Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
30 ವರ್ಷದ ಬಳಿಕ ಧನ್ತೇರಸ್ ದಿನದಂದು ಕೂಡಿ ಬಂದ ಧನಯೋಗ: ಈ 5 ರಾಶಿಯವರಿಗೆ ತುಂಬಾನೇ ಅದೃಷ್ಟಕರ
ಧನ್ತೇರಸ್ ಎಂದರೆ ಶುಭ ದಿನ, ಈ ಶುಭ ದಿನದಂದು ಶಶಿ ಯೋಗ ಏರ್ಪಡಲಿದೆ. ಕನ್ಯಾ ರಾಶಿಯಲ್ಲಿ ಶುಕ್ರ ಇದೆ, ದನ್ತೇರಸ್ ದಿನದಂದು ಚಂದ್ರ ಕೂಡ ಕನ್ಯಾ ರಾಶಿಗೆ ಪ್ರವೇಶಿಸಲಿದೆ, ಇದರಿಂದಾಗಿ ಶಶಿ ಯೋಗ ಏರ್ಪಡಲಿದೆ. ಅಲ್ಲದೆ ಶನಿ ಮಾರ್ಗಿಯಾಗಿ ಸಂಚರಿಸಿರುವುದರಿಂದ ಕುಂಭ ರಾಶಿಯಲ್ಲಿ ಮೂಲತ್ರಿಕೋನ ಕೂಡ ಏರ್ಪಡಲಿದೆ. ಈ ಅವಧಿ ಆರ್ಥಿಕವಾಗಿ ಒಳ್ಳೆಯದು, ಅಲ್ಲದೆ ಸುಮಾರು 30 ವರ್ಷದ ಬಳಿಕ ಧನ್ತೇರಸ್ ದಿನದಂದೇ ಧನ ಯೋಗ ಏರ್ಪಟ್ಟಿದೆ. ಈ ಯೋಗ 5 ರಾಶಿಯವರಿಗೆ ಆರ್ಥಿಕ ಸಮೃದ್ಧಿ ತರಲಿದೆ:

ವೃಷಭ ರಾಶಿ
ಧನ್ತೇರಸ್ ಬಳಿಕ ವೃಷಭ ರಾಶಿಯವರಿಗೆ ತುಂಬಾನೇ ಒಳ್ಳೆಯದು, ನಿಮ್ಮ ಉದ್ಯೋಗದಲ್ಲಿ ಬಡ್ತಿ ಪಡೆಯುತ್ತೀರಿ, ಉದ್ಯೋಗಕ್ಕಾಗಿ ಹುಡುಕುತ್ತಿದ್ದರೆ ಒಳ್ಳೆಯ ಉದ್ಯೋಗಾವಕಾಶ ದೊರೆಯಲಿದೆ. ವ್ಯವಹಾರದಲ್ಲಿ ಒಳ್ಳೆಯ ಲಾಭ ಗಳಿಸುವಿರಿ. ತುಂಬಾ ಸಮಯದಿಂದ ನೀವು ನಿರೀಕ್ಷೆ ಮಾಡುತ್ತಿರುವ ಹಣ ಬಂದಿಲ್ಲ ಎಂದಾದರೆ ಈ ಅವಧಿಯಲ್ಲಿ ಖಂಡಿತ ನಿಮ್ಮ ಕೈ ಸೇರಲಿದೆ. ಲಕ್ಷ್ಮಿ ಕೃಪೆ ನಿಮ್ಮ ಮೇಲಿರಲಿದೆ.
ಕರ್ಕ ರಾಶಿ
ಧನ್ತೇರಸ್ ದಿನದಂದು ಉಂಟಾಗುವ ಶುಭ ಯೋಗ ನಿಮಗೆ ತುಂಬಾನೇ ಆರ್ಥಿಕ ಪ್ರಯೋಜನ ನೀಡಲಿದೆ. ನೀವು ಏನಾದರೂ ಹೊಸ ಉದ್ಯಮ ಪ್ರಾರಂಭಿಸಲು ಬಯಸುವುದಾದರೆ ನೀವು ಅದರಲ್ಲಿ ಯಶಸ್ಸು ಪಡೆಯುತ್ತೀರಿ. ನಿಮಗೆ ದೀಪಾವಳಿಗಿಂತ ಮೊದಲೇ ಲಕ್ಷ್ಮಿ ಕೃಪೆ ಇದೆ. ದೀಪಾವಳಿಯ ನಂತರ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಮತ್ತಷ್ಟು ಉನ್ನತಿ ಕಾಣುವಿರಿ. ಕೆಲಸದ ಜಾಗದಲ್ಲಿ ನಿಮ್ಮ ಕೆಲಸ ಪ್ರಶಂಸೆ ಗಳಿಸುತ್ತದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೂ ಧನ್ತೇರಸ್ ದಿನದಂದು ರೂಪುಗೊಂಡ ಶುಭಯೋಗ ತುಂಬಾನೇ ಅನುಕೂಲಕರವಾದ ಪ್ರಯೋಜನ ನೀಡಲಿದೆ. ನೀವು ಉದ್ಯೋಗದಲ್ಲಿ ಉತ್ತಮ ಸ್ಥಾನಕೇರುತ್ತೀರಿ. ಉಸ್ಯೋಗ ಬದಲಾವಣೆಗೂ ಈ ಸಮಯ ನಿಮಗೆ ತುಂಬಾನೇ ಅನುಕೂಲಕರವಾಗಿದೆ. ಏನಾದರೂ ಸ್ವಂತ ವ್ಯವಹಾರ ಮಾಡಬೇಕೆಂದು ಬಯಸುವವರು ಈ ಅವಧಿಯಲ್ಲಿ ಉತ್ತಮ ಪ್ರಯೋಜನ ಪಡೆಯಬಹುದು.
ತುಲಾ ರಾಶಿ
ನಿಮ್ಮಿಂದ ಯಾರಾದರೂ ಹಣ ಪಡೆದು ನಿಮಗೆ ಮರಳಿ ನೀಡದಿದ್ದರೆ ಆ ಹಣ ಮರಳಿ ಸಿಗಲಿದೆ, ನಿಮ್ಮೆಲ್ಲಾ ಆರ್ಥಿಕ ಸಮಸ್ಯೆ ಬಗೆಹರಿಯಲಿದೆ. ವೈವಾಹಿಕ ಜೀವನ ಕೂಡ ತುಂಬಾ ಚೆನ್ನಾಗಿರಲಿದೆ. ನೀವು ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದರೆ ನೀವು ಬಯಸಿದ ಕೆಲಸ ನಿಮಗೆ ದೊರೆಯಲಿದೆ. ಆರೋಗ್ಯ ದೃಷ್ಟಿಯಿಂದ ಕೂಡ ಈ ಅವಧಿ ತುಂಬಾ ಚೆನ್ನಾಗಿರುತ್ತದೆ.
'
ಮಕರ ರಾಶಿ
ಧನ್ತೇರಸ್‌ನಂದು ರೂಪುಗೊಂಡ ಯೋಗವು ಮಕರ ರಾಶಿಯವರಿಗೂ ಅನೇಕ ಶುಭ ಫಲ ನೀಡಲಿದೆ. ಆರ್ಥಿಕವಾಗಿ ತುಂಬಾನೇ ಪ್ರಗತಿ ಕಾಣಬಹುದು, ಹಳೆಯ ಸಾಲಗಳಿದ್ದರೆ ತೀರಿಸುವಿರಿ. ಉಳಿತಾಯ ಮಾಡಲು ಸಾಧ್ಯವಾಗುವುದು. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಕುಟುಂಬದಲ್ಲಿ ಶುಭ ಕಾರ್ಯ ನಡೆಯಲಿದೆ.
ಧನ್ತೇರಸ್ ದಿನದಂದು ಸಮೃದ್ಧಿ ಹೆಚ್ಚಾಗಲು ಈ ರೀತಿ ಮಾಡಿ
* ಧನ್ತೇರಸ್ ದಿನದಂದು ಲಕ್ಷ್ಮಿಗೆ ತುಪ್ಪದ ದೀಪ ಹಚ್ಚಿ. ಇದರಿಂದ ಆರೋಗ್ಯ, ಸಮೃದ್ಧಿ ಸಿಗಲಿದೆ.
* ಈ ದಿನ ಮನೆಗೆ ಹೊಸ ಪಾತ್ರೆಗಳನ್ನು ಖರೀದಿಸಿ, ಆದರೆ ಪಾತ್ರೆಯೊಳಗೆ ಏನಾದರೂ ಆಹಾರ ವಸ್ತು ಹಾಕಿ ಮನೆಗೆ ತನ್ನಿ.
* ಲಕ್ಷ್ಮಿ ಜೊತೆಗೆ ಕುಬೇರನಿಗೂ ಪೂಜೆ ಸಲ್ಲಿಸಿ.
* ಲಕ್ಷ್ಮಿಗೆ ಆರತಿ ಬೆಳಗಿ
* ಈ ದಿನ ಚಿನ್ನ, ಬೆಳ್ಳಿ ಈ ಬಗೆಯ ವಸ್ತುಗಳನ್ನು ಖರೀದಿಸಿದರೆ ಶುಭ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications