದೇವರಾದ ಧನ್ವಂತರಿ ಜನಿಸಿದರು ಎಂದು ಹೇಳಲಾಗುವುದು, ಆದ್ದರಿಂದ ಈ ದಿನ ಧನ್ವಂತಿರಿಗೆ ಪೂಜೆ ಸಲ್ಲಿಸಿ.
* ಕುಬೇರ, ಲಕ್ಷ್ಮಿಗೆ ಪೂಜೆ ಸಲ್ಲಿಸಿ
* ಮನೆಗೆ ಶ್ರೀಯಂತ್ರ ತನ್ನಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
